ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

1919ರ ಇದೇ ದಿನ ಜಲಿಯನ್ ವಾಲಾಬಾಗ್ ನಲ್ಲಿ ಹುತಾತ್ಮರಾದವರಿಗೆ ನಮನ ಸಲ್ಲಿಸಿದ ಪ್ರಧಾನಿ

Posted On: 13 APR 2022 10:22AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 1919ರ ಇದೇ ದಿನ ಜಲಿಯನ್ ವಾಲಾಬಾಗ್ ನಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸಿದರು. ಶ್ರೀ ನರೇಂದ್ರ ಮೋದಿ ಅವರು, ಕಳೆದ ವರ್ಷ ಜಲಿಯನ್ ವಾಲಾಬಾಗ್ ಸ್ಮಾರಕದ ನವೀಕೃತ ಸಂಕೀರ್ಣ ಉದ್ಘಾಟನೆ ವೇಳೆ ಮಾಡಿದ್ದ ಭಾಷಣವನ್ನು ಹಂಚಿಕೊಂಡಿದ್ದಾರೆ.   

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ;
“1919ರ ಇದೇ ದಿನ ಜಲಿಯನ್ ವಾಲಾಬಾಗ್ ನಲ್ಲಿ ಹುತಾತ್ಮರಾದವರಿಗೆ ನನ್ನ ನಮನಗಳು. ಅವರ ಅಸಮಾನ್ಯ ಶೌರ್ಯ ಮತ್ತು ತ್ಯಾಗ ಮುಂಬರುವ ಪೀಳಿಗೆಗಳಿಗೆ ಸದಾ ಸ್ಫೂರ್ತಿಯಾಗಿರುತ್ತದೆ. ಕಳೆದ ವರ್ಷ ಜಲಿಯನ್ ವಾಲಾಬಾಗ್ ಸ್ಮಾರಕ ನವೀಕೃತ ಸಂಕೀರ್ಣ ಉದ್ಘಾಟನೆ ವೇಳೆ ಮಾಡಿದ್ದ ಭಾಷಣವನ್ನು ಇಲ್ಲಿ ಹಂಚಿಕೊಂಡಿದ್ದೇನೆ. 
https://t.co/zjqdqoD0q2 

 

 

***

 

 

 


(Release ID: 1816485) Visitor Counter : 193