ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ ರಾಷ್ಟ್ರೀಯ ಭದ್ರತೆ, ವಿದೇಶ ಬಾಂಧವ್ಯಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡುತ್ತಿದ್ದ 22 ಯೂಟ್ಯೂಬ್ ಚಾನೆಲ್ ಗಳನ್ನು ನಿರ್ಬಂಧಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ
18 ಭಾರತೀಯ ಯೂಟ್ಯೂಬ್ ಸುದ್ದಿ ವಾಹಿನಿಗಳನ್ನು ಐಟಿ ನಿಯಮ, 2021ರಡಿಯಲ್ಲಿ ಮೊದಲ ಬಾರಿಗೆ ನಿರ್ಬಂಧಿಸಲಾಗಿದೆ 4 ಪಾಕಿಸ್ತಾನಿ ಮೂಲದ ಯೂಟ್ಯೂಬ್ ಸುದ್ದಿ ವಾಹಿನಿಗಳಿಗೂ ನಿರ್ಬಂಧ ಈ ಯೂಟ್ಯೂಬ್ ಚಾನೆಲ್ ಗಳು ವೀಕ್ಷಕರನ್ನು ತಪ್ಪುದಾರಿಗೆಳೆಯಲು ಟಿವಿ ಸುದ್ದಿ ವಾಹಿನಿಗಳ ಲೋಗೋ ಮತ್ತು ಸುಳ್ಳು ಕಿರುಚಿತ್ರಗಳನ್ನು ಬಳಸಿವೆ. 3 ಟ್ವಿಟರ್ ಖಾತೆಗಳು, 1 ಫೇಸ್ಬುಕ್ ಖಾತೆ ಮತ್ತು 1 ಸುದ್ದಿ ಅಂತರ್ಜಾಲ ತಾಣವನ್ನು ಸಹ ನಿರ್ಬಂಧಿಸಲಾಗಿದೆ
Posted On:
05 APR 2022 2:18PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯವು, ಐಟಿ ನಿಯಮ, 2021ರ ಅಡಿಯಲ್ಲಿ ತುರ್ತು ಅಧಿಕಾರಗಳನ್ನು ಬಳಸಿಕೊಂಡು, ಇಪ್ಪತ್ತೆರಡು (22) ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್ ಗಳು, ಮೂರು (3) ಟ್ವಿಟರ್ ಖಾತೆಗಳು, ಒಂದು (1) ಫೇಸ್ಬುಕ್ ಖಾತೆ ಮತ್ತು ಒಂದು (1) ಸುದ್ದಿ ಅಂತರ್ಜಾಲ ತಾಣವನ್ನು ನಿರ್ಬಂಧಿಸಿ 04.04.2022 ರಂದು ಆದೇಶ ಹೊರಡಿಸಿದೆ. ನಿರ್ಬಂಧಿಸಲಾದ ಯುಟ್ಯೂಬ್ ಚಾನೆಲ್ ಗಳು ಒಟ್ಟು 260 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದವು, ಮತ್ತು ನಕಲಿ ಸುದ್ದಿಗಳನ್ನು ಹರಡಲು ಮತ್ತು ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಾಂಗ ಬಾಂಧವ್ಯಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯನ್ನು ಸಂಯೋಜಿಸಲು ಬಳಕೆ ಮಾಡುತ್ತಿದ್ದವು.
ಭಾರತೀಯ ಯೂಟ್ಯೂಬ್ ಆಧಾರಿತ ಸುದ್ದಿ ವಾಹಿನಿಗಳ ವಿರುದ್ಧ ಕ್ರಮ
ಕಳೆದ ವರ್ಷದ ಫೆಬ್ರವರಿಯಲ್ಲಿ ಐಟಿ ನಿಯಮಗಳು, 2021 ರ ಅಧಿಸೂಚನೆಯ ನಂತರ ಇದೇ ಮೊದಲ ಬಾರಿಗೆ ಭಾರತೀಯ ಯೂಟ್ಯೂಬ್ ಆಧಾರಿತ ಸುದ್ದಿ ಬಿತ್ತರಿಸುವವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚಿನ ನಿರ್ಬಂಧ ಆದೇಶದ ಮೂಲಕ, ಹದಿನೆಂಟು (18) ಭಾರತೀಯ ಮತ್ತು ನಾಲ್ಕು (4) ಪಾಕಿಸ್ತಾನ ಮೂಲದ ಯೂಟ್ಯೂಬ್ ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಲಾಗಿದೆ.
ವಸ್ತು ವಿಷಯದ ವಿಶ್ಲೇಷಣೆ
ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಮುಂತಾದ ವಿವಿಧ ವಿಷಯಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಬಿತ್ತರಿಸಲು ಮಾಡಲು ಅನೇಕ ಯೂಟ್ಯೂಬ್ ಚಾನೆಲ್ ಗಳನ್ನು ಬಳಸಲಾಗುತ್ತಿತ್ತು. ನಿರ್ಬಂಧಿಸಲು ಆದೇಶಿಸಲಾದ ವಿಷಯವು ಪಾಕಿಸ್ತಾನದಿಂದ ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುವ ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಪೋಸ್ಟ್ ಮಾಡಲಾದ ಕೆಲವು ಭಾರತ ವಿರೋಧಿ ವಿಷಯಗಳನ್ನು ಸಹ ಒಳಗೊಂಡಿದ್ದವು.
ಉಕ್ರೇನ್ ನಲ್ಲಿನ ಪ್ರಸಕ್ತ ಪರಿಸ್ಥಿತಿಗೆ ಸಂಬಂಧಿಸಿದಂತೆ ಈ ಭಾರತೀಯ ಯೂಟ್ಯೂಬ್ ಆಧಾರಿತ ಚಾನೆಲ್ ಗಳು ಗಮನಾರ್ಹ ಪ್ರಮಾಣದ ಸುಳ್ಳು ವಸ್ತುವಿಷಯವನ್ನು ಪ್ರಕಟಿಸಿರುವುದನ್ನು ಗಮನಿಸಲಾಗಿದೆ ಮತ್ತು ಇತರ ದೇಶಗಳೊಂದಿಗಿನ ಭಾರತದ ವಿದೇಶಾಂಗ ಬಾಂಧವ್ಯಗಳನ್ನು ಅಪಾಯಕ್ಕೆ ಸಿಲುಕಿಸುವ ಗುರಿಯನ್ನೂ ಇವು ಹೊಂದಿವೆ.
ಕಾರ್ಯಾಚರಣೆ ವಿಧಾನ
ನಿರ್ಬಂಧಿತ ಭಾರತೀಯ ಯೂಟ್ಯೂಬ್ ಚಾನೆಲ್ ಗಳು ಕೆಲವು ಟಿವಿ ಸುದ್ದಿ ವಾಹಿನಿಗಳ ಟೆಂಪ್ಲೇಟ್ ಗಳು ಮತ್ತು ಲೋಗೋಗಳನ್ನು ಬಳಸುತ್ತಿದ್ದವು, ಸುದ್ದಿಯು ಅಧಿಕೃತವಾಗಿದೆ ಎಂದು ನಂಬುವಂತೆ ವೀಕ್ಷಕರನ್ನು ತಪ್ಪುದಾರಿಗೆಳೆಯಲು ಇದರಲ್ಲಿ ಆ ವಾಹಿನಿಗಳ ಸುದ್ದಿ ನಿರೂಪಕರ ಚಿತ್ರಗಳನ್ನೂ ಸೇರಿಸುತ್ತಿದ್ದವು, ತಪ್ಪು ಕಿರುಚಿತ್ರಗಳನ್ನು ಬಳಸುತ್ತಿದ್ದವು; ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವಸ್ತುವಿಷಯವನ್ನು ವೈರಲ್ ಮಾಡಿ, ವೀಕ್ಷಣೆ ಹೆಚ್ಚಿಸಲು ವೀಡಿಯೊಗಳ ಶೀರ್ಷಿಕೆ ಮತ್ತು ಕಿರುಚಿತ್ರವನ್ನು ಆಗಾಗ್ಗೆ ಬದಲಾಯಿಸಲಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ, ವ್ಯವಸ್ಥಿತ ಭಾರತ ವಿರೋಧಿ ಸುಳ್ಳು ಸುದ್ದಿಗಳು ಪಾಕಿಸ್ತಾನದಿಂದ ಹುಟ್ಟಿಕೊಂಡಿವೆ ಎಂಬುದನ್ನೂ ಗಮನಿಸಲಾಗಿದೆ.
ಈ ಕ್ರಮದೊಂದಿಗೆ, ಡಿಸೆಂಬರ್ 2021 ರಿಂದ, ಸಚಿವಾಲಯವು ರಾಷ್ಟ್ರೀಯ ಭದ್ರತೆ, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಆಧಾರದ ಮೇಲೆ 78 ಯೂಟ್ಯೂಬ್ ಆಧಾರಿತ ಸುದ್ದಿ ವಾಹಿನಿಗಳು ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದಂತಾಗಿದೆ.
ಅಧಿಕೃತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಆನ್ ಲೈನ್ ಸುದ್ದಿ ಮಾಧ್ಯಮ ಪರಿಸರವನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಾಷ್ಟ್ರೀಯ ಭದ್ರತೆ, ವಿದೇಶಾಂಗ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸಲು ಭಾರತ ಸರ್ಕಾರ ಬದ್ಧವಾಗಿದೆ.
ನಿರ್ಬಂಧಿಸಲಾದ ಯೂಟ್ಯೂಬ್ ಚಾನಲ್ ಗಳು,
ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ವೆಬ್ ಸೈಟ್ ವಿವರ
ಕ್ರ.ಸಂ
|
ಯೂಟ್ಯೂಬ್ ಚಾನಲ್ ಹೆಸರು
|
ಮಾಧ್ಯಮ ಅಂಕಿ ಅಂಶಗಳು
|
ಭಾರತೀಯ ಯೂಟ್ಯೂಬ್ ಚಾನೆಲ್ ಗಳು
|
|
1.
|
ಎಆರ್ ಪಿ ನ್ಯೂಸ್
|
ಚಂದಾದಾರರು:
ಒಟ್ಟು ವೀಕ್ಷಣೆಗಳು: 4,40,68,652
|
|
2.
|
ಎ.ಓ.ಪಿ. ನ್ಯೂಸ್
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 74,04,673
|
|
3.
|
ಎಲ್.ಡಿ.ಸಿ. ನ್ಯೂಸ್
|
ಚಂದಾದಾರರು: 4,72,000
ಒಟ್ಟು ವೀಕ್ಷಣೆಗಳು:6,46,96,730
|
|
4.
|
ಸರ್ಕಾರಿ ಬಾಬು
|
ಚಂದಾದಾರರು: 2,44,000
ಒಟ್ಟು ವೀಕ್ಷಣೆಗಳು: 4,40,14,435
|
|
5.
|
ಎಸ್.ಎಸ್. ಜೋನ್ ಹಿಂದಿ
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು:5,28,17,274
|
|
6.
|
ಸ್ಮಾರ್ಟ್ ನ್ಯೂಸ್
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 13,07,34,161
|
|
7.
|
ನ್ಯೂಸ್ 23 ಹಿಂದಿ
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 18,72,35,234
|
|
8.
|
ಆನ್ ಲೈನ್ ಖಬರ್
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 4,16,00,442
|
|
9.
|
ಡಿ.ಪಿ. ನ್ಯೂಸ್
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 11,99,224
|
|
10.
|
ಪಿಕೆಬಿ ನ್ಯೂಸ್
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 2,97,71,721
|
|
11.
|
ಕಿಸಾನ್ ಟಾಕ್
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 36,54,327
|
|
12.
|
ಬೋರಾನಾ ನ್ಯೂಸ್
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 2,46,53,931
|
|
13.
|
ಸರ್ಕಾರಿ ನ್ಯೂಸ್ ಅಪ್ಡೇಟ್
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 2,05,05,161
|
|
14.
|
ಭಾರತ್ ಮೌಸಮ್
|
ಚಂದಾದಾರರು: 2,95,000
ಒಟ್ಟು ವೀಕ್ಷಣೆಗಳು: 7,04,14,480
|
|
15.
|
ಆರ್.ಜೆ. ಜೋನ್ 6
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 12,44,07,625
|
|
16.
|
ಎಕ್ಸಾಮ್ ರಿಪೋರ್ಟ್
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 3,43,72,553
|
|
17.
|
ಡಿಜಿ ಗುರುಕುಲ
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 10,95,22,595
|
|
18.
|
ದಿನ್ ಭರ್ ಕಿ ಖಬರೆ
|
ಚಂದಾದಾರರು: ಎನ್.ಎ.
ಒಟ್ಟು ವೀಕ್ಷಣೆಗಳು: 23,69,305
|
|
ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್ ಗಳು
|
|
19.
|
ದುನಿಯಾ ಮೇರಿ ಆಗೆ
|
ಚಂದಾದಾರರು: 4,28,000
ಒಟ್ಟು ವೀಕ್ಷಣೆಗಳು: 11,29,96,047
|
|
20.
|
ಗುಲಾಮ್ ನಬಿಮದ್ನಿ
|
ಒಟ್ಟು ವೀಕ್ಷಣೆಗಳು: 37,90,109
|
|
21.
|
ಹಕೀಕತ್ ಟಿವಿ
|
ಚಂದಾದಾರರು: 40,90,000
ಒಟ್ಟು ವೀಕ್ಷಣೆಗಳು: 1,46,84,10,797
|
|
22.
|
ಹಕೀಕತ್ ಟಿವಿ 2.0
|
ಚಂದಾದಾರರು: 3,03,000
ಒಟ್ಟು ವೀಕ್ಷಣೆಗಳು: 37,542,059
|
|
|
|
|
|
|
ವೆಬ್ ಸೈಟ್
|
ವೆಬ್ ಸೈಟ್
|
1.
|
ದುನಿಯಾ ಮೇರಿ ಆಗೆ
|
ಟ್ವಿಟರ್ ಖಾತೆಗಳು (ಎಲ್ಲಾ ಪಾಕಿಸ್ತಾನ ಮೂಲ)
ಕ್ರ.ಸಂ
|
ಟ್ವಿಟರ್ ಖಾತೆ
|
ಫಾಲೋ ಮಾಡುವವರ ಸಂಖ್ಯೆ
|
1.
|
ಗುಲಾಮ್ ನಬಿಮದ್ನಿ
|
5,553
|
2
|
ದುನಿಯಾ ಮೇರಿ ಆಗೆ
|
4,063
|
3
|
ಹಕೀಕತ್ ಟಿ.ವಿ.
|
323,800
|
ಫೇಸ್ಬುಕ್ ಖಾತೆ
|
ಫೇಸ್ಬುಕ್ ಖಾತೆ
|
ಫಾಲೋ ಮಾಡುವವರ ಸಂಖ್ಯೆ
|
|
ದುನಿಯಾಮೇರಿಆಗೆ
|
2,416
|
****
ಸೌರಭ್ ಸಿಂಗ್
(Release ID: 1813767)
|