ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಸ್ರೇಲ್ ನ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಘನತೆವೆತ್ತ ಯಾಯಿರ್‌ ಲಾಪಿಡ್ ಅವರನ್ನು ಅಭಿನಂದಿಸಿದ ಪ್ರಧಾನಿ

प्रविष्टि तिथि: 01 JUL 2022 1:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಘನತೆವೆತ್ತ ಯಾಯಿರ್‌ ಲಾಪಿಡ್ ಅವರನ್ನು ಅಭಿನಂದಿಸಿದ್ದಾರೆ. ಭಾರತದ ನೈಜ ಸ್ನೇಹಿತರಾಗಿದ್ದಕ್ಕಾಗಿ ಗೌರವಾನ್ವಿತ ನಫ್ತಾಲಿ ಬೆನೆಟ್ ಅವರಿಗೂ ಶ್ರೀ ಮೋದಿ ಅವರು ಧನ್ಯವಾದ ಅರ್ಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು,

"ಇಸ್ರೇಲ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಯಾಯಿರ್‌ ಲಾಪಿಡ್‌ @yairlapid ಅವರಿಗೆ ಹಾರ್ದಿಕ ಶುಭಾಶಯಗಳು ಮತ್ತು ಹೃತ್ಪೂರ್ವಕ ಅಭಿನಂದನೆಗಳು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ 30 ವರ್ಷ ಪರಿಪೂರ್ಣಗೊಂಡಿರುವ ಈ ಸಂದರ್ಭದಲ್ಲಿ ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.

"ಭಾರತದ ನೈಜ ಸ್ನೇಹಿತನಾಗಿದ್ದಕ್ಕಾಗಿ ಗೌರವಾನ್ವಿತ ನಫ್ತಾಲಿ ಬೆನೆಟ್‌ @naftalibennett ಅವಿರಗೂ ಧನ್ಯವಾದಗಳು. ನಮ್ಮ ಫಲಪ್ರದವಾದ ಒಡನಾಟಗಳನ್ನು ನಾನು ಮುಂದುವರಿಸುತ್ತೇನೆ ಮತ್ತು ನಿಮ್ಮ ಹೊಸ ಪಾತ್ರದಲ್ಲಿ ನಿಮಗೆ ಯಶಸ್ಸನ್ನು ಹಾರೈಸುತ್ತೇನೆ," ಎಂದು ಹೇಳಿದ್ದಾರೆ.

 

********


(रिलीज़ आईडी: 1838641) आगंतुक पटल : 173
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam