ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ಉತ್ತೇಜನಕ್ಕೆ ಕಾರ್ಯಪಡೆ ರಚಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ


90 ದಿನಗಳಲ್ಲಿ ತನ್ನ ಮೊದಲ ಕ್ರಿಯಾ ಯೋಜನೆ ಸಲ್ಲಿಸಲಿರುವ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ನೇತೃತ್ವದ ಕಾರ್ಯಪಡೆ

ಕಾರ್ಯಪಡೆಯಲ್ಲಿ ಉದ್ಯಮ, ಶೈಕ್ಷಣಿಕ ತಜ್ಞರು ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಾತಿನಿಧ್ಯ

Posted On: 08 APR 2022 10:46AM by PIB Bengaluru

•    ಗೌರವ್ವಾನಿತ ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದಂತೆ ಎಬಿಜಿಸಿ ಉತ್ತೇಜನಕ್ಕೆ ಕಾರ್ಯಪಡೆ ರಚನೆ 
•    ಎಬಿಜಿಸಿ ಉದ್ಯಮದ ಪಾಲುದಾರರ ಸಹಭಾಗಿತ್ವ 
•    ವಸ್ತುವಿಷಯ ಸೃಷ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿರಬೇಕೆಂಬ ಬಯಕೆ 
•    ಎಬಿಜಿಸಿ ವಲಯದ ಬೆಳವಣಿಗೆಗೆ ನೀತಿಗಳ ಮಾರ್ಗದರ್ಶನ 
•    ಉದ್ಯಮದೊಂದಿಗೆ ಸಕ್ರಿಯ ಸಹಭಾಗಿತ್ವ 
•    ಎಬಿಜಿಸಿ ಉದ್ಯಮದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ವೃದ್ಧಿ 
1.    ಭಾರತದಲ್ಲಿನ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ (ಎವಿಜಿಸಿ) ವಲಯವು “ಕ್ರಿಯೇಟ್ ಇನ್ ಇಂಡಿಯಾ’’ ಮತ್ತು “ಬ್ರಾಂಡ್  ಇಂಡಿಯಾ’’ ಆಗುವತ್ತ ಬೆಳಕು ಚೆಲ್ಲುವ ಸಾಮರ್ಥ್ಯವನ್ನು ಹೊಂದಿದೆ. ವಾರ್ಷಿಕ ಸುಮಾರು ಶೇ.25ರಿಂದ 30ರಷ್ಟು ಬೆಳವಣಿಗೆಯೊಂದಿಗೆ ಮತ್ತು ಪ್ರತಿ ವರ್ಷ 1,60,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವುದರೊಂದಿಗೆ 2025 ರ ವೇಳೆಗೆ ಜಾಗತಿಕ ಮಾರುಕಟ್ಟೆ ಪಾಲನ್ನು ಶೇ.5ರಷ್ಟು (40 ಶತಕೋಟಿ ಅಮೆರಿಕನ್ ಡಾಲರ್ ) ಹೊಂದುವ ಸಾಮರ್ಥ್ಯವನ್ನು ಭಾರತ ಹೊಂದಿದೆ. 
2.    ಎವಿಜಿಸಿ ವಲಯದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಮತ್ತು  ನಮ್ಮ ದೇಶೀಯ ಮಾರುಕಟ್ಟೆ ಮತ್ತು ಜಾಗತಿಕ ಬೇಡಿಕೆಗಳನ್ನು ಈಡೇರಿಸಲು ದೇಶೀಯ ಸಾಮರ್ಥ್ಯ ಅರಿತುಕೊಳ್ಳುವ ಮತ್ತು ಹೊಸ ಮಾರ್ಗೋಪಾಯಗಳನ್ನು ಶಿಫಾರಸು ಮಾಡಲು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ಉತ್ತೇಜನಕ್ಕೆ ಕಾರ್ಯಪಡೆಯನ್ನು ರಚಿಸುವುದಾಗಿ 2022-23ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಪ್ರಕಟಿಸಲಾಗಿತ್ತು.
3.    ಕೇಂದ್ರ ಬಜೆಟ್ 2022-23ರಲ್ಲಿ ಮಾಡಿದ ಘೋಷಣೆಯ ಮುಂದುವರಿದ ಭಾಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ದೇಶದಲ್ಲಿ ಎವಿಜಿಸಿ ವಲಯವನ್ನು ಉತ್ತೇಜಿಸಲು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ಉತ್ತೇಜನಾ ಕಾರ್ಯಪಡೆಯನ್ನು ರಚಿಸಲಾಗಿದೆ. 
4.    ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಧ್ಯಕ್ಷರಾಗಿರುವ ಈ ಎವಿಜಿಸಿ ಉತ್ತೇಜನ ಕಾರ್ಯಪಡೆಯಲ್ಲಿ ಈ ಕೆಳಗಿನ ಸಚಿವಾಲಯಗಳ ಕಾರ್ಯದರ್ಶಿಗಳಿರುತ್ತಾರೆ.
ಎ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
ಬಿ. ಉನ್ನತ ಶಿಕ್ಷಣ ಸಚಿವಾಲಯ
ಸಿ. ಶಿಕ್ಷಣ ಸಚಿವಾಲಯ
ಡಿ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ
ಇ. ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ 
  
 ಇದರಲ್ಲಿ ಕೈಗಾರಿಕಾ ಪಾಲುದಾರರ ವ್ಯಾಪಕ ಪಾಲ್ಗೊಳ್ಳುವಿಕೆ ಇದೆ, ಅವರೆಂದರೆ

ಎ.  ಬಿರೇನ್  ಘೋಷ್, ದೇಶದ ಮುಖ್ಯಸ್ಥ, ಟೆಕ್ನಿಕಲರ್ ಇಂಡಿಯಾ;
ಬಿ. ಆಶಿಶ್ ಕುಲಕರ್ಣಿ, ಸಂಸ್ಥಾಪಕರು, ಪುನರ್ಯುಗ್ ಆರ್ಟ್ವಿಷನ್ ಪ್ರೈ.ಲಿಮಿಟೆಡ್ 
ಸಿ. ಜೆಶ್ ಕೃಷ್ಣ ಮೂರ್ತಿ, ಸಂಸ್ಥಾಪಕ ಮತ್ತು ಸಿಇಒ ಅನಿಬ್ರೈನ್;
ಡಿ. ಕೈತಾನ್ ಯಾದವ್, ಸಿಒಒ ಮತ್ತು ವಿಎಫ್ ಎಕ್ಸ್ ನಿರ್ಮಾಪಕ, ರೆಡ್‌ಚಿಲ್ಲಿಸ್ ವಿಎಫ್ ಎಕ್ಸ್;
 ಇ. ಚೈತನ್ಯ ಚಿಂಚ್ಲಿಕರ್, ಮುಖ್ಯ ತಂತ್ರಜ್ಞಾನ ಅಧಿಕಾರಿ, ವಿಸ್ಲಿಂಗ್ ವುಡ್ಸ್ ಇಂಟರ್ ನ್ಯಾಷನಲ್;
ಎಫ್ . ಕಿಶೋರ್ ಕಿಚಿಲಿ, ಹಿರಿಯ ಉಪಾಧ್ಯಕ್ಷ ಮತ್ತು ದೇಶದ ಮುಖ್ಯಸ್ಥ, ಝಿಂಗಾ ಇಂಡಿಯಾ, 
ಜಿ. ನೀರಜ್ ರಾಯ್, ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ ಟೈನ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ

5.    ಎವಿಜಿಸಿ ಉತ್ತೇಜನ ಕಾರ್ಯಪಡೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯ ಸರ್ಕಾರಗಳೂ ಸಹ ಒಳಗೊಂಡಿವೆ; ಅಲ್ಲದೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ  ಮಂಡಳಿಯ ಮುಖ್ಯಸ್ಥರು, ಎಂಇಎಸ್ ಇ, ಎಫ್ ಐಸಿಸಿಐ ಮತ್ತು ಸಿಐಐ ಮುಂತಾದ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಇರಲಿದ್ದಾರೆ. 

6.    ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಪ್ರಮುಖ ಉದ್ಯಮದ ಪಾಲುದಾರರ ಪಾಲ್ಗೊಳ್ಳುವಿಕೆಯೊಂದಿಗೆ ಎವಿಜಿಸಿ ಉತ್ತೇಜನಾ ಕಾರ್ಯಪಡೆಯ ರಚನೆಯು ಈ ವಲಯದ ಬೆಳವಣಿಗೆಯ ನೀತಿಗಳಿಗೆ ಮಾರ್ಗದರ್ಶನ ಮಾಡಲು ಸಾಂಸ್ಥಿಕ ಪ್ರಯತ್ನಗಳನ್ನು ಚಾಲನೆ ಮಾಡುವ ಮೂಲಕ ಕ್ಷೇತ್ರದ ಬೆಳವಣಿಗೆಗೆ ಸಮಗ್ರ ಒತ್ತು ನೀಡುತ್ತದೆ. ಆ ಮೂಲಕ ಭಾರತದಲ್ಲಿ ಎವಿಜಿಸಿ ಶಿಕ್ಷಣಕ್ಕಾಗಿ ಮಾನದಂಡಗಳನ್ನು ನಿಗದಿಪಡಿಸುವುದು, ಉದ್ಯಮ ಮತ್ತು ಅಂತಾರಾಷ್ಟ್ರೀಯ ಎವಿಜಿಸಿ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಸಹಕರಿಸುವುದು ಮತ್ತು ಎವಿಜಸಿ ಉದ್ಯಮದಲ್ಲಿ ಭಾರತದ ಜಾಗತಿಕ ಸ್ಥಾನವನ್ನು ವೃದ್ಧಿಸುವ ಉದ್ದೇಶವಿದೆ. 


ಕಾರ್ಯಪಡೆಗೆ ನೀಡಲಾಗಿರುವ ನಿಯಮ ಮತ್ತು ನಿಬಂಧನೆಗಳಲ್ಲಿ ಈ ಕೆಳಗಿನವು ಒಳಗೊಂಡಿವೆ 
 (i)    ರಾಷ್ಟ್ರೀಯ ಎವಿಜಿಸಿ ನೀತಿಯನ್ನು ರೂಪಿಸುವುದು
(ii)    ಎವಿಜಿಸಿ ಸಂಬಂಧಿತ ವಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟೋರಲ್ ಕೋರ್ಸ್ ಗಳಿಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಶಿಫಾರಸು ಮಾಡುವುದು
(iii)    ಶೈಕ್ಷಣಿಕ ಸಂಸ್ಥೆಗಳು, ವೃತ್ತಿಪರ ತರಬೇತಿ ಕೇಂದ್ರಗಳು ಮತ್ತು ಕೈಗಾರಿಕೆಗಳ ಸಹಯೋಗದೊಂದಿಗೆ ಕೌಶಲ್ಯ ಉಪಕ್ರಮಗಳ ನೆರವು ನೀಡುವುದು,
(iv)    ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು
(v)    ಭಾರತೀಯ ಎವಿಜಿಸಿ ಉದ್ಯಮದ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸಲು ಉತ್ತೇಜನ ಮತ್ತು ಮಾರುಕಟ್ಟೆ ಅಭಿವೃದ್ಧಿ ಚಟುವಟಿಕೆಗಳಿಗೆ ಸಹಕಾರ ನೀಡುವುದು
(vi)    ಎವಿಜಿಸಿ ವಲಯದಲ್ಲಿ ಎಫ್‌ಡಿಐ ಆಕರ್ಷಿಸಲು ರಫ್ತುಗಳನ್ನು ಹೆಚ್ಚಿಸಲು ಮತ್ತು ಪ್ರೋತ್ಸಾಹಕಗಳನ್ನು ಶಿಫಾರಸು ಮಾಡುವುದು.
 
7.         ಎವಿಜಿಸಿ ಉತ್ತೇಜನಾ ಕಾರ್ಯಪಡೆ 90 ದಿನಗಳೊಳಗೆ ತನ್ನ ಮೊದಲ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕಿದೆ.  

***
 


(Release ID: 1814775) Visitor Counter : 253