ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಹರ್ ಘರ್ ತಿರಂಗಾ


ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜ 25 ರೂಪಾಯಿಗೆ ಮಾರಾಟ: ಯಾವುದೇ ವಿತರಣಾ ಶುಲ್ಕ ಪಡೆಯದೇ ಈ ಧ್ವಜಗಳನ್ನು ತಲುಪಿಸಲಾಗುತ್ತಿದೆ

ಇ ಅಂಚೆ ಕಚೇರಿ ಪೋರ್ಟಲ್ ನಿಂದ ಆನ್ ಲೈನ್ ಮೂಲಕ ನಾಗರಿಕರು ರಾಷ್ಟ್ರಧ್ವಜ ಖರೀದಿಸಬಹುದು

ನಿಗದಿತ ಸಮಯಕ್ಕೆ ಧ್ವಜ ತಲುಪಿಸಲು ನಾಗರಿಕರು 2022 ರ ಆಗಸ್ಟ್ 12 ಮಧ್ಯರಾತ್ರಿ ಒಳಗಾಗಿ ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸಬೇಕು ಎಂದು ಮನವಿ ಮಾಡಿದ ಅಂಚೆ ಇಲಾಖೆ

Posted On: 10 AUG 2022 2:07PM by PIB Bengaluru

ದೇಶದ ಹೆಮ್ಮೆಯ ನಾಗರಿಕರಿಗೆ ಸುಲಲಿತವಾಗಿ ರಾಷ್ಟ್ರಧ್ವಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳನ್ನು 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ನಾಗರಿಕರು ಇ ಅಂಚೆ ಕಚೇರಿ ಪೋರ್ಟಲ್ ನಿಂದ ಆನ್ ಲೈನ್ ಮೂಲಕ ರಾಷ್ಟ್ರಧ್ವಜಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ ( https://www.epostoffice.gov.in/ProductDetails/Guest_productDetailsProdid=ca6wTEVyMuWlqlgDBTtyTw== ).

ಅಂಚೆ ಇಲಾಖೆ ವಿತರಣಾ ಶುಲ್ಕ ಪಡೆಯದೇ ಧ್ವಜಗಳನ್ನು ದೇಶದ ಯಾವುದೇ ಭಾಗಕ್ಕೆ ವಿತರಣೆ ಮಾಡುತ್ತಿದೆ. ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸುವ ನಾಗರಿಕರು 2022 ರ ಆಗಸ್ಟ್ 12 ರ ಮಧ್ಯ ರಾತ್ರಿಯೊಳಗಾಗಿ ಮುಂಗಡ ಕಾಯ್ದಿರಿಸಿದರೆ ಸೂಕ್ತ ಸಮಯಕ್ಕೆ ವಿತರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಮನವಿ ಮಾಡಿದೆ.

 

https://static.pib.gov.in/WriteReadData/userfiles/image/image001F5H7.jpg

 ***********
 


(Release ID: 1850510) Visitor Counter : 353