ಪ್ರಧಾನ ಮಂತ್ರಿಯವರ ಕಛೇರಿ

ಶ್ರೀಹರಿಚಂದ್ ಠಾಕೂರ್ ಜಿ ಅವರ 211ನೇ ಜಯಂತಿ ಅಂಗವಾಗಿ ಪಶ್ಚಿಮ ಬಂಗಾಳದ ಠಾಕೂರ್ ಬರಿಯ ಶ್ರೀಧಾಮ್ ಠಾಕೂರ್ ನಗರದಲ್ಲಿ ಮತುವಾ ಧರ್ಮ ಮಹಾಮೇಳ 2022 ಉದ್ದೇಶಿಸಿ ಮಾತನಾಡಿದ ಪ್ರಧಾನಿ 


“ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ತಮ್ಮ ಪುತ್ರರೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ನೋಡಿದಾಗ, ಶ್ರೀ ಹರಿಚಂದ್ ಠಾಕೂರ್ ಜಿ ಅವರಂತಹ ಶ್ರೇಷ್ಠ ಗಣ್ಯ ವ್ಯಕ್ತಿಗಳಿಗೆ ನಿಜವಾದ ಗೌರವದಂತೆ ಭಾಸವಾಗುತ್ತದೆ’’ 

“ಸರ್ಕಾರವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ , ಸಬ್ ಕಾ ವಿಶ್ವಾಸ್ ಆಧಾರದ ಮೇಲೆ ಸರ್ಕಾರದ ಯೋಜನೆಗಳನ್ನು ಜನರಿಗೆ ಕೊಂಡೊಯ್ಯುತ್ತಿದ್ದಾಗ ಮತ್ತು ರಾಷ್ಟ್ರದ  ಅಭಿವೃದ್ಧಿಗೆ ಸಬ್ ಕಾ  ಪ್ರಯಾಸ್ ಸೇರ್ಪಡೆಯಾದಾಗ ನಾವು ಎಲ್ಲರನ್ನೂ ಒಳಗೊಂಡ ಸಮಾಜವನ್ನು ನಿರ್ಮಿಸುವತ್ತ ಸಾಗುತ್ತೇವೆ’’ 

“ನಮ್ಮ ಸಂವಿಧಾನ ನಮಗೆ ಹಲವು ಹಕ್ಕುಗಳನ್ನು ನೀಡಿದೆ. ನಾವು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಮಾತ್ರ ನಾವು ಆ ಹಕ್ಕುಗಳನ್ನು ರಕ್ಷಿಸಬಹುದು’’ 

“ಯಾರಾದರೂ ಎಲ್ಲಿಯಾದರೂ ದೌರ್ಜನ್ಯಕ್ಕೆ ಒಳಗಾದರೆ, ಖಂಡಿತಾ ಆಗ ನೀವು ಧ್ವನಿ ಎತ್ತಿ. ಇದು ಸಮಾಜದ ಕಡೆಗೆ ಮತ್ತು ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯವಾಗಿದೆ’’ 

“ಕೇವಲ ರಾಜಕೀಯ ವಿರೋಧದ ಕಾರಣದಿಂದ ಯಾರಾದರೂ ಹಿಂಸಾಚಾರದ ಮೂಲಕ ಹೆದರಿಸಿದರೆ ಅದು ಇತರೆಯವರ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಸಮಾಜದಲ್ಲಿ ಎಲ್ಲೆ ಹಿಂಸಾಚಾರ, ಅರಾಜಕತೆ ಇದ್ದರೆ ಅದನ್ನು ವಿರೋಧಿಸುವುದು ನಮ್ಮೆಲ್ಲರ ಕರ್ತವ್ಯ’’ 

Posted On: 29 MAR 2022 10:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಹರಿಚಂದ್ ಠಾಕೂರ್ ಜಿ ಅವರ 211ನೇ ಜಯಂತಿ ಅಂಗವಾಗಿ ಪಶ್ಚಿಮ ಬಂಗಾಳದ ಠಾಕೂರ್‌ನಗರದ ಶ್ರೀಧಾಮ್  ಠಾಕೂರ್‌ ನಗರದಲ್ಲಿ ಮತುವಾ ಧರ್ಮ ಮಹಾಮೇಳ 2022 ಅನ್ನು ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. 
2021ರ ಮಾರ್ಚ್ ನಲ್ಲಿ ಮತ್ತು 2019ರ ಫೆಬ್ರವರಿಯಲ್ಲೂ ಸಹ  ಬಾಂಗ್ಲಾದೇಶದ ಒರಕಂಡಿ ಠಾಕೂರ್ ಬರಿಯಲ್ಲಿ ಠಾಕೂರ್‌ ನಗರಕ್ಕೆ ಭೇಟಿ ನೀಡುವ ಅವಕಾಶ ದೊರೆತಾಗ ತಮಗೆ ನಮನ ಸಲ್ಲಿಸಲು ಸಾಧ್ಯವಾಗಿದ್ದಕ್ಕೆ ಆದ ಸಂತೋಷವನ್ನು ಪ್ರಧಾನಮಂತ್ರಿ ಸ್ಮರಿಸಿಕೊಂಡರು. 
ಮತುವಾ ಧರ್ಮ ಮಹಾಮೇಳಕ್ಕೆ ಶ್ರೀ ಹರಿಚಂದ್ ಠಾಕೂರ್ ಜಿ ಅವರು ಅಡಿಪಾಯ ಹಾಕಿದರು ಮತ್ತು ಗುರುಚಂದ್ ಠಾಕೂರ್ ಜಿ ಮತ್ತು ಬೋರೋ ಮಾ ಅವರು ಮತ್ತಷ್ಟು ಪೋಷಿಸಿದ ಮತುವಾ ಸಂಪ್ರದಾಯಕ್ಕೆ ತಲೆಬಾಗುವ ಸಂದರ್ಭವಾಗಿದೆ ಎಂದು ಪ್ರಧಾನಮಂತ್ರಿ ಅವರು ಬಲವಾಗಿ ಪ್ರತಿಪಾದಿಸಿದರು. ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಶಂತನು ಠಾಕೂರ್ ಅವರು ಈ ಮಹಾನ್ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ಕೊಡುಗೆ ನೀಡುತ್ತಿರುವುದಕ್ಕಾಗಿ ಅವರ ಕಾರ್ಯವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. 
ಈ ಮಹಾಮೇಳವನ್ನು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಪ್ರತಿಬಿಂಬ ಎಂದು ಶ್ರೀ ನರೇಂದ್ರ ಮೋದಿ ಬಣ್ಣಿಸಿದರು. ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯು ಅದರ ನಿರಂತರ ಹರಿವು ಮತ್ತು ಮುಂದುವರಿಕೆಯಿಂದ ಶ್ರೇಷ್ಠವಾಗಿದೆ ಮತ್ತು ಸ್ವಯಂ-ಪುನರುತ್ಪಾದಿಸುವ ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮತುವ ಸಮುದಾಯದ ಮುಖಂಡರ ಸಾಮಾಜಿಕ ಕಾರ್ಯಗಳನ್ನು ಉಲ್ಲೇಖಿಸಿದ ಪ್ರಧಾನಿ ಅವರು, ದೇಶದ ಹೆಣ್ಣು ಮಕ್ಕಳಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಆತ್ಮಸ್ಥೈರ್ಯವನ್ನು ಒದಗಿಸುವ ನವಭಾರತದ ಪ್ರಯತ್ನದ ಕುರಿತು ಮಾತನಾಡಿದರು. ಸಮಾಜದ ಪ್ರತಿಯೊಂದು ವಲಯದಲ್ಲೂ ನಮ್ಮ ಸೋದರಿಯರು ಮತ್ತು ಹೆಣ್ಣು ಮಕ್ಕಳು ತಮ್ಮ ಪುತ್ರರೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ನಾವು ನೋಡಿದಾಗ, ಶ್ರೀ ಶ್ರೀ ಹರಿಚಂದ್ ಠಾಕೂರ್ ಜಿ ಅವರಂತಹ ಗಣ್ಯ ವ್ಯಕ್ತಿಗಳಿಗೆ ಇದು ನಿಜವಾದ ಗೌರವದಂತೆ ಭಾಸವಾಗುತ್ತದೆ’’ ಎಂದು ಪ್ರಧಾನಮಂತ್ರಿ ಹೇಳಿದರು. 
“ಸರ್ಕಾರವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್  ಆಧಾರದ ಮೇಲೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿರುವಾಗ ಮತ್ತು ಸಬ್ ಕಾ ಪ್ರಯಾಸ್ ನಿಂದ ರಾಷ್ಟ್ರದ ಅಭಿವೃದ್ಧಿಯತ್ತ ಕೊಂಡೊಯ್ಯುವಾಗ  ನಾವು ಎಲ್ಲರನ್ನೂ ಒಳಗೊಂಡ ಸಮಾಜವನ್ನು ನಿರ್ಮಿಸುವತ್ತ ಸಾಗುತ್ತೇವೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀ ಹರಿಚಂದ್ ಠಾಕೂರ್ ಜಿ ಅವರು ದೈವಿಕ ಪ್ರೀತಿಯ ಜೊತೆಗೆ ಕರ್ತವ್ಯಕ್ಕೆ ಒತ್ತು ನೀಡಿದ್ದನ್ನು ಸ್ಮರಿಸಿದ ಪ್ರಧಾನ ಮಂತ್ರಿ ಅವರು ನಾಗರಿಕ ಜೀವನದಲ್ಲಿ ಕರ್ತವ್ಯಗಳ ಪಾತ್ರಗಳ ಕುರಿತು ಒತ್ತಿ ಹೇಳಿದರು. “ನಾವು ಈ ಕರ್ತವ್ಯದ ಪ್ರಜ್ಞೆಯನ್ನು ರಾಷ್ಟ್ರದ ಅಭಿವೃದ್ಧಿಗೆ ಆಧಾರವನ್ನಾಗಿ ಮಾಡಿಕೊಳ್ಳಬೇಕು. ನಮ್ಮ ಸಂವಿಧಾನವು ನಮಗೆ ಅನೇಕ ಹಕ್ಕುಗಳನ್ನು ನೀಡಿದೆ. ನಾವು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ನಾವು ಆ ಹಕ್ಕುಗಳನ್ನು ರಕ್ಷಿಸಲು ಸಾಧ್ಯ’’ಎಂದು ಪ್ರಧಾನಮಂತ್ರಿ ಹೇಳಿದರು. 
ಸಮಾಜದ ಪ್ರತಿಯೊಂದು ಹಂತದಲ್ಲಿರುವ ಭ್ರಷ್ಟಾಚಾರವನ್ನು ನಿರ್ಮೂಲ ಮಾಡಲು ಜಾಗೃತಿ ಮೂಡಿಸುವಂತೆ ಪ್ರಧಾನಮಂತ್ರಿ ಮತುವಾ ಸಮುದಾಯಕ್ಕೆ ಕರೆ ನೀಡಿದರು. “ಯಾರಾದರೂ ಎಲ್ಲಾದರೂ ದೌರ್ಜನ್ಯಕ್ಕೆ ಒಳಗಾಗಿದ್ದರೆ, ಖಂಡಿತವಾಗಿಯೂ ಅಲ್ಲಿ ನಿಮ್ಮ ಧ್ವನಿ ಎತ್ತಬೇಕು. ಇದು ಸಮಾಜದ ಕಡೆಗೆ ಮತ್ತು ರಾಷ್ಟ್ರದ ಕಡೆಗೆ ನಮ್ಮ ಆದ್ಯ ಕರ್ತವ್ಯವಾಗಿದೆ’’ ಎಂದು ಪ್ರಧಾನಮಂತ್ರಿ  ಹೇಳಿದರು. ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ನಮ್ಮ ಪ್ರಜಾಸತ್ತಾತ್ಮಕ ಹಕ್ಕು ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ರಾಜಕೀಯ ವಿರೋಧದ ಕಾರಣದಿಂದ ಯಾರಾದರೂ ಯಾರನ್ನಾದರೂ ಹಿಂಸಾಚಾರದ ಮೂಲಕ ಬೆದರಿಸಿದರೆ ಅದು ಇತರರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಹಿಂಸಾಚಾರ, ಅರಾಜಕತೆಯ ಮನಸ್ಥಿತಿ ಸಮಾಜದಲ್ಲಿ ಎಲ್ಲೆ ಕಂಡರೂ ಅದನ್ನು ವಿರೋಧಿಸುವುದು  ನಮ್ಮ ಕರ್ತವ್ಯವಾಗಿದೆ’’ ಎಂದು ಹೇಳಿದರು. 
ಪ್ರಧಾನಮಂತ್ರಿ ಅವರು ಸ್ವಚ್ಛತೆ, ವೋಕಲ್ ಫಾರ್ ಲೋಕಲ್ (ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ) ಮತ್ತು ರಾಷ್ಟ್ರ ಮೊದಲು ಮಂತ್ರಗಳನ್ನು ಅಳವಡಿಸಿಕೊಳ್ಳುವ ಕರೆಯನ್ನು ಪುನರುಚ್ಚರಿಸಿದರು.  

*****



(Release ID: 1811248) Visitor Counter : 173