ಪ್ರಧಾನ ಮಂತ್ರಿಯವರ ಕಛೇರಿ

ಜೂನ್ 19 ರಂದು 44 ನೇ ಚೆಸ್ ಒಲಿಂಪಿಯಾಡ್‌ ನ ಐತಿಹಾಸಿಕ ಕ್ರೀಡಾ ಜ್ಯೋತಿ ರಿಲೇಗೆ ಚಾಲನೆ ನೀಡಲಿದ್ದಾರೆ.


ಪ್ರಧಾನ ಮಂತ್ರಿಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಆತಿಥ್ಯ ವಹಿಸುತ್ತಿದೆ ಭಾರತಚೆಸ್ ಒಲಿಂಪಿಯಾಡ್‌ನಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ ಶೈಲಿಯ ಕ್ರೀಡಾ ಜ್ಯೋತಿ ರಿಲೇ ಪರಿಚಯಿಸಲಾಗುತ್ತಿದೆ.

Posted On: 17 JUN 2022 4:47PM by PIB Bengaluru

ಚೆಸ್ ಒಲಿಂಪಿಯಾಡ್‌ನ ಭವಿಷ್ಯದ ಎಲ್ಲಾ ಕ್ರೀಡಾ ಜ್ಯೋತಿ ರಿಲೇಗಳೂ ಭಾರತದಿಂದಲೇ ಆರಂಭ. ಹೊಸದಿಲ್ಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಜೂನ್ 19 ರಂದು ಸಂಜೆ 5 ಗಂಟೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 44 ನೇ ಚೆಸ್ ಒಲಿಂಪಿಯಾಡ್ ಅಂಗವಾಗಿ ಆಯೋಜನೆಯಾಗಿರುವ ಚಾರಿತ್ರಿಕ ಕ್ರೀಡಾ ಜ್ಯೋತಿ ರಿಲೇಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಲ್ಲಿ ಸಮಾವೇಶಗೊಂಡಿರುವವರನ್ನು ಉದ್ದೇಶಿಸಿ ಮಾತನಾಡುವರು.ಅಂತಾರಾಷ್ಟ್ರೀಯ ಚೆಸ್ ಮಂಡಳಿಯಾದ ಎಫ್.ಐ.ಡಿ.ಇ. ಯು ಈ ವರ್ಷ ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಜ್ಯೋತಿಯನ್ನು ಸ್ಥಾಪಿಸಿದೆ. ಒಲಿಂಪಿಕ್ ಸಂಪ್ರದಾಯದ ಭಾಗವಾಗಿರುವ ಈ ಕ್ರೀಡಾ ಜ್ಯೋತಿ ಪರಂಪರೆಯನ್ನು ಚೆಸ್ ಒಲಿಂಪಿಯಾಡ್ ನಲ್ಲಿ ಹಿಂದೆಂದೂ ಅಳವಡಿಸಿಕೊಂಡಿರಲಿಲ್ಲ ಮತ್ತು ಅನುಸರಿಸಿರಲಿಲ್ಲ. ಚೆಸ್ ಒಲಿಂಪಿಯಾಡ್ ಕ್ರೀಡಾ ಜ್ಯೋತಿ ರಿಲೇಯನ್ನು ಆರಂಭ ಮಾಡುತ್ತಿರುವ ದೇಶಗಳಲ್ಲಿ ಭಾರತವೇ ಮೊದಲನೇಯದಾಗಿದೆ. ಚೆಸ್ ನ ಭಾರತೀಯ ಬೇರುಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಚೆಸ್ ಒಲಿಂಪಿಯಾಡ್ ಗಾಗಿರುವ ಕ್ರೀಡಾ ಜ್ಯೋತಿ ರಿಲೇಯ ಪರಂಪರೆ ಇನ್ನು ಮುಂದೆ ಭಾರತದಲ್ಲಿ ಪ್ರಾರಂಭವಾಗುತ್ತದೆ ಮತ್ತು ಆತಿಥೇಯ ದೇಶವನ್ನು ತಲುಪುವ ಮೊದಲು ಎಲ್ಲಾ ಖಂಡಗಳಲ್ಲಿ ಪ್ರಯಾಣಿಸುತ್ತದೆ.ಎಫ್.ಐ.ಡಿ.ಇ.ಯ ಅಧ್ಯಕ್ಷ ಅರ್ಕಾಡಿ ಡೊರ್ಕೋವಿಚ್ ಅವರು ಕ್ರೀಡಾ ಜ್ಯೋತಿಯನ್ನು ಪ್ರಧಾನ ಮಂತ್ರಿ ಅವರಿಗೆ ಹಸ್ತಾಂತರಿಸಲಿದ್ದಾರೆ. ಬಳಿಕ ಅವರು ಅದನ್ನು ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಗೆ ಹಸ್ತಾಂತರಿಸುವರು. ಈ ಕ್ರೀಡಾ ಜ್ಯೋತಿಯನ್ನು ಆ ಬಳಿಕದ 40 ದಿನಗಳ ಅವಧಿಯಲ್ಲಿ 75 ನಗರಗಳಿಗೆ ಕೊಂಡೊಯ್ಯಲಾಗುವುದು, ಬಳಿಕ ಅದು ಚೆನ್ನೈ ಬಳಿಯ ಮಹಾಬಲೀಪುರಂನಲ್ಲಿ ಸಮಾಪನಗೊಳ್ಳಲಿದೆ. ಪ್ರತಿಯೊಂದು ಸ್ಥಳದಲ್ಲಿಯೂ ರಾಜ್ಯದ ಗ್ರಾಂಡ್ ಮಾಸ್ಟರ್ ಗಳು ಈ ಕ್ರೀಡಾ ಜ್ಯೋತಿಯನ್ನು ಎದುರುಗೊಂಡು ಸ್ವೀಕರಿಸಲಿದ್ದಾರೆ.44 ನೇ ಚೆಸ್ ಒಲಿಂಪಿಯಾಡ್ 2022 ರ ಜುಲೈ 28 ರಿಂದ ಆಗಸ್ಟ್ 10 ರವರೆಗೆ ಚೆನ್ನೈಯಲ್ಲಿ ನಡೆಯಲಿದೆ. ಈ ಪ್ರತಿಷ್ಟಿತ ಸ್ಪರ್ಧಾಕೂಟವನ್ನು 1927 ರಿಂದ ಆಯೋಜಿಸಲಾಗುತ್ತಿದೆ, ಅದನ್ನು ಭಾರತ ಇದೇ ಮೊದಲ ಬಾರಿಗೆ ಆತಿಥ್ಯ ವಹಿಸಿಕೊಂಡು ನಡೆಸುತ್ತಿದೆ. ಮತ್ತು ಇದು 30 ವರ್ಷಗಳ ಅವಧಿಯ ಬಳಿಕ ಏಶ್ಯಾದಲ್ಲಿ ನಡೆಯುತ್ತಿದೆ. 189 ದೇಶಗಳ ಭಾಗವಹಿಸುವಿಕೆಯೊಂದಿಗೆ ಈ ಚೆಸ್ ಒಲಿಂಪಿಯಾಡ್ ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇಶಗಳು ಭಾಗವಹಿಸುತ್ತಿರುವ ಚೆಸ್ ಒಲಿಂಪಿಯಾಡ್ ಆಗಲಿದೆ.



(Release ID: 1835189) Visitor Counter : 108