ಪ್ರಧಾನ ಮಂತ್ರಿಯವರ ಕಛೇರಿ

ಪ್ರಗತಿ ಮೈದಾನ ಇಂಟಿಗ್ರೆಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆ ಲೋಕಾರ್ಪಣೆಗೊಳಿಸಿದ ಪ್ರಧಾನಮಂತ್ರಿ.


ಪ್ರಗತಿ ಮೈದಾನ ಮರು ಅಭಿವೃದ್ಧಿ ಯೋಜನೆಯ ಅವಿಭಾಜ್ಯ ಭಾಗವಾಗಿರುವ ಮುಖ್ಯ ಸುರಂಗ ಮಾರ್ಗ ಮತ್ತು ಐದು ಅಂಡರ್ ಪಾಸ್ ಗಳ ಲೋಕಾರ್ಪಣೆ


“ಇದು ಸಮಸ್ಯೆಗಳನ್ನು ಪರಿಹರಿಸುವ, ಹೊಸ ಪಣ ತೊಡುತ್ತಿರುವ ಮತ್ತು ಆ ಪ್ರತಿಜ್ಞೆಗಳ ಸಾಕಾರಕ್ಕೆ ಅಹರ್ನಿಶಿ ದುಡಿಯುತ್ತಿರುವ ನವಭಾರತವಾಗಿದೆ’’


“ಪ್ರಗತಿ ಮೈದಾನವನ್ನು 21ನೇ ಶತಮಾನದ ಅಗತ್ಯತೆಗಳಿಗೆ ಪರಿವರ್ತಿಸುವ ಅಭಿಯಾನದ ಭಾಗ ಈ ಯೋಜನೆ’’


“ಭಾರತ ಸರ್ಕಾರ ದೇಶದ ರಾಜಧಾನಿಯಲ್ಲಿ ವಿಶ್ವದರ್ಜೆಯ ಪ್ರದರ್ಶನ ಸಭಾಂಗಣಗಳು, ಅತ್ಯಾಧುನಿಕ ಸೌಕರ್ಯಗಳು ಒಳಗೊಂಡಿರುವ ಸೌಲಭ್ಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ’’


“ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ಆಧುನಿಕ ಮೂಲಸೌಕರ್ಯದಿಂದಾಗಿ ದೆಹಲಿಯ ಚಿತ್ರಣ ಬದಲಾಗುತ್ತಿದೆ ಮತ್ತು ಅದು ಅತ್ಯಾಧುನಿಕವಾಗುತ್ತಿದೆ. ಈ ಬದಲಾಗುತ್ತಿರುವ ಚಿತ್ರಣ ನಮ್ಮ ಬದಲಾಗುತ್ತಿರುವ ವಿಧಿಯ ಭಾಗವೂ ಆಗಿದೆ’’


“ಆಧುನಿಕ ಮೂಲಸೌಕರ್ಯಕ್ಕೆ ಒತ್ತು ನೀಡುತ್ತಿರುವುದರ ಜತೆಗೆ ಸಾಮಾನ್ಯ ಜನರ ಜೀವನ ಸುಗಮಗೊಳಿಸಲು ಕ್ರಮ’’


“ದೆಹಲಿ ವಿಶ್ವದ ಅತ್ಯುತ್ತಮ ಸಂಪರ್ಕದ ರಾಜಧಾನಿ ಆಗಿ ರೂಪುಗೊಳ್ಳುತ್ತಿದೆ’’


“ಗತಿಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆ, ಸಬ್ ಕಾ ವಿಶ್ವಾಸ್ ಮತ್ತು ಸಬ್ ಪ್ರಯಾಸ್ ನ ಮಾಧ್ಯಮವಾಗಿದೆ”


“ಇದೇ ಮೊದಲ ಬಾರಿಗೆ ನಗರ ಯೋಜನೆಗೆ ಯಾವುದೇ ಸರ್ಕಾರ ನೀಡದಷ್ಟು ಪ್ರಾಮುಖ್ಯತೆ’’

Posted On: 19 JUN 2022 1:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಗತಿ ಮೈದಾನ ಸಮಗ್ರ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮಾರ್ಗ ಮತ್ತು ಐದು ಅಂಡರ್ ಪಾಸ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಮಗ್ರ ಟ್ರಾನ್ಸಿಟ್ ಕಾರಿಡಾರ್ ಯೋಜನೆ ಪ್ರಗತಿ ಮೈದಾನ ಮರು ಅಭಿವೃದ್ಧಿ ಯೋಜನೆಯ ಅವಿಭಾಜ್ಯ ಭಾಗವಾಗಿದೆ. ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್, ಶ್ರಿ ಹರ್ ದೀಪ್ ಸಿಂಗ್ ಪುರಿ, ಶ್ರೀ ಸೋಮ್ ಪ್ರಕಾಶ್, ಶ್ರೀಮತಿ ಅನುಪ್ರಿಯಾ ಪಟೇಲ್ ಮತ್ತು ಶ್ರೀ ಕೌಶಲ್ ಕಿಶೋರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಸಬಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಈ ಯೋಜನೆ ದೆಹಲಿಯ ಜನತೆಗೆ ಕೇಂದ್ರ ಸರ್ಕಾರ ನೀಡಿರುವ ಬಹುದೊಡ್ಡ ಉಡುಗೊರೆಯಾಗಿದೆ ಎಂದರು. ಸಂಚಾರ ದಟ್ಟಣೆ ಮತ್ತು ಸಾಂಕ್ರಾಮಿಕ ನಡುವೆಯೂ ಯೋಜನೆಯನ್ನು ಪೂರ್ಣಗೊಳಿಸಿರುವ ಅಗಾಧತೆಯನ್ನು ಅವರು ಸ್ಮರಿಸಿದರು. ಅವರು ನವಭಾರತದ ನವ ದುಡಿಯುವ ಸಂಸ್ಕೃತಿಯನ್ನು ಮತ್ತು ಯೋಜನೆಯನ್ನು ಪೂರ್ಣಗೊಳಿಸಿದ ಕೆಲಸಗಾರರು ಮತ್ತು ಇಂಜಿನಿಯರ್ ಗಳ ಶ್ರಮವನ್ನು ಶ್ಲಾಘಿಸಿದರು. “ಇದು ಹೊಸ ಪ್ರತಿಜ್ಞೆಗಳನ್ನು ಸ್ವೀಕರಿಸುವ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನವಭಾರತ ಮತ್ತು ಇಲ್ಲಿ ಆ ಪ್ರತಿಜ್ಞೆಗಳ ಸಾಕಾರಕ್ಕೆ ಅಹರ್ನಿಶಿ ದುಡಿಯಲಾಗುತ್ತಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

 ಪ್ರಗತಿ ಮೈದಾನವನ್ನು 21ನೇ ಶತಮಾನದ ಅಗತ್ಯತೆಗಳಿಗೆ ತಕ್ಕಂತೆ ಪರಿವರ್ತಿಸುವ ಅಭಿಯಾನದ ಭಾಗ ಈ ಸುರಂಗ ಮಾರ್ಗವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬದಲಾಗುತ್ತಿರುವ ಭಾರತದ ಜತೆಗೆ ಪ್ರಗತಿ ಮೈದಾನ ಭಾರತವನ್ನು ಪ್ರತಿನಿಧಿಸುತ್ತದೆ, ಅದು ಹೆಚ್ಚಿನ ಮುತುವರ್ಜಿ ಇಲ್ಲದೆ ರಾಜಕೀಯ ಕಾರಣದಿಂದಾಗಿ ಹಿಂದುಳಿದಿತ್ತು ಎಂದು ಹೇಳಿದರು. “ದುರಾದೃಷ್ಟವೆಂದರೆ ಪ್ರಗತಿ ಮೈದಾನ ‘ಪ್ರಗತಿ’(ಬೆಳವಣಿಗೆ)ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ” ಎಂದು ಹೇಳಿದರು. ಸಾಕಷ್ಟು ಜನಪ್ರಿಯತೆ ಮತ್ತು ಹಿಂದಿನ ಪ್ರಚಾರದ ನಡುವೆಯೂ ಇದನ್ನು ಮಾಡಿಲ್ಲ. “ದೇಶದ ರಾಜಧಾನಿಯಲ್ಲಿ ವಿಶ್ವ ದರ್ಜೆಯ ಪ್ರದರ್ಶನ ಸಭಾಂಗಣಗಳನ್ನು, ಅತ್ಯಾಧುನಿಕ ಸೌಕರ್ಯಗಳನ್ನು ಸೃಷ್ಟಿಸಲು ಭಾರತ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ’’ ಎಂದು ಅವರು ಹೇಳಿದರು. ದ್ವಾರಕದಲ್ಲಿರುವ ಅಂತಾರಾಷ್ಟ್ರೀಯ ಸಮಾವೇಶ ಮತ್ತು ವಸ್ತು ಪ್ರದರ್ಶನ ಕೇಂದ್ರದ ಮಾದರಿಯಲ್ಲಿ ಪ್ರಗತಿ ಮೈದಾನದ ಮರು ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ. “ಕೇಂದ್ರ ಸರ್ಕಾರ ಕೈಗೊಂಡಿರುವ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಗಳಿಂದಾಗಿ ದೆಹಲಿ ಚಿತ್ರಣ ಬದಲಾಗುತ್ತಿದೆ ಮತ್ತು ಅದು ಆಧುನಿಕವಾಗುತ್ತಿದೆ. ಈ ಬದಲಾಗುತ್ತಿರುವ ಚಿತ್ರಣ ಭವಿಷ್ಯದ ಬದಲಾಗುತ್ತಿರುವ ವಿಧಿಯೂ ಆಗಿದೆ” ಎಂದು ಹೇಳಿದರು. ಆಧುನಿಕ ಮೂಲಸೌಕರ್ಯಕ್ಕೆ ಒತ್ತು ನೀಡುವುದರ ಜತೆಗೆ ಸಾಮಾನ್ಯ ಜನರ ಜೀವನ ಸುಗಮಗೊಳಿಸಲಾಗುತ್ತಿದೆ. ಪರಿಸರ ವಿಷಯಗಳ ಬಗ್ಗೆ ಸೂಕ್ಷ್ಮದಿಂದಿರುವ ಮತ್ತು ಹವಾಮಾನದ ಬಗ್ಗೆ ಜಾಗೃತರಾಗಿ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಪುನರುಚ್ಚರಿಸಿದರು. ಪ್ರಧಾನಮಂತ್ರಿ ಅವರು, ಆಫ್ರಿಕಾ ಅವಿನ್ಯೂ ಮತ್ತು ಕಸ್ತೂರಬಾ ಗಾಂಧಿ ರಸ್ತೆಯಲ್ಲಿ ಹೊಸ ರಕ್ಷಣಾ ಕಚೇರಿ ಸಂಕೀರ್ಣದ ಉದಾಹರಣೆ ನೀಡಿ, ಬಹು ದಿನಗಳಿಂದ ಬಾಕಿ ಇದ್ದ ಸಮಸ್ಯೆಗಳು, ಪರಿಸರ ಸ್ನೇಹಿ ನಿರ್ಮಾಣ, ದೇಶಕ್ಕಾಗಿ ದುಡಿಯುವವರ ಬಗ್ಗೆ ಕಾಳಜಿಗಳನ್ನು ವಿವರಿಸಿದರು. ಸೆಂಟ್ರಲ್ ವಿಸ್ತಾ ಯೋಜನೆ ಅತ್ಯಂತ ಕ್ಷಿಪ್ರವಾಗಿ ಸಾಗುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದ ಅವರು, ಮುಂಬರುವ ದಿನಗಳಲ್ಲಿ ಭಾರತದ ರಾಜಧಾನಿಯ ವಿಷಯ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಎಡೆಮಾಡಿಕೊಡಲಿದೆ ಮತ್ತು ಇದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದರು.

 ಪ್ರಧಾನಮಂತ್ರಿ ಅವರು, ಇಂಟಿಗ್ರೇಟೆಡ್ ಕಾರಿಡಾರ್ ನಿಂದ ಆಗಲಿರುವ ಸಮಯ ಮತ್ತು ಇಂಧನ ಉಳಿತಾಯ ಮಾಡುವ ಹೆಚ್ಚಿನ ಪ್ರಯೋಜನ ಕುರಿತಂತೆ ಮಾತನಾಡಿದರು. ಒಂದು ಅಂದಾಜಿನಂತೆ 55 ಲಕ್ಷ ಲೀಟರ್ ಇಂಧನ ಉಳಿತಾಯವಾಗಲಿದೆ ಮತ್ತು ವಾಹನ ದಟ್ಟಣೆ ತಗ್ಗುವುದರಿಂದ ಪರಿಸರಾತ್ಮಕವಾಗಿ ಲಾಭವಾಗಲಿದ್ದು, ಅದು 5 ಲಕ್ಷ ಸಸಿಗಳನ್ನು ನೆಡುವುದಕ್ಕೆ ಸಮನಾಗಿದೆ. ಈ ಕಾಯಂ ಪರಿಹಾರಗಳು ಜೀವನ ಸುಗಮಗೊಳಿಸಲು ಇಂದು ಅತ್ಯಗತ್ಯವಾಗಿದೆ ಎಂದರು. “ಕಳೆದ 8 ವರ್ಷಗಳಲ್ಲಿ ದೆಹಲಿ – ಎನ್ ಸಿಆರ್ ನ ಸಮಸ್ಯೆಗಳನ್ನು ಬಗೆಹರಿಸಲು ಹಿಂದೆಂದೂ ಕೈಗೊಳ್ಳಲಾಗದ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೆಹಲಿ ಎನ್ ಸಿಆರ್ ಪ್ರದೇಶದಲ್ಲಿ ಮೆಟ್ರೋ ಸೇವೆಗಳನ್ನು 193 ಕಿ.ಮೀ.ಗಳಿಂದ 400 ಕಿ.ಮೀ.ವರೆಗೆ ವಿಸ್ತರಿಸಲಾಗಿದೆ, ಇದು ಎರಡು ಪಟ್ಟಿಗೂ ಅಧಿಕ ಪ್ರಮಾಣ” ಎಂದು ಹೇಳಿದರು. ಜನರು ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು. ಅಂತೆಯೇ ಪೂರ್ವ ಮತ್ತು ಪಶ್ಚಿಮ ಫೆರಿಫೆರಲ್ ಎಕ್ಸ್ ಪ್ರೆಸ್ ವೇ, ದೆಹಲೀ-ಮೀರತ್ ಎಕ್ಸ್ ಪ್ರೆಸ್ ವೇ, ದೆಹಲಿಯ ನಾಗರಿಕರಿಗೆ ಸಹಾಯವಾಗಿದೆ. ಕಾಶಿ ರೈಲು ನಿಲ್ದಾಣದಲ್ಲಿ ಪ್ರಜೆಗಳು ಮತ್ತು ಪಾಲುದಾರರ ನಡೆಸಿದ ಸಂವಾದವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಸಾಮಾನ್ಯ ಜನರ ಮನಸ್ಥಿತಿಯಲ್ಲಿ ಭಾರೀ ಬದಲಾವಣೆಯಾಗಿದೆ ಎಂದ ಪ್ರಧಾನಮಂತ್ರಿ ಅವರು, ಆ ಬದಲಾವಣೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ ಎಂದರು. ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ, ದೆಹಲಿ-ಡೆಹ್ರಾಡೂನ್ ಎಕ್ಸ್ ಪ್ರೆಸ್ ವೇ, ದೆಹಲಿ-ಅಮೃತ್ ಸರ ಎಕ್ಸ್ ಪ್ರೆಸ್ ವೇ, ದೆಹಲಿ-ಚಂಡಿಗಢ ಎಕ್ಸ್ ಪ್ರೆಸ್ ವೇ, ದೆಹಲಿ-ಜೈಪುರ ಎಕ್ಸ್ ಪ್ರೆಸ್ ವೇ ಇವುಗಳಿಂದಾಗಿ ದೆಹಲಿ, ವಿಶ್ವದ ಅತ್ಯಂತ ಹೆಚ್ಚು ಸಂಪರ್ಕ ಹೊಂದಿರುವ ರಾಜಧಾನಿಗಳಲ್ಲಿ ಒಂದಾಗಿದೆ. ಅಲ್ಲದೆ ಅವರು, ದೆಹಲಿ-ಮೀರತ್ ರೈಲು ವ್ಯವಸ್ಥೆ ಕುರಿತಂತೆ ಮಾತನಾಡಿದರು. ಇದಕ್ಕೆ ದೇಶೀಯ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಇದು ಭಾರತದ ರಾಜಧಾನಿಯಾಗಿ ದೆಹಲಿಯನ್ನು ಬಿಂಬಿಸಲು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ವೃತ್ತಿಪರರು, ಸಾಮಾನ್ಯಜನ, ವಿದ್ಯಾರ್ಥಿಗಳು, ಯುವಕರು, ಶಾಲೆ ಮತ್ತು ಕಚೇರಿಗಳಿಗೆ ಹೋಗುವ ಪ್ರಯಾಣಿಕರು, ಟ್ಯಾಕ್ಸಿ-ಆಟೋ ಚಾಲಕರು ಮತ್ತು ವಾಣಿಜ್ಯ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದರು.

 ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಕ್ರಿಯಾಯೋಜನೆಯ ದೂರದೃಷ್ಟಿಗೆ ಅನುಗುಣವಾಗಿ ದೇಶ ಮಾಲ್ಟಿ ಮಾಡಲ್ ಸಂಪರ್ಕವನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಕ್ರೀಯಾಯೋಜನೆ ಸಬ್ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ನ ಮಾಧ್ಯಮವಾಗಿದೆ ಎಂದು ಹೇಳಿದರು. ಇತ್ತೀಚೆಗೆ ಧರ್ಮಶಾಲಾದಲ್ಲಿ ನಡೆದ ಮುಖ್ಯ ಕಾರ್ಯದರ್ಶಿಗಳ ಸಮಾವೇಶದಲ್ಲಿ ತಿಳಿಸಿದಂತೆ ರಾಜ್ಯಗಳು ಗತಿಶಕ್ತಿಯ ಯೋಜನೆಯನ್ನು ಅಳವಡಿಸಿಕೊಂಡಿರುವುದಕ್ಕೆ ಪ್ರಧಾನಮಂತ್ರಿ ಅವರು ಸಂತಸವನ್ನು ವ್ಯಕ್ತಪಡಿಸಿದರು. ಈ ‘ಅಮೃತಕಾಲ’ದ ಸಮಯದಲ್ಲಿ “ದೇಶದ ಮೆಟ್ರೋ ನಗರಗಳ ವ್ಯಾಪ್ತಿಯನ್ನು ವಿಸ್ತರಿಸುವುದು ಅತ್ಯಗತ್ಯ ಮತ್ತು ಎರಡನೇ ಹಾಗೂ ಮೂರನೇ ದರ್ಜೆ ನಗರಗಳಲ್ಲಿ ಉತ್ತಮ ಕಾರ್ಯನಿರ್ವಹಣೆ ಯೋಜನೆಗಳನ್ನು ಹೊಂದಬೇಕಾಗಿದೆ. ಭಾರತದ ಕ್ಷಿಪ್ರ ಅಭಿವೃದ್ಧಿ ಕಾರ್ಯಗಳು 25 ವರ್ಷಗಳಲ್ಲಿ ಬರಲಿದ್ದು, ನಾವು ನಗರಗಳನ್ನು ಹಸಿರು, ಸ್ವಚ್ಛ ಮತ್ತು ಪರಿಸರಸ್ನೇಹಿಯನ್ನಾಗಿ ಮಾಡಬೇಕಿದೆ” ಎಂದು ಪ್ರಧಾನಮಂತ್ರಿ ಹೇಳಿದರು. “ನಾವು ನಗರೀಕರಣವನ್ನು ಸವಾಲಿನ ಬದಲಿಗೆ ಅವಕಾಶ ಎಂದು ಪರಿಗಣಿಸಿದರೆ ಆಗ ಅದು ದೇಶದ ಅಭಿವೃದ್ಧಿಗೆ ಹಲವು ಪಟ್ಟು ಕೊಡುಗೆಗಳನ್ನು ನೀಡಲಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

 ಇದೇ ಮೊದಲ ಬಾರಿಗೆ ಯಾವುದೇ ಸರ್ಕಾರ ನೀಡದಷ್ಟು ದೊಡ್ಡ ಪ್ರಮಾಣದಲ್ಲಿ ನಗರ ಯೋಜನೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ನಗರ ಪ್ರದೇಶದ ಬಡವರಿಂದ ನಗರ ಪ್ರದೇಶದ ಮಧ್ಯಮ ವರ್ಗದವರೂ ಸೇರಿದಂತೆ ಪ್ರತಿಯೊಬ್ಬರಿಗೂ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಕಳೆದ 8 ವರ್ಷಗಳಲ್ಲಿ 1 ಕೋಟಿ 70 ಲಕ್ಷಕ್ಕೂ ಅಧಿಕ ನಗರ ಪ್ರದೇಶದ ಬಡವರಿಗೆ ಪಕ್ಕಾ ಮನೆಗಳನ್ನು ಖಾತ್ರಿಪಡಿಸಲಾಗಿದೆ. ಲಕ್ಷಾಂತರ ಮಧ್ಯಮವರ್ಗದ ಕುಟುಂಬಗಳಿಗೆ ತಮ್ಮದೇ ಮನೆ ನಿರ್ಮಾಣಕ್ಕೆ ಸಹಾಯ ಮಾಡಲಾಗಿದೆ. ನಗರಗಳಲ್ಲಿ ಆಧುನಿಕ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಿದ್ದರೆ ಸಿಎನ್ ಜಿ ಆಧಾರಿತ ವಾಹನಗಳ ಸಂಚಾರ ಮತ್ತು ವಿದ್ಯುತ್ ಚಾಲಿತ ವಾಹನಗಳ ಸಂಚಾರಕ್ಕೆ ಮೂಲಸೌಕರ್ಯ ವೃದ್ಧಿಗೂ ಆದ್ಯತೆ ನೀಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಫೇಮ್ ಯೋಜನೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿ ಅವರು ತಮ್ಮ ವಾಹನವನ್ನು ಬಿಟ್ಟು ಸುರಂಗ ಮಾರ್ಗದಲ್ಲಿ ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದರು. ಮತ್ತು ಸುರಂಗದೊಳಗಿನ ಚಿತ್ರಕಲೆ, ಯೋಜಿತ ಕೆಲಸಕ್ಕಿಂತ ಹೆಚ್ಚಿನ ಮೌಲ್ಯವರ್ಧನೆ ಮಾಡಿರುವುದನ್ನು ತೋರಿಸುತ್ತದೆ ಹಾಗೂ ಅದು ಏಕಭಾರತ್ ಶ್ರೇಷ್ಠ ಭಾರತ್ ಗೆ ಅತ್ಯುತ್ತಮ ಅಧ್ಯಯನ ಕೇಂದ್ರವಾಗಲಿದೆ ಎಂದರು. ಇದು ವಿಶ್ವದಲ್ಲಿ ಎಲ್ಲಿಯೂ ಇಲ್ಲದ ಅತ್ಯಂತ ಉದ್ದನೆಯ ಕಲಾ ಗ್ಯಾಲರಿ ಆಗಿದೆ ಎಂದು ಅವರು ಹೇಳಿದರು. ಭಾನುವಾರ ಸೇರಿದಂತೆ ಕೆಲವು ದಿನಗಳಲ್ಲಿ ಕೆಲವು ಗಂಟೆಗಳ ಕಾಲ ಸುರಂಗ ಮಾರ್ಗವನ್ನು ಶಾಲಾ ಮಕ್ಕಳ ವೀಕ್ಷಣೆಗೆ ಪ್ರತ್ಯೇಕವಾಗಿ ಅವಕಾಶ ಮಾಡಿಕೊಡಬೇಕು. ಶಾಲಾ ಮಕ್ಕಳು ಮತ್ತು ಪಾದಚಾರಿಗಳು ಚಿತ್ರಕಲೆಯನ್ನು ಶ್ಲಾಘಿಸಲಿದ್ದಾರೆ ಮತ್ತು ಅದರ ಹಿಂದಿನ ಸ್ಫೂರ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಜನೆಯ ವಿವರ:

ಸುಮಾರು 920 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟಾನ್ಸಿಟ್ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಭರಿಸಿದೆ. ಪ್ರಗತಿ ಮೈದಾನದಲ್ಲಿ ಅಭಿವೃದ್ಧಿಪಡಿಸಿರುವ ವಿಶ್ವದರ್ಜೆಯ ಹೊಸ ಪ್ರದರ್ಶನ ಸಭಾಂಗಣ ಮತ್ತು ಸಮಾವೇಶ ಕೇಂದ್ರಗಳಿಗೆ ಅಡೆತಡೆ ರಹಿತ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಗುರಿ ಹೊಂದಲಾಗಿದೆ. ಆ ಮೂಲಕ ಪ್ರಗತಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದರ್ಶನಕಾರರು ಮತ್ತು ವೀಕ್ಷಕರು ಸುಲಭವಾಗಿ ಭಾಗವಹಿಸುವಂತೆ ಮಾಡಲಾಗಿದೆ. ಈ ಯೋಜನೆಯ ಪರಿಣಾಮ ಪ್ರಗತಿ ಮೈದಾನದಾಚೆಯೂ ಆಗಲಿದ್ದು, ಅದು ಅಡಚಣೆ ರಹಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಜತೆಗೆ ಸಮಯ ಹಾಗೂ ಪ್ರಯಾಣದ ವೆಚ್ಚವನ್ನು ದೊಡ್ಡ ಪ್ರಮಾಣದಲ್ಲಿ ಉಳಿತಾಯ ಮಾಡಲು ಸಹಕರಿಸುತ್ತದೆ. ನಗರ ಮೂಲಸೌಕರ್ಯ ಪರಿವರ್ತನೆಯ ಮೂಲಕ ಜನರ ಜೀವನವನ್ನು ಸುಲಭ ಖಾತ್ರಿಪಡಿಸುವ ಸರ್ಕಾರದ ದೂರದೃಷ್ಟಿಯ ಯೋಜನೆಯ ಭಾಗ ಇದಾಗಿದೆ.

 ಮುಖ್ಯ ಸುರಂಗ ಮಾರ್ಗ ರಿಂಗ್ ರಸ್ತೆಯ ಮೂಲಕ ಇಂಡಿಯಾ ಗೇಟ್ ಮೂಲಕ ಪುರಾನಾ ಕಿಲಾ ಮಾರ್ಗ ಹಾದು ಪ್ರಗತಿ ಮೈದಾನ ತಲುಪಲಿದೆ. ಆರು ಪಥಗಳಾಗಿ ವಿಭಜಿಸಿರುವ ಸುರಂಗ ಮಾರ್ಗ ಬಹು ಉದ್ದೇಶಗಳನ್ನು ಹೊಂದಿದ್ದು, ಅದರಲ್ಲಿ ಪ್ರಗತಿ ಮೈದಾನದ ಬಹುದೊಡ್ಡ ತಳಮಹಡಿಯ ಪಾರ್ಕಿಂಗ್ ಸೌಲಭ್ಯವೂ ಒಳಗೊಂಡಿದೆ. ಈ ಸುರಂಗ ಮಾರ್ಗದ ವಿಭಿನ್ನ ಅಂಶವೆಂದರೆ ಎರಡು ತಿರುವುಗಳ ಸುರಂಗ ಮಾರ್ಗ ಮುಖ್ಯ ಸುರಂಗ ಮಾರ್ಗದ ಕೆಳಗೆ ನಿರ್ಮಿಸಲಾಗಿದ್ದು, ಅದರ ಮೂಲಕ ಎರಡೂ ಕಡೆಯಿಂದ ಪಾರ್ಕಿಂಗ್ ಲಾಟ್ ಗೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ಮಾರ್ಟ್ ಅಗ್ನಿಶಾಮಕ ನಿರ್ವಹಣಾ ವ್ಯವಸ್ಥೆ, ಆಧುನಿಕ ಗಾಳಿ-ಬೆಳಕು ಸೌಕರ್ಯ ಮತ್ತು ಸ್ವಯಂಚಾಲಿತ ಒಳಚರಂಡಿ ವ್ಯವಸ್ಥೆ, ಡಿಜಿಟಲ್ ನಿಯಂತ್ರಿತ ಸಿಸಿ ಟಿವಿ ಮತ್ತು ಸುರಂಗದೊಳಗೆ ಸಾರ್ವಜನಿಕ ಪ್ರಕಟಣಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ, ಜಾಗತಿಕ ಮಾನದಂಡದ ಸೌಕರ್ಯಗಳೂ ಒಳಗೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕಾಗಿ ಸಜ್ಜುಗೊಳಿಸಲಾಗಿದೆ. ಈ ಬಹು ನಿರೀಕ್ಷಿತ ಸುರಂಗ ಮಾರ್ಗ ಸದ್ಯ ತನ್ನ ಸಾಮರ್ಥ್ಯಕ್ಕೂ ಮೀರಿ ವಾಹನಗಳು ಸಂಚರಿಸುತ್ತಿರುವ ಭೈರೋನ್ ಮಾರ್ಗಕ್ಕೆ ಪರ್ಯಾಯ ಮಾರ್ಗವಾಗಲಿದೆ ಮತ್ತು ಅದು ಭೈರೋನ್ ಮಾರ್ಗದ ಅರ್ಧಕ್ಕೂ ಅಧಿಕ ವಾಹನ ದಟ್ಟಣೆಯನ್ನು ನಿಭಾಯಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಸುರಂಗ ಮಾರ್ಗವಲ್ಲದೆ, ಆರು ಅಂಡರ್ ಪಾಸ್ ಗಳೂ ಇವೆ. ಅವುಗಳಲ್ಲಿ ನಾಲ್ಕು ಮಥುರಾ ರಸ್ತೆಯಲ್ಲಿ, ಒಂದು ಭೈರೋನ್ ಮಾರ್ಗದಲ್ಲಿ ಹಾಗು ಒಂದು ರಿಂಗ್ ರಸ್ತೆ ಮತ್ತು ಭೈರೋನ್ ಮಾರ್ಗದ ವಿಭಜನೆಗೊಳ್ಳುವ ಜಾಗದಲ್ಲಿ ಬರುತ್ತವೆ.

 

 

******



(Release ID: 1835314) Visitor Counter : 148