ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಮ ನವಮಿಯ ಶುಭಸಂದರ್ಭದಲ್ಲಿ ಜುನಾಗಢ್‌ ನ ಗಥಿಲಾದಲ್ಲಿರುವ ಉಮಿಯಾ ಮಾತಾ ದೇವಸ್ಥಾನದ 14 ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ

Posted On: 09 APR 2022 4:16PM by PIB Bengaluru

ರಾಮ ನವಮಿಯ ಶುಭಸಂದರ್ಭದಲ್ಲಿ, 10ನೇ ಏಪ್ರಿಲ್, 2022 ರಂದು ಮಧ್ಯಾಹ್ನ 1 ಗಂಟೆಗೆ ಗುಜರಾತ್‌ನ ಜುನಾಗಢ್‌ ನ ಗಥಿಲಾದಲ್ಲಿರುವ ಉಮಿಯಾ ಮಾತಾ ದೇವಸ್ಥಾನದಲ್ಲಿ, ಅದರ 14 ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೊ ಸಮಾವೇಶ ಮೂಲಕ ಭಾಷಣ ಮಾಡಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2008 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ದೇವಾಲಯವನ್ನು ಉದ್ಘಾಟನೆ ಮಾಡಿದ್ದರು.  

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2008 ರಲ್ಲಿ ನೀಡಿದ ಸಲಹೆಗಳ ಆಧಾರದ ಮೇಲೆ, ಸಾಮಾಜಿಕ ಮತ್ತು ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ವಿಸ್ತರಿಸಿದೆ, ಜೊತೆಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು ಮತ್ತು ಆರ್ಥಿಕವಾಗಿ ದುರ್ಬಲ ರೋಗಿಗಳಿಗೆ ಉಚಿತ ಆಯುರ್ವೇದ ಔಷಧಗಳು ಇತ್ಯಾದಿ ವಿವಿಧ ಸೇವೆಗಳತ್ತ ದೇವಾಲಯದ ಟ್ರಸ್ಟ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.

"ಉಮಿಯಾ ಮಾ" ದೇವಿಯು 'ಕಡವ ಪಾಟಿದಾರ' ಸಮುದಾಯದವರಿಗೆ ಕುಲದೇವತೆ ಅಥವಾ ಕುಲದೇವಿಯಾಗಿದ್ದಾರೆ.

 

*********


(Release ID: 1815297) Visitor Counter : 172