ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಸ್ರೇಲ್ ದಿನ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂದೇಶದ ಇಂಗ್ಲೀಷ್ ಭಾಷಾಂತರ

Posted On: 05 MAY 2022 8:50PM by PIB Bengaluru

ನಮಸ್ಕಾರ್!

ಶಾಲೋಂ!

ಇಸ್ರೇಲಿನ 75 ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ, ಭಾರತ ಸರಕಾರದ ಮತ್ತು ಸಮಸ್ತ ಭಾರತೀಯರ ಪರವಾಗಿ, ನಾನು ಎಲ್ಲಾ ನಮ್ಮ ಇಸ್ರೇಲಿ ಸ್ನೇಹಿತರಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಈ ವರ್ಷ ನಾವು ನಮ್ಮ ರಾಜತಾಂತ್ರಿಕ ಸಂಬಂಧಗಳ ಮೂವತ್ತನೇ ವಾರ್ಷಿಕೋತ್ಸವವನ್ನು ಕೂಡಾ ಆಚರಿಸುತ್ತಿದ್ದೇವೆ. ಈ ಅಧ್ಯಾಯ ಹೊಸತಾದರೂ, ಉಭಯ ದೇಶಗಳ ನಡುವಣ ಸಂಬಂಧಗಳ ಇತಿಹಾಸ ಬಹಳ ಹಳೆಯದು. ಬರಲಿರುವ ವರ್ಷಗಳಲ್ಲಿ ನಾವು ನಮ್ಮ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ ಎಂಬ ಭರವಸೆ ನನಗಿದೆ.

ಧನ್ಯವಾದಗಳು!

ತೋಡಾ ರಾಬ್ಬ!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆಯ ಸರಿಸುಮಾರಾದ ಭಾಷಾಂತರ. ಮೂಲ ಪ್ರತಿಕ್ರಿಯೆಯನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1823151)