ಪ್ರಧಾನ ಮಂತ್ರಿಯವರ ಕಛೇರಿ

“ಇದು ಭಾರತದ ಅತ್ಯುತ್ತಮ ಗೆಲುವು’- 2022ರ ಥಾಮಸ್ ಕಪ್ ಗೆದ್ದ ತಂಡಕ್ಕೆ ಪ್ರಧಾನಿ ಮಾತು


ವಾಪಸ್ಸಾದ ನಂತರ ತಮ್ಮ ನಿವಾಸಕ್ಕೆ ಆಗಮಿಸುವಂತೆ ತಂಡ, ಕೋಚ್ ಗೆ ಆಹ್ವಾನ ನೀಡಿದ ಪ್ರಧಾನಿ

“ತರಬೇತುದಾರರು ಮತ್ತು ಪೋಷಕರು ಎಲ್ಲ ರೀತಿಯ ಮೆಚ್ಚುಗೆಗೆ ಅರ್ಹರು’’

“ನೀವೆಲ್ಲರೂ ಮಹತ್ವದ ಸ್ಮರಣಾರ್ಹ ಎತ್ತರಕ್ಕೇರಿದ್ದೀರಿ. ಇಡೀ ತಂಡ ಅಭಿನಂದನೆಗೆ ಅರ್ಹರು’’

ನೀವು ಇದೀಗ ‘ಆಲ್ಮೋರಾ ಕಿ ಬಾಲ್ ಮಿಠಾಯಿ’ ನೀಡಬೇಕು- ಲಕ್ಷ್ಯ ಸೇನ್ ಗೆ ಪ್ರಧಾನಿ ಹೇಳಿಕೆ

ಭಾರತದಲ್ಲಿ ಈಗ ಕ್ರೀಡೆಗೆ ಹೆಚ್ಚಿನ ಬೆಂಬಲವಿದೆ, ಇದು ಹೀಗೆಯೇ ಮುಂದುವರಿದರೆ, ಭಾರತವು ಇನ್ನೂ ಅನೇಕ ಚಾಂಪಿಯನ್ ಗಳನ್ನು ನೋಡುತ್ತದೆ ಎಂದು ಭಾವಿಸುತ್ತೇವೆ: ಪ್ರಧಾನಮಂತ್ರಿಗೆ ತಂಡದ ಹೇಳಿಕೆ

“ನೀವು ಶೇಕಡ 100ಕ್ಕೆ ನೂರರಷ್ಟು ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ, ನೀವು
ಖಂಡಿತಾ ಯಶಸ್ವಿಯಾಗುತ್ತೀರಿ’’ ಯುವಮಕ್ಕಳಿಗೆ ವಿಜೇತ ತಂಡದ ಕಿವಿಮಾತು

Posted On: 15 MAY 2022 8:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಥಾಮಸ್ ಕಪ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತೀಯ ಬ್ಯಾಡ್ಮಿಂಟನ್ ತಂಡದೊಂದಿಗೆ ದೂರವಾಣಿ ಮೂಲಕ ಸಂವಾದ ನಡೆಸಿದರು.

ಪ್ರಧಾನಮಂತ್ರಿ ಅವರು ತಂಡವನ್ನು ಅಭಿನಂದಿಸಿದರು ಮತ್ತು ಕ್ರೀಡಾ ವಿಶ್ಲೇಷಕರು ಇದನ್ನು ಭಾರತದ ಅತ್ಯುತ್ತಮ ಕ್ರೀಡಾ ಗೆಲುವುವೆಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು. ಅದರಲ್ಲೂ ತಂಡ ಯಾವುದೇ ಸುತ್ತಿನಲ್ಲಿ ಸೋಲನುಭವಿಸದಿರುವುದು ಸಂತಸ ತಂದಿದೆ ಎಂದು ಹೇಳಿದರು.

ನೀವು ಯಾವ ಹಂತದಲ್ಲಿ ನೀವು ಗೆಲ್ಲುತ್ತೇವೆವೆಂದು ಆಟಗಾರರಿಗೆ ಅನಿಸಿತು ಎಂದು ಪ್ರಧಾನಿ ಕೇಳಿದರು. ಕ್ವಾರ್ಟರ್ ಫೈನಲ್‌ನ ನಂತರ, ಕೊನೆಯವರೆಗೂ ಅದನ್ನು ನೋಡುವ ತಂಡದ ಸಂಕಲ್ಪ ಬಲಗೊಂಡಿತು ಎಂದು ಕಿಡಂಬಿ ಶ್ರೀಕಾಂತ್, ಪ್ರಧಾನಿಗೆ ತಿಳಿಸಿದರು. ತಂಡದ ಸ್ಪೂರ್ತಿಯು ಸಹಾಯ ಮಾಡಿತು ಮತ್ತು ಪ್ರತಿಯೊಬ್ಬ ಆಟಗಾರನು ತನ್ನ ಶೇಕಡ ನೂರಕ್ಕೆ 100ರಷ್ಟು ನೀಡಿದರು ಎಂದು ಅವರು ಪ್ರಧಾನಿಗೆ ತಿಳಿಸಿದರು.

ಎಲ್ಲ ತರಬೇತುದಾರರು ಸಹ ಎಲ್ಲ ಮೆಚ್ಚುಗೆಗೆ ಅರ್ಹರು ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ, ಲಕ್ಷ್ಯ ಸೇನ್ ಅವರಿಗೆ ಅಲ್ಮೋರಾದಿಂದ 'ಬಾಲ್ ಮಿಠಾಯಿ' ನೀಡಬೇಕಾಗುತ್ತದೆ ಎಂದು ಹೇಳಿದರು. ಆ ಅತ್ಯುತ್ತಮ ಆಟಗಾರ ಉತ್ತರಾಖಂಡದ ದೇವಭೂಮಿಯಿಂದ ಬಂದವರು. ಲಕ್ಷ್ಯಸೇನ್ ಮೂರನೇ ತಲೆಮಾರಿನ ಆಟಗಾರ ಎಂದು ಪ್ರಧಾನಿ ಉಲ್ಲೇಖಿಸಿದರು. ಪಂದ್ಯಾವಳಿಯ ವೇಳೆ ತಮ್ಮ ತಂದೆ ಹಾಜರಿದ್ದರು ಎಂದು ಲಕ್ಷ್ಯ ಸೇನ್ ಮಾಹಿತಿ ನೀಡಿದರು. ಅವರ ಮಾತಿಗೆ ಧ್ವನಿಗೂಡಿಸಿದ  ಶ್ರೀಕಾಂತ್‌, ಕ್ವಾರ್ಟರ್ ಫೈನಲ್‌ ನಂತರ, ಗೆಲುವಿನ ನಂಬಿಕೆ ಇನ್ನಷ್ಟು ಸದೃಢವಾಯಿತು ಎಂದು ಹೇಳಿದರು. ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ಸಾಧಿಸುವುದು ಬಹಳ ಮುಖ್ಯವಾಗಿತ್ತು ಎಂದು ಎಚ್‌.ಎಸ್.ಪ್ರಣಯ್ ಹೇಳಿದರು.

ಥಾಮಸ್ ಕಪ್ ಅನ್ನು ಗೆದ್ದ ನಂತರ, ಭಾರತ ತಂಡವು ಯಾವುದೇ ತಂಡವನ್ನು ಎದುರಿಸುವ ಸುಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟವಾಯಿತು. ತಂಡದ ಬೆಂಬಲವು ಮಲೇಷ್ಯಾದಂತಹ ಬಲಿಷ್ಠ ತಂಡಗಳನ್ನು ಸೋಲಿಸಲು ಕಾರಣವಾಯಿತು ಎಂದು ಅವರು ಹೇಳಿದರು. ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರ ಗೆಲುವಿಗಾಗಿ ಪ್ರಧಾನಿ ಅಭಿನಂದನೆ ಸಲ್ಲಿಸಿದರು. ಪ್ರಧಾನಮಂತ್ರಿ ಚಿರಾಗ್ ಶೆಟ್ಟಿಯೊಂದಿಗೆ ಮರಾಠಿಯಲ್ಲಿ ಮಾತನಾಡಿದ ಅವರು, ಭಾರತದಿಂದ ವಿಶ್ವ ಚಾಂಪಿಯನ್ ಆಗುವುದಕ್ಕಿಂತ ಮತ್ಯಾವುದೂ ಅಗ್ರಸ್ಥಾನವಲ್ಲ ಎಂದು ತಿಳಿಸಿದರು. “ನೀವೆಲ್ಲರೂ ಅಂತಹ  ಚಾರಿತ್ರಿಕ ಸಾಧನೆಯನ್ನು ಮಾಡಿದ್ದೀರಿ. ಇಡೀ ತಂಡವು ಪ್ರಶಂಸೆಗೆ ಅರ್ಹವಾಗಿದೆ’’ ಎಂದ ಪ್ರಧಾನಮಂತ್ರಿ ಭಾರತಕ್ಕೆ ಹಿಂದಿರುಗಿದ ನಂತರ ನಿಮ್ಮೊಂದಿಗೆ ಮಾತನಾಡಲು ಮತ್ತು ನಿಮ್ಮ ಅನುಭವಗಳನ್ನು ಕೇಳಲು ಬಯಸಿದ್ದೇನೆ, ಹಾಗಾಗಿ ನಿಮ್ಮ ತರಬೇತುದಾರರೊಂದಿಗೆ ತಮ್ಮ ನಿವಾಸಕ್ಕೆ ಆಗಮಿಸುವಂತೆ ಆಟಗಾರರನ್ನು ಆಹ್ವಾನಿಸಿದರು. 

ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಅಥವಾ ಈಜು ಮುಂತಾದ ಕ್ರೀಡೆಗಳನ್ನು ತೆಗೆದುಕೊಳ್ಳುತ್ತಿರುವ ಉದಯೋನ್ಮುಖ ಕ್ರೀಡಾಪಟುಗಳು ಮತ್ತು ಚಿಕ್ಕ ಮಕ್ಕಳಿಗೆ ವಿಜಯಿ ತಂಡದ ಸಂದೇಶವನ್ನು ಪ್ರಧಾನಿ ಕೇಳಿದರು. ತಂಡದ ಪರವಾಗಿ ಶ್ರೀಕಾಂತ್ ಮಾತನಾಡಿ, ಇಂದು ಭಾರತದಲ್ಲಿ ಕ್ರೀಡೆಗೆ ಅತ್ಯುತ್ತಮ ಬೆಂಬಲವಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ, ಸರ್ಕಾರ, ಕ್ರೀಡಾ ಒಕ್ಕೂಟಗಳು ಮತ್ತು ಉನ್ನತ ಮಟ್ಟದಲ್ಲಿ- ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆ- ಟಾಪ್ಸ್‌ನ ಪ್ರಯತ್ನಗಳಿಂದಾಗಿ ಕ್ರೀಡಾಪಟುಗಳಿಗೆ ಉತ್ತಮ ಬೆಂಬಲ ದೊರಕುತ್ತಿದೆ. ಇದು ಮುಂದುವರಿದರೆ, ಭಾರತ ಇನ್ನೂ ಅನೇಕ ಚಾಂಪಿಯನ್‌ಗಳನ್ನು ನೋಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು. ತಮ್ಮ ಆಯ್ಕೆಯ ಕ್ರೀಡೆಯನ್ನು ತೆಗೆದುಕೊಳ್ಳುತ್ತಿರುವ ಚಿಕ್ಕ ಮಕ್ಕಳಿಗೆ ಅವರು ಶೇಕಡ ನೂರಕ್ಕೆ 100ರಷ್ಟ್ರ ಪರಿಶ್ರಮವನ್ನು ನೀಡಲು ಸಾಧ್ಯವಾದರೆ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಭಾರತದಲ್ಲಿ ಹೆಚ್ಚಿನ ಬೆಂಬಲವಿದೆ ಎಂದು ಹೇಳಿದರು. “ಉತ್ತಮ ತರಬೇತುದಾರರು ಮತ್ತು ಮೂಲಸೌಕರ್ಯಗಳಿವೆ, ಆಟಗಾರರಿಗೆ ನಿಜಕ್ಕೂ ಬದ್ಧತೆಯಿದ್ದರೆ, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬಹುದು. ಅವರು ಶೇಕಡ ನೂರಕ್ಕೆ100ರಷ್ಟು ಸಮರ್ಪಣಾಭಾವದಿಂದ ಕೆಲಸ ಮಾಡಲು ಸಾಧ್ಯವಾದರೆ, ಅವರು ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ’’ ಎಂದು ಕಿಡಂಬಿ ಶ್ರೀಕಾಂತ್ ಹೇಳಿದರು.

ಮಕ್ಕಳನ್ನು ಕ್ರೀಡೆಗಳಲ್ಲಿ ಪ್ರೋತ್ಸಾಹಿಸುವುದು ಮತ್ತು ಕೊನೆಯವರೆಗೂ ಅವರೊಂದಿಗೆ ನಿಲ್ಲುವುದು ಸವಾಲಿನ ಕೆಲಸವಾಗಿದೆ ಎಂದು ಪ್ರಧಾನಿ ಅವರು, ಆಟಗಾರರ ಪೋಷಕರಿಗೆ ತಮ್ಮ ನಮನ ಮತ್ತು ಮೆಚ್ಚುಗೆ ಸಲ್ಲಿಸುವುದಾಗಿ ಹೇಳಿದರು. ಪ್ರಧಾನಮಂತ್ರಿ ಅವರು ಅವರ ವಿಜಯೋತ್ಸವದ ಹರ್ಷದಲ್ಲಿ ಅವರೊಂದಿಗೆ ಸೇರಿಕೊಂಡರು ಮತ್ತು ದೂರವಾಣಿ ಕರೆಯ ಕೊನೆಯಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಿದರು.

***



(Release ID: 1826077) Visitor Counter : 152