ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸ್ವಾತಂತ್ರ್ಯ ದಿನಾಚರಣೆ 2022 ಅಂಗವಾಗಿ ಆಗ್ನಿ ಶಾಮಕ, ಗೃಹ ರಕ್ಷಕದಳ(ಎಚ್ ಜಿ) ಮತ್ತು ನಾಗರಿಕ ರಕ್ಷಣಾ (ಸಿಡಿ) ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ

Posted On: 14 AUG 2022 11:35AM by PIB Bengaluru

ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ರಾಷ್ಟ್ರಪತಿಗಳ ಶೌರ್ಯ ಪದಕ ಮತ್ತು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶೌರ್ಯ ಪದಕ ಮತ್ತು ಅತ್ಯುತ್ತಮ ಸೇವಾ ಪದಕಗಳನ್ನು ನೀಡಲಾಗುವುದು.

2022ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 55 ಸಿಬ್ಬಂದಿಗೆ ಅಗ್ನಿಶಾಮಕ ಸೇವಾ ಪದಕಗಳನ್ನು ನೀಡಲಾಗಿದೆ.

ಆ ಪೈಕಿ, ಶೌರ್ಯಕ್ಕಾಗಿ ಅಗ್ನಿಶಾಮಕ ಸೇವಾ ಪದಕವನ್ನು 11 ಸಿಬ್ಬಂದಿಗೆ ಅವರ ಶೌರ್ಯ ಮತ್ತು ಸಾಹಸಕ್ಕಾಗಿ ನೀಡಲಾಗುತ್ತದೆ.

ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕವನ್ನು 6 ಸಿಬ್ಬಂದಿಗೆ ನೀಡಲಾಗಿದೆ ಮತ್ತು 38 ಸಿಬ್ಬಂದಿಗೆ ಶ್ರೇಷ್ಠ ಸೇವೆಗಾಗಿ ಅಗ್ನಿಶಾಮಕ ಸೇವಾ ಪದಕವನ್ನು ಅವರ ಆಯಾ ವಿಶಿಷ್ಟ ಮತ್ತು ಅರ್ಹ ಸೇವಾ ದಾಖಲೆಗಳಿಗಾಗಿ ನೀಡಲಾಗುತ್ತದೆ.

ಅಲ್ಲದೆ, ಹೆಚ್ಚುವರಿಯಾಗಿ, 2022 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 46 ಸಿಬ್ಬಂದಿಗೆ ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಪದಕಗಳನ್ನು ನೀಡಲಾಗುತ್ತದೆ. ಇವರಲ್ಲಿ ಗೃಹರಕ್ಷಕರು ಮತ್ತು ಶೌರ್ಯಕ್ಕಾಗಿ ನಾಗರಿಕ ರಕ್ಷಣಾ ಪದಕವನ್ನು ಇಬ್ಬರು ಸಿಬ್ಬಂದಿಗೆ ಅವರ ಶೌರ್ಯ ಮತ್ತು ಸಾಹಸಕ್ಕಾಗಿ ನೀಡಲಾಗುತ್ತದೆ.

ವಿಶಿಷ್ಟ ಸೇವೆಗಾಗಿ ಗೃಹರಕ್ಷಕರು ಮತ್ತು ನಾಗರಿಕ ರಕ್ಷಣೆಗಾಗಿ ರಾಷ್ಟ್ರಪತಿಗಳ ಪದಕ ಮತ್ತು ಗೃಹರಕ್ಷಕರು ಮತ್ತು ಶ್ರೇಷ್ಠವಾಗಿ ಸೇವೆಗಾಗಿ ನಾಗರಿಕ ರಕ್ಷಣಾ ಪದಕವನ್ನು ಕ್ರಮವಾಗಿ 7 ಮತ್ತು 37 ಸಿಬ್ಬಂದಿಗೆ ನೀಡಲಾಗುತ್ತಿದೆ.

ಆಗ್ನಿ ಸೇವಾ ಪದಕಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ -  List of Fire Service Medals

ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪದಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ - List of Home Guards & Civil Defence Medals

 

***********

 


(Release ID: 1851869) Visitor Counter : 217