ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕಾನ್ ಗೆ ಭೇಟಿ ನೀಡಲಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್. ಮುರುಗನ್

Posted On: 20 MAY 2022 12:22PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರು ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ. ಮೇ 22 ರಿಂದ 24, 2022 ರವರೆಗೆ ಕೇನ್ಸ್ ಚಲನಚಿತ್ರ ಉತ್ಸವದಲ್ಲಿ ಭಾಗವಹಿಸಲು ಕೇಂದ್ರ ಸಚಿವ ಡಾ. ಮುರುಗನ್ ಅವರು ಮೇ 21, 2022 ರಂದು ಶನಿವಾರ ಫ್ರಾನ್ಸ್‌ ಗೆ ತೆರಳಲಿದ್ದಾರೆ.

ಡಾ. ಎಲ್. ಮುರುಗನ್ ಅವರು 22 ಮೇ, 2022 ರಂದು ಫ್ರಾನ್ಸ್ ತಲುಪಲಿದ್ದಾರೆ ಮತ್ತು ನಂತರ ಕಾನ್ ಚಲನಚಿತ್ರೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ ನಂತರ ಡಾ. ಮುರುಗನ್ ಅವರು 25ನೇ ಮೇ 2022 ರ ಬೆಳಗ್ಗೆ ನವದೆಹಲಿಯನ್ನು ತಲುಪಲಿದ್ದಾರೆ.

***(Release ID: 1827076) Visitor Counter : 64