ಹಣಕಾಸು ಸಚಿವಾಲಯ

ಸಾಮಾಜಿಕ ಸುರಕ್ಷತೆ ಒದಗಿಸುವ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ [ಪಿ.ಎಂ.ಜೆ.ಜೆ.ಬಿ.ವೈ], ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ [ಪಿ.ಎಂ.ಎಸ್.ಬಿ.ವೈ] ಮತ್ತು ಅಟಲ್ ಪಿಂಚಣಿ ಯೋಜನೆ [ಎ.ಪಿ.ವೈ] ಗಳಿಗೆ ಏಳು ವರ್ಷಗಳು ಪೂರ್ಣ


ಕಡಿಮೆ ದರದ ವಿಮಾ ಯೋಜನೆ ಮತ್ತು ಪಿಂಚಣಿ ಖಾತರಿ ಯೋಜನೆಗಳು ಸಮಾಜದ ಕಟ್ಟಕಡೆಯ ಜನರ ಸುರಕ್ಷತೆಯನ್ನು ಖಾತರಿಪಡಿಸುತ್ತದೆ: ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್

ಈ ಯೋಜನೆಗಳ ವ್ಯಾಪ್ತಿಯನ್ನು ಉತ್ಸಾಹ ಮತ್ತು ಸಮರ್ಪಣಾ ಭಾವದಿಂದ ವಿಸ್ತರಿಸುವುದನ್ನು ಬ್ಯಾಂಕ್ ಗಳು ಮತ್ತು ವಿಮಾ ಕಂಪೆನಿಗಳು ಮುಂದುವರೆಸಬೇಕು – ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕರದ್ ಸಲಹೆ

Posted On: 09 MAY 2022 11:11AM by PIB Bengaluru

·       ಪಿ.ಎಂ.ಜೆ.ಜೆ.ಬಿ.ವೈ : ಒಟ್ಟಾರೆ 12.76 ಕೋಟಿ ಗೂ ಹೆಚ್ಚು ನೋಂದಣಿ 

·       ಪಿ.ಎಂ.ಎಸ್.ಬಿ.ವೈ; ಒಟ್ಟಾರೆ 28.37 ಕೋಟಿಗೂ ಹೆಚ್ಚು ನೋಂದಣಿ

·       ಎ.ಪಿ.ವೈ; 4 ಕೋಟಿಗೂ ಹೆಚ್ಚು ಚಂದಾದಾರರು

ನವದೆಹಲಿ, ಮೇ 9, 2022; ಸಾಮಾಜಿಕ ಸುರಕ್ಷತೆ ಒದಗಿಸುವ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ [ಪಿ.ಎಂ.ಜೆ.ಜೆ.ಬಿ.ವೈ], ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ [ಪಿ.ಎಂ.ಎಸ್.ಬಿ.ವೈ] ಮತ್ತು ಅಟಲ್ ಪಿಂಚಣಿ ಯೋಜನೆ [ಎ.ಪಿ.ವೈ] ಗಳಿಗೆ ಏಳು ವರ್ಷಗಳು ಪೂರ್ಣಗೊಂಡಿವೆ. ಈ ಯೋಜನೆಗಳು ಕೈಗೆಟಕುವ ರೀತಿಯಲ್ಲಿ ವಿಮೆ ಮತ್ತು ಸಾಮಾಜಿಕ ಭದ್ರತೆ [ಜನರ ಸುರಕ್ಷತೆ]ಯನ್ನು ಹೇಗೆ ಒದಗಿಸಿದೆ ಮತ್ತು ಅದರ ಸಾಧನೆಗಳು ಮತ್ತು ಮೂಲಭೂತ ಅಂಶಗಳತ್ತ ನೋಡೋಣ.

ಪಿ.ಎಂ.ಜೆ.ಜೆ.ಬಿ.ವೈ, ಪಿ.ಎಂ.ಎಸ್.ಬಿ.ವೈ ಮತ್ತು ಎ.ಪಿ.ವೈ ಯೋಜನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015 ರ ಮೇ 9 ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಜಾರಿಗೊಳಿಸಿದರು. 

ಈ ಮೂರು ಸಾಮಾಜಿಕ ಭದ್ರತಾ ಯೋಜನೆಗಳು ನಾಗರಿಕರ ಕಲ್ಯಾಣಕ್ಕೆ ಮೀಸಲಾಗಿವೆ, ಅನಿರೀಕ್ಷಿತ ಅಪಾಯಗಳು/ನಷ್ಟಗಳು ಮತ್ತು ಆರ್ಥಿಕ ಅನಿಶ್ಚಿತತೆಗಳಿಂದ ಮನುಷ್ಯನ ಜೀವನವನ್ನು ಸುರಕ್ಷಿತಗೊಳಿಸುವ ಅಗತ್ಯವನ್ನು ಇವು ಹೊಂದಿವೆ. ದೇಶದ ಅಸಂಘಟಿತ ವರ್ಗದ ಜನತೆ ಆರ್ಥಿಕವಾಗಿ ಸುರಕ್ಷಿತವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎರಡು ವಿಮಾ ಯೋಜನೆಗಳನ್ನು ಪ್ರಾರಂಭಿಸಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ [ಪಿ.ಎಂ.ಜೆ.ಜೆ.ಬಿ.ವೈ], ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ [ಪಿ.ಎಂ.ಎಸ್.ಬಿ.ವೈ] ಮತ್ತು ವೃದ್ದಾಪ್ಯದ ಅಗತ್ಯಗಳನ್ನು ಪೂರೈಸಲು ಅಟಲ್ ಪಿಂಚಣಿ ಯೋಜನೆ [ಎ.ಪಿ.ವೈ]ಯನ್ನು ಪರಿಚಯಿಸಿದೆ.

ಪಿ.ಎಂ.ಜೆ.ಜೆ.ಬಿ.ವೈ ಮತ್ತು ಪಿ.ಎಂ.ಎಸ್.ಬಿ.ವೈ ಕಡಿಮೆ ದರದ ಜೀವ/ಅಪಘಾತ ವಿಮೆಯನ್ನು ಜನ ಸಾಮಾನ್ಯರಿಗೆ ಒದಗಿಸುತ್ತದೆ, ಎ.ಪಿ.ವೈ ವೃದ್ದಾಪ್ಯದಲ್ಲಿ ನಿಯಮಿತವಾಗಿ ಪಿಂಚಣಿ ಸೌಲಭ್ಯವನ್ನು ಕಲ್ಪಿಸಲಿದೆ.  

ಈ ಯೋಜನೆಗಳ ಏಳು ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಾತನಾಡಿ, 2014 ರ ಆಗಸ್ಟ್ 15 ರಂದು ಪ್ರಧಾನಮಂತ್ರಿ ಅವರು ಹಣಕಾಸು ಒಳಗೊಳ್ಳುವ ಕುರಿತ ರಾಷ್ಟ್ರೀಯ ಅಭಿಯಾನವನ್ನು ಪ್ರಕಟಿಸಿದ್ದು, ಇದರನ್ವಯ ವಿಮಾ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಮತ್ತು ಸಾಮಾಜಿಕವಾಗಿ ಅಂಚಿನಲ್ಲಿರುವ ವರ್ಗಗಳಿಗೆ ಕೈಗೆಟುವ ರೀತಿಯಲ್ಲಿ ಹೆಚ್ಚು ಅಗತ್ಯವಿರುವ ಸಮುದಾಯಗಳಿಗೆ ಆರ್ಥಿಕ ಭದ್ರತೆಯನ್ನು ಈ ಯೋಜನೆಗಳು ಒದಗಿಸಲಿವೆ.” ಎಂದರು. 

“ವಿಮೆ ಮತ್ತು ಜನರ ಸುರಕ್ಷತೆ ಕುರಿತ ಯೋಜನೆಗಳನ್ನು ಸಾಮಾನ್ಯ ಜನರ ವ್ಯಾಪ್ತಿಗೆ ತರಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಈ ಯೋಜನೆಗಳಿಗೆ ಸೇರ್ಪಡೆಗೊಂಡ ಮತ್ತು ಪ್ರಯೋಜನ ಪಡೆದ ಜನರ ಸಂಖ್ಯೆ, ಈ ಯೋಜನೆಗಳ ಯಶಸ್ಸಿಗೆ ಸಾಕ್ಷಿಯಾಗಿದೆ. ಕಡಿಮೆ ದರದ ವಿಮಾ ಯೋಜನೆಗಳು ಮತ್ತು ಪಿಂಚಣಿ ಖಾತರಿ, ಹಣಕಾಸು ಖಾತರಿಯನ್ನು ಒದಗಿಸುತ್ತದೆ,  ಈ ಯೋಜನೆಗಳು ಈ ಮುನ್ನ ಆಯ್ದ ಕೆಲವರಿಗೆ ಮಾತ್ರ ಲಭ್ಯವಿತ್ತು, ಇದು ಈಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ.” ಎಂದು ಹಣಕಾಸು ಸಚಿವರು ಹೇಳಿದರು.

ಬಡವರಿಗೆ ಕಲ್ಪಿಸುತ್ತಿರುವ ಸೌಲಭ್ಯಗಳ ಕುರಿತು ಅವಲೋಕನ ಮಾಡಿರುವ ಹಣಕಾಸು ಸಚಿವರು, “ ಪಿ.ಎಂ.ಜೆ.ಜೆ.ಬಿ.ವೈ ನಡಿ ಬಡವರಲ್ಲಿ ಬಡವರಿಗೆ ಪ್ರತಿದಿನಕ್ಕೆ ಕೇವಲ ಒಂದು ರೂಪಾಯಿಗೆ 2 ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯ ದೊರೆಯುತ್ತಿದೆ ಮತ್ತು ಪಿ.ಎಂ.ಎಸ್.ಬಿ.ವೈ ಯೋಜನೆಯಡಿ ತಿಂಗಳಿಗೆ ಒಂದು ರೂಪಾಯಿಗೂ ಕಡಿಮೆ ಮೊತ್ತದಲ್ಲಿ ಅಪಘಾತ ವಿಮೆ ದೊರೆಯುತ್ತಿದೆ. 18 ರಿಂದ 40 ವರ್ಷ ವಯೋಮಿತಿಯೊಳಗಿನ ದೇಶದ ಎಲ್ಲಾ ನಾಗರಿಕರು ತಿಂಗಳಿಗೆ ಕನಿಷ್ಠ 42 ರೂಪಾಯಿ ಚಂದಾಹಣ ಪಾವತಿಸುವ ಮೂಲಕ 60 ವರ್ಷದ ನಂತರ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ.” ಎಂದರು. 

ಪಿ.ಎಂ.ಜೆ.ಜೆ.ಬಿ.ವೈ ಯೋಜನೆಯಡಿ ನಾಗರಿಕರಿಗೆ, ಅದರಲ್ಲೂ ವಿಶೇಷವಾಗಿ ಕೋವಿಡ್ – 19 ಸಾಂಕ್ರಾಮಿಕ ಸಂದರ್ಭದಲ್ಲಿ ಸಾಮಾಜಿಕ ಭದ್ರತೆ ಒದಗಿಸಿರುವ ಕುರಿತು ಮಾತನಾಡಿದ ಶ್ರೀಮತಿ ನಿರ್ಮಲಾ ಸೀತಾರಾಮನ್, “ಪಿ.ಎಂ.ಜೆ.ಜೆ.ಬಿ.ವೈ ನಡಿ ಜೀವ ವಿಮೆಗಾಗಿ ಒಟ್ಟಾರೆ 12.76 ಕೋಟಿ ವ್ಯಕ್ತಿಗಳು ನೋಂದಣಿಮಾಡಿಕೊಂಡಿದ್ದಾರೆ ಮತ್ತು 5,76,121 ಕುಟುಂಬಗಳು 11,522 ಕೋಟಿ ರೂಪಾಯಿ ವಿಮಾ ಮೊತ್ತವನ್ನು ಕ್ಲೈಮ್ ಮಾಡಿವೆ. 2021 ರ ಹಣಕಾಸು ವರ್ಷದ ಸಾಂಕ್ರಾಮಿಕ ಸಂದರ್ಭದಲ್ಲಿ ಕಡಿಮೆ ಆದಾಯವಿರುವ ಕುಟುಂಬಗಳಿಗೆ ಅತಿ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಿದ್ದು, ಈ ಪೈಕಿ ಬಹುತೇಕ ಶೇ 50 ರಷ್ಟು ಕುಟುಂಬಗಳಿಗೆ ಕೋವಿಡ್ – 19 ಸಾವುಗಳಿಗೆ ಪರಿಹಾರ ನೀಡಲಾಗಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ವಿಮೆ ಕ್ಲೈಮ್ ಗಳ ಇತ್ಯರ್ಥವನ್ನು ತ್ವರಿತಗೊಳಿಸಲಾಗಿದೆ ಮತ್ತು ಸುಲಭವಾಗಿ ಪರಿಹಾರ ಪಡೆಯಲಾಗಿದೆ. ಸುಗಮವಾಗಿ ಕ್ಲೈಮ್ ಗಳನ್ನು ಪಡೆಯಲು ತರಲಾದ ಬದಲಾವಣೆಗಳು ಈಗಲೂ ಮುಂದುವರೆದಿವೆ. ಸಾಂಕ್ರಾಮಿಕ ಆರಂಭವಾದ 2020 ರ ಏಪ್ರಿಲ್ 1 ರ ನಂತರ ಹಾಗೂ 2022 ರ ಫೆಬ್ರವರಿ 23 ರ ವರೆಗೆ ಒಟ್ಟು 2.10 ಲಕ್ಷ ಕ್ಲೈಮ್ ಗಳಿಂದ 4,194.28 ಕೋಟಿ ರೂಪಾಯಿ ಹಣ ಪಾವತಿಸಿದ್ದು, ಒಟ್ಟಾರೆ ಕ್ಲೈಮ್ ಗಳ ಇತ್ಯರ್ಥ ದರ ಶೇ 99.72 ರಷ್ಟಿದೆ.

“ಪಿ.ಎಂ.ಎಸ್.ಬಿ.ವೈ ಯೋಜನೆ ಜಾರಿಯಾದ ನಂತರ ಅಪಘಾತ ವಿಮೆಗಾಗಿ 28.37 ಕೋಟಿ ಜನ ನೋಂದಣಿಯಾಗಿದ್ದಾರೆ ಮತ್ತು 97,227 ಕ್ಲೈಮ್ ಗಳ ಮೂಲಕ ಒಟ್ಟು 1,930 ಕೋಟಿ ರೂಪಾಯಿ ಹಣವನ್ನು ಪಾವತಿಸಲಾಗಿದೆ. ಎ.ಪಿ.ವೈ ಯೋಜನೆಯಡಿ 4 ಕೋಟಿಗೂ ಹೆಚ್ಚು ಜನ ಈಗಾಗಲೇ ಚಂದಾದಾರರಾಗಿದ್ದಾರೆ.” ಎಂದು ಹಣಕಾಸು ಸಚಿವರು ಹೇಳಿದರು.

ಸಮಾರಂಭದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ [ಎಂ.ಒ.ಎಸ್] ಡಾ. ಭಾಗವತ್ ಕೃಷ್ಣರಾವ್ ಕರದ್, “ ಯೋಜನೆಗಳ 7 ನೇ ವರ್ಷಾಚರಣೆ ಸಂದರ್ಭದಲ್ಲಿ ಯಶಸ್ವಿಯಾಗಿ ಯೋಜನೆ ಅನುಷ್ಠಾನಗೊಳಿಸಿದ ಎಲ್ಲಾ ಬ್ಯಾಂಕ್ ಗಳು ಮತ್ತು ವಿಮಾ ಕಂಪೆನಿಗಳನ್ನು ಅಭಿನಂದಿಸುತ್ತೇನೆ ಮತ್ತು ಕೊನೆಯ ವ್ಯಕ್ತಿವರೆಗೆ ಯೋಜನೆಗಳು ತಲುಪುವವರೆಗೆ ಇದೇ ಉತ್ಸಾಹ ಮತ್ತು ಸಮರ್ಪಣೆ ಭಾವದಿಂದ ಕೆಲಸ ಮಾಡುವುದನ್ನು ಮುಂದುವರೆಸಬೇಕು” ಎಂದು ಮನವಿ ಮಾಡಿದರು.

“ಗೌರವಾನ್ವಿತ ಪ್ರಧಾನಮಂತ್ರಿ ಅವರು ತಮ್ಮ ಕೊನೆಯ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದಂತೆ ದೇಶದ ಪ್ರತಿಯೊಬ್ಬ ಅರ್ಹ ವ್ಯಕ್ತಿ ವಿಮೆ ಮತ್ತು ಪಿಂಚಣಿಗಾಗಿ ಈ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸೇರ್ಪಡೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ” ಎಂದು ಡಾ. ಕರದ್ ಹೇಳಿದರು. 

ನಾವು ಪಿ.ಎಂ.ಜೆ.ಜೆ.ಬಿ.ವೈ, ಪಿ.ಎಂ.ಎಸ್.ಬಿ.ವೈ ಮತ್ತು ಎ.ಪಿ.ವೈ ಯೋಜನೆಗಳ ಏಳನೇ ವರ್ಷಾಚರಣೆಯಲ್ಲಿದ್ದು, ಈ ಯೋಜನೆಗಳ ವೈಶಿಷ್ಟ್ಯಗಳು ಮತ್ತು ಇದುವರೆಗಿನ ಸಾಧನೆಗಳ ಒಳನೋಟವನ್ನು ನೋಡೋಣ

1.   ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ [ಪಿ.ಎಂ.ಜೆ.ಜೆ.ಬಿ.ವೈ]

ಯೋಜನೆ: ಪಿ.ಎಂ.ಜೆ.ಜೆ.ಬಿ.ವೈ ಒಂದು ವರ್ಷದ ಜೀವ ವಿಮಾ ಯೋಜನೆಯಾಗಿದ್ದು, ವರ್ಷದಿಂದ ವರ್ಷಕ್ಕೆ ನವೀಕರಣ ಮಾಡಬಹುದಾಗಿದೆ. ಯಾವುದೇ ಕಾರಣದಿಂದ ಮರಣ ಸಂಭವಿಸಿದರೂ ಪರಿಹಾರ ಪಡೆಯಬಹುದಾಗಿದೆ.

ಅರ್ಹತೆ: 18 ರಿಂದ 50 ವರ್ಷದ ವಯೋಮಿತಿಯ ವ್ಯಕ್ತಿಗಳು ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವರು ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. 50 ವರ್ಷ ಪೂರ್ಣಗೊಳ್ಳುವ ಮುನ್ನ ಯೋಜನೆಗೆ ಸೇರ್ಪಡೆಯಾದವರು ಗರಿಷ್ಠ 55 ವಯೋಮಿತಿವರೆಗೆ ಪ್ರೀಮಿಯಂ ಪಾವತಿಸಿ ವಿಮಾ ಸೌಲಭ್ಯ ಪಡೆಯಬಹುದಾಗಿದೆ.

ಲಾಭಗಳು : ವಾರ್ಷಿಕ 330 ರೂಪಾಯಿ ಪ್ರೀಮಿಯಂ ಪಾವತಿಸುವವರು ಯಾವುದೇ ಕಾರಣದಿಂದ ಮರಣ ಸಂಭವಿಸಿದ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ವಿಮಾ ಸೌಲಭ್ಯ ಪಡೆಯಬಹುದು.

ನೋಂದಣಿ: ಬ್ಯಾಂಕ್ ಖಾತೆದಾರರು, ಶಾಖೆಗಳು/ಬಿಸಿ ಕೇಂದ್ರಗಳು ಅಥವಾ ವೆಬ್ ಸೈಟ್ ಗಳಿಗೆ ಭೇಟಿ ನೀಡುವ ಮೂಲಕ ಅಥವಾ ಅಂಚೆ ಕಚೇರಿಗಳ ಉಳಿತಾಯ ಖಾತೆಗಳ ಮೂಲಕ ಯೋಜನೆಯಡಿ ನೋಂದಣಿಯಾಗಬಹುದು. ಯೋಜನೆಯಡಿ ವಾರ್ಷಿಕ ಪ್ರೀಮಿಯಂ ಮೊತ್ತ ಒಂದು ಬಾರಿಗೆ ಖಾತೆದಾರರ ಅನುಮತಿಯೊಂದಿಗೆ ಸ್ವಯಂ ಚಾಲಿತವಾಗಿ ಕಡಿತಗೊಳ್ಳುತ್ತದೆ. ಯೋಜನೆ ಕುರಿತು ವಿಸ್ತೃತ ಮಾಹಿತಿ ಮತ್ತು ಅರ್ಜಿ ನಮೂನೆಗಳು [ಹಿಂದಿ, ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ] https://jansuraksha.gov.in

ಸಾಧನೆಗಳು: 27.04.2022 ರ ಮಾಹಿತಿಯಂತೆ ಯೋಜನೆಯಡಿ ಒಟ್ಟಾರೆ 12.76 ಕೋಟಿಗೂ ಹೆಚ್ಚು ನೋಂದಣಿಯಾಗಿದೆ ಮತ್ತು 5,76,121 ಕ್ಲೈಮ್ ಗಳಿಂದ 11,522 ರೂಪಾಯಿ ಪಾವತಿಸಲಾಗಿದೆ. 

1.   ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ [ಪಿ.ಎಂ.ಎಸ್.ಬಿ.ವೈ]

ಯೋಜನೆ: ಪಿ.ಎಂ.ಎಸ್.ಬಿ.ವೈ ಯೋಜನೆ ಒಂದು ವರ್ಷದ ಅಪಘಾತ ವಿಮಾ ಯೋಜನೆಯಾಗಿದ್ದು, ವರ್ಷದಿಂದ ವರ್ಷಕ್ಕೆ ನವೀಕರಣ ಮಾಡಿಕೊಳ್ಳಬೇಕಿದ್ದು, ಅಪಘಾತದಿಂದ ಮರಣ ಅಥವಾ ಅಂಗ ವೈಕಲ್ಯಕ್ಕೆ ವಿಮಾ ಪರಿಹಾರ ದೊರೆಯಲಿದೆ. 

ಅರ್ಹತೆ: ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವ 18 ರಿಂದ 70 ವರ್ಷ ವಯೋಮಿತಿಯ ವ್ಯಕ್ತಿಗಳು ಯೋಜನೆಯಡಿ ನೋಂದಣಿಯಾಗಬಹುದು.

ಲಾಭಗಳು; ಅಪಘಾತದಿಂದ ಮರಣ ಅಥವಾ ಅಂಗ ವೈಕಲ್ಯ ಹೊಂದಿದವರಿಗೆ ಪರಿಹಾರ ದೊರೆಯಲಿದ್ದು, ಅಪಘಾತ ಮತ್ತು ಅಂಗ ವೈಕಲ್ಯಹೊಂದಿದರೆ 2 ಲಕ್ಷ ರೂಪಾಯಿ [ಭಾಗಶಃ ಅಂಗವಿಕಲತೆಗೆ 1 ಲಕ್ಷ ರೂಪಾಯಿ] ದೊರೆಯಲಿದೆ.  

ನೋಂದಣಿ: ಬ್ಯಾಂಕ್ ಖಾತೆದಾರರು, ಶಾಖೆಗಳು/ಬಿಸಿ ಕೇಂದ್ರಗಳು ಅಥವಾ ವೆಬ್ ಸೈಟ್ ಗಳಿಗೆ ಭೇಟಿ ನೀಡುವ ಮೂಲಕ ಅಥವಾ ಅಂಚೆ ಕಚೇರಿಗಳ ಉಳಿತಾಯ ಖಾತೆಗಳ ಮೂಲಕ ಯೋಜನೆಯಡಿ ನೋಂದಣಿಯಾಗಬಹುದು. ಯೋಜನೆಯಡಿ ವಾರ್ಷಿಕ ಪ್ರೀಮಿಯಂ ಮೊತ್ತ ಒಂದು ಬಾರಿಗೆ ಖಾತೆದಾರರ ಅನುಮತಿಯೊಂದಿಗೆ ಸ್ವಯಂ ಚಾಲಿತವಾಗಿ ಕಡಿತಗೊಳ್ಳುತ್ತದೆ. ಯೋಜನೆ ಕುರಿತು ವಿಸ್ತೃತ ಮಾಹಿತಿ ಮತ್ತು ಅರ್ಜಿ ನಮೂನೆಗಳು [ಹಿಂದಿ, ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ] https://jansuraksha.gov.in

ಸಾಧನೆಗಳು;  27.04.2022 ರ ಮಾಹಿತಿಯಂತೆ ಯೋಜನೆಯಡಿ ಒಟ್ಟಾರೆ 28.37 ಕೋಟಿ ನೋಂದಣಿಯಾಗಿದೆ ಮತ್ತು 97,227 ರ ಕ್ಲೈಮ್ ಗಳಿಂದ 1,930 ಕೋಟಿ ರೂಪಾಯಿ ಪಾವತಿಯಾಗಿದೆ.

 

ಅಟಲ್ ಪಿಂಚಣಿ ಯೋಜನೆ [ಎಪಿವೈ]

ಹಿನ್ನೆಲೆ: ಅಟಲ್ ಪಿಂಚಣಿ ಯೋಜನೆ [ಎಪಿವೈ]ಯನ್ನು ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಬಡವರು, ಹಿಂದುಳಿದವರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ರಚಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆ ಒದಗಿಸಲು ಮತ್ತು ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಸರ್ಕಾರದ ಉಪಕ್ರಮ ಇದಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ [ಎನ್.ಪಿ.ಎಸ್] ಒಟ್ಟಾರೆ ಆಡಳಿತಾತ್ಮಕ ಮತ್ತು ಸಾಂಸ್ಥಿಕ ವಾಸ್ತುಶಿಲ್ಪದ ಅಡಿಯಲ್ಲಿ ಎಪಿವೈ ಅನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ [ಪಿ.ಎಫ್.ಆರ್.ಡಿ.ಎ] ನಿರ್ವಹಣೆ ಮಾಡುತ್ತದೆ.     

ಅರ್ಹತೆ: ಎಪಿವೈ ಯೋಜನೆ 18 ರಿಂದ 40 ವಯೋಮಿತಿಯ ಎಲ್ಲಾ ಬ್ಯಾಂಕ್ ಖಾತೆದಾರರಿಗೆ ಮುಕ್ತವಾಗಿದೆ ಮತ್ತು ಆಯ್ಕೆ ಮಾಡಿದ ಪಿಂಚಣಿ ಮೊತ್ತದ ಆಧಾರದ ಮೇಲೆ ಕೊಡುಗೆಗಳು ಭಿನ್ನವಾಗಿರುತ್ತವೆ.

ಲಾಭಗಳು; ಚಂದಾದಾರರು 60 ವರ್ಷದ ನಂತರ ಯೋಜನೆಯಡಿ ಚಂದಾದಾರರ ಕೊಡುಗೆ ಆಧಾರದ ಮೇಲೆ ಕನಿಷ್ಠ 1000 ರೂಪಾಯಿ ಅಥವಾ 2000 ರೂಪಾಯಿ ಅಥವಾ  3000 ರೂಪಾಯಿ ಅಥವಾ 4000 ರೂಪಾಯಿ ಅಥವಾ 5000 ರೂಪಾಯಿ ಪಿಂಚಣಿ ಪಡೆಯಲಿದ್ದಾರೆ.

ಯೋಜನೆಯ ಪ್ರಯೋಜನಗಳ ವಿತರಣೆ: ಚಂದಾದಾರರಿಗೆ ಮಾಸಿಕ ಪಿಂಚಣಿ ದೊರೆಯಲಿದೆ ಮತ್ತು ಆತನ ನಂತರ ಹೆಂಡತಿ ಮತ್ತು ಮರಣ ನಂತರ, 60 ನೇ ವರ್ಷದಲ್ಲಿ ಸಂಗ್ರಹವಾದ ಪಿಂಚಣಿ ಸಂಚಿತ ಮೊತ್ತವನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ.

ಒಂದು ವೇಳೆ ಮುಂದಾಗಿಯೇ ಮರಣ ಹೊಂದಿದರೆ [60 ವರ್ಷಕ್ಕಿಂತ ಮುನ್ನ ] ಹೆಂಡತಿ ಚಂದಾದಾರರಾಗಿ ಎಪಿವೈ ಖಾತೆಗೆ ಕೊಡುಗೆಯನ್ನು ಮೂಲ ಚಂದಾದಾರರು 60 ವರ್ಷದವರೆಗೆ ಕೊಡುಗೆಯನ್ನು ಮುಂದುವರೆಸಬಹುದು.

ಕೇಂದ್ರ ಸರ್ಕಾರದ ಕೊಡುಗೆ: ಕನಿಷ್ಠ ಪಿಂಚಣಿಯನ್ನು ಸರ್ಕಾರ ಖಾತರಿಪಡಿಸುತ್ತದೆ, ಅಂದರೆ ಕೊಡುಗೆಗಳ ಆಧಾರದ ಮೇಲೆ ಸಂಗ್ರಹವಾದ ಸಂಚಿತ ಹೂಡಿಕೆಯ ಮೇಲಿನ ಅಂದಾಜು ಆದಾಯಕ್ಕಿಂತ ಕಡಿಮೆ ಗಳಿಸಿದರೆ ಮತ್ತು ಖಾತರಿ ಮಾಡಿದ ಕನಿಷ್ಠ ಪಿಂಚಣಿಯನ್ನು ಒದಗಿಸಲು ಅಸಮರ್ಪಕವಾಗಿದ್ದರೆ ಕೇಂದ್ರ ಸರ್ಕಾರ ಅಂತಹ ಸಂದರ್ಭದಲ್ಲಿ ಹಣವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ. ಹೂಡಿಕೆಯ ಮೇಲಿನ ಆದಾಯ ಅಧಿಕವಾಗಿದ್ದರೆ ಚಂದಾದಾರರು ಹೆಚ್ಚುವರಿ ಪಿಂಚಣಿ ಪ್ರಯೋಜನ ಪಡೆಯಲಿದ್ದಾರೆ. 

ಪಾವತಿ ಅವಧಿ: ಚಂದಾದಾರರು ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ ಆಧಾರದ ಮೇಲೆ ಎಪಿವೈಗೆ ಕೊಡುಗೆಯನ್ನು ನೀಡಬಹುದು.  

ಯೋಜನೆಯಿಂದ ಹಿಂದೆ ಸರಿಯುವುದು: ಕೆಲವು ಷರತ್ತುಗಳಿಗೆ ಒಳಪಟ್ಟು ಚಂದಾದಾರರು ಎಪಿವೈ ಯೋಜನೆಯಿಂದ ಸ್ವಯಂ ಪ್ರೇರಣೆಯಿಂದ ಹಿಂದೆ ಸರಿಯಬಹುದು. ಸರ್ಕಾರದ ಕೊಡುಗೆ ಕಡಿತ, ಅದರ ಮೇಲಿನ ಎಲ್ಲಾ ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ.

ಸಾಧನೆಗಳು; 27.04.2022 ರ ಮಾಹಿತಿಯಂತೆ ಈ ಯೋಜನೆಯಡಿ 4 ಕೋಟಿಗೂ ಹೆಚ್ಚು ಚಂದಾದಾರರಿದ್ದಾರೆ.

***



(Release ID: 1824068) Visitor Counter : 392