ಪ್ರಧಾನ ಮಂತ್ರಿಯವರ ಕಛೇರಿ
ಮೇ 19 ರಂದು ಶ್ರೀ ಸ್ವಾಮಿನಾರಾಯಣ ದೇವಸ್ಥಾನದಿಂದ ಆಯೋಜಿಸಿರುವ ‘ಯುವ ಶಿವರ್’ ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಲಿದ್ದಾರೆ
Posted On:
18 MAY 2022 7:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 19 ಮೇ 2022 ರಂದು ಬೆಳಗ್ಗೆ 10:30 ಕ್ಕೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಡೋದರದ ಕರೇಲಿಬಾಗ್‌ನಲ್ಲಿ ಆಯೋಜಿಸಿರುವ ‘ಯುವ ಶಿವರ್’ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶ್ರೀ ಸ್ವಾಮಿನಾರಾಯಣ ದೇವಸ್ಥಾನ, ಕುಂಡಲ್ ಧಾಮ್ ಮತ್ತು ಶ್ರೀ ಸ್ವಾಮಿನಾರಾಯಣ ದೇವಸ್ಥಾನ ಕರೇಲಿಬಾಗ್, ವಡೋದರದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ.
ಸಮಾಜ ಸೇವೆಯಲ್ಲಿ ಮತ್ತು ರಾಷ್ಟ್ರ ನಿರ್ಮಾಣದ ಕಡೆಗೆ ಹೆಚ್ಚಿನ ಯುವಕರನ್ನು ತೊಡಗಿಸಿಕೊಳ್ಳುವ ಗುರಿಯನ್ನು ಶಿಬಿರವು ಹೊಂದಿದೆ. ಏಕ ಭಾರತ ಶ್ರೇಷ್ಠ ಭಾರತ, ಆತ್ಮನಿರ್ಭರ ಭಾರತ, ಸ್ವಚ್ಛ ಭಾರತ ಮುಂತಾದ ಉಪಕ್ರಮಗಳ ಮೂಲಕ ನವ ಭಾರತವನ್ನು ನಿರ್ಮಿಸುವಲ್ಲಿ ಯುವಕರನ್ನು ಪಾಲುದಾರರನ್ನಾಗಿ ಮಾಡುವ ಗುರಿಯನ್ನು ಈ ಶಿಬಿರವು ಹೊಂದಿದೆ.
***
(Release ID: 1826628)
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam