ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'8 ವರ್ಷಗಳ ಉತ್ತಮ ಆಡಳಿತ'ದ ಮುಖ್ಯಾಂಶಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 04 JUN 2022 2:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ 8 ವರ್ಷಗಳಲ್ಲಿ ದೇಶದ ಆಡಳಿತದಲ್ಲಿ ಕೈಗೊಂಡ ವಿವಿಧ ಉಪಕ್ರಮಗಳು ಮತ್ತು ಸುಧಾರಣೆಗಳ ಬಗ್ಗೆ ತಮ್ಮ ಅಂತರ್ಜಾಲತಾಣ (narendramodi.in) ಮತ್ತು MyGov ನಿಂದ ಲೇಖನಗಳು ಮತ್ತು ಟ್ವೀಟ್ ಥ್ರೆಡ್ ಗಳನ್ನು ಹಂಚಿಕೊಂಡಿದ್ದಾರೆ. ಆತ್ಮನಿರ್ಭರ ಭಾರತ, ಜನ ಕೇಂದ್ರಿತ ಮತ್ತು ಮಾನವೀಯ ದೃಷ್ಟಿಕೋನದ ಆಡಳಿತ, ರಕ್ಷಣಾ ವಲಯದ ಸುಧಾರಣೆಗಳು ಮತ್ತು ಬಡವರ ಪರವಾದ ಆಡಳಿತವನ್ನು ಉತ್ತೇಜಿಸುವ ಪ್ರಯತ್ನಗಳ ಕುರಿತಾದ ಲೇಖನಗಳು ಮತ್ತು ಟ್ವೀಟ್ ಥ್ರೆಡ್ ಗಳು ಇದರಲ್ಲಿವೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು:
"130 ಕೋಟಿ ಭಾರತೀಯರು ಭಾರತವನ್ನು ಆತ್ಮನಿರ್ಭರ ಮಾಡಲು ನಿರ್ಧರಿಸಿದ್ದಾರೆ. ಸ್ವಾವಲಂಬನೆಗಾಗಿ ನಮ್ಮ ಒತ್ತು ಜಾಗತಿಕ ಸಮೃದ್ಧಿಗೆ ಕೊಡುಗೆ ನೀಡುವ ದೃಷ್ಟಿಕೋನದಿಂದ ಪ್ರೇರಿತವಾಗಿದೆ. #8YearsOfSushasan"
"ನಮ್ಮದು  ಪ್ರತಿಯೊಬ್ಬ ಭಾರತೀಯನ ಬಗ್ಗೆ ಕಾಳಜಿ ವಹಿಸುವ ಸರ್ಕಾರ. ನಾವು ಜನ ಕೇಂದ್ರಿತ ಮತ್ತು ಮಾನವೀಯ ವಿಧಾನದಿಂದ ಪ್ರೇರಿತರಾಗಿದ್ದೇವೆ. #8YearsOfSushasan"
"ನಮೋ ಆ್ಯಪ್ ನಲ್ಲಿನ ಈ ಲೇಖನವು ದೇಶೀಯತೆ, ರಕ್ಷಣಾ ಕಾರಿಡಾರ್ ಗಳ ನಿರ್ಮಾಣ, ರಕ್ಷಣಾ ರಫ್ತು ಹೆಚ್ಚಳ ಮೊದಲಾದವುಗಳು ಸೇರಿದಂತೆ ರಕ್ಷಣಾ ವಲಯದಲ್ಲಿನ ಸುಧಾರಣೆಗಳ ಸರಣಿಯನ್ನು ಎತ್ತಿ ತೋರಿಸುತ್ತದೆ. #8YearsOfSushasan"
'ಎಲ್ಲರೊಂದಿಗೆ ಎಲ್ಲರ ವಿಕಾಶ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನ'  ಎಂಬ ಮಂತ್ರದಿಂದ ಸ್ಫೂರ್ತಿ ಪಡೆದ ನಮ್ಮ ಸರ್ಕಾರವು ಬಡವರು, ಯುವಕರು, ರೈತರು, ಮಹಿಳೆಯರು ಮತ್ತು ದುರ್ಬಲರಿಗೆ ಸಹಾಯ ಮಾಡುವ ಜನಪರ ಆಡಳಿತವನ್ನು ಉತ್ತೇಜಿಸಲು ಸರಣಿ ಪ್ರಯತ್ನಗಳನ್ನು ಮಾಡಿದೆ. #8YearsOfSushasan" ಎಂದು ತಿಳಿಸಿದ್ದಾರೆ. 

 

*****



 


(Release ID: 1831196) Visitor Counter : 238