ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ವ್ಯವಸ್ಥೆಯ ಕುರಿತಂತೆ ಸುಳ್ಳು ಮಾಹಿತಿ ಹರಡುತ್ತಿದ್ದ 8 ಯೂಟ್ಯೂಬ್ ಚಾನಲ್ ಗಳನ್ನು ನಿರ್ಬಂಧಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಟಿ ನಿಯಮ 2021ರಡಿ 7 ಭಾರತೀಯ ಮತ್ತು 1 ಪಾಕಿಸ್ತಾನ ಮೂಲದ ಯೂಟ್ಯೂಬ್ ಸುದ್ದಿ ಚಾನಲ್ಗೆ ನಿರ್ಬಂಧ
ನಿರ್ಬಂಧಿಸಿದ ಯೂಟ್ಯೂಬ್ ಚಾನಲ್ ಗಳು 114 ಕೋಟಿ ವೀಕ್ಷಣೆ: ಮತ್ತು 85 ಲಕ್ಷ 73 ಸಾವಿರ ಸಬ್ ಸ್ಕೈಬರ್ ಇದ್ದಾರೆ
ನಿರ್ಬಂಧಿಸಿದ ಚಾನಲ್ ಗಳು ಯೂಟ್ಯೂಬ್ ನಲ್ಲಿ ನಕಲಿ ಭಾರತ ವಿರೋಧಿ ವಿಷಯ ಹಾಕಿ ಅದರಿಂದ ಹಣ ಮಾಡುತ್ತಿದ್ದವು
Posted On:
18 AUG 2022 11:27AM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಐಟಿ ನಿಯಮ 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿ ಎಂಟು (8) ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು, ಒಂದು (1) ಫೇಸ್‌ಬುಕ್ ಖಾತೆ ಮತ್ತು ಎರಡು ಫೇಸ್‌ಬುಕ್ ಪೋಸ್ಟ್‌ಗಳನ್ನು ನಿರ್ಬಂಧಿಸಲು 16.08.2022 ರಂದು ಆದೇಶಗಳನ್ನು ಹೊರಡಿಸಿದೆ. ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್‌ಗಳು 114 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದು, 85 ಲಕ್ಷಕ್ಕೂ ಹೆಚ್ಚು ಬಳಕೆದಾರರು ಚಂದಾದಾರರಾಗಿದ್ದಾರೆ.
ದತ್ತಾಂಶ ವಿಶ್ಲೇಷಣೆ
ಈ ಕೆಲವು ಯೂಟ್ಯೂಬ್ ಚಾನೆಲ್‌ಗಳು ಪ್ರಕಟಿಸಿದ ವಿಷಯದ ಉದ್ದೇಶವು ಭಾರತದಲ್ಲಿನ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಭಾವನೆವನ್ನು ಹರಡುವುದಾಗಿತ್ತು. ನಿರ್ಬಂಧಿಸಲಾದ ಯೂಟ್ಯೂಬ್ ಚಾನಲ್‌ಗಳ ವಿವಿಧ ವೀಡಿಯೊಗಳಲ್ಲಿ ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡಲಾಗಿದೆ. ಉದಾಹರಣೆಗಳಲ್ಲಿ ಭಾರತ ಸರ್ಕಾರವು ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಆದೇಶಿಸಿರುವಂತಹ ನಕಲಿ ಸುದ್ದಿಗಳನ್ನು ಒಳಗೊಂಡಿದೆ; ಭಾರತ ಸರ್ಕಾರ ಭಾರತದಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ನಿಷೇಧಿಸಿದೆ, ಧಾರ್ಮಿಕ ಯುದ್ಧದ ಘೋಷಿಸಿದೆ ಇತ್ಯಾದಿ ಸುದ್ದಿಗಳೂ ಒಳಗೊಂಡಿದ್ದವು. ಇಂತಹ ವಿಚಾರಗಳು ದೇಶದಲ್ಲಿ ಕೋಮು ಸೌಹಾರ್ದತೆ ಹಾಳು ಮಾಡುವುದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಉದ್ದೇಶವನ್ನು ಹೊಂದಿವೆ ಎಂದು ಕಂಡುಬಂದಿದೆ.
ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಮುಂತಾದ ವಿವಿಧ ವಿಷಯಗಳ ಕುರಿತು ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡಲು ಸಹ ಯೂಟ್ಯೂಬ್ ಚಾನೆಲ್‌ಗಳನ್ನು ಬಳಸಲಾಗುತ್ತಿತ್ತು. ರಾಷ್ಟ್ರೀಯ ಭದ್ರತೆ ಮತ್ತು ವಿದೇಶಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳ ದೃಷ್ಟಿಕೋನದಿಂದ ವಿಷಯವನ್ನು ಸಂಪೂರ್ಣವಾಗಿ ಸುಳ್ಳು ಮತ್ತು ಸೂಕ್ಷ್ಮವೆಂದು ಗಮನಿಸಲಾಗಿದೆ.
ಸಚಿವಾಲಯವು ನಿರ್ಬಂಧಿಸಿದ ವಿಷಯವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಷ್ಟ್ರದ ಭದ್ರತೆ, ವಿದೇಶಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳು ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ. ಅದರಂತೆ, ವಿಷಯವು ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರ ಸೆಕ್ಷನ್ 69ಎ ವ್ಯಾಪ್ತಿಗೆ ಒಳಪಡುತ್ತದೆ.
ಕಾರ್ಯಾಚರಣೆ ವಿಧಾನ (ಮೋಡಸ್ ಆಪರಂಡಿ)
ನಿರ್ಬಂಧಿಸಲಾದ ಭಾರತೀಯ ಯೂಟ್ಯೂಬ್ ಚಾನೆಲ್‌ಗಳು ನಕಲಿ ಮತ್ತು ವೈಭವೀಕರಿಸುವಂತಹ ಥಂಬ್ ನೇಲ್‌ಗಳು, ಸುದ್ದಿ ನಿರೂಪಕರ ಚಿತ್ರಗಳು ಮತ್ತು ಕೆಲವು ಟಿವಿ ನ್ಯೂಸ್ ಚಾನೆಲ್‌ಗಳ ಲೋಗೊಗಳನ್ನು ಬಳಸಿಕೊಂಡು ವೀಕ್ಷಕರನ್ನು ತಪ್ಪುದಾರಿಗೆಳೆಯಲು ಸುದ್ದಿಯನ್ನು ಅಧಿಕೃತವೆಂದು ನಂಬಿಸಲು ಪ್ರಯತ್ನಿಸಿರುವುದನ್ನು ಗಮನಿಸಲಾಗಿದೆ.
ಸಚಿವಾಲಯವು ನಿರ್ಬಂಧಿಸಿರುವ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು ತಮ್ಮ ವೀಡಿಯೊಗಳಲ್ಲಿ ಕೋಮು ಸೌಹಾರ್ದತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭಾರತದ ವಿದೇಶಿ ಸಂಬಂಧಗಳಿಗೆ ಹಾನಿ ಉಂಟುಮಾಡುವ ಸುಳ್ಳು ವಿಷಯವನ್ನು ಹೊಂದಿರುವ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ.
ಈ ಕ್ರಮದಿಂದಾಗಿ, 2021ರ ಡಿಸೆಂಬರ್ನಿಂದೀಚೆಗೆ ಸಚಿವಾಲಯವು 102 ಯೂಟ್ಯೂಬ್ ಆಧಾರಿತ ಸುದ್ದಿ ಚಾನಲ್ ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ಹಲವು ಆದೇಶಗಳನ್ನು ಹೊರಡಿಸಿದೆ. ಅಧಿಕೃತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಆನ್‌ಲೈನ್ ಸುದ್ದಿ ಮಾಧ್ಯಮ ಪೂರಕ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಸರ್ಕಾರವು ಬದ್ಧವಾಗಿದೆ ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಷ್ಟ್ರೀಯ ಭದ್ರತೆ, ವಿದೇಶ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆ ದುರ್ಬಲಗೊಳಿಸುವ ಎಲ್ಲ ಪ್ರಯತ್ನಗಳನ್ನು ನಿಯಂತ್ರಿಸುತ್ತದೆ.
ಬ್ಲಾಕ್ ಮಾಡಿರುವ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಯುಆರ್ ಎಲ್ ಗಳ ವಿವರ
ಯೂಟ್ಯೂಬ್ ಚಾನಲ್ ಗಳು
ಕ್ರ.ಸಂ
|
ಯೂಟ್ಯೂಬ್ ಚಾನಲ್
ಹೆಸರು
|
ಮಾಧ್ಯಮ ಅಂಕಿ ಅಂಶ
|
1.
|
ಲೋಕತಂತ್ರ ಟಿ.ವಿ.
|
23,72,27,331 ವೀಕ್ಷಕರು
12.90 ಲಕ್ಷ ಚಂದಾದಾರರು
|
2.
|
ಯು &ವಿ ಟಿ.ವಿ.
|
14,40,03,291 ವೀಕ್ಷಕರು
10.20 ಲಕ್ಷ ಚಂದಾದಾರರು
|
3.
|
ಎಎಂ ರಝ್ವಿ
|
1,22,78,194 ವೀಕ್ಷಕರು
95, 900 ಚಂದಾದಾರರು
|
4.
|
ಗೌರವಶಾಲಿ ಪವನ್ ಮಿಥಿಲಾಂಚಲ್
|
15,99,32,594 ವೀಕ್ಷಕರು
7 ಲಕ್ಷ ಚಂದಾದಾರರು
|
5.
|
ಸೀಟಾಪ್5ಟಿಎಚ್
|
24,83,64,997 ವೀಕ್ಷಕರು
33.50 ಲಕ್ಷ ಚಂದಾದಾರರು
|
6.
|
ಸರ್ಕಾರಿ ಅಪ್ ಡೇಟ್
|
70,41,723 ವೀಕ್ಷಕರು
80,900 ಚಂದಾದಾರರು
|
7.
|
ಸಬ್ ಕುಚ್ ದೇಖೋ
|
32,86,03,227 ವೀಕ್ಷಕರು
19.40 ಲಕ್ಷ ಚಂದಾದಾರರು
|
8.
|
ನ್ಯೂಸ್ ಕಿ ದುನಿಯಾ (ಪಾಕಿಸ್ತಾನ ಮೂಲ)
|
61,69,439 ವೀಕ್ಷಕರು
97,000 ಚಂದಾದಾರರು
|
ಒಟ್ಟು
|
ಒಟ್ಟು 114 ಕೋಟಿ ವೀಕ್ಷಕರು
85 ಲಕ್ಷ 73 ಸಾವಿರ ಚಂದಾದಾರರು
|
ಫೇಸ್ ಬುಕ್ ಪುಟ
ಕ್ರ.ಸಂ.
|
ಫೇಸ್ ಬುಕ್ ಖಾತೆ
|
ಫಾಲೋಯರ್ ಗಳು ಸಂಖ್ಯೆ
|
1.
|
ಲೋಕತಂತ್ರ ಟಿ.ವಿ.
|
3,62,495 ಫಾಲೋಯರ್
|
ನಿರ್ಬಂಧಿಸಲಾದ ವಿಷಯಗಳ ವಿವರಗಳು
Loktantra Tv
U&V TV
AM Razvi
Gouravshali Pawan Mithilanchal
SeeTop5TH
Sarkari Update
Sab Kuch Dekho
ಸ್ಕ್ರೀನ್ ಶಾಟ್ ನಲ್ಲಿ 100 ಕೋಟಿ ಹಿಂದೂಗಳು 40 ಕೋಟಿ ಮುಸ್ಲಿಂರನ್ನು ಕೊಲ್ಲುತ್ತಾರೆ ಮತ್ತು ಆ ಮುಸ್ಲಿಂರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಬೇಕು ಇಲ್ಲದಿದ್ದರೆ ಅವರ ಮಾರಣಹೋಮ ಮಾಡಲಾಗುವುದು ಎಂದು ಹೇಳುತ್ತದೆ.
ಕೆಳಗಿನ ಸ್ಕ್ರೀನ್‌ಶಾಟ್ ನಲ್ಲಿ ಭಾರತದ ಕುತುಬ್ ಮಿನಾರ್ ಮಸೀದಿಯನ್ನು ಕೆಡವಲಾಗಿದೆ ಎಂದು ಹೇಳಲಾಗಿದೆ
****************
(Release ID: 1852835)
Visitor Counter : 334
Read this release in:
Gujarati
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Odia
,
Tamil
,
Telugu
,
Malayalam