ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ನಾಗಾಲ್ಯಾಂಡ್‌ನ ಮಹಿಳಾ ವಿದ್ಯಾರ್ಥಿಗಳ ನಿಯೋಗಕ್ಕೆ ಪ್ರಧಾನಿ ಆತಿಥ್ಯ


ʻಏಕ್ ಭಾರತ್, ಶ್ರೇಷ್ಠ ಭಾರತ್ʼ ಉಪಕ್ರಮದ ಭಾಗವಾಗಿ ದೆಹಲಿಗೆ ಭೇಟಿ ನೀಡಿದ ನಿಯೋಗ

ನಿಯೋಗದೊಂದಿಗೆ ಮುಕ್ತ ಸಂವಾದದಲ್ಲಿ ತೊಡಗಿದ ಪ್ರಧಾನಿ

ಈಶಾನ್ಯ ರಾಜ್ಯಗಳ ಬಗ್ಗೆ ಪ್ರಧಾನಿ ಅವರ ದೃಷ್ಟಿಕೋನ, ನಾಗಾಲ್ಯಾಂಡ್‌ನಲ್ಲಿ ಅವರ ಅನುಭವಗಳು, ಯೋಗದ ಪ್ರಾಮುಖ್ಯತೆ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ವಿಷಯಗಳನ್ನು ಪ್ರಧಾನಮಂತ್ರಿಯವರೊಂದಿಗೆ ವಿದ್ಯಾರ್ಥಿಗಳು ಚರ್ಚಿಸಿದರು

प्रविष्टि तिथि: 09 JUN 2022 8:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ನಾಗಾಲ್ಯಾಂಡ್‌ನ ಮಹಿಳಾ ವಿದ್ಯಾರ್ಥಿಗಳ ನಿಯೋಗಕ್ಕೆ ಆತಿಥ್ಯ ನೀಡಿದರು. ʻಏಕ್‌ ಭಾರತ್‌, ಶ್ರೇಷ್ಠ್‌ ಭಾರತ್‌ʼ ಉಪಕ್ರಮದ ಭಾಗವಾಗಿ ನಿಯೋಗವು ದೆಹಲಿಗೆ ಭೇಟಿ ನೀಡಿತು. 

ಪ್ರಧಾನಿಯವರನ್ನು ಭೇಟಿ ಮಾಡಿದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಪ್ರಧಾನಿ ಅವರೊಂದಿಗೆ ಮುಕ್ತ ಸಂವಾದದ ವೇಳೆ ಈಶಾನ್ಯ ರಾಜ್ಯಗಳ ಬಗ್ಗೆ ಅವರ ದೃಷ್ಟಿಕೋನ, ನಾಗಾಲ್ಯಾಂಡ್‌ನಲ್ಲಿ ಅವರ ಅನುಭವಗಳು, ಯೋಗದ ಮಹತ್ವ ಮುಂತಾದ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಚರ್ಚಿಸಿದರು ಜೊತಗೆ ಈ ಬಗ್ಗೆ ಪ್ರಧಾನ ಮಂತ್ರಿಯವರ ಅಭಿಪ್ರಾಯಗಳನ್ನು ಕೇಳಿದರು. 
ಸಂವಾದದ ವೇಳೆ ಪ್ರಧಾನಮಂತ್ರಿಯವರು, ದೆಹಲಿಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಮತ್ತು ಅನ್ವೇಷಿಸಿದ ಅನುಭವದ ಬಗ್ಗೆ ವಿದ್ಯಾರ್ಥಿಗಳನ್ನು ವಿಚಾರಿಸಿದರು. ದೆಹಲಿಯ ʻಪಿಎಂ ವಸ್ತು ಸಂಗ್ರಾಹಾಲಯʼ ಮತ್ತು ʻರಾಷ್ಟ್ರೀಯ ಯುದ್ಧ ಸ್ಮಾರಕʼಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದರು. 

ರಾಷ್ಟ್ರೀಯ ಮಹಿಳಾ ಆಯೋಗವು ಪ್ರಧಾನಮಂತ್ರಿಯವ ಜೊತೆ ನಿಯೋಗದ ಸಭೆಯನ್ನು ಆಯೋಜಿಸಿತು. 

*****


(रिलीज़ आईडी: 1832748) आगंतुक पटल : 274
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam