ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕ್ವಾಡ್ ನಾಯಕರ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಪ್ರಾಸ್ತಾವಿಕ ಭಾಷಣದ ಕನ್ನಡ ಅನುವಾದ

Posted On: 24 MAY 2022 8:57AM by PIB Bengaluru

ಘನತೆವೆತ್ತವರೇ,

ಪ್ರಧಾನಮಂತ್ರಿ ಕಿಶಿಡಾ, ಪ್ರಧಾನಮಂತ್ರಿ ಅಂಥೋನಿ ಅಲ್ಬನೀಸ್ ಮತ್ತು ಅಧ್ಯಕ್ಷ ಬೈಡನ್ ಅವರೇ,

ಪ್ರಧಾನಮಂತ್ರಿ ಕಿಶಿಡಾ ಅವರೇ ನಿಮ್ಮ ಅದ್ಭುತ ಆತಿಥ್ಯಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು. ಇಂದು ಟೋಕಿಯೋದಲ್ಲಿ ಸ್ನೇಹಿತರೊಂದಿಗೆ ಇರುವುದು ನನ್ನಗೆ ಹೆಚ್ಚಿನ ಹರ್ಷ ತಂದಿದೆ.

ಮೊದಲಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕಾಗಿ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರಿಗೆ ನನ್ನ ಅಭಿನಂದನೆಗಳು. ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳ ನಂತರದಲ್ಲೇ  ನೀವು ನಮ್ಮೊಂದಿಗೆ ಇರುವುದು ಕ್ವಾಡ್ ಸ್ನೇಹದ ಶಕ್ತಿ ಮತ್ತು ಅದಕ್ಕೆ ನಿಮ್ಮ ಬದ್ಧತೆಯನ್ನು ತೋರಿಸುತ್ತದೆ.

ಗೌರವಾನ್ವಿತರೇ,

ಅತ್ಯಲ್ಪ ಸಮಯದಲ್ಲಿ, ವಿಶ್ವ ವೇದಿಕೆಯಲ್ಲಿ ಕ್ವಾಡ್ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ಇಂದು ಕ್ವಾಡ್ ನ ವ್ಯಾಪ್ತಿಯು ವಿಸ್ತಾರವಾಗಿದೆ ಮತ್ತು ಸ್ವರೂಪವು ಪರಿಣಾಮಕಾರಿಯಾಗಿದೆ.

ನಮ್ಮ ಪರಸ್ಪರರ ನಂಬಿಕೆ, ನಮ್ಮ ಸಂಕಲ್ಪ ಪ್ರಜಾಪ್ರಭುತ್ವ ಅಂಗಗಳಿಗೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತಿದೆ.

ಕ್ವಾಡ್ ಮಟ್ಟದಲ್ಲಿ ನಮ್ಮ ಪರಸ್ಪರ ಸಹಕಾರವು ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಉತ್ತೇಜನ ನೀಡುತ್ತಿದೆ, ಇದು ನಮ್ಮೆಲ್ಲರ ಸಾಮಾನ್ಯ ಉದ್ದೇಶವೂ ಆಗಿದೆ.

ಕೋವಿಡ್-19 ನಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ, ಲಸಿಕೆ-ವಿತರಣೆ, ಹವಾಮಾನ ಕ್ರಿಯೆ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ, ವಿಪತ್ತು ನಿರ್ವಹಣೆ ಮತ್ತು ಆರ್ಥಿಕ ಸಹಕಾರದಂತಹ ಹಲವು ಕ್ಷೇತ್ರಗಳಲ್ಲಿ ನಾವು ಸಮನ್ವಯವನ್ನು ಹೆಚ್ಚಿಸಿದ್ದೇವೆ. ಇದು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುತ್ತಿದೆ.

ಕ್ವಾಡ್ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ರಚನಾತ್ಮಕ ಕಾರ್ಯಸೂಚಿಯನ್ನು ಹೊಂದಿದೆ.

ಇದು ಕ್ವಾಡ್‌ನ ‘ಫೋರ್ಸ್ ಫಾರ್ ಗುಡ್’ ಎಂಬ ವರ್ಚಸ್ಸನ್ನು ಮತ್ತಷ್ಟು ಬಲಪಡಿಸುತ್ತದೆ.

ತುಂಬಾ ತುಂಬಾ ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಯಥಾವತ್ ಅನುವಾದವಲ್ಲ. ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

***


(Release ID: 1827924) Visitor Counter : 189