ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

2022ರ ಆಗಸ್ಟ್ 27 ರಿಂದ ಗುವಾಹಟಿಯ ಸಾಯ್ ಕೇಂದ್ರದಲ್ಲಿ ಮೊದಲನೇಯ ಖೇಲೋ ಇಂಡಿಯಾ ಮಹಿಳಾ ಜೂಡೋ ಪಂದ್ಯಾವಳಿ ಪ್ರಾರಂಭವಾಗಲಿದೆ2022ರ ಆಗಸ್ಟ್ 27 ರಿಂದ ಗುವಾಹಟಿಯ ಸಾಯ್ ಕೇಂದ್ರದಲ್ಲಿ ಮೊದಲನೇಯ ಖೇಲೋ ಇಂಡಿಯಾ ಮಹಿಳಾ ಜೂಡೋ ಪಂದ್ಯಾವಳಿ ಪ್ರಾರಂಭವಾಗಲಿದೆ


ದೇಶಾದ್ಯಂತ ನಾಲ್ಕು ವಲಯಗಳಲ್ಲಿ ಪಂದ್ಯಾವಳಿ ನಡೆಯಲಿದೆ

Posted On: 25 AUG 2022 1:40PM by PIB Bengaluru

ಆಗಸ್ಟ್ 27 ರಿಂದ ಆರಂಭವಾಗಲಿರುವ ಭಾರತದ ನಾಲ್ಕು ವಲಯಗಳಲ್ಲಿ ಮೊದಲನೇಯ ಖೇಲೋ ಇಂಡಿಯಾ ಮಹಿಳಾ ಜೂಡೋ ಪಂದ್ಯಾವಳಿ ನಡೆಯಲಿದೆ. ಜೂಡೋ ಪಂದ್ಯಾವಳಿಯು ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮ ಖೇಲೋ ಇಂಡಿಯಾ ಮೂಲಕ ಮಹಿಳೆಯರಿಗಾಗಿ ಕ್ರೀಡಾ ಸ್ಪರ್ಧೆಗಳನ್ನು ಬೆಂಬಲಿಸಲು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ತೆಗೆದುಕೊಂಡ ಮತ್ತೊಂದು ಉಪಕ್ರಮವಾಗಿದೆ.

ರಾಷ್ಟ್ರೀಯ ಸುತ್ತಿಗೆ ಮೊದಲು ನಾಲ್ಕು ವಲಯಗಳಲ್ಲಿ ನಡೆಯಲಿರುವ ಈ ಪಂದ್ಯಾವಳಿಯು ಮುಕ್ತ ವಲಯ ಮಟ್ಟದ ಶ್ರೇಯಾಂಕದ ಪಂದ್ಯಾವಳಿಯಾಗಿದೆ. ಸ್ಪರ್ಧಿಗಳು ನಾಲ್ಕು ವಯೋಮಾನದವರ ಶ್ರೇಣಿಗಳಲ್ಲಿರುತ್ತಾರೆ: ಸಬ್-ಜೂನಿಯರ್ (12-15 ವರ್ಷಗಳು), ಕೆಡೆಟ್ (15-17 ವರ್ಷಗಳು), ಜೂನಿಯರ್ (15-20 ವರ್ಷಗಳು) ಮತ್ತು ಸೀನಿಯರ್ (15+ ವರ್ಷಗಳು).

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಕ್ರೀಡಾ ಇಲಾಖೆಯು ಪಂದ್ಯಾವಳಿಯನ್ನು ನಡೆಸಲು ಒಟ್ಟು 1.74 ಕೋಟಿ ರೂ.ಗಳನ್ನು ನಿಗದಿಪಡಿಸಿದೆ, ಇದರಲ್ಲಿ 48.86 ಲಕ್ಷ ರೂ.ಗಳ ಬಹುಮಾನದ ಮೊತ್ತವೂ ಸೇರಿದೆ.

ಬರ್ಮಿಂಗ್ ಹ್ಯಾಮ್ ನಲ್ಲಿ  ನಡೆದ 2022 ರ ಕಾಮನ್ ವೆಲ್ತ್  ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಸುಶೀಲಾ ದೇವಿ, " ಜೂಡೋಗಾಗಿ ಇಂತಹ ಸ್ಪರ್ಧೆಯನ್ನು ಯೋಜಿಸಿದ್ದಕ್ಕಾಗಿ ಮತ್ತು ದೇಶದಲ್ಲಿ ಕ್ರೀಡೆಯನ್ನು ಮುಂದುವರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ಭಾರತ ಜೂಡೋ ಒಕ್ಕೂಟ ಮತ್ತು ಕ್ರೀಡಾ ಪ್ರಾಧಿಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ಭಾರತದಲ್ಲಿ ಜೂಡೋದ ಮತ್ತಷ್ಟು ಬೆಳವಣಿಗೆಗೆ ನಿಜವಾಗಿಯೂ ಸಹಾಯ ಮಾಡುತ್ತದೆ," ಎಂದು ಹೇಳಿದರು.

ಎಲ್ಲಾ ನಾಲ್ಕು ವಲಯಗಳಲ್ಲಿನ ಸ್ಪರ್ಧೆಯ ನಂತರ, ರಾಷ್ಟ್ರೀಯ ಸುತ್ತನ್ನು ಅಕ್ಟೋಬರ್ 20-23 ರಂದು ನವದೆಹಲಿಯ ಕೆಡಿ ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ನಿಗದಿಪಡಿಸಲಾಗಿದೆ.

4 ವಲಯಗಳ ಸ್ಪರ್ಧೆಯ ವೇಳಾಪಟ್ಟಿಯ ವಿವರಗಳು:

ದಿನಾಂಕ: ಆಗಸ್ಟ್ 27-31 | ಸೆಪ್ಟೆಂಬರ್ 1-5 | ಸೆಪ್ಟೆಂಬರ್ 5-9 | ಸೆಪ್ಟೆಂಬರ್ 11-15

ವಲಯ: ಪೂರ್ವ ವಲಯ | ದಕ್ಷಿಣ ವಲಯ | ಉತ್ತರ ವಲಯ | ಪಶ್ಚಿಮ ವಲಯ

ಸ್ಥಳ: ಸಾಯ್ ಕೇಂದ್ರ ಗುವಾಹಟಿ, ಅಸ್ಸಾಂ | ವಿಕೆಎನ್ ಮೆನನ್ ಸ್ಟೇಡಿಯಂ, ತ್ರಿಶೂರ್, ಕೇರಳ | ಪೆಸ್ಟಲ್ ವುಡ್ ಸ್ಕೂಲ್, ಡೆಹ್ರಾಡೂನ್, ಉತ್ತರಾಖಂಡ್ | ಸರ್ದಾರ್ ಪಟೇಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಗುಜರಾತ್.

 

************



(Release ID: 1854389) Visitor Counter : 134