ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು
Posted On:
21 JUL 2022 9:12PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು,
"ಭಾರತವು ಇತಿಹಾಸವನ್ನು ಬರೆಯುತ್ತಿದೆ. 1.3 ಶತಕೋಟಿ ಭಾರತೀಯರು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ, ಪೂರ್ವ ಭಾರತದ ದೂರದ ಭಾಗದಲ್ಲಿ ಜನಿಸಿದ ಬುಡಕಟ್ಟು ಸಮುದಾಯಕ್ಕೆ ಸೇರಿದ ಭಾರತದ ಮಗಳು ನಮ್ಮ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ!
ಈ ಸಾಧನೆಗಾಗಿ ಶ್ರೀಮತಿ ದ್ರೌಪದಿ ಮುರ್ಮು ಜೀ ಅವರಿಗೆ ಅಭಿನಂದನೆಗಳು.
" ಶ್ರೀಮತಿ ದ್ರೌಪದಿ ಮುರ್ಮು ಜೀ ಅವರ ಜೀವನ, ಅವರ ಆರಂಭಿಕ ಹೋರಾಟಗಳು, ಅವರ ಶ್ರೀಮಂತ ಸೇವೆ ಮತ್ತು ಅವರ ಅನುಕರಣೀಯ ಯಶಸ್ಸು ಪ್ರತಿಯೊಬ್ಬ ಭಾರತೀಯನನ್ನು ಪ್ರೇರೇಪಿಸುತ್ತದೆ. ಅವರು ನಮ್ಮ ನಾಗರಿಕರಿಗೆ, ವಿಶೇಷವಾಗಿ ಬಡವರು, ಅಂಚಿನಲ್ಲಿರುವವರು ಮತ್ತು ದೀನದಲಿತರಿಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ,''
"ಶ್ರೀಮತಿ ದ್ರೌಪದಿ ಮುರ್ಮು ಜೀ ಅವರು ಅತ್ಯುತ್ತಮ ಶಾಸಕಿ ಮತ್ತು ಸಚಿವರಾಗಿದ್ದಾರೆ. ಜಾರ್ಖಂಡ್ ರಾಜ್ಯಪಾಲರಾಗಿ ಅವರು ಅತ್ಯುತ್ತಮ ಅವಧಿಯನ್ನು ಹೊಂದಿದ್ದರು. ಅವರು ಮುಂಚೂಣಿಯಿಂದ ಮುನ್ನಡೆಸುವ ಮತ್ತು ಭಾರತದ ಅಭಿವೃದ್ಧಿಯ ಪ್ರಯಾಣವನ್ನು ಬಲಪಡಿಸುವ ಅತ್ಯುತ್ತಮ ರಾಷ್ಟ್ರಪತಿಯಾಗಲಿದ್ದಾರೆ ಎಂದು ನನಗೆ ಖಾತ್ರಿಯಿದೆ" ಎಂದು ಅವರು ಹೇಳಿದ್ದಾರೆ.
"ಶ್ರೀಮತಿ ದ್ರೌಪದಿ ಮುರ್ಮು ಜೀ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ ಎಲ್ಲಾ ಸಂಸದರು ಮತ್ತು ಶಾಸಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಅವರ ದಾಖಲೆಯ ಗೆಲುವು ನಮ್ಮ ಪ್ರಜಾಪ್ರಭುತ್ವಕ್ಕೆ ಶುಭಸೂಚಕವಾಗಿದೆ, ''
*********
(Release ID: 1843874)
Visitor Counter : 152
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam