ಪ್ರಧಾನ ಮಂತ್ರಿಯವರ ಕಛೇರಿ
1893ರಲ್ಲಿ ಶಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಅದ್ಭುತ ಭಾಷಣವನ್ನು ಸ್ಮರಿಸಿದ ಪ್ರಧಾನಮಂತ್ರಿ
Posted On:
11 SEP 2022 10:26AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಾಮಿ ವಿವೇಕಾನಂದರು 1893ರಲ್ಲಿ ಶಿಕಾಗೋದಲ್ಲಿ ಮಾಡಿದ ಅದ್ಭುತ ಭಾಷಣವನ್ನು ಸ್ಮರಿಸಿದ್ದಾರೆ. 1893ರ ಇದೇ ದಿನದಂದು ವಿವೇಕಾನಂದರು ತಮ್ಮ ಅತ್ಯಂತ ಅದ್ಭುತ ಭಾಷಣಗಳಲ್ಲಿ ಒಂದನ್ನು ಶಿಕಾಗೋದಲ್ಲಿ ಮಾಡಿದ್ದರು. ಅವರ ಭಾಷಣವು ವಿಶ್ವಕ್ಕೆ ಭಾರತದ ಸಂಸ್ಕೃತಿ ಮತ್ತು ನೈತಿಕತೆಯ ಒಂದು ಇಣುಕುನೋಟವನ್ನು ನೀಡಿತು ಎಂದು ಶ್ರೀ ಮೋದಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು:
"ಸೆಪ್ಟೆಂಬರ್ 11 ಸ್ವಾಮಿ ವಿವೇಕಾನಂದರೊಂದಿಗೆ ವಿಶೇಷ ನಂಟು ಹೊಂದಿದೆ. 1893ರ ಇದೇ ದಿನದಂದು ಅವರು ಶಿಕಾಗೋದಲ್ಲಿ ತಮ್ಮ ಅದ್ಭುತ ಭಾಷಣಗಳಲ್ಲಿ ಒಂದನ್ನು ಮಾಡಿದರು. ಅವರ ಭಾಷಣವು ವಿಶ್ವಕ್ಕೆ ಭಾರತದ ಸಂಸ್ಕೃತಿ ಮತ್ತು ನೈತಿಕತೆಯ ಒಂದು ಇಣುಕುನೋಟವನ್ನು ನೀಡಿತು." ಎಂದು ತಿಳಿಸಿದ್ದಾರೆ.
*****
(Release ID: 1858469)
Visitor Counter : 143
Read this release in:
Tamil
,
Assamese
,
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Telugu
,
Malayalam