ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಕ್ರೀಡಾ ದಿನದಂದು ಕ್ರೀಡಾಪಟುಗಳಿಗೆ ಶುಭ ಕೋರಿದ ಪ್ರಧಾನಮಂತ್ರಿ


ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಗೌರವ ಸಲ್ಲಿಕೆ

ಪ್ರಕಟಣಾ ದಿನಾಂಕ: 29 AUG 2022 9:05AM by PIB Bengaluru

ರಾಷ್ಟ್ರೀಯ ಕ್ರೀಡಾ ದಿನದಂದು ಕ್ರೀಡಾಪಟುಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ. ಭಾರತದ ಹಾಕಿ ದಂತ ಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಅವರಿಗೆ ಪ್ರಧಾನಮಂತ್ರಿ ಅವರು ಗೌರವ ಸಲ್ಲಿಸಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿ ಅವರು.

“ರಾಷ್ಟ್ರೀಯ ಕ್ರೀಡಾ ದಿನಕ್ಕೆ ಶುಭಾಶಯಗಳು ಮತ್ತು ಮೇಜರ್ ಧ‍್ಯಾನ್ ಚಂದ್ ಜೀ ಅವರ ಜನ್ಮ ದಿನಕ್ಕೆ ಗೌರವ ನಮನ. ಇತ್ತೀಚಿನ ವರ್ಷಗಳು ಕ್ರೀಡೆಗಳಿಗೆ ಉತ್ತಮವಾಗಿವೆ. ಈ ಪ್ರವೃತ್ತಿ ಮುಂದುವರಿಯಲಿ. ಭಾರತದಾದ್ಯಂತ ಕ್ರೀಡೆಗಳು ಜನಪ್ರಿಯತೆಯನ್ನು ಗಳಿಸುತ್ತಿರಲಿ.” ಎಂದು ಹೇಳಿದ್ದಾರೆ.

 

 

**********


(ಪ್ರಕಟಣೆ ಐ.ಡಿ.: 1855199) ವಿಸಿಟರ್ ಕೌಂಟರ್ : 211