ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2022 ರ ಸಿಡಬ್ಲ್ಯೂಜಿ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದ ಅನ್ನು ರಾಣಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

प्रविष्टि तिथि: 07 AUG 2022 6:09PM by PIB Bengaluru

2022 ರ ಕಾಮನ್ ವೆಲ್ತ್ ಕ್ರೀಡಾಕೂಟದ ಮಹಿಳೆಯರ ವಿಭಾಗದ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದ ಅನ್ನು ರಾಣಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು;

“ಅನ್ನು ರಾಣಿ ಅಸಮಾನ್ಯ ಅಥ್ಲೀಟ್. ಅವರು ಅತ್ಯುತ್ತಮವಾಗಿ ಪುಟಿದೆದ್ದಿದ್ದಾರೆ ಮತ್ತು  ಉತ್ತಮ ಕೌಶಲ್ಯ ಪ್ರದರ್ಶಿಸಿದ್ದಾರೆ. ಜಾವೆಲಿನ್ ನಲ್ಲಿ ಆಕೆ ಕಂಚಿನ ಪದಕ ಗೆದ್ದಿರುವುದು ತಮಗೆ ಸಂತೋಷ ತಂದಿದೆ. ಮುಂಬರುವ ವರ್ಷಗಳಲ್ಲಿ ಅವರು ಉತ್ಕೃಷ್ಟತೆಯನ್ನು ಮುಂದುವರೆಸುತ್ತಾರೆ ಎಂಬ ಬಗ್ಗೆ ತಮಗೆ ಖಾತ್ರಿ ಇದೆ. #ಚೀಯರ್ 4ಭಾರತ” ಎಂದು ಹೇಳಿದ್ದಾರೆ.

 


******


(रिलीज़ आईडी: 1853575) आगंतुक पटल : 146
इस विज्ञप्ति को इन भाषाओं में पढ़ें: Assamese , English , Urdu , हिन्दी , Marathi , Bengali , Manipuri , Punjabi , Gujarati , Odia , Tamil , Telugu , Malayalam