ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಹೊಸ ಮೈಲಿಗಲ್ಲನ್ನು ಸಾಧಿಸಿವೆ- ಆರೋಗ್ಯ ಸಚಿವಾಲಯದ ಪ್ರಮುಖ ಟೆಲಿಮೆಡಿಸಿನ್ ಸೇವೆ - “ಇಸಂಜೀವನಿ” ಮೂಲಕ 2022 ರ ಏಪ್ರಿಲ್ 26 ಮತ್ತು 27 ರಂದು 3.5 ಲಕ್ಷ ಟೆಲಿ ಸಮಾಲೋಚನೆಗಳನ್ನು ದಾಖಲಿಸಿದೆ
2022 ರ ಏಪ್ರಿಲ್ 26 ಮತ್ತು 27 ರಂದು 76 ಲಕ್ಷಕ್ಕೂ ಹೆಚ್ಚು ರೋಗಿಗಳು ಇಸಂಜೀವನಿ ಒಪಿಡಿ ಟೆಲಿಮೆಡಿಸಿನ್ ಸೇವೆಗಳನ್ನು ಪಡೆದಿದ್ದಾರೆ
ಅಂತ್ಯೋದಯ ಕಡೆಗೆ ದೊಡ್ಡ ಹೆಜ್ಜೆ - ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಕೈಗೆಟುಕುವ ವೆಚ್ಚದಲ್ಲಿ ಖಾತರಿಪಡಿಸುವ ಟೆಲಿ-ಸಮಾಲೋಚನೆಯಲ್ಲಿ ಸ್ಥಿರವಾದ ಏರಿಕೆ
प्रविष्टि तिथि:
28 APR 2022 12:16PM by PIB Bengaluru
ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಸಮುದಾಯಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ತಮ್ಮ ಧ್ಯೇಯದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ದಾಟಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಮುಖ ಟೆಲಿಮೆಡಿಸಿನ್ ಯೋಜನೆ- “ಇಸಂಜೀವನಿ” ಮೂಲಕ 26 ಏಪ್ರಿಲ್ ಮತ್ತು 27 ಏಪ್ರಿಲ್ 2022 ರಂದು ಸತತ ಎರಡು ದಿನಗಳಲ್ಲಿ ದಾಖಲೆಯ 3.5 ಲಕ್ಷ ಟೆಲಿ ಸಮಾಲೋಚನೆಗಳನ್ನು ನೋಂದಾಯಿಸಲಾಗಿದೆ. ಇದು ಸ್ವಾಸ್ಥ್ಯ ಕೇಂದ್ರಗಳಲ್ಲಿ ಒಂದೇ ದಿನದಲ್ಲಿ ಮಾಡಲಾದ ಅತ್ಯಧಿಕ ಸಂಖ್ಯೆಯ ಟೆಲಿ ಸಮಾಲೋಚನೆಯಾಗಿದೆ, ಇದು ದಿನಕ್ಕೆ 3 ಲಕ್ಷ ಟೆಲಿ ಸಮಾಲೋಚನೆಗಳ ಹಿಂದಿನ ದಾಖಲೆಯನ್ನು ಮೀರಿಸಿದೆ. ಹೆಚ್ಚುವರಿಯಾಗಿ, 2022 ರ ಏಪ್ರಿಲ್ 26 ಮತ್ತು 27 ರಂದು ಇಸಂಜೀವನಿ ಒಪಿಡಿ ಟೆಲಿಮೆಡಿಸಿನ್ ಒದಗಿಸಿದ ಸೇವೆಗಳನ್ನು 76 ಲಕ್ಷಕ್ಕೂ ಹೆಚ್ಚು ರೋಗಿಗಳು ಪಡೆದುಕೊಂಡಿದ್ದಾರೆ.
ಈ ದಾಖಲೆಯ ಸಾಧನೆಯು ಇ-ಸಂಜೀವನಿ ವೇದಿಕೆಯ ದೃಢವಾದ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಸುಮಾರು 1 ಲಕ್ಷ ಎಬಿ-ಎಚ್‌ಡಬ್ಲ್ಯೂಸಿಗಳು ಈಗಾಗಲೇ ಸ್ಪೋಕ್‌ಗಳಾಗಿ ಸಮಾಲೋಚನೆಗಾಗಿ ನೋಂದಾಯಿಸಿಕೊಂಡಿವೆ ಮತ್ತು 25,000 ಕ್ಕೂ ಹೆಚ್ಚು ಹಬ್‌ಗಳು ಟೆಲಿ-ಸಮಾಲೋಚನೆಗಳನ್ನು ಒದಗಿಸುತ್ತಿವೆ, ಇ-ಸಂಜೀವನಿ ಪೋರ್ಟಲ್ ದೇಶದ ಉದ್ದಗಲಕ್ಕೂ ಆರೋಗ್ಯ ಸೇವೆಗಳಿಗೆ ಒದಗಿಸುತ್ತಿದೆ. ಗುಣಮಟ್ಟದ ಆರೋಗ್ಯವನ್ನು ಪಡೆಯಲು ಟೆಲಿ-ಸಮಾಲೋಚನೆಗಳ ನಿರಂತರ ಏರಿಕೆಯು ʼಅಂತ್ಯೋದಯʼದ ಕಡೆಗೆ ಒಂದು ದೊಡ್ಡ ಹೆಜ್ಜೆಯಾಗಿದೆ, ಅಲ್ಲಿ ದೇಶದ ದೂರದ ಮತ್ತು ದೂರದ ಪ್ರದೇಶಗಳು ಗುಣಮಟ್ಟದ ಮತ್ತು ಕೈಗೆಟುಕುವ ವೆಚ್ಚದಲ್ಲಿ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ದೇಶದ ಅತ್ಯಂತ ದೂರದ ಭಾಗದಲ್ಲಿರುವ ಬಡವರಿಗೆ ಸಮಯೋಚಿತ ತಜ್ಞರ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಟೆಲಿಕಾನ್ಸಲ್ಟೇಶನ್‌ಗಳು ವರದಾನವಾಗಿ ಹೊರಹೊಮ್ಮಿವೆ.
ಇಸಂಜೀವನಿ, ಯಾವುದೇ ದೇಶದ ಈ ವಿಧದಲ್ಲಿ ಮೊದಲ-ರೀತಿಯ ಟೆಲಿಮೆಡಿಸಿನ್ ಉಪಕ್ರಮವು ಎರಡು ರೀತಿಯಲ್ಲಿದೆ:
ಇಸಂಜೀವನಿ ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಎಬಿ-ಎಚ್‌ಡಬ್ಲ್ಯೂಸಿ): ಭಾರತ ಸರ್ಕಾರದ ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಯೋಜನೆಯಡಿಯಲ್ಲಿ ವೈದ್ಯರಿಂದ ವೈದ್ಯರಿಗೆ ಟೆಲಿಮೆಡಿಸಿನ್ ಸೇವೆ, ಗ್ರಾಮೀಣ ಪ್ರದೇಶಗಳು ಮತ್ತು ಪ್ರತ್ಯೇಕವಾದ ಸಮುದಾಯಗಳಲ್ಲಿ ಸಾಮಾನ್ಯ ಮತ್ತು ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸಲು. ವೈದ್ಯರಿಂದ ವೈದ್ಯರಿಗೆ ಟೆಲಿಮೆಡಿಸಿನ್ ಸೇವೆಯು ಹಬ್ ಮತ್ತು ಸ್ಪೋಕ್ ಮಾದರಿಯನ್ನು ಆಧರಿಸಿದೆ. 'ಇಸಂಜೀವನಿ ಎಬಿ-ಎಚ್‌ಡಬ್ಲ್ಯೂಸಿ' ಫಲಾನುಭವಿಯ (ಅರೆವೈದ್ಯಕೀಯ ಮತ್ತು ಸಾಮಾನ್ಯ ವೈದ್ಯರ ಜೊತೆಗೆ) ಅಂದರೆ ಸ್ವಾಸ್ಥ್ಯ ಕೇಂದ್ರ ಮತ್ತು ಹಬ್‌ನಲ್ಲಿ (ತೃತೀಯ ಆರೋಗ್ಯ ಸೌಲಭ್ಯ/ಆಸ್ಪತ್ರೆ/ವೈದ್ಯಕೀಯ ಕಾಲೇಜು) ವೈದ್ಯರು/ತಜ್ಞರ ನಡುವೆ ವರ್ಚುವಲ್ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಇದು ಸ್ಪೋಕ್‌ನಲ್ಲಿರುವ ಅರೆವೈದ್ಯರ ಮೂಲಕ ಫಲಾನುಭವಿಯೊಂದಿಗೆ ಹಬ್ (ಕೇಂದ್ರದಲ್ಲಿರುವ) ನಲ್ಲಿರುವ ವೈದ್ಯರು ಮತ್ತು ತಜ್ಞರೊಂದಿಗೆ ನೈಜ-ಸಮಯದ ವರ್ಚುವಲ್ ಸಮಾಲೋಚನೆಯನ್ನು ಇದು ಸುಗಮಗೊಳಿಸುತ್ತದೆ.
ಸಮಲೋಚನೆಯ ಕೊನೆಯಲ್ಲಿ ಉತ್ಪತ್ತಿಯಾಗುವ ಇ-ಪ್ರಿಸ್ಕ್ರಿಪ್ಷನ್ ಅನ್ನು ಔಷಧಿಗಳನ್ನು ಪಡೆಯಲು ಬಳಸಲಾಗುತ್ತದೆ. ಭೌಗೋಳಿಕತೆ, ಲಭಿಸುವಿಕೆ, ವೆಚ್ಚ ಮತ್ತು ದೂರದ ಅಡೆತಡೆಗಳನ್ನು ತೊಡೆದುಹಾಕುವ ಮೂಲಕ ಮಾಹಿತಿ ತಂತ್ರಜ್ಞಾನದ ಸಾಮರ್ಥ್ಯವನ್ನು ಗರಿಷ್ಠ ಸಂಖ್ಯೆಯ ನಾಗರಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ದೃಷ್ಟಿಯೊಂದಿಗೆ ʼಇ-ಸಂಜೀವನಿ ಎಬಿ-ಎಚ್‌ಡಬ್ಲ್ಯೂಸಿʼ ಯನ್ನು ಕಾರ್ಯಗತಗೊಳಿಸಲಾಗಿದೆ.
ಪ್ರಸ್ತುತ, ಇ-ಸಂಜೀವನಿ ಎಬಿ-ಎಚ್‌ಡಬ್ಲ್ಯೂಸಿ 80,000 ಕ್ಕೂ ಹೆಚ್ಚು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ದೂರದ ಪ್ರದೇಶಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಏಪ್ರಿಲ್ 26 ಮತ್ತು 27 ರಂದು ಪ್ರತಿ ದಿನ 2.70 ಲಕ್ಷಕ್ಕೂ ಹೆಚ್ಚು ವೈದ್ಯರಿಗೆ ಸಾಮಾನ್ಯ ಮತ್ತು ವಿಶೇಷ ವೈದ್ಯರಿಂದ ವೈದ್ಯರ ಟೆಲಿಮೆಡಿಸಿನ್ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ.
ಇ-ಸಂಜೀವನಿಒಪಿಡಿ: ಇದು ರೋಗಿಗಳಿಂದ ವೈದ್ಯರಿಗೆ ಟೆಲಿಮೆಡಿಸಿನ್ ಸೇವೆಯಾಗಿದ್ದು, ಜನರು ತಮ್ಮ ಮನೆಯಲ್ಲಿಯೇ ಹೊರರೋಗಿ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. 'ಇಸಂಜೀವನಿಒಪಿಡಿ'ಯನ್ನು ದೇಶದ ಎಲ್ಲಾ ಭಾಗಗಳಲ್ಲಿನ ನಾಗರಿಕರು ತ್ವರಿತವಾಗಿ ಮತ್ತು ವ್ಯಾಪಕವಾಗಿ ಅಳವಡಿಸಿಕೊಂಡಿದ್ದಾರೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಸ್ಮಾರ್ಟ್‌ಫೋನ್‌ಗಳಿಗೆ ಮೊಬೈಲ್ ಆ್ಯಪ್ ನಂತೆ ಲಭ್ಯವಿದೆ ಮತ್ತು ಈ ಆ್ಯಪ್ ಗಳ 3 ಮಿಲಿಯನ್ ಡೌನ್‌ಲೋಡುಗಳಾಗಿವೆ .
***
(रिलीज़ आईडी: 1821301)
आगंतुक पटल : 289