ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸತತ ಮೂರನೇ ಕಾಮನ್ ವೆಲ್ತ್ ಗೇಮ್ಸ್ ಪದಕ ಗೆದ್ದ ಭಜರಂಗ್ ಪೂನಿಯಾ ಅವರಿಗೆ  ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 05 AUG 2022 11:05PM by PIB Bengaluru

ಸತತ ಮೂರನೇ ಕಾಮನ್ ವೆಲ್ತ್ ಗೇಮ್ಸ್ ಪದಕ ಗೆದ್ದ ಭಜರಂಗ್ ಪೂನಿಯಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಬಜರಂಗ್ ಪೂನಿಯಾ ಅವರು 2022 ರ ಸಿಡಬ್ಲ್ಯೂಜಿಯಲ್ಲಿ 65 ಕೆಜಿ ಕುಸ್ತಿಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಈ ಬಗ್ಗೆ  ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.ಅದರಲ್ಲಿ –

"ಪ್ರತಿಭಾವಂತ ಭಜರಂಗ್ ಪೂನಿಯಾ ಅವರು ಸ್ಥಿರತೆ ಮತ್ತು ಉತ್ಕೃಷ್ಟತೆಗೆ ಅನ್ವರ್ಥಕವಾಗಿದ್ದಾರೆ. ಅವರು ಬರ್ಮಿಂಗ್ಹ್ಯಾಮ್ ಸಿಡಬ್ಲ್ಯೂಜಿಯಲ್ಲಿ ಚಿನ್ನ ಗೆದ್ದಿದ್ದಾರೆ. ಸತತ 3ನೇ ಕಾಮನ್ ವೆಲ್ತ್ ಗೇಮ್ಸ್ ಪದಕವನ್ನು ಗೆದ್ದ  ಗಮನಾರ್ಹ ಸಾಧನೆಗಾಗಿ ಅವರಿಗೆ ಅಭಿನಂದನೆಗಳು. ಅವರ ಉತ್ಸಾಹ ಮತ್ತು ಆತ್ಮವಿಶ್ವಾಸವು ಸ್ಪೂರ್ತಿದಾಯಕವಾಗಿದೆ. ಅವರಿಗೆ ಸದಾ ನನ್ನ ಶುಭ ಹಾರೈಕೆಗಳು" ಎಂದು ಹೇಳಿದ್ದಾರೆ.

 

***************


(ಪ್ರಕಟಣೆ ಐ.ಡಿ.: 1850954) ವಿಸಿಟರ್ ಕೌಂಟರ್ : 135
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam