ಪ್ರಧಾನ ಮಂತ್ರಿಯವರ ಕಛೇರಿ
ಖ್ಯಾತ ಸಂತೂರ್ ಮಾಂತ್ರಿಕ ಪಂಡಿತ್ ಶಿವಕುಮಾರ್ ಶರ್ಮಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
10 MAY 2022 1:25PM by PIB Bengaluru
ಖ್ಯಾತ ಸಂತೂರ್ ಮಾಂತ್ರಿಕರಾದ ಪಂಡಿತ್ ಶಿವಕುಮಾರ್ ಶರ್ಮಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಹೀಗೆ ತಿಳಿಸಿದ್ದಾರೆ;
"ಪಂಡಿತ್ ಶಿವಕುಮಾರ್ ಶರ್ಮಾ ಜೀ ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಅವರು ಸಂತೂರನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದರು. ಅವರ ಸಂಗೀತವು ಮುಂಬರುವ ಪೀಳಿಗೆಯನ್ನು ಮೂಕವಿಸ್ಮಯಗೊಳಿಸಲಿದೆ. ಅವರೊಂದಿಗೆ ನನ್ನ ಸಂವಾದವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ."
*****
(ಪ್ರಕಟಣೆ ಐ.ಡಿ.: 1824159)
ವಿಸಿಟರ್ ಕೌಂಟರ್ : 240
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam