ಪ್ರಧಾನ ಮಂತ್ರಿಯವರ ಕಛೇರಿ

“ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಗೆ ಕೊಡುಗೆ ನೀಡಿದ ಪ್ರಮುಖರ ಮಾತು

Posted On: 13 MAY 2022 7:11PM by PIB Bengaluru

“ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಗೆ ಕೊಡುಗೆ ನೀಡಿದ ಗಣ್ಯ ವ್ಯಕ್ತಿಗಳು ತಮ್ಮ ಅಧ್ಯಾಯದ ಅನುಭವ ಮತ್ತು ವಿಷಯಗಳನ್ನು ಕೃತಿಯಲ್ಲಿ ವಿವರಿಸಿದ್ದಾರೆ. ಇತ್ತೀಚೆಗೆ ಭಾರತದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಕೃತಿಯನ್ನು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ನಂತರ ಭಾರತದ ಪ್ರಧಾನಮಂತ್ರಿಯಾಗಿ 20 ವರ್ಷಗಳ ಅವಧಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವರ ಚಿಂತನೆ ಮತ್ತು ಕಾರ್ಯಕ್ಷಮತೆ ಕುರಿತ ವಿವಿಧ ಆಯಾಮಗಳ ಬಗ್ಗೆ 22 ತಜ್ಞರು 21 ಲೇಖನಗಳನ್ನು ಬರೆದಿದ್ದಾರೆ.  ‘ದಿ ಯೂತ್ ಚಾನೆಲ್:ನ್ಯೂ ಇಂಡಿಯಾ ಜಂಕ್ಷನ್ ಟ್ವೀಟ್ ಮಾಡಿದ ನಿರೂಪಣೆಗಳನ್ನು ಪ್ರಧಾನಮಂತ್ರಿ ಕಚೇರಿ ಮರುಟ್ವೀಟ್ ಮಾಡಿದೆ.

ನಿರೂಪಣೆಯ ವಿಡಿಯೋಗಳನ್ನು ಹೊಂದಿರುವ ಟ್ವೀಟ್ ಗಳು ಈ ಕೆಳಗಿನಂತಿವೆ.

“ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಒಲಿಂಪಿಕ್ ನಲ್ಲಿ ಎರಡು ಪದಕ ಗೆದ್ದಿರುವ@ಪಿ.ವಿ.ಸಿಂಧು ತಮ್ಮ “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಅಧ್ಯಾಯದಲ್ಲಿ  “ಪ್ರಧಾನಮಂತ್ರಿ ಅವರು ವಿವಾದತೀತ ಯುವ ಸಮೂಹದ ಕಣ್ಮಣಿ ಎಂದು ಹೇಳುತ್ತಾರೆ ಮತ್ತು ಬಲವಾಗಿ ಪ್ರತಿಪಾದಿಸುತ್ತಾರೆ. ಇದನ್ನು ಅವರು ತಮ್ಮ ಸಂಕ್ಷಿಪ್ತ ಅಧ್ಯಾಯದಲ್ಲಿ ಹೀಗೆ ವಿವರಿಸಿದ್ದಾರೆ.:”  

 


 

“ನಿರ್ದೇಶಕರು@ಐಸೋಲಾರ್ ಅಲಯನ್ಸ್, ಶ್ರೀ ಅಜಯ್ ಮಾಥುರ್ “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯ ತಮ್ಮ ಅಧ್ಯಾಯದಲ್ಲಿ ವಿವರಿಸಿದಂತೆ “ಪ್ರಧಾನಮಂತ್ರಿ ಮೋದಿ ಅವರು ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯ ಅಗತ್ಯಗಳೆರಡನ್ನೂ ತಡೆರಹಿತವಾಗಿ ನಿರ್ವಹಿಸುತ್ತಾರೆ”.

 


 

‘ಭಗೀರಥ್ ಪ್ರಯಾಸಿ’ ಕೃತಿಯ ಜನಪ್ರಿಯ ಲೇಖಕ@ಪ್ರಕಾಶಕಅಂಶಿ ಅವರು “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯಲ್ಲಿ ಭಾರತದ ಸಾಂಸ್ಕೃತಿಕ ಮತ್ತು ನಾಗರಿಕತೆಯ ಪರಂಪರೆಯನ್ನು ಸಂರಕ್ಷಿಸುವ  ಮತ್ತು ಪುನರುಜ್ಜೀವನಗೊಳಿಸುವಲ್ಲಿ ಪ್ರಧಾನಿ ಮೋದಿ ಅವರ ಪ್ರಯತ್ನಗಳನ್ನು ವಿವರಿಸಿದ್ದಾರೆ.    

 


 

“ಅದ್ಭುತ ನಟ@ಅನುಮಪಮ್ ಖೇರ್ ಅವರು, ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ಮೋದಿ ಅವರು ಏಕೆ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದಾರೆ ಮತ್ತು ಅವರು ಮಾಡುವ ವಾದಗಳ ಕುರಿತು “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯ ಅಧ್ಯಾಯದಲ್ಲಿ ವಿವರಿಸಿದ್ದಾರೆ.

 


 

“ಭಾರತದ ಖ್ಯಾತ ಕೃಷಿ ವಿಜ್ಞಾನಿ ಪ್ರೊಫೆಸರ್.@ಅಗುಲತಿ115 ಅವರು “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯ ಅಧ್ಯಾಯದಲ್ಲಿ ಪ್ರಧಾನಮಂತ್ರಿ ಅವರ ಕೃಷಿ ದಾಖಲೆ ಕುರಿತು ಬರೆದಿದ್ದಾರೆ”

 


 

“ಪ್ರಧಾನಿ ಮೋದಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ಅವರು “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯಲ್ಲಿ ತಾವು ಬರೆದಿರುವ ಅಧ್ಯಾಯದ ಬಗ್ಗೆ ಮಾತನಾಡಿದ್ದಾರೆ.” ಅವರ ಅತ್ಯುತ್ತಮ ಕಾರ್ಯವಿಧಾನವನ್ನು ಪ್ರತ್ಯಕ್ಷವಾಗಿ ನೋಡಿರುವ ಶ್ರೀ ಮಿಶ್ರಾ ಅವರು ಹೀಗೆ ವಿವರಿಸಿದ್ದಾರೆ.”   

“ಖ್ಯಾತ ಮತ್ತು ಪ್ರಮುಖ ಅನಿವಾಸಿ ಭಾರತೀಯ ಸದಸ್ಯ ಪ್ರೊಫೆಸರ್.@ಮನೋಜ್ ಲಡ್ವಾ “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಬಗ್ಗೆ ಮಾತನಾಡಿದ್ದಾರೆ.”

“ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಪುಸ್ತಕದಲ್ಲಿ ರಾಜಕೀಯ ಭವಿಷ್ಯಕಾರ@ಪ್ರದೀಪ್ ಗುಪ್ತಾಎಎಂಐ ಅವರು ಪ್ರಧಾನಿ ಮೋದಿ  ಚುನಾವಣಾ ಪ್ರಚಾರವನ್ನು ಹೇಗೆ ಶಾಶ್ವತವಾಗಿ ಬದಲಾಯಿಸಿದ್ದಾರೆ ಎಂಬ ಕುರಿತು ಹೇಳಿದ್ದಾರೆ.”

“ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ@ಡಾ.ಎಸ್.ಜೈಶಂಕರ್ ಅವರು “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯ ತಮ್ಮ ಅಧ್ಯಾಯದ ಕುರಿತು ಮಾತನಾಡಿದ್ದಾರೆ.

ಡಾ.ಜೈಶಂಕರ್ ಕೆಲವು ಕುತೂಹಲಕಾರಿ ವೈಯಕ್ತಿಕ ಉಪವ್ಯಾಖ್ಯಾನಗಳ ಕುರಿತು ವಿವರಿಸಿದ್ದಾರೆ.

“ಮೊದಲ ತಲೆ ಮಾರಿನ ಉದ್ಯಮಿ@ಉದಯ್ ಕೊಟಕ್ “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯ ಬಗ್ಗೆ ಮಾತನಾಡಿದ್ದಾರೆ. ಅವರು ಖಾಸಗಿ ಉದ್ಯಮ ವಲಯದ ಮೌಲ್ಯ ಮತ್ತು ಸಂಪತ್ತು ಸೃಷ್ಟಿಕರ್ತರ ಗೌರವದ ವಿಷಯವನ್ನು ಹೆಚ್ಚು ವಿಸ್ತರಿಸಿದ್ದಾರೆ.”

“ಭಾರತದ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ. ಅನಂತ ನಾಗೇಶ್ವರನ್, ಆರ್ಥಿಕ ಯೋಜನೆಗಳನ್ನು ತ್ವರಿತ ಮತ್ತು ವೇಗವಾಗಿ ಕಾರ್ಯಗತಗೊಳಿಸುವ ಪ್ರಧಾನಿ ಮೋದಿ ಅವರ ಅನನ್ಯ ಸಾಮರ್ಥ್ಯದ ಕುರಿತು ಮಾತನಾಡಿದ್ದಾರೆ”

ಜನಪ್ರಿಯವಾಗಿ ಪರಿಚಿತರಾದ ಡಾ.ವ್ಯಾನ್ ಅವರು “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಪುಸ್ತಕದಲ್ಲಿ ಅವರ ಅಧ್ಯಾಯದ ಬಗ್ಗೆ ಮಾತನಾಡಿದ್ದಾರೆ.”

“ಮಾಜಿ ಸಿಐಐ ಅಧ್ಯಕ್ಷ ಮತ್ತು ಅಪೊಲೋ ಗ್ರೂಪ್ ನ ಕಾರ್ಯಕಾರಿ ಉಪಾಧ್ಯಕ್ಷ@ಅಶೋಭಾನಕಾಮಿನೇನಿ ಅವರು “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯ ತಮ್ಮ ಅಧ್ಯಾಯ ಕುರಿತು ಮಾತನಾಡಿದ್ದಾರೆ.

ಇದು ಭವಿಷ್ಯದಲ್ಲಿ ಮಹಿಳಾ ಅಭಿವೃದ‍್ಧಿ ಮಾತ್ರವಲ್ಲ, ಮಹಿಳಾ ನೇತೃತ್ವದ ಅಭಿವೃದ್ಧಿಯ ಯುಗವಾಗಿದೆ ಎಂದು ಶ್ರೀಮತಿ ಕಾಮಿನೇನಿ ಹೇಳುತ್ತಾರೆ.”

“ಐ.ಎಂ.ಎಫ್ ಕಾರ್ಯಕಾರಿ ನಿರ್ದೇಶಕ ಡಾ.@ಸುರ್ಜಿತ್ ಭಲ್ಲಾಳ “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯ ತಮ್ಮ ಅಧ್ಯಾಯ ಕುರಿತು ಮಾತನಾಡಿದ್ದಾರೆ.

ಡಾ. ಭಲ್ಲಾ ಅವರ ದತ್ತಾಂಶ ಮತ್ತು ಆಳವಾದ ವಿಶ್ಲೇಷಣೆಯಂತೆ ಶ್ರೀ ಮೋದಿ ಅವರ ನೀತಿಗಳು ಬಡವರನ್ನು ತಲುಪುವಲ್ಲಿ ಹೆಚ್ಚು ಪರಿಣಾಮ ಬೀರಿವೆ.   

“ಭಾರತದ ಅತ್ಯಂತ ಗೌರವಾನ್ವಿತ, ವೈದ್ಯಕೀಯ ವೃತ್ತಿಪರರಲ್ಲಿ ಒಬ್ಬರಾದ@ನಾರಾಯಣ ಹೆಲ್ತ್ ನ ಡಾ. ದೇವಿಶೆಟ್ಟಿ ಕೋವಿಡ್-19 ಕೊನೆಗೊಳಿಸಲು ಪ್ರಧಾನಿ ಮೋದಿ ಅವರು ನಿರ್ವಹಿಸಿದ ವಿರೋಚಿತ ಪ್ರಯತ್ನದ ಬಗ್ಗೆ “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ”  ಕೃತಿಯ ಅಧ್ಯಾಯದಲ್ಲಿ ಹೀಗೆ ಹೇಳುತ್ತಾರೆ.”

“ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್.@ಎಪನಗರಿಯಾ ಅವರು ತಮ್ಮ ಅಧ್ಯಾಯದಲ್ಲಿ “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯಲ್ಲಿ ಹೀಗೆ ವಿವರಿಸಿದ್ದಾರೆ“

“ಪ್ರಸಿದ್ಧ ತಂತ್ರಜ್ಞ@ನಂದನ್ ನೀಲೇಕಣಿ ಅವರು, “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಪುಸ್ತಕದಲ್ಲಿ ತಮ್ಮ ಅಧ್ಯಾಯದ ಬಗ್ಗೆ ಮಾತನಾಡಿದ್ದಾರೆ.

ಉತ್ತಮ ಆಡಳಿತ ಮತ್ತು ಕೆಲವು ವಿಶಿಷ್ಟವಾದ ವೈಯಕ್ತಿಕ ಉಪವ್ಯಾಖ್ಯಾನಗಳು ಮತ್ತು ಒಳನೋಟಗಳನ್ನು ಸಕ್ರಿಯಗೊಳಿಸುವ ಮೂಲಕ ತಂತ್ರಜ್ಞಾನದ ಬಳಕೆಯನ್ನು ಶ್ರೀ ನಿಲೇಕಣಿ ಅವರು ತಮ್ಮ ಅಧ್ಯಾಯದಲ್ಲಿ ತರುತ್ತಾರೆ”

“ಅರ್ಥಶಾಸ್ತ್ರಜ್ಞ ಮತ್ತು ಲೇಖಕ ಪ್ರೊಫೆಸರ್.@ಶಮಿಕರವಿ ಅವರು “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯಲ್ಲಿ ತಮ್ಮ ಅಧ್ಯಾಯಕ್ಕೆ ವಿಶಿಷ್ಟವಾದ ದತ್ತಾಂಶಚಾಲಿತ ವಿಧಾನವನ್ನು ತಂದಿದ್ದಾರೆ.”

“ಪ್ರೊ.ರವಿ ಅವರು ಪ್ರಧಾನಿಯವರು ತಳಮಟ್ಟದಲ್ಲಿ ತಂದಿರುವ ಬದಲಾವಣೆ ಹಾಗು ಅದರ ಪರಿಣಾಮದ ಕುರಿತು ವಿಷದಪಡಿಸಿದ್ದಾರೆ. ಇದು ಒಟ್ಟಾಗಿ ಲಕ್ಷಾಂತರ ಜನರ ಜೀವನವನ್ನು ಉತ್ತಮಗೊಳಿಸುವಲ್ಲಿ ಅಗಾಧಪರಿಣಾಮವನ್ನು ಬೀರುತ್ತದೆ”

“ಖ್ಯಾತ ಲೇಖಕಿ ಮತ್ತು ಉದಾರ ವ್ಯಕ್ತಿತ್ವದ ಸುಧಾಮೂರ್ತಿ ಅವರು “ಮೋದಿ@20;ಡ್ರೀಮ್ಸ್ ಮೀಟ್ ಡೆಲಿವರಿ” ಪುಸ್ತಕದಲ್ಲಿ ತಮ್ಮ ಅಧ್ಯಾಯದಲ್ಲಿ “ಬದಲಾವಣೆಯ ಗಾಳಿ” ಬಗ್ಗೆ ಮಾತನಾಡಿದ್ದಾರೆ.  

ಶ್ರೀಮತಿ ಮೂರ್ತಿ ಅವರು ಭಾರತದಲ್ಲಿ ನಡೆಯುತ್ತಿರುವ ಕುತೂಹಲಕಾರಿ ಬದಲಾವಣೆಗಳನ್ನು ಉಪವ್ಯಾಖ್ಯಾನಗಳ ಮೂಲಕ ವಿವರಿಸಿದ್ದಾರೆ.”

***



(Release ID: 1825335) Visitor Counter : 164