ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಿಡಬ್ಲ್ಯೂಜಿ ಬಾಕ್ಸಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಗರ್ ಅಹ್ಲಾವತ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 08 AUG 2022 8:00AM by PIB Bengaluru

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಸಿಡಬ್ಲ್ಯೂಜಿ ಕ್ರೀಡಾಕೂಟದ ಪುರುಷರ 92+ ಕೆ.ಜಿ. ಬಾಕ್ಸಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಸಾಗರ್ ಅಹ್ಲಾವತ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಈ ಕುರಿತು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.

“ಸಾಗರ್ ಅಹ್ಲಾವತ್ ಅವರು ಉತ್ತಮವಾಗಿ ಹೋರಾಡಿದ್ದಾರೆ! ಸಿಡಬ್ಲ್ಯೂಜಿ ಬಾಕ್ಸಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಕ್ರೀಡೆಯಲ್ಲಿ ಅವರು ಭಾರತದ ಶಕ್ತಿಶಾಲಿಗಳಲ್ಲಿ ಒಬ್ಬರು. ಮುಂಬರುವ ದಿನಗಳಲ್ಲಿ ಭಾರತಕ್ಕೆ ಹೆಮ್ಮೆ ತರುವ ಕೆಲಸವನ್ನು ಮುಂದುವರೆಸಲಿದ್ದಾರೆ. #ಚೀಯರ್4ಭಾರತ” ಎಂದಿದ್ದಾರೆ.

 


**************


(Release ID: 1853568) Visitor Counter : 132