ಪ್ರಧಾನ ಮಂತ್ರಿಯವರ ಕಛೇರಿ

ಕೊಪೆನ್ ಹೆಗೆನ್ ಭಾರತ –ಡೆನ್ಮಾರ್ಕ್ ವ್ಯಾಪಾರೋದ್ಯಮ ವೇದಿಕೆಯಲ್ಲಿ ಪಾಲ್ಗೊಂಡ ಪ್ರಧಾನ ಮಂತ್ರಿ

Posted On: 03 MAY 2022 8:16PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೆಂದ್ರ ಮೋದಿ ಅವರು ಡೆನ್ಮಾರ್ಕ್ ಪ್ರಧಾನ ಮಂತ್ರಿ ಗೌರವಾನ್ವಿತ ಮೀಟ್ಟೆ ಪ್ರೆಡೆರಿಕ್ಸೆನ್ ಮತ್ತು ಎಚ್.ಆರ್.ಎಚ್.ರಾಜಕುಮಾರ ಡೆನ್ಮಾರ್ಕಿನ ಫ್ರೆಡೆರಿಕ್ ಅವರೊಂದಿಗೆ ಡ್ಯಾನಿಶ್ ಕೈಗಾರಿಕೋದ್ಯಮದ ಮಹಾಒಕ್ಕೂಟದ ಭಾರತ –ಡೆನ್ಮಾರ್ಕ್ ವ್ಯಾಪಾರೋದ್ಯಮ ವೇದಿಕೆಯಲ್ಲಿ ಪಾಲ್ಗೊಂಡರು.

ಪ್ರಧಾನ ಮಂತ್ರಿ ಅವರು ಎರಡು ಆರ್ಥಿಕತೆಗಳ ಪೂರಕ ಕೌಶಲ್ಯಗಳ ಬಗ್ಗೆ ಒತ್ತು ನೀಡಿ ಮಾತನಾಡಿದರಲ್ಲದೆ ಹಸಿರು ತಂತ್ರಜ್ಞಾನ, ಶೀತಲ ಸರಪಳಿ, ತ್ಯಾಜ್ಯದಿಂದ ಸಂಪತ್ತು ಸೃಷ್ಟಿ, ಹಡಗು ಮತ್ತು ಬಂದರುಗಳು ಸಹಿತ ಇತರ ಕ್ಷೇತ್ರಗಳಲ್ಲಿ ಭಾರತದ ವಿಪುಲ ಅವಕಾಶಗಳ ಪ್ರಯೋಜನಗಳನ್ನು ಪಡೆಯುವಂತೆ ಡ್ಯಾನಿಶ್ ಕಂಪೆನಿಗಳಿಗೆ ಆಹ್ವಾನವಿತ್ತರು. ಅವರು ಭಾರತದ ವ್ಯಾಪಾರ ಸ್ನೇಹೀ ಧೋರಣೆಯನ್ನು ಪ್ರಮುಖವಾಗಿ ಉದಾಹರಿಸಿದರಲ್ಲದೆ ಉಭಯ ಕಡೆಯ ವ್ಯಾಪಾರೋದ್ಯಮ ಸಮುದಾಯಗಳಿಗೆ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವಂತೆಯೂ ಮನವಿ ಮಾಡಿದರು.

ಪ್ರಧಾನ ಮಂತ್ರಿ ಫ್ರೆಡೆರಿಕ್ ಸೆನ್ ಅವರು ಉಭಯ ದೇಶಗಳ ನಡುವೆ ಸಂಬಂಧ ಸೇತುವೆ ಸ್ಥಾಪಿಸುವ ನಿಟ್ಟಿನಲ್ಲಿ ವ್ಯಾಪಾರೋದ್ಯಮ ಸಮುದಾಯದ ಪಾತ್ರವನ್ನು ಪ್ರಮುಖವಾಗಿ ಉಲ್ಲೇಖಿಸಿದರು.

ಈ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಈ ಕೆಳಗಿನ ಕ್ಷೇತ್ರಗಳ ವ್ಯಾಪಾರೋದ್ಯಮಗಳು ಭಾಗವಹಿಸಿದ್ದವು:

*ಹಸಿರು ತಂತ್ರಜ್ಞಾನ, ಅನ್ವೇಷಣೆ ಮತ್ತು ಡಿಜಿಟಲೀಕರಣ

* ಇಂಧನ ಸ್ವಾತಂತ್ರ್ಯ ಮತ್ತು ಮರುನವೀಕೃತ ಇಂಧನ

*ಜಲ, ಪರಿಸರ ಮತ್ತು ಕೃಷಿ

* ಮೂಲಸೌಕರ್ಯ, ಸಾರಿಗೆ ಮತ್ತು ಸೇವೆಗಳು

ವ್ಯಾಪಾರೋದ್ಯಮ ವೇದಿಕೆಯಲ್ಲಿ ವ್ಯಾಪಾರೋದ್ಯಮದ ಈ ಕೆಳಗಿನ ಪ್ರಮುಖರು ಪಾಲ್ಗೊಂಡಿದ್ದರು:

ಭಾರತೀಯ ವ್ಯಾಪಾರೋದ್ಯಮ ನಿಯೋಗ:

·         ಶ್ರೀ ಸಂಜೀವ್ ಬಜಾಜ್, ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರು, ಬಜಾಜ್ ಫಿನ್ಸರ್ವ್ ಲಿಮಿಟೆಡ್

·         ಶ್ರೀ ಬಾಬಾ ಎನ್ ಕಲ್ಯಾಣಿ, ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರು, ಭಾರತ್ ಫೋರ್ಜ್

·         ಶ್ರೀ ಮಹೇಂದ್ರ ಸಿಂಘಿ, ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್.

·         ಶ್ರೀ ರಿಜ್ವಾನ್ ಸೂಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಆಡಳಿತ ನಿರ್ದೇಶಕರು, ಹಿಂದೂಸ್ಥಾನ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್

·         ಶ್ರೀ ದರ್ಶನ್ ಹಿರಾನಂದಾನಿ, ಅಧ್ಯಕ್ಷರು, ಹಿರಾನಂದಾನಿ ಗ್ರೂಪ್

·         ಶ್ರೀ ಪುನೀತ್ ಚಟ್ವಾಲ್, ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇಂಡಿಯನ್ ಹೋಟೆಲ್ಸ್ ಕಂಪೆನಿ ಲಿಮಿಟೆಡ್.

·         ಶ್ರೀ ದೀಪಕ್ ಭಾಗ್ಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕ, ಇನ್ವೆಸ್ಟ್ ಇಂಡಿಯಾ

·         ಶ್ರೀ ರಿತೇಶ್ ಅಗರ್ವಾಲ್, ಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಹಣಾಢಿಕಾರಿ, ಓಯೋ ರೂಮ್ಸ್.

·         ಶ್ರೀ ಸಲೀಲ್ ಸಿಂಘಾಯ್, ಎಮಿರಿಟಸ್ ಅಧ್ಯಕ್ಷರು , ಪಿ.ಐ.ಇಂಡಸ್ತ್ರೀಸ್ ಲಿಮಿಟೆಡ್.

·         ಶ್ರೀ ಸುಮಂತ್ ಸಿನ್ಹಾ, ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರು, ರಿನ್ಯು ಪವರ್.

·         ಶ್ರೀ ದಿನೇಶ್ ಖಾರಾ, ಅಧ್ಯಕ್ಷರು, ಭಾರತೀಯ ಸ್ಟೇಟ್ ಬ್ಯಾಂಕ್

ಶ್ರೀ ಸಿ.ಪಿ. ಗುರ್ನಾನಿ, ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಟೆಕ್ ಮಹೀಂದ್ರ ಲಿಮಿಟೆಡ್
ಶ್ರೀ ತುಲಸಿ ತಂತಿ, ಸುಜ್ಲಾನ್ ಎನರ್ಜಿ ಲಿಮಿಟೆಡ್.
ಡ್ಯಾನಿಶ್ ವ್ಯಾಪಾರೋದ್ಯಮ ನಿಯೋಗ:

 

·         ನೀಲ್ಸ್ ಆಗೇ ಕ್ಜೆರ್, ಮಾಲೀಕರು, ಎ.ವಿ.ಕೆ

·          ಪೀಟರ್ ಪಲ್ಲಿಶೊಜ್, ಸಿ.ಇ.ಒ., ಬೈಟ್ಟರ್

·          ಸೀಸ್ ಹಾರ್ಟ್, ಸಿ.ಇ.ಒ. , ಕಾರ್ಲ್ಸ್‌ಬರ್ಗ್

·          ಜಾಕೋಬ್ ಬರುಯೆಲ್ ಪೌಲ್ಸೆನ್, ವ್ಯವಸ್ಥಾಪಕ ಪಾಲುದಾರರು, ಕೋಪನ್ ಹೆಗನ್ ಇನ್ಫ್ರಾಸ್ಟ್ರಕ್ಚರ್ ಪಾರ್ಟ್ನರ್ಸ್

·          ಜುಕ್ಕಾ ಪರ್ಟೋಲಾ, ಅಧ್ಯಕ್ಷರು, ಸಿ.ಒ.ಡಬ್ಲ್ಯು.ಐ. ಮತ್ತು ಸೀಮೆನ್ಸ್ ವಿಂಡ್ ಪವರ್

·          ಜಾರ್ಗೆನ್ ಮ್ಯಾಡ್ಸ್ ಕ್ಲಾಸೆನ್, ಮಾಲೀಕರು, ಡ್ಯಾನ್‌ಫಾಸ್

·         ಥಾಮಸ್ ಪ್ಲೆನ್ಬೋರ್ಗ್, ಅಧ್ಯಕ್ಷರು, ಡಿ.ಎಸ್.ವಿ.

·          ಕಿಮ್ ವೆಜ್ಲ್ಬಿ ಹ್ಯಾನ್ಸೆನ್, ಸಿ.ಇ.ಒ, ಎಫ್.ಒ. ಎಸ್.ಎಸ್.

·          ಜೆನ್ಸ್ ಮೊಬರ್ಗ್, ಅಧ್ಯಕ್ಷರು, ಗ್ರಂಡ್ಫೋಸ್

·         ರೋಲ್ಯಾಂಡ್ ಬಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾಲ್ಡೋರ್ ಟಾಪ್ಸೋ

·          ಲಾರ್ಸ್ ಪೀಟರ್ಸನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹೆಂಪೆಲ್

·          ನೀಲ್ಸ್ ಸ್ಮೆಡೆಗಾರ್ಡ್, ಅಧ್ಯಕ್ಷರು, ಐ.ಎಸ್.ಎಸ್.

·          ಒಲಿವಿಯರ್ ಫಾಂಟನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎಲ್.ಎಂ. ವಿಂಡ್ ಪವರ್ ಬ್ಲೇಡ್ಸ್

·          ಜೆನ್ಸ್-ಪೀಟರ್ ಸಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರಾಮ್‌ಬೋಲ್

·         ಜೆನ್ಸ್ ಬಿರ್ಗರ್ಸನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರಾಕ್ವೂಲ್

·          ಮ್ಯಾಡ್ಸ್ ನಿಪ್ಪರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಓರ್ಸ್ಟೆಡ್

***
 



(Release ID: 1822514) Visitor Counter : 145