ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯುಎಸ್ಎಸ್ಆರ್ (ಸಂಯುಕ್ತ ಸೋವಿಯತ್ ರಷ್ಯಾ ಗಣರಾಜ್ಯ) ಮಾಜಿ ಅಧ್ಯಕ್ಷ  ಮಿಖಾಯಿಲ್ ಗೋರ್ಬಚೇವ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 01 SEP 2022 9:07AM by PIB Bengaluru

ಯುಎಸ್ಎಸ್ಆರ್ (ಸಂಯುಕ್ತ ಸೋವಿಯತ್ ರಷ್ಯಾ ಗಣರಾಜ್ಯ-ಇಂದಿನ ರಷ್ಯಾ) ಮಾಜಿ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;

"ಇತಿಹಾಸದ ಹಾದಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ 20ನೇ ಶತಮಾನದ ಪ್ರಮುಖ ರಾಜನೀತಿಜ್ಞ, ರಾಜಕೀಯ ಧುರೀಣರಲ್ಲಿ ಒಬ್ಬರಾಗಿದ್ದ ಗೌರವಾನ್ವಿತ ಶ್ರೀ ಮಿಖಾಯಿಲ್ ಗೋರ್ಬಚೇವ್ ಅವರ ಕುಟುಂಬ, ಸ್ನೇಹಿತರು ಮತ್ತು ಅಪಾರ ಅಭಿಮಾನಿಗಲು ಮತ್ತು ಬೆಂಬಲಿಗರಿಗೆ ನಾನು ನಮ್ಮ ಗಾಢ ಸಂತಾಪ ಸೂಚಿಸುತ್ತೇನೆ. ರಷ್ಯಾ – ಭಾರತದ ದೀರ್ಘಕಾಲೀನ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆಗಳನ್ನು ನಾವು ಸ್ಮರಿಸುತ್ತೇವೆ ಮತ್ತು ಗೌರವಿಸುತ್ತೇವೆ" ಎಂದು ಪ್ರಧಾನಿ ತಿಳಿಸಿದ್ದಾರೆ.

 

*****
 


(रिलीज़ आईडी: 1857802) आगंतुक पटल : 175
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Bengali , Punjabi , Gujarati , Odia , Tamil , Telugu , Malayalam