ಪ್ರಧಾನ ಮಂತ್ರಿಯವರ ಕಛೇರಿ
ಕ್ವಾಡ್ ನಾಯಕರ ಶೃಂಗಸಭೆಯ ನೇಪಥ್ಯದಲ್ಲಿ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಜೊತೆ ಪ್ರಧಾನ ಮಂತ್ರಿ ಮಾತುಕತೆ.
Posted On:
24 MAY 2022 2:24PM by PIB Bengaluru
ಜಪಾನಿನ ಟೋಕಿಯೋದಲ್ಲಿ ಕ್ವಾಡ್ ನಾಯಕರ ಶೃಂಗದ ನೇಪಥ್ಯದಲ್ಲಿ, 2022 ರ ಮೇ 24ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಅಂಥೋನಿ ಅಲ್ಬನೀಸ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಪ್ರಧಾನ ಮಂತ್ರಿ ಅಲ್ಬನೀಸ್ ಅವರು ಚುನಾವಣೆಯಲ್ಲಿ ಜಯಗಳಿಸಿದುದಕ್ಕಾಗಿ ಅವರನ್ನು ಪ್ರಧಾನ ಮಂತ್ರಿ ಅಭಿನಂದಿಸಿದರು. ಉಭಯ ನಾಯಕರೂ ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಉತ್ಪಾದನೆ, ಪುನರ್ನವೀಕೃತ ಇಂಧನ, ಹಸಿರು ಹೈಡ್ರೋಜನ್, ಶಿಕ್ಷಣ, ವಿಜ್ಞಾನ, ಮತ್ತು ತಂತ್ರಜ್ಞಾನ, ಕೃಷಿ ಸಂಶೋಧನೆ, ಕ್ರೀಡೆ ಹಾಗು ಜನತೆ ಮತ್ತು ಜನತೆಯ ನಡುವಣ ಬಾಂಧವ್ಯ ಸಹಿತ ಸಮಗ್ರ ವ್ಯೂಹಾತ್ಮಕ ಸಹಭಾಗಿತ್ವದಡಿಯಲ್ಲಿ ಬಹುಮುಖೀ ಸಹಕಾರವನ್ನು ಪರಾಮರ್ಶಿಸಿದರು. ಉಭಯ ನಾಯಕರು ದ್ವಿಪಕ್ಷೀಯ ಬಾಂಧವ್ಯದಲ್ಲಿ ಇನ್ನೂ ಹೆಚ್ಚಿನ ಸಹಕಾರವನ್ನು ಮುಂದುವರಿಸುವ ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.
ಸಾಧ್ಯವಾದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಆಸ್ಟ್ರೇಲಿಯಾ ಪ್ರಧಾನ ಮಂತ್ರಿಯವರಿಗೆ ಆಹ್ವಾನವನ್ನು ಪ್ರಧಾನ ಮಂತ್ರಿ ಅವರು ನೀಡಿದರು.
***
(Release ID: 1827982)
Visitor Counter : 215
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam