ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಂತಾರಾಷ್ಟ್ರೀಯ ದಾದಿಯರ ದಿನದಂದು ನಮ್ಮ ಭೂ ಗ್ರಹವನ್ನು ಆರೋಗ್ಯದಿಂದಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನರ್ಸ್ ಗಳ ಪಾತ್ರ ಶ್ಲಾಘಿಸಿದ ಪ್ರಧಾನಿ

Posted On: 12 MAY 2022 10:13AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂತಾರಾಷ್ಟ್ರೀಯ ದಾದಿಯರ ದಿನದಂದು ನಮ್ಮ ಭೂ ಗ್ರಹವನ್ನು ಆರೋಗ್ಯದಿಂದಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನರ್ಸ್ ಗಳ ಪಾತ್ರವನ್ನು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ತಿಳಿಸಿದ್ದಾರೆ.

“ನಮ್ಮ ಭೂ ಗ್ರಹವನ್ನು ಆರೋಗ್ಯಕರವಾಗಿಡುವಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಸಮರ್ಪಣೆ ಮತ್ತು ಸಹಾನುಭೂತಿ ಅನುಕರಣೀಯ. ಅಂತಾರಾಷ್ಟ್ರೀಯ ದಾದಿಯರ ದಿನದಂದು ಸವಾಲಿನ ಸಂದರ್ಭಗಳಲ್ಲೂ ಅಸಾಧಾರಣ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶುಶ್ರೂಷಾ ಸಿಬ್ಬಂದಿಗೆ ನಮ್ಮ ಮೆಚ್ಚುಗೆಯನ್ನು ಪುನರುಚ್ಚರಿಸುವ ದಿನವಾಗಿದೆ’’  

 

 

****(Release ID: 1824757) Visitor Counter : 46