ಪ್ರಧಾನ ಮಂತ್ರಿಯವರ ಕಛೇರಿ
ವ್ಯಾಪಕ ಸಮೃದ್ಧಿಗಾಗಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ' ಸುಧಾರಣೆಗಳ 8 ವರ್ಷಗಳು' ಹಂಚಿಕೊಂಡ ಪ್ರಧಾನಿ
Posted On:
11 JUN 2022 12:35PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 8 ವರ್ಷಗಳಲ್ಲಿ 'ಸುಲಭ ವ್ಯವಹಾರʼ ಕ್ಷೇತ್ರದಲ್ಲಿ ಮತ್ತು ವ್ಯಾಪಕ ಸಮೃದ್ಧಿಯನ್ನು ಹರಡಲು ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸಲು ಕೈಗೊಂಡಿರುವ ಸುಧಾರಣೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಅವರು ʻಮೈಗವ್ʼನ(MyGov) ಟ್ವೀಟ್ ಥ್ರೆಡ್ ಅನ್ನು ಹಾಗೂ ತಮ್ಮ ವೆಬ್ಸೈಟ್ ಮತ್ತು ʻನಮೋ ಆ್ಯಪ್ʼನ ಲೇಖನಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:
'ಸುಧಾರಣೆ, ಕಾರ್ಯನಿರ್ವಹಣೆ ಮತ್ತು ಪರಿವರ್ತನೆ' ತತ್ವದ ಆಧಾರದ ಮೇಲೆ ಭಾರತ ಸರಕಾರವು ಹಲವಾರು ಸುಧಾರಣೆಗಳನ್ನು ತಂದಿದೆ. ಇದು 'ಸುಲಭ ವ್ಯವಹಾರ'ವನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ವೇಳೆ, ಬೆಳವಣಿಗೆಯನ್ನು ನಿಧಾನಗೊಳಿಸುವ ಅನೇಕ ಹಳೆಯ ಕಾನೂನುಗಳನ್ನು ಕೈಬಿಡಲಾಗಿದೆ. #8YearsOfReforms"
"ವ್ಯಾಪಕ ಸಮೃದ್ಧಿಗಾಗಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ವ್ಯಾಪಕ ಸುಧಾರಣೆಗಳು. #8YearsOfReforms"
***
(Release ID: 1833266)
Visitor Counter : 239
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam