ಸಂಪುಟ

ಎಡಪಂಥೀಯ ಉಗ್ರವಾದ (ಎಲ್‌ ಡಬ್ಲು ಇ) ಪ್ರದೇಶಗಳಲ್ಲಿನ ಭದ್ರತಾ ತಾಣಗಳ  2ಜಿ ಮೊಬೈಲ್ ಸೇವೆಗಳನ್ನು 4ಜಿ ಗೆ ಮೇಲ್ದರ್ಜೆಗೇರಿಸಲು ಸಂಪುಟದ ಅನುಮೋದನೆ


ಇದರಿಂದಾಗಿ ಎಲ್‌ ಡಬ್ಲು ಇ ಪ್ರದೇಶಗಳಲ್ಲಿ ಉತ್ತಮ ಇಂಟರ್ನೆಟ್ ಮತ್ತು ಡೇಟಾ ಸೇವೆಗಳನ್ನು ಸಕ್ರಿಯಗೊಳಿಸಲಾಗುವುದು

ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಆತ್ಮನಿರ್ಭರ ಭಾರತದ ಉದ್ದೇಶಗಳನ್ನು ಈಡೇರಿಸುತ್ತದೆ

ಯೋಜನೆಯ ಒಟ್ಟು ವೆಚ್ಚ 2426.39 ಕೋಟಿ ರೂ

Posted On: 27 APR 2022 4:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಎಡಪಂಥೀಯ ಉಗ್ರವಾದ (ಎಲ್‌ ಡಬ್ಲು ಇ) ಪ್ರದೇಶಗಳಲ್ಲಿನ ಭದ್ರತಾ ತಾಣಗಳಲ್ಲಿ 2ಜಿ ಮೊಬೈಲ್ ಸೇವೆಗಳನ್ನು 4ಜಿ ಗೆ ಮೇಲ್ದರ್ಜೆಗೇರಿಸುವ ಸಾರ್ವತ್ರಿಕ ಸೇವಾ ಹೊಣೆಗಾರಿಕೆ ನಿಧಿ (ಯು ಎಸ್‌ ಒ ಎಫ್) ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆಯು 1,884.59 ಕೋಟಿ ರೂ. (ತೆರಿಗೆ ಮತ್ತು ಲೆವಿಗಳನ್ನು ಹೊರತುಪಡಿಸಿ) ಅಂದಾಜು ವೆಚ್ಚದಲ್ಲಿ 2,343 ಎಡಪಂಥೀಯ ಉಗ್ರವಾದ ಪ್ರದೇಶಗಳ ಹಂತ-I ತಾಣಗಳನ್ನು 2ಜಿಯಿಂದ 4ಜಿ ಮೊಬೈಲ್ ಸೇವೆಗಳಿಗೆ ಮೇಲ್ದರ್ಜೆಗೇರಿಸಲಿದೆ. ಇದು ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ&ಎಂ) ಯನ್ನು ಒಳಗೊಂಡಿದೆ. ಆದಾಗ್ಯೂ, ಬಿಎಸ್‌ಎನ್‌ಎಲ್‌ತನ್ನ ಸ್ವಂತ ವೆಚ್ಚದಲ್ಲಿ ತಾಣಗಳನ್ನು ಇನ್ನೂ ಐದು ವರ್ಷಗಳವರೆಗೆ ನಿರ್ವಹಿಸುತ್ತದೆ. ಈ ತಾಣಗಳು ಬಿಎಸ್‌ಎನ್‌ಎಲ್‌ಗೆ ಸೇರಿರುವುದರಿಂದ ಕೆಲಸವನ್ನು ಬಿಎಸ್‌ಎನ್‌ಎಲ್‌ಗೇ ನೀಡಲಾಗುವುದು.
541.80 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಐದು ವರ್ಷಗಳ ಒಪ್ಪಂದದ ಅವಧಿಯನ್ನು ಮೀರಿದ ಅವಧಿಗೆ ಬಿಎಸ್‌ಎನ್‌ಎಲ್‌ನಿಂದ ಎಲ್‌ ಡಬ್ಲು ಇ ಹಂತ-I 2ಜಿ ಸೈಟ್‌ಗಳ ಕಾರ್ಯಾಚರಣೆಗಳು ಮತ್ತು ನಿರ್ವಹಣಾ ವೆಚ್ಚದ ನಿಧಿಯನ್ನು ಸಹ ಸಂಪುಟ ಅನುಮೋದಿಸಿದೆ. ವಿಸ್ತರಣೆಯು ಸಂಪುಟ ಅನುಮೋದನೆಯ ದಿನಾಂಕದಿಂದ 12 ತಿಂಗಳವರೆಗೆ ಅಥವಾ 4ಜಿ ಸೈಟ್‌ಗಳು ಕಾರ್ಯಾಚರಣೆಗಳು ಅರಂಭವಾಗುವವರಗೆ ಯಾವುದು ಮೊದಲೋ ಅಲ್ಲಿಯವರೆಗೆ ಇರುತ್ತದೆ.
ಇತರ ಮಾರುಕಟ್ಟೆಗಳಿಗೆ ರಫ್ತು ಮಾಡುವುದರ ಹೊರತಾಗಿ ದೇಶೀಯ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ಟೆಲಿಕಾಂ ಗೇರ್ ವಿಭಾಗದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ದೇಶೀಯ 4ಜಿ ಟೆಲಿಕಾಂ ಉಪಕರಣಗಳಿಗೆ ಪ್ರತಿಷ್ಠಿತ ಯೋಜನೆಗಾಗಿ ಸರ್ಕಾರ ಬಿಎಸ್‌ಎನ್‌ಎಲ್‌ ಅನ್ನು ಆಯ್ಕೆ ಮಾಡಿದೆ. ಈ ಯೋಜನೆಯಲ್ಲಿಯೂ ಈ 4ಜಿ ಉಪಕರಣಗಳನ್ನು ಅಳವಡಿಸಲಾಗುವುದು.
ಮೇಲ್ದರ್ಜೆ ಯೋಜನೆಯು ಎಲ್‌ ಡಬ್ಲು ಇ ಪ್ರದೇಶಗಳಲ್ಲಿ ಉತ್ತಮ ಇಂಟರ್ನೆಟ್ ಮತ್ತು ಡೇಟಾ ಸೇವೆಗಳನ್ನು ಸಕ್ರಿಯಗೊಳಿಸುತ್ತದೆ. ಇದು ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಅಗತ್ಯಗಳನ್ನು ಪೂರೈಸುತ್ತದೆ. ಇದು ಈ ಪ್ರದೇಶಗಳಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಯ ಸಂವಹನ ಅಗತ್ಯಗಳನ್ನು ಪೂರೈಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕ ಕಲ್ಪಿಸುವ ಗುರಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ, ಈ ಪ್ರದೇಶಗಳಲ್ಲಿ ಮೊಬೈಲ್ ಬ್ರಾಡ್‌ಬ್ಯಾಂಡ್ ಮೂಲಕ ವಿವಿಧ ಇ-ಆಡಳಿತ ಸೇವೆಗಳ ವಿತರಣೆ, ಬ್ಯಾಂಕಿಂಗ್ ಸೇವೆಗಳು, ಟೆಲಿ-ಮೆಡಿಸಿನ್; ಟೆಲಿ-ಶಿಕ್ಷಣ ಇತ್ಯಾದಿಗಳನ್ನು ಒದಗಿಸುವುದು ಸಾಧ್ಯವಾಗುತ್ತದೆ.

***



(Release ID: 1820675) Visitor Counter : 225