ಸಂಪುಟ

ಭಾರತದ ಕೋಲ್ಕತಾದ ಮೂಲ ವಿಜ್ಞಾನ ಕುರಿತ ಎಸ್.ಎನ್. ಬೋಸ್ ರಾಷ್ಟ್ರೀಯ ಕೇಂದ್ರ (ಎಸ್.ಎನ್.ಬಿ.ಎನ್.ಸಿ.ಬಿ.ಎಸ್. ಮತ್ತು ಜರ್ಮನಿಯ ಲೆಬ್ನಿಜ್-ಇನ್ಸ್ಟಿಟ್ಯೂಟ್ ಫರ್ ಫೆಸ್ಟ್ಕೋರ್ಪರ್-ಉಂಡ್ ವೆರ್ಕ್ಸ್ ಸ್ಟಾಫ್ಫೋರ್ಸ್ಚಂಗ್ ಡ್ರೆಸ್ಡನ್ ಇ.ವಿ.) (ಐ.ಎಫ್.ಡಬ್ಲ್ಯೂ. ಡ್ರೆಸ್ಡೆನ್ ಇ.ವಿ.) ನಡುವೆ ನೋವೆಲ್ ಮ್ಯಾಗ್ನೆಟಿಕ್ ಅಂಡ್ ಟೋಪೋಲಾಜಿಕಲ್ ಕ್ವಾಂಟಮ್ ಮೆಟೀರಿಯಲ್ಸ್ ನಲ್ಲಿ ಅಂಕಿತ ಹಾಕಲಾದ ತಿಳಿವಳಿಕೆ ಒಡಂಬಡಿಕೆಗೆ ಸಂಪುಟದ ಅನುಮೋದನೆ

Posted On: 08 JUN 2022 4:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತದ ಕೋಲ್ಕತಾದ ಮೂಲ ವಿಜ್ಞಾನ ಕುರಿತ ಎಸ್.ಎನ್.ಬೋಸ್ ರಾಷ್ಟ್ರೀಯ ಕೇಂದ್ರ (ಎಸ್.ಎನ್.ಬಿ.ಎನ್.ಸಿ.ಬಿ.ಎಸ್.) ಮತ್ತು ಜರ್ಮನಿಯ ಡ್ರೆಸ್ಡನ್ ನ ಲೆಬ್ನಿಜ್-ಇನ್ ಸ್ಟಿಟ್ಯೂಟ್ ಫರ್ ಫೆಸ್ಟ್ಕೊರ್ಪರ್-ಉಂಡ್ ವೆರ್ಕ್ಸ್ ಸ್ಟಾಫ್ಫೋರ್ಸ್ಚಂಗ್ ಡ್ರೆಸ್ಡೆನ್ ಇ.ವಿ. (ಐ.ಎಫ್.ಡಬ್ಲ್ಯೂ. ಡ್ರೆಸ್ಡೆನ್ ಇ.ವಿ.) ನಡುವೆ "ನಾವೆಲ್ ಮ್ಯಾಗ್ನೆಟಿಕ್ ಅಂಡ್ ಟೋಪೋಲಾಜಿಕಲ್ ಕ್ವಾಂಟಮ್ ಮೆಟೀರಿಯಲ್ಸ್" ಕ್ಷೇತ್ರದಲ್ಲಿ ವೈಜ್ಞಾನಿಕ ಸಹಕಾರಕ್ಕಾಗಿ ಉದ್ದೇಶಿತ ತಿಳಿವಳಿಕಾ ಒಡಂಬಡಿಕೆಗೆ ಅಂಕಿತ ಹಾಕಿರುವ ಬಗ್ಗೆ ವಿವರಿಸಲಾಯಿತು.
ಭವಿಷ್ಯದ ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಅವುಗಳ ಸಾಮರ್ಥ್ಯದಿಂದಾಗಿ ಕ್ವಾಂಟಮ್ ಮೆಟೀರಿಯಲ್ ಗಳ ಮೇಲಿನ ಸಂಶೋಧನೆಯು ವಿಶ್ವದಾದ್ಯಂತ ಗಮನ ಸೆಳೆದಿದೆ. ಭಾರತ-ಜರ್ಮನ್ ಸಹಯೋಗವನ್ನು ಉತ್ತೇಜಿಸುವುದು, ಅವಕಾಶಗಳನ್ನು ಒದಗಿಸುವುದು ಮತ್ತು ಕಾಂತೀಯ ಮತ್ತು ಟೋಪೋಲಾಜಿಕಲ್ (ಭೂಪ್ರದೇಶ ಶಾಸ್ತ್ರೀಯ) ಕ್ವಾಂಟಮ್ ವಸ್ತುಗಳ ಕ್ಷೇತ್ರದಲ್ಲಿ ಜ್ಞಾನದ ಪ್ರಗತಿಗೆ ಅನುವು ಮಾಡಿಕೊಡುವುದು ಈ ಜಂಟಿ ಸಹಯೋಗದ ಗುರಿಯಾಗಿದೆ. ನಿರ್ದಿಷ್ಟ ಸಹಕಾರವು ಪ್ರಾಯೋಗಿಕ ಮತ್ತು ಗಣನಾ ಸಂಪನ್ಮೂಲಗಳನ್ನು ಹಂಚಿಕೊಳ್ಳುವುದು, ತಾಂತ್ರಿಕ ಮತ್ತು ವೃತ್ತಿಪರ ಬೆಂಬಲದ ವಿನಿಮಯ, ಮತ್ತು ಸಹಯೋಗ ಸಂಶೋಧನೆಯನ್ನು ನಡೆಸಲು ಬೋಧಕರು, ಸಂಶೋಧಕರ ವಿನಿಮಯವನ್ನು ಒಳಗೊಂಡಿರುತ್ತದೆ. ಇದು ಪರಸ್ಪರ ಹೊಂದಾಣಿಕೆ, ಉತ್ತಮ ಪ್ರಯತ್ನ, ಪರಸ್ಪರ ಪ್ರಯೋಜನ ಮತ್ತು ನಿರಂತರ ಸಂವಹನಗಳ ಆಧಾರದ ಮೇಲೆ ಅಗತ್ಯವಾದ ಜ್ಞಾನದ ತಳಹದಿಯನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎಸ್.ಎನ್.ಬಿ.ಎನ್.ಸಿ.ಬಿ.ಎಸ್. ಬಗ್ಗೆ:
ಮೂಲ ವಿಜ್ಞಾನಗಳ ಕುರಿತ ಎಸ್.ಎನ್. ಬೋಸ್ ರಾಷ್ಟ್ರೀಯ ಕೇಂದ್ರ (ಎಸ್.ಎನ್.ಬಿ.ಎನ್.ಸಿ.ಬಿ.ಎಸ್.) ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ 1986 ರಲ್ಲಿ ನೋಂದಾಯಿತ ಸೊಸೈಟಿಯಾಗಿ ಸ್ಥಾಪಿಸಲಾದ ಸ್ವಾಯತ್ತ ಸಂಶೋಧನಾ ಸಂಸ್ಥೆಯಾಗಿದೆ. ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಅಗಾಧ ವ್ಯಕ್ತಿಯಾಗಿದ್ದ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಕ್ವಾಂಟಮ್ ಸಂಖ್ಯಾಶಾಸ್ತ್ರದ ಅಭಿವೃದ್ಧಿಗೆ ಕೆಲವು ಮೂಲಭೂತ ಪರಿಕಲ್ಪನೆಯ ಕೊಡುಗೆಗಳನ್ನು ನೀಡಿದ ಪ್ರೊಫೆಸರ್ ಎಸ್. ಎನ್. ಬೋಸ್ ಅವರ ಜೀವನ ಮತ್ತು ಕಾರ್ಯವನ್ನು ಗೌರವಿಸಲು ಈ ಕೇಂದ್ರವನ್ನು ಸ್ಥಾಪಿಸಲಾಯಿತು. ಕಳೆದ ಕೆಲವು ವರ್ಷಗಳಲ್ಲಿ, ಕೇಂದ್ರವು ಮೂಲ ವಿಜ್ಞಾನಗಳಲ್ಲಿ, ಅದರಲ್ಲೂ ವಿಶೇಷವಾಗಿ ಭೌತಿಕ ವಿಜ್ಞಾನಗಳು ಮತ್ತು ಸಂಬಂಧಿತ ವಿಭಾಗಗಳ ಕ್ಷೇತ್ರದಲ್ಲಿ, ಪ್ರಯೋಗ, ಸಿದ್ಧಾಂತ ಮತ್ತು ಲೆಕ್ಕಾಚಾರ (computation)ದ ಶಕ್ತಿಯನ್ನು ಬಳಕೆ ಕುರಿತ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಕೇಂದ್ರವು ವಿಜ್ಞಾನ ಮತ್ತು ತಂತ್ರಜ್ಞಾನದ ಈ ನಿರ್ಣಾಯಕ ಕ್ಷೇತ್ರದಲ್ಲಿ ಸುಧಾರಿತ ಮಾನವಶಕ್ತಿ ತರಬೇತಿ ಮತ್ತು ಸಂಪರ್ಕದ ಪ್ರಮುಖ ಕೇಂದ್ರವಾಗಿದೆ. ಈ ಕೇಂದ್ರವು ಪಿಎಚ್.ಡಿ.ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲು ವಸತಿ ಸಹಿತ ಕಾರ್ಯಕ್ರಮವನ್ನು ಒದಗಿಸುತ್ತದೆ ಮತ್ತು ಸಮರ್ಥ ಸಂದರ್ಶಕರು ಮತ್ತು ಸಂಪರ್ಕ ಕಾರ್ಯಕ್ರಮವನ್ನೂ ಹೊಂದಿದೆ.
ಐ.ಎಫ್.ಡಬ್ಲ್ಯು ಬಗ್ಗೆ:
ಐ.ಎಫ್.ಡಬ್ಲ್ಯೂ ಒಂದು ವಿಶ್ವವಿದ್ಯಾಲಯೇತರ ಸಂಶೋಧನಾ ಸಂಸ್ಥೆಯಾಗಿದೆ ಮತ್ತು ಲೀಬ್ನಿಜ್ ಅಸೋಸಿಯೇಷನ್ ನ ಸದಸ್ಯತ್ವ ಹೊಂದಿದೆ. ಐ.ಎಫ್.ಡಬ್ಲ್ಯೂ. ಡ್ರೆಸ್ಡನ್ ಆಧುನಿಕ ವಸ್ತುಗಳ ವಿಜ್ಞಾನಕ್ಕೆ ಸಂಬಂಧಿಸಿದ ಮತ್ತು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ವಸ್ತುಗಳ ವಿಜ್ಞಾನದಲ್ಲಿ ಪರಿಶೋಧನಾತ್ಮಕ ಸಂಶೋಧನೆಯನ್ನು ಹೊಸ ವಸ್ತುಗಳು ಮತ್ತು ಉತ್ಪನ್ನಗಳ ತಾಂತ್ರಿಕ ಅಭಿವೃದ್ಧಿಯೊಂದಿಗೆ ಸಂಯೋಜಿಸುತ್ತದೆ.
ಐ.ಎಫ್.ಡಬ್ಲ್ಯೂ.ನಲ್ಲಿನ ಸಂಶೋಧನಾ ಕಾರ್ಯಕ್ರಮಗಳು ಅನ್ವಯದ ಅನೇಕ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ಕ್ರಿಯಾತ್ಮಕ ವಸ್ತುಗಳ ಮೇಲೆ ಅಂದರೆ: ಸೂಪರ್ ಕಂಡಕ್ಟಿಂಗ್ ಮತ್ತು ಮ್ಯಾಗ್ನೆಟಿಕ್ ವಸ್ತುಗಳು, ತೆಳುವಾದ-ಫಿಲ್ಮ್ ವ್ಯವಸ್ಥೆಗಳು ಮತ್ತು ನ್ಯಾನೊಸ್ಟ್ರಕ್ಚರ್ ಗಳು ಮತ್ತು ಸ್ಫಟಿಕ ಮತ್ತು ಅಸ್ಫಾಟಿಕ ವಸ್ತುಗಳ ಮೇಲೆ ಕೇಂದ್ರೀಕರಿಸಿವೆ. ಯುವ ವಿಜ್ಞಾನಿಗಳನ್ನು ಉತ್ತೇಜಿಸುವುದು ಮತ್ತು ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಕೈಗಾರಿಕಾ ಕಂಪನಿಗಳಿಗೆ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಜ್ಞಾನ ಮತ್ತು ಅನುಭವವನ್ನು ಒದಗಿಸುವುದು ಸಂಸ್ಥೆಯ ಮುಂದಿನ ಧ್ಯೇಯಗಳಾಗಿವೆ.

 

*****



(Release ID: 1832226) Visitor Counter : 133