ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಳೆದ ತಿಂಗಳ ಮನ್ ಕಿ ಬಾತ್ ಸಂಚಿಕೆಯ ಆಸಕ್ತಿದಾಯಕ ಅಂಶಗಳನ್ನು ಪ್ರದರ್ಶಿಸುವ ಕಿರುಪುಸ್ತಕವನ್ನು ಪ್ರಧಾನಮಂತ್ರಿ ಹಂಚಿಕೊಂಡಿದ್ದಾರೆ

ಪ್ರಕಟಣಾ ದಿನಾಂಕ: 25 MAR 2022 12:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ ತಿಂಗಳ #MannKiBaat ಸಂಚಿಕೆಯ ಆಸಕ್ತಿದಾಯಕ ಅಂಶಗಳನ್ನು ಪ್ರದರ್ಶಿಸುವ ಕಿರುಪುಸ್ತಕವನ್ನು ಹಂಚಿಕೊಂಡಿದ್ದಾರೆ. ಕಳೆದ ತಿಂಗಳ ಮನ್ ಕಿ ಬಾತ್ ಸಂಚಿಕೆಯಲ್ಲಿ ಕಾಣಿಸಿಕೊಂಡವರ ಸಂದರ್ಶನಗಳನ್ನು ಕಿರುಪುಸ್ತಕ ಹೊಂದಿದೆ. ಈ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮವನ್ನು 2022 ರ ಮಾರ್ಚ್ 27 ರಂದು ಬೆಳಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಮಂತ್ರಿ;

"ಕಳೆದ ತಿಂಗಳ #MannKiBaat ಸಂಚಿಕೆಯಲ್ಲಿ ಕಾಣಿಸಿಕೊಂಡ ಕೆಲವು ಸಂದರ್ಶನಗಳನ್ನು ಒಳಗೊಂಡಂತೆ ಆಸಕ್ತಿದಾಯಕ ಅಂಶಗಳನ್ನು ಪ್ರದರ್ಶಿಸುವ ಸಂಕ್ಷಿಪ್ತ ಕಿರುಪುಸ್ತಕ ಇಲ್ಲಿದೆ.

27 ರಂದು ಬೆಳಗ್ಗೆ 11 ಗಂಟೆಗೆ ನೀವು ಈ ತಿಂಗಳ ಕಾರ್ಯಕ್ರಮಕ್ಕೆ ಸೇರಲು ಎದುರು ನೋಡುತ್ತಿದ್ದೇನೆ." http://davp.nic.in/ebook/mib/mannkibaat/index.html

***

 


(ಪ್ರಕಟಣೆ ಐ.ಡಿ.: 1809647) ವಿಸಿಟರ್ ಕೌಂಟರ್ : 182