ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪ್ರಸಾರಕರಿಗೆ ಬ್ರಾಡ್‌ಕಾಸ್ಟ್‌ ಸೇವಾ ಪೋರ್ಟಲ್‌ ಪ್ರಾರಂಭಿಸಿದ ಶ್ರೀ ಅನುರಾಗ್‌ ಠಾಕೂರ್‌


ಪರಿಸರ ವ್ಯವಸ್ಥೆಯಲ್ಲಿಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ತರಲು ಪೋರ್ಟಲ್‌: ಶ್ರೀ ಅನುರಾಗ್‌ ಠಾಕೂರ್‌

ಶೀಘ್ರದಲ್ಲೇ ಸರ್ಕಾರದ ಪ್ರಮುಖ ‘ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ’ಗೆ ಲಿಂಕ್‌ ಮಾಡಲಾಗುವುದು: ಶ್ರೀ ಅನುರಾಗ್‌ ಠಾಕೂರ್‌

ಪೋರ್ಟಲ್‌ 900 ಕ್ಕೂ ಹೆಚ್ಚು ಸ್ಯಾಟಲೈಟ್‌ ಟಿವಿ ಚಾನೆಲ್‌ಗಳು, 70 ಕ್ಕೂ ಹೆಚ್ಚು ಟೆಲಿಪೋರ್ಟ್‌ ಆಪರೇಟರ್‌ಗಳು, 1750 ಕ್ಕೂ ಹೆಚ್ಚು ಬಹು-ಸೇವಾ ನಿರ್ವಾಹಕರು, 350 ಕ್ಕೂ ಹೆಚ್ಚು ಸಮುದಾಯ ರೇಡಿಯೊ ಕೇಂದ್ರಗಳು (ಸಿಆರ್‌ಎಸ್‌), 380 ಕ್ಕೂ ಹೆಚ್ಚು ಖಾಸಗಿ ಎಫ್‌ಎಂ ಚಾನೆಲ್‌ಗಳು ಮತ್ತು ಇತರರಿಗೆ 360 ಡಿಗ್ರಿ (ಸಮಗ್ರ) ಪರಿಹಾರವನ್ನು ಒದಗಿಸುತ್ತದೆ.

ಬ್ರಾಡ್‌ಕಾಸ್ಟಿಂಗ್‌ ವಲಯದಲ್ಲಿಸುಲಭವಾಗಿ ವ್ಯವಹರಿಸಲು ಪೋರ್ಟಲ್‌ ಪ್ರಮುಖ ಪ್ರಗತಿಯಾಗಿದೆ

ಪೋರ್ಟಲ್‌ನಲ್ಲಿ‘ಎಂಡ್‌ ಟು ಎಂಡ್‌’ ಸೌಲಭ್ಯದ ಮೂಲಕ ಮೌಸ್‌ನ ಒಂದು ಕ್ಲಿಕ್‌ನಲ್ಲಿಎಲ್ಲರಿಗೂ ಪರಿಹಾರಗಳನ್ನು ಒದಗಿಸಲಾಗುತ್ತದೆ

Posted On: 04 APR 2022 3:38PM by PIB Bengaluru

ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಅವರು, ಇಂದು ನವದೆಹಲಿಯಲ್ಲಿಬ್ರಾಡ್‌ಕಾಸ್ಟ್‌ ಸೇವಾ ಪೋರ್ಟಲ್‌ಗೆ ಚಾಲನೆ ನೀಡಿದರು. ಈ ಮೂಲಕ ಪ್ರಸಾರ ಕ್ಷೇತ್ರದಲ್ಲಿವ್ಯಾಪಾರ ಮಾಡುವ ಸುಲಭತೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು. ಬ್ರಾಡ್‌ಕಾಸ್ಟ್‌ ಸೇವಾ ಪೋರ್ಟಲ್‌ ವಿವಿಧ ರೀತಿಯ ಪರವಾನಗಿಗಳು, ಅನುಮತಿಗಳು, ನೋಂದಣಿಗಳು ಇತ್ಯಾದಿಗಳಿಗಾಗಿ ಪ್ರಸಾರಕರ ಅರ್ಜಿಗಳ ತ್ವರಿತ ಸಲ್ಲಿಕೆ ಮತ್ತು ಪ್ರಕ್ರಿಯೆಗೊಳಿಸಲು ಆನ್‌ಲೈನ್‌ ಪೋರ್ಟಲ್‌ ಪರಿಹಾರವಾಗಿದೆ.
ಈ ಸಂದರ್ಭದಲ್ಲಿಮಾತನಾಡಿದ ಶ್ರೀ ಅನುರಾಗ್‌ ಠಾಕೂರ್‌, ವ್ಯವಸ್ಥೆಯಲ್ಲಿಪಾರದರ್ಶಕತೆಯನ್ನು ತರಲು ಮತ್ತು ಅದನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಸರ್ಕಾರ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಬ್ರಾಡ್‌ಕಾಸ್ಟ್‌ ಸೇವಾ ಪೋರ್ಟಲ್‌ ಅರ್ಜಿಗಳ ವಿಳಂಬತೆಯ  ಸಮಯವನ್ನು ತಗ್ಗಿಸುತ್ತದೆ ಮತ್ತು ಅದೇ ಸಮಯದಲ್ಲಿಅರ್ಜಿದಾರರಿಗೆ ಪ್ರಗತಿಯನ್ನು ಟ್ರ್ಯಾಕ್‌ ಮಾಡಲು ಸಹಾಯ ಮಾಡುತ್ತದೆ. ಈ ಪೋರ್ಟಲ್‌ ಈ ಹಿಂದೆ ಅಗತ್ಯವಿದ್ದ ಮಾನವ ಇಂಟರ್‌ಫೇಸ್‌ (ಒಳಗೊಳ್ಳುವಿಕೆ) ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಸಚಿವಾಲಯದ ಸಾಮರ್ಥ್ಯ‌ವನ್ನು ಹೆಚ್ಚಿಸುವುದು ಮತ್ತು ವ್ಯವಹಾರವನ್ನು ಸುಲಭಗೊಳಿಸುವ ನಿಟ್ಟಿನಲ್ಲಿಇದು ಪ್ರಮುಖ ಹೆಜ್ಜೆಯಾಗಿದೆ ಎಂದರು.

ಶ್ರೀ ಅನುರಾಗ್‌ ಠಾಕೂರ್‌ ಅವರು, 360 ಡಿಗ್ರಿ ಡಿಜಿಟಲ್‌ (ಸಮಗ್ರ) ಪರಿಹಾರವು ಮಧ್ಯಸ್ಥಗಾರರಿಗೆ ಅನುಮತಿಗಳನ್ನು ಪಡೆಯಲು, ನೋಂದಣಿಗೆ ಅರ್ಜಿ ಸಲ್ಲಿಸಲು, ಅರ್ಜಿಗಳ ಪ್ರಗತಿ ಪರಿಶೀಲಿಸಲು, ಶುಲ್ಕವನ್ನು ಲೆಕ್ಕಾಚಾರ ಮಾಡಲು ಮತ್ತು ಪಾವತಿಗಳನ್ನು ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. ಖಾಸಗಿ ಉಪಗ್ರಹ ಟಿವಿ ಚಾನೆಲ್‌ಗಳು, ಟೆಲಿಪೋರ್ಟ್‌ ಆಪರೇಟರ್‌ಗಳು, ಎಂಎಸ್‌ಒಗಳು, ಸಮುದಾಯ ಮತ್ತು ಖಾಸಗಿ ರೇಡಿಯೊ ಚಾನೆಲ್‌ಗಳು ಇತ್ಯಾದಿಗಳಿಗೆ ಎಲ್ಲಾ ಪಾಲುದಾರರಿಗೆ ಡಿಜಿಟಲ್‌ ಇಂಡಿಯಾದ ವ್ಯಾಪಕವಾದ ಪ್ರಯತ್ನಗಳ ಅಡಿಯಲ್ಲಿಈ ಪೋರ್ಟಲ್‌ ತನ್ನ ಸೇವೆಗಳನ್ನು ಒದಗಿಸುತ್ತದೆ.
‘‘ ಕೇವಲ ಒಂದು ಮೌಸ್‌ ಕ್ಲಿಕ್‌ ಮೂಲಕ ಈ ಸರಳ ಮತ್ತು ಬಳಕೆದಾರ ಸ್ನೇಹಿ ವೆಬ್‌ ಪೋರ್ಟಲ್‌ ಪ್ರಸಾರಕರಿಗೆ ಎಲ್ಲರೀತಿಯ ಪರಿಹಾರವನ್ನು ಒದಗಿಸುವುದರಿಂದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ‘ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬ ಮಂತ್ರವನ್ನು ಸಾಕಾರಗೊಳಿಸುವಲ್ಲಿಪೋರ್ಟಲ್‌ ಒಂದು ದೈತ್ಯ ಮುನ್ನಡೆಯಾಗಿದೆ. ಇದು 900 ಕ್ಕೂ ಹೆಚ್ಚು ಸ್ಯಾಟಲೈಟ್‌ ಟಿವಿ ಚಾನೆಲ್‌ಗಳು, 70 ಟೆಲಿಪೋರ್ಟ್‌ ಆಪರೇಟರ್‌ಗಳು, 1700 ಮಲ್ಟಿ-ಸವೀರ್‍ಸ್‌ ಆಪರೇಟರ್‌ಗಳು, 350 ಸಮುದಾಯ ರೇಡಿಯೊ ಸ್ಟೇಷನ್‌ಗಳು (ಸಿಆರ್‌ಸಿ), 380 ಖಾಸಗಿ ಎಫ್‌ಎಂ ಚಾನೆಲ್‌ಗಳು ಮತ್ತು ಇತರರಿಗೆ ನೇರವಾಗಿ ಲಾಭ ನೀಡುವ ಮೂಲಕ ವ್ಯಾಪಾರದ ವಾತಾವರಣವನ್ನು ಹೆಚ್ಚಿಸುತ್ತದೆ ಮತ್ತು ಸಂಪೂರ್ಣ ಪ್ರಸಾರ ವಲಯವನ್ನು ಸಶಕ್ತಗೊಳಿಸುತ್ತದೆ,’’ ಎಂದು ಸಚಿವರು ಹೇಳಿದರು.
ಪೋರ್ಟಲ್‌ನ ಪರೀಕ್ಷಾರ್ಥ ಪ್ರಯೋಗವು ಅಂತಿಮ ಬಳಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಸಚಿವರು ಪ್ರೇಕ್ಷ ಕರಿಗೆ ತಿಳಿಸಿದರು. ಶೀಘ್ರದಲ್ಲೇ ಪೋರ್ಟಲ್‌ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ ಜತೆಯಾಗಲಿದ್ದು, ಉದ್ಯಮವು ಅಗತ್ಯವೆಂದು ಭಾವಿಸಬಹುದಾದ ಹೆಚ್ಚಿನ ಸುಧಾರಣೆಗಳಿಗೆ ಸಚಿವಾಲಯವು ತೆರೆದಿರುತ್ತದೆ.
ಐಬಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ಹೊಸ ಪೋರ್ಟಲ್‌ ಹಿಂದಿನ ಆವೃತ್ತಿಗಿಂತ ಹಲವಾರು ಸುಧಾರಣೆಗಳನ್ನು ಹೊಂದಿದೆ ಮತ್ತು ಒಂದು ತಿಂಗಳ ಪ್ರಾಯೋಗಿಕ ಅವಧಿಯಲ್ಲಿಮಧ್ಯಸ್ಥಗಾರರಿಂದ ಸಲಹೆಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಪೋರ್ಟಲ್‌ ಪರಿಸರ ವ್ಯವಸ್ಥೆಯಲ್ಲಿಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ತರುತ್ತದೆ ಮತ್ತು ಎಲ್ಲಾ ಮಾಹಿತಿಯು ಒಂದೇ ಡ್ಯಾಶ್‌ ಬೋರ್ಡ್‌ನಲ್ಲಿಲಭ್ಯವಿರುತ್ತದೆ. ಪೋರ್ಟಲ್‌ನ ವಿವಿಧ ಸೇವೆಗಳು ಮತ್ತು ವೈಶಿಷ್ಟ್ಯಗಳು ಸೇರಿವೆ:

  • ಅಂತ್ಯದಿಂದ ಅಂತ್ಯದ ಪ್ರಕ್ರಿಯೆ
  • ಪಾವತಿ ವ್ಯವಸ್ಥೆಯೊಂದಿಗೆ ಏಕೀಕರಣ (ಭಾರತ್‌ ಕೋಶ್‌)
  • ಇ-ಆಫೀಸ್‌ ಮತ್ತು ಮಧ್ಯಸ್ಥಗಾರರ ಸಚಿವಾಲಯಗಳೊಂದಿಗೆ ಏಕೀಕರಣ
  • ವಿಶ್ಲೇಷಣೆ, ವರದಿ ಮತ್ತು ನಿರ್ವಹಣೆ ಮಾಹಿತಿ ವ್ಯವಸ್ಥೆ (ಎಂಐಎಸ್‌)
  • ಸಂಯೋಜಿತ ಸಹಾಯವಾಣಿ
  • ಅರ್ಜಿ ನಮೂನೆಗಳು ಮತ್ತು ಸ್ಥಿತಿ ಟ್ರ್ಯಾಕಿಂಗ್‌
  • ಪೋರ್ಟಲ್‌ನಿಂದಲೇ ಪತ್ರಗಳು/ಆರ್ಡರ್‌ಗಳನ್ನು ಡೌನ್ಲೋಡ್‌ ಮಾಡಲಾಗುತ್ತಿದೆ
  • ಮಧ್ಯಸ್ಥಗಾರರಿಗೆ ಎಚ್ಚರಿಕೆಗಳು (ಎಸ್‌ಎಂಎಸ್‌/ಇ-ಮೇಲ್‌ಗಳು)

ಕಾರ್ಯಕ್ರಮದಲ್ಲಿಉಪಸ್ಥಿತರಿರುವ ಪ್ರಸಾರಕರು ಪೋರ್ಟಲ್‌ನ ಪ್ರಾರಂಭವನ್ನು ಸ್ವಾಗತಿಸಿದರು ಮತ್ತು ಇದು ಅರ್ಜಿಗಳ ಪ್ರಕ್ರಿಯೆಗೆ ಹಿಡಿಯುತ್ತಿದ್ದ ಅವಧಿಯನ್ನು ಮತ್ತು ಅಪ್ಲಿಕೇಶನ್‌ ಪ್ರಕ್ರಿಯೆಯಲ್ಲಿಅಗತ್ಯವಿರುವ ಶ್ರಮವನ್ನು ಬಹಳವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಭಾರತದ ವ್ಯಾಪಾರದ ವಾತಾವರಣವನ್ನು ಸುಧಾರಿಸುವುದು ಭಾರತ ಸರ್ಕಾರದ ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳಲ್ಲಿಒಂದಾಗಿದೆ ಮತ್ತು ಬ್ರಾಡ್‌ಕಾಸ್ಟ್‌ ಸೇವಾ ಪೋರ್ಟಲ್‌ ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಪ್ರಸಾರ ವಲಯವನ್ನು ಸಬಲೀಕರಣಗೊಳಿಸಲು ಸರ್ಕಾರದ ಬದ್ಧತೆಯನ್ನು ಉದಾಹರಿಸುತ್ತದೆ ಎಂಬುದನ್ನು ಗಮನಿಸಬಹುದು.

http://davp.nic.in/ebook/bsp/Broadcast_Seva_Portal/index.html
ಬ್ರಾಡ್‌ಕಾಸ್ಟ್‌ ಸೇವಾ ಪೋರ್ಟಲ್‌ನ ಬಿಡುಗಡೆ ಕಾರ್ಯಕ್ರಮ  ಕೆಳಗಿನ ಲಿಂಕ್‌ನಲ್ಲಿಲಭ್ಯವಿದೆ.

***


(Release ID: 1813366) Visitor Counter : 335