ಪ್ರಧಾನ ಮಂತ್ರಿಯವರ ಕಛೇರಿ
ಪರೀಕ್ಷಾ ಯೋಧರಿಗೆ ತಮ್ಮ ಸಲಹೆಯ ವೀಡಿಯೊಗಳನ್ನು ಹಂಚಿಕೊಂಡ ಪ್ರಧಾನಿ
ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರೀಕ್ಷೆಗಳ ವಿವಿಧ ಆಯಾಮಗಳನ್ನು ಒಳಗೊಂಡಿರುವ ಸುಲಭ ಮತ್ತು ಅನುಸರಿಸಬಹುದಾದ ಸಲಹೆಗಳು
ನಾಳೆ ಪ್ರಧಾನಿಯವರು ಪರೀಕ್ಷಾ ಪೆ ಚರ್ಚಾ- 2022 ನಡೆಸಲಿದ್ದಾರೆ
Posted On:
31 MAR 2022 8:07PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ನಡೆಸಲಿರುವ ಪರೀಕ್ಷಾ ಪೆ ಚರ್ಚಾ- 2022 ರ ಮುನ್ನಾದಿನದಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಮ್ಮ ವೀಡಿಯೊ ಸಲಹೆಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೊಗಳು ವಿದ್ಯಾರ್ಥಿ ಜೀವನಕ್ಕೆ ವಿಶೇಷವಾಗಿ ಪರೀಕ್ಷೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ವ್ಯಾಪಕ ಶ್ರೇಣಿಯನ್ನು ಒಳಗೊಂಡಿವೆ. ಇವುಗಳು ಹಲವು ವರ್ಷಗಳ ಪರಿಕ್ಷಾ ಪೆ ಚರ್ಚೆಯ ವಿಶೇಷ ಸಲಹೆಗಳು.
ವೀಡಿಯೊಗಳು ಕೆಳಗಿನಂತಿವೆ:
ನೆನಪಿನ ಶಕ್ತಿ
ವಿದ್ಯಾರ್ಥಿ ಜೀವನದಲ್ಲಿ ತಂತ್ರಜ್ಞಾನದ ಪಾತ್ರ
ಮಕ್ಕಳು ತಮ್ಮ ತಂದೆ-ತಾಯಿಯರ ನನಸಾಗದ ಕನಸುಗಳನ್ನು ನನಸಾಗಿಸಲು ಮಾತ್ರ ಇದ್ದಾರೆಯೇ?
ಖಿನ್ನತೆಯನ್ನು ಎದುರಿಸುವುದು ಹೇಗೆ?
ಖಿನ್ನತೆಯ ಬಗ್ಗೆ ಎಚ್ಚರದಿಂದಿರಿ
ಪರೀಕ್ಷೆಗಳ ಬಗ್ಗೆ ಸರಿಯಾದ ದೃಷ್ಟಿಕೋನ
ಬಿಡುವಿನ ಸಮಯದ ಅತ್ಯುತ್ತಮ ಬಳಕೆ
ಯಾರೊಂದಿಗೆ ಸ್ಪರ್ಧಿಸಬೇಕು
ಏಕಾಗ್ರತೆಯನ್ನು ಸುಧಾರಿಸುವುದು ಹೇಗೆ?
ಗಮನ ಕೇಂದ್ರೀಕರಿಸಲು ಡಿ-ಫೋಕಸ್
ಗುರಿಗಳನ್ನು ಹೊಂದುವುದು ಮತ್ತು ಅವುಗಳನ್ನು ಸಾಧಿಸುವುದು
ಶೈಕ್ಷಣಿಕ ಹೋಲಿಕೆ ಮತ್ತು ಸಾಮಾಜಿಕ ಪರಿಸ್ಥಿತಿ
ಸೂಕ್ತ ವೃತ್ತಿಯ ಆಯ್ಕೆ
ಅಂಕಪಟ್ಟಿ ಎಷ್ಟು ಮುಖ್ಯ?
ಕಷ್ಟಕರ ವಿಷಯಗಳನ್ನು ನಿಭಾಯಿಸುವುದು ಹೇಗೆ?
ಪೀಳಿಗೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಹೇಗೆ?
ಸಮಯ ನಿರ್ವಹಣೆಯ ಗುಟ್ಟುಗಳು
ಪರೀಕ್ಷಾ ಕೊಠಡಿಯ ಒಳಗೆ ಮತ್ತು ಹೊರಗೆ ಆತ್ಮ ವಿಶ್ವಾಸ
ಸವಾಲುಗಳನ್ನು ಎದುರಿಸಿ ಮತ್ತು ನಿಮ್ಮನ್ನು ವಿಶೇಷವಾಗಿಸಿಕೊಳ್ಳಿ
ಮಾದರಿ ವ್ಯಕ್ತಿಯಾಗಿ
***
(Release ID: 1812150)
Visitor Counter : 197
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam