ಹಣಕಾಸು ಸಚಿವಾಲಯ

2022 ರ ಜುಲೈ ತಿಂಗಳಲ್ಲಿ ಸಂಗ್ರಹಿಸಿದ  1,48,995 ಕೋಟಿ ರೂ. ಒಟ್ಟು ಜಿಎಸ್ ಟಿ ಆದಾಯ


ಜುಲೈ ತಿಂಗಳ ಜಿಎಸ್ ಟಿ ಆದಾಯ ಸಂಗ್ರಹವು ಜುಲೈನ ಎರಡನೇ ಅತಿ ಹೆಚ್ಚು ಮತ್ತು ಕಳೆದ ವರ್ಷದ ಇದೇ ತಿಂಗಳಲ್ಲಿನ ಆದಾಯಕ್ಕಿಂತ ಶೇಕಡಾ 28 ರಷ್ಟು ಹೆಚ್ಚಾಗಿದೆ

Posted On: 01 AUG 2022 11:26AM by PIB Bengaluru

2022 ರ ಜುಲೈ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್ ಟಿ  ಆದಾಯವು 1,48,995 ರೂಪಾಯಿ ಕೋಟಿಯಾಗಿದ್ದು, ಅದರಲ್ಲಿ ಸಿಜಿಎಸ್ ಟಿ  25,751 ಕೋಟಿ ರೂಪಾಯಿ, ಎಸ್ ಜಿ  ಎಸ್ ಟಿ  32,807 ಕೋಟಿ ರೂಪಾಯಿ, ಐಜಿಎಸ್ ಟಿ   79,518 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ  41,420 ಕೋಟಿ ರೂ. ಸೇರಿದಂತೆ) ಮತ್ತು ಸೆಸ್  10,920 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ  10,920 ಕೋಟಿ ರೂ. ಸೇರಿದಂತೆ) ಆಗಿದೆ . ಇದು ಜಿಎಸ್ ಟಿಯನ್ನು ಪರಿಚಯಿಸಿದ ನಂತರ ಎರಡನೇ ಅತ್ಯಧಿಕ ಆದಾಯವಾಗಿದೆ.
ಸರ್ಕಾರವು ಸಿಜಿಎಸ್ ಟಿಗೆ  32,365 ಕೋಟಿ ರೂಪಾಯಿ ಮತ್ತು ಐಜಿಎಸ್ ಟಿಯಿಂದ ಎಸ್ ಜಿ ಎಸ್ ಟಿ ಗೆ  26,774 ಕೋಟಿ ರೂಪಾಯಿ ಪಾವತಿಸಿದೆ. ನಿಯಮಿತ ಇತ್ಯರ್ಥದ ನಂತರ 2022 ರ ಜುಲೈ ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ ಟಿಗೆ  58,116 ಕೋಟಿ ರೂಪಾಯಿ ಮತ್ತು ಎಸ್ ಜಿ ಎಸ್ ಟಿಗೆ  59,581 ಕೋಟಿ ರೂಪಾಯಾಗಿದೆ.
2022ರ ಜುಲೈ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿನ ಜಿಎಸ್ ಟಿ ಆದಾಯವಾದ 1,16,393 ಕೋಟಿ ರೂಪಾಯಿಗಿಂತ ಶೇಕಡಾ 28 ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇಕಡ 48 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಬರುವ ಆದಾಯವು (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡಾ 22 ರಷ್ಟು ಹೆಚ್ಚಳವಾಗಿದೆ.
ಈಗ ಸತತ ಐದು ತಿಂಗಳುಗಳಿಂದ, ಮಾಸಿಕ ಜಿಎಸ್ ಟಿ ಆದಾಯವು  1.4 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ, ಇದು ಪ್ರತಿ ತಿಂಗಳು ಸ್ಥಿರವಾದ ಹೆಚ್ಚಳವನ್ನು ತೋರಿಸುತ್ತದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022 ರ ಜುಲೈ ವರೆಗೆ ಜಿಎಸ್ ಟಿ ಆದಾಯದ ಬೆಳವಣಿಗೆಯು ಶೇಕಡಾ 35 ರಷ್ಟಿದೆ ಮತ್ತು ಇದು ಅತ್ಯಂತ ಹೆಚ್ಚಿನ ಏರಿಕೆಯನ್ನು ಪ್ರದರ್ಶಿಸುತ್ತದೆ. ಇದು ಉತ್ತಮ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಜಿಎಸ್ ಟಿ ಮಂಡಳಿಯು ಈ ಹಿಂದೆ ತೆಗೆದುಕೊಂಡ ವಿವಿಧ ಕ್ರಮಗಳ ಸ್ಪಷ್ಟ ಪರಿಣಾಮವಾಗಿದೆ. ಆರ್ಥಿಕ ಚೇತರಿಕೆಯೊಂದಿಗೆ ಉತ್ತಮ ವರದಿಗಾರಿಕೆಯು ಜಿಎಸ್ ಟಿ  ಆದಾಯದ ಮೇಲೆ ಸ್ಥಿರವಾದ ಆಧಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ. 
2022 ರ ಜೂನ್ ನಲ್ಲಿ, 7.45 ಕೋಟಿ ರೂಪಾಯಿ ಇ-ವೇ ಬಿಲ್ ಗಳನ್ನು ಉತ್ಪಾದಿಸಲಾಗಿದೆ, ಇದು 2022 ರ ಮೇ ನಲ್ಲಿ 7.36 ಕೋಟಿ ರೂಪಾಯಿಗಿಂತ ಸ್ವಲ್ಪ ಹೆಚ್ಚಳವಾಗಿದೆ.

https://static.pib.gov.in/WriteReadData/userfiles/image/image001ZVUW.png


ಈ ಕೆಳಗಿನ ಪಟ್ಟಿ ಪ್ರಸಕ್ತ ವರ್ಷದಲ್ಲಿ ಮಾಸಿಕ ಒಟ್ಟು ಜಿಎಸ್ ಟಿ  ಆದಾಯಗಳಲ್ಲಿನ ಪ್ರವೃತ್ತಿಗಳನ್ನು ತೋರಿಸುತ್ತದೆ. 2021 ರ ಜುಲೈಗೆ ಹೋಲಿಸಿದರೆ 2022 ರ ಜುಲೈ ತಿಂಗಳಲ್ಲಿ ಪ್ರತಿ ರಾಜ್ಯದಲ್ಲಿ ಸಂಗ್ರಹಿಸಲಾದ ಜಿಎಸ್ ಟಿಯ ರಾಜ್ಯವಾರು ಅಂಕಿಅಂಶಗಳನ್ನು ಕೋಷ್ಟಕವು ತೋರಿಸುತ್ತದೆ.
 

2022 ರ ಜುಲೈ ನಲ್ಲಿ ಜಿಎಸ್ ಟಿ ಆದಾಯದ ರಾಜ್ಯವಾರು ಬೆಳವಣಿಗೆ [1]

ರಾಜ್ಯ

ಜುಲೈ-21

ಜುಲೈ-22

ಬೆಳವಣಿಗೆ

ಜಮ್ಮು ಮತ್ತು ಕಾಶ್ಮೀರ

432

431

ಶೇ.0

ಹಿಮಾಚಲ ಪ್ರದೇಶ

667

746

ಶೇ.12

ಪಂಜಾಬ್

1,533

1733

ಶೇ.13

ಚಂಡೀಗಢ

169

176

ಶೇ.4

ಉತ್ತರಾಖಂಡ್

1,106

1,390

ಶೇ.26

ಹರಿಯಾಣ

5,330

6,791

ಶೇ.27

ದೆಹಲಿ

3,815

4,327

ಶೇ.13

ರಾಜಸ್ಥಾನ

3,129

3,671

ಶೇ.17

ಉತ್ತರ ಪ್ರದೇಶ

6,011

7,074

ಶೇ.18

ಬಿಹಾರ

1,281

1,264

ಶೇ.-1

ಸಿಕ್ಕೀಂ

197

249

ಶೇ.26

ಅರುಣಾಚಲ ಪ್ರದೇಶ

55

65

ಶೇ.18

ನ್ಯಾಗಲ್ಯಾಂಡ್

28

42

ಶೇ.48

ಮಣಿಪುರ

37

45

ಶೇ,20

ಮಿಜೋರಾಂ

21

27

ಶೇ.27

ತ್ರಿಪುರಾ

65

63

ಶೇ.-3

ಮೇಘಾಲಯ

121

138

ಶೇ.14

ಅಸ್ಸಾಂ

882

1,040

ಶೇ.18

ಪಶ್ಚಿಮ ಬಂಗಾಳ

3,463

4,441

ಶೇ.28

ಜಾರ್ಖಂಡ್

2,056

2,514

ಶೇ.22

ಒಡಿಶಾ

3,615

3,652

ಶೇ. 1

ಛತ್ತೀಸ್ ಗಢ

2,432

2,695

ಶೇ.11

ಮಧ್ಯಪ್ರದೇಶ

2,657

2,966

ಶೇ.12

ಗುಜರಾತ್

7,629

9,183

ಶೇ.20

ದಾಮನ್ ಮತ್ತು ದಿಯು

0

0

ಶೇ.66

ದಾದ್ರಾ ಮತ್ತು ನಗರ ಹವೇಲಿ

227

313

ಶೇ.38

ಮಹಾರಾಷ್ಟ್ರ

18,899

22,129

ಶೇ.17

ಕರ್ನಾಟಕ

6,737

9,795

ಶೇ.45

ಗೋವಾ

303

433

ಶೇ.43

ಲಕ್ಷದ್ವೀಪ

1

2

ಶೇ.69

ಕೇರಳ

1,675

2,161

ಶೇ.29

ತಮಿಳುನಾಡು

6,302

8,449

ಶೇ.34

ಪುದುಚೇರಿ

129

198

ಶೇ.54

ಅಂಡಮಾನ್ ಮತ್ತು ನಿಕೋಬರ್ ಐಸ್ ಲ್ಯಾಂಡ್

19

23

ಶೇ.26

ತೆಲಂಗಾಣ

3,610

4,547

ಶೇ.26

ಆಂಧ್ರ ಪ್ರದೇಶ

2,730

3,409

ಶೇ.25

ಲಡಾಖ್

13

20

ಶೇ.54

ಇತರ ಕ್ಷೇತ್ರ

141

216

ಶೇ.54

ಕೇಂದ್ರ ನ್ಯಾಯವ್ಯಾಪ್ತಿ

161

162

ಶೇ.0

ಒಟ್ಟು ಮೊತ್ತ

87,678

1,06,580

ಶೇ.22

 

 

***************



(Release ID: 1847055) Visitor Counter : 213