ಪ್ರಧಾನ ಮಂತ್ರಿಯವರ ಕಛೇರಿ
“ಗತಿಶಕ್ತಿ” ದೃಷ್ಟಿಕೋನ ಕುರಿತ ಬಜೆಟ್ ನಂತರದ ವೆಬಿನಾರ್ ನಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
28 FEB 2022 12:04PM by PIB Bengaluru
ನಮಸ್ಕಾರ!
ಈ ವರ್ಷದ ಬಜೆಟ್ 21 ನೇ ಶತಮಾನದ ಭಾರತದ ಅಭಿವೃದ್ದಿಯ ವೇಗವನ್ನು ನಿರ್ಧರಿಸುತ್ತದೆ. ಈ ನಿಟ್ಟಿನಲ್ಲಿ “ಮೂಲ ಸೌಕರ್ಯ ಆಧಾರಿತ ಅಭಿವೃದ್ಧಿ”ಯ ನಿರ್ದೇಶನ ನಮ್ಮ ಆರ್ಥಿಕ ಸಾಮರ್ಥ್ಯವನ್ನು ಅಸಾಧಾರಣವಾಗಿ ಹೆಚ್ಚಿಸುತ್ತದೆ. ಇದರಿಂದ ದೇಶದಲ್ಲಿ ಹಲವಾರು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಸ್ನೇಹಿತರೇ
ಸಾಂಪ್ರದಾಯಿಕವಾಗಿ ಭಾರತದ ಅನುಭವದಂತೆ ಅಗತ್ಯ ಬಿದ್ದಾಗ ಮಾತ್ರ ಮೂಲ ಸೌಕರ್ಯವನ್ನು ನಿರ್ಮಿಸಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಹಂತ ಹಂತವಾಗಿ ಸೌಕರ್ಯ ಕಲ್ಪಿಸಲಾಗುತ್ತಿತ್ತು. ಇದರ ಫಲವಾಗಿ ಕೇಂದ್ರ, ರಾಜ್ಯಗಳು, ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ವಲಯದ ನಡುವೆ ಸಮನ್ವಯದ ಕೊರತೆಯಿಂದ ದೇಶ ಸಾಕಷ್ಟು ನಷ್ಟ ಅನುಭವಿಸಿದೆ. ಉದಾಹರಣೆಗೆ ರೈಲು ಅಥವಾ ರಸ್ತೆ ಯೋಜನೆಗಳಲ್ಲಿ ಸಾಮಾನ್ಯವಾಗಿ ನಾವು ಸಂಘರ್ಷ ಮತ್ತು ಸಮನ್ವಯದ ಕೊರತೆಯನ್ನು ನೋಡುತ್ತೇವೆ. ಆಗಾಗ್ಗೆ ಎಲ್ಲೋ ರಸ್ತೆಗಳನ್ನು ನಿರ್ಮಿಸಲಾಯಿತು ಮತ್ತು ಅದನ್ನು ಮರುದಿನ ನೀರಿನ ಪೈಪ್ ಹಾಕಲು ಅಗೆಯಲಾಗುತ್ತದೆ. ರಸ್ತೆಯನ್ನು ಮತ್ತೆ ನಿರ್ಮಿಸಿದಾಗ ಒಳಚರಂಡಿ ವಿಭಾಗದ ಸಿಬ್ಬಂದಿ ಮತ್ತೆ ಅಗೆಯುತ್ತಾರೆ. ಇದು ಆಗುತ್ತದೆ, ಏಕೆಂದರೆ ವಿವಿಧ ಇಲಾಖೆಗಳ ನಡುವೆ ಸ್ಪಷ್ಟವಾದ ಮಾಹಿತಿ ಹಂಚಿಕೆ ಇಲ್ಲವಾದ ಕಾರಣ. ಈಗ ಪಿಎಂ ಗತಿಶಕ್ತಿ [ಯೋಜನೆ] ಯಿಂದಾಗಿ ಮುಂದಾಗಿಯೇ ಸಂಪೂರ್ಣ ಮಾಹಿತಿ ನೀಡಿ ಪ್ರತಿಯೊಬ್ಬರೂ ಸೂಕ್ತ ಯೋಜನೆ ರೂಪಿಸಲು ಸಾಧ್ಯವಾಗಿದೆ. ಇದು ದೇಶದ ಸಂಪನ್ಮೂಲಗಳ ಅತ್ಯುತ್ತಮ ಬಳಕೆಗೆ ಕಾರಣವಾಗುತ್ತದೆ.
ಸ್ನೇಹಿತರೇ
ಸರ್ಕಾರ ಈಗ ಮಾಡುತ್ತಿರುವ ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡರೆ ಪಿಎಂ ಗತಿಶಕ್ತಿ ಯೋಜನೆ ಅತ್ಯಂತ ಮಹತ್ವದ್ದಾಗಿದೆ. 2013 – 14 ರಲ್ಲಿ ಭಾರತದ ಬಂಡವಾಳ ವೆಚ್ಚ 1.75 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಇದು 2022 – 23 ರ ವೇಳೆಗೆ ನಾಲ್ಕುಪಟ್ಟು ಅಂದರೆ 7.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅದು ರಾಷ್ಟ್ರೀಯ ಹೆದ್ದಾರಿಯೇ ಇರಬಹುದು, ರೈಲ್ವೆ, ವಾಯುಮಾರ್ಗ, ಜಲ ಮಾರ್ಗ, ಆಪ್ಟಿಕಲ್ ಫೈಬರ್ ಸಂಪರ್ಕ, ಅನಿಲ ಗ್ರಿಡ್ ಅಥವಾ ನವೀಕೃತ ಇಂಧನ ವಲಯ ಸೇರಿ ಸರ್ಕಾರ ಪ್ರತಿಯೊಂದು ವಲಯದಲ್ಲಿಯೂ ಹೂಡಿಕೆಯನ್ನು ಹೆಚ್ಚಿಸಿದೆ. ನಮ್ಮ ಸರ್ಕಾರ ಈ ಕ್ಷೇತ್ರಗಳಲ್ಲಿ ಬಹಳ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದೆ. ಮೂಲ ಸೌಕರ್ಯ ಯೋಜನೆ, ಅನುಷ್ಠಾನ ಮತ್ತು ಸಮನ್ವಯದೊಂದಿಗೆ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗು ಪಿಎಂ ಗತಿಶಕ್ತಿ ಕಾರ್ಯಕ್ರಮದ ಮೂಲಕ ಹೊಸ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಇದು ಯೋಜನೆಯ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ.
ಸ್ನೇಹಿತರೇ
ನಿಮಗೆ ತಿಳಿದಿರುವಂತೆ ಮೂಲಸೌಕರ್ಯ ದೊಡ್ಡ ಗುಣಾತ್ಮಕ ಪರಿಣಾಮ ಬೀರುತ್ತದೆ. ಸುಗಮ ಜೀವನವಷ್ಟೇ ಅಲ್ಲದೇ ವ್ಯಾಪಾರವನ್ನು ಸಹ ಸುಗಮಗೊಳಿಸುತ್ತದೆ. ಇದು ಎಲ್ಲಾ ವಲಯಗಳಲ್ಲಿ ಆರ್ಥಿಕ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ದೇಶದಲ್ಲಿ ಹಿಂದೆಂದೂ ಕಂಡರಿಯದಂತೆ ಮೂಲ ಸೌಕರ್ಯ ವಲಯದ ಅಭ್ಯುದಯಕ್ಕೆ ವೇಗ ನೀಡುತ್ತಿದ್ದು, ಇದರಿಂದ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಜನೆಗೂ ಕಾರಣವಾಗುತ್ತದೆ.
ಸ್ನೇಹಿತರೇ
ಸಹಕಾರ ಒಕ್ಕೂಟದ ಸಿದ್ಧಾಂತಗಳನ್ನು ಬಲಗೊಳಿಸಲು ನಮ್ಮ ಸರ್ಕಾರ ಈ ವರ್ಷ ಬಜೆಟ್ ನಲ್ಲಿ ರಾಜ್ಯಗಳಿಗೆ ಒಂದು ಲಕ್ಷ ಕೋಟಿ ರೂಪಾಯಿ ನೆರವು ನಿಗದಿ ಮಾಡಿದೆ. ರಾಜ್ಯ ಸರ್ಕಾರಗಳು ಈ ಮೊತ್ತವನ್ನು ಬಹುಮಾದರಿಯ ಮೂಲ ಸೌಕರ್ಯ ಮತ್ತು ಇತರೆ ಉತ್ಪಾದನಾ ಆಸ್ತಿಗಳ ಮೇಲೆ ಬಳಸಲು ಸಾಧ್ಯವಾಗುತ್ತದೆ. ದೇಶದ ದುರ್ಗಮ, ಗುಡ್ಡಗಾಡು ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸಲು ರಾಷ್ಟ್ರೀಯ ರೋಪ್ ವೇ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ಈಶಾನ್ಯ ಭಾಗದಲ್ಲಿ ನಮ್ಮ ಸರ್ಕಾರ ಸಮತೋಲಿತ ಅಭಿವೃದ್ಧಿಗೆ ಬದ್ಧವಾಗಿದೆ. ಈ ರಾಜ್ಯಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು 1500 ಕೋಟಿ ರೂಪಾಯಿ ವೆಚ್ಚದಲ್ಲಿ ಪಿಎಂ-ಡಿವೈನ್ ಯೋಜನೆಯನ್ನು ಸಹ ಘೋಷಿಸಲಾಗಿದೆ. ಮೂಲಸೌಕರ್ಯ ವಲಯಕ್ಕೆ ಸರ್ಕಾರ ಹೂಡಿಕೆ ಮಾಡುತ್ತಿದ್ದು, ಇದರ ಜತೆ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹ ಯೋಜನೆಗಳಿಂದ ಬರುವ ವರ್ಷಗಳಲ್ಲಿ ದೇಶದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳು ಮೂಲ ಸೌಕರ್ಯ ಸೃಷ್ಟಿಯ ಈ ಹೊಸ ಯುಗದಲ್ಲಿ ನಿಮಗೆ ಹೊಸ ಆರ್ಥಿಕ ಸಾಧ್ಯತೆಗಳ ಬಾಗಿಲು ತೆರೆಯುತ್ತವೆ. ದೇಶದ ಕಾರ್ಪೋರೇಟ್ ಜಗತ್ತು ಮತ್ತು ಖಾಸಗಿ ವಲಯ ಹಂತ ಹಂತವಾಗಿ ದೇಶದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಬೇಕು ಮತ್ತು ದೇಶದ ಬೆಳವಣಿಗೆಗೆ ಹೆಮ್ಮೆಯ ಕೊಡುಗೆ ನೀಡಬೇಕು.
ಸ್ನೇಹಿತರೇ
ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್ ನಲ್ಲಿ ಈಗ 400 ಕ್ಕೂ ಹೆಚ್ಚು ದತ್ತಾಂಶ ಪದರಗಳು ಲಭ್ಯವಿವೆ ಎಂಬುದನ್ನು ನೀವು ತಿಳಿದಿರಲೇಬೇಕು. ಇದು ಹಾಲಿ ಮತ್ತು ಯೋಜಿತ ಮೂಲ ಸೌಕರ್ಯ ಕುರಿತಷ್ಟೇ ಮಾಹಿತಿ ಒದಗಿಸುವುದಿಲ್ಲ, ಇದು ಅರಣ್ಯ ಭೂಮಿ, ಕೈಗಾರಿಕೆ, ಇತರೆ ವರ್ಗದ ಭೂಮಿಯೇ ಎನ್ನುವ ಕುರಿತು ಮಾಹಿತಿ ನೀಡುತ್ತದೆ. ತಮ್ಮ ಯೋಜನೆಗಳನ್ನು ರೂಪಿಸುವಾಗ ಈ ಸೌಲಭ್ಯವನ್ನು ಖಾಸಗಿ ವಲಯ ಸಾಧ್ಯವಾದಷ್ಟು ಮಟ್ಟಿಗೆ ಬಳಸಿಕೊಳ್ಳಬೇಕು. ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನಲ್ಲಿ ಒಂದೇ ವೇದಿಕೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಲಾಗುತ್ತಿದ್ದು, ಡಿಪಿಆರ್ ಹಂತದಲ್ಲಿಯೇ ಯೋಜನೆಯ ಜೋಡಣೆ ಮತ್ತು ವಿವಿಧ ರೀತಿಯ ಅನುಮತಿಗಳನ್ನು ಪಡೆಯಲು ಸಾಧ್ಯವಾಗಿಸುತ್ತದೆ. ಇದು ನಿಮ್ಮ ಅನುಸರಣೆಯ ಹೊರೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅನ್ನು ತಮ್ಮ ಯೋಜನೆಗಳು ಮತ್ತು ಆರ್ಥಿಕ ವಲಯಗಳನ್ನು ಸ್ಥಾಪಿಸಲು ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇನೆ.
ಸ್ನೇಹಿತರೇ
ಈಗಲೂ ಸಹ ಭಾರತದ ಸಾಗಣೆ ವೆಚ್ಚ ಜಿಡಿಪಿಯ ಶೇ 13 ರಿಂದ 14 ರಷ್ಟಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಇದು ಹೆಚ್ಚು. ಪಿಎಂ ಗತಿಶಕ್ತಿ ಮೂಲಸೌಕರ್ಯ ವಲಯದ ದಕ್ಷತೆಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಶದಲ್ಲಿ ಸಾಗಣೆ ವೆಚ್ಚ ಕಡಿಮೆ ಮಾಡಲು ಯೂನಿಫೈಡ್ ಲಾಜಿಸ್ಟಿಕ್ ಇಂಟರ್ಫೇಸ್ ಪ್ಲಾಟ್ ಫಾರ್ಮ್ [ಯು.ಎಲ್.ಐ.ಪಿ] ಅನ್ನು ರಚಿಸಲು ಈ ವರ್ಷದ ಬಜೆಟ್ ನಲ್ಲಿ ನಿಬಂಧನೆಗಳನ್ನು ಮಾಡಲಾಗಿದೆ. ಪ್ರಸ್ತುತ ವಿವಿಧ ಸಚಿವಾಲಯಗಳ ಡಿಜಿಟಲ್ ವ್ಯವಸ್ಥೆಗಳು, ಅವುಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನೀವು ತಿಳಿದಿರಲೇಬೇಕು. ಯು.ಎಲ್.ಐ.ಪಿ ಮೂಲಕ ಆರು ಸಚಿವಾಲಯಗಳ 24 ಡಿಜಿಟಲ್ ವ್ಯವಸ್ಥೆಗಳನ್ನು ಸಂಯೋಜಿಸಲಾಗಿದೆ. ಇದರಿಂದ ನ್ಯಾಷನಲ್ ಸಿಂಗಲ್ ವಿಂಡೋ ಲಾಜಿಸ್ಟಿಕ್ಸ್ ಪೋರ್ಟಲ್ ಅನ್ನು ಸ್ಥಾಪಿಸಲಿದ್ದು, ಇದರಿಂದ ಸಾಗಣೆ ವೆಚ್ಚ ಕಡಿಮೆಯಾಗಲಿದೆ. ಪಿಎಂ ಗತಿ-ಶಕ್ತಿ ಕಾರ್ಯಕ್ರಮ ನಮ್ಮ ರಫ್ತು ಚಟುವಟಿಕೆ ಹೆಚ್ಚಿಸುವ ಮತ್ತು ನಮ್ಮ ಎಂ.ಎಸ್.ಎಂ.ಇ ಗಳು ಜಾಗತಿಕ ಸ್ಪರ್ಧಾತ್ಮಕವಾಗಿಸಲು ನೆರವಾಗುತ್ತವೆ. ನಮ್ಮ ಸರ್ಕಾರ ಸಾಗಣೆ ವಿಭಾಗವನ್ನು ಸ್ಥಾಪಿಸುತ್ತಿದೆ ಮತ್ತು ಸಾಗಣೆ ಸಾಮರ್ಥ್ಯವನ್ನು ಸುಧಾರಿಸಲು ಎಲ್ಲಾ ಸರ್ಕಾರದ ಇಲಾಖೆಗಳಲ್ಲಿ ಸಮನ್ವಯತೆಯನ್ನು ಸಾಧಿಸಲು ಕಾರ್ಯದರ್ಶಿಗಳನ್ನು ಒಳಗೊಂಡ ಉನ್ನತಾಧಿಕಾರ ಗುಂಪು ರಚಿಸಲಾಗಿದೆ. ಪಿಎಂ ಗತಿ-ಶಕ್ತಿ ತಂತ್ರಜ್ಞಾನದಲ್ಲಿ ಬಹುದೊಡ್ಡ ಪಾತ್ರವಹಿಸುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ಪ್ರಸ್ತುತ ನಮ್ಮ ಡಿಜಿಟಲ್ ವ್ಯವಸ್ಥೆಗಳು ನಮ್ಮ ಮೂಲ ಸೌಕರ್ಯ ಯೋಜನೆಗಳಿಗೆ ಆಧುನಿಕ ತಂತ್ರಜ್ಞಾನವನ್ನು ತರಲು ಹೆಚ್ಚಿನ ಒತ್ತು ನೀಡುವಂತೆ ಸರ್ಕಾರಗಳು ಮತ್ತು ಖಾಸಗಿ ವಲಯವನ್ನು ಒತ್ತಾಯಿಸುತ್ತದೆ ಎಂಬುದನ್ನು ನೀವು ತಿಳಿದಿರಲೇಬೇಕು. ವಿವಿಧ ಸಚಿವಾಲಯಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿವೆ. ನೈಸರ್ಗಿಕ ವಿಪತ್ತುಗಳು ಮಾನವ ನಷ್ಟಕ್ಕಿಂತ ಹೆಚ್ಚಾಗಿ ಮೂಲಸೌಕರ್ಯಕ್ಕೆ ವಿನಾಶ ಉಂಟುಮಾಡುತ್ತವೆ ಎಂಬುದು ಪ್ರಪಂಚದಾದ್ಯಂತ ಕಂಡು ಬಂದಿದೆ. ಹಲವಾರು ಸೇತುವೆಗಳು ಧ್ವಂಸಗೊಂಡಿವೆ ಮತ್ತು ಇದನ್ನು ಪುನರ್ ನಿರ್ಮಿಸಲು 20 ವರ್ಷಗಳಾಗುತ್ತವೆ. ಆದ್ದರಿಂದ ವಿಪತ್ತು ನಿರೋಧಕ ಮೂಲಸೌಕರ್ಯ ಇಂದು ಅತ್ಯಂತ ಅಗತ್ಯವಾಗಿದೆ. ತಂತ್ರಜ್ಞಾನ ಇಲ್ಲದಿದ್ದರೆ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು. ಸಾಗಣೆ ವಲಯದಲ್ಲಿ ಕೆಲಸ ಮಾಡುವ ಕಂಪೆನಿಗಳು ವಿಶ್ವದರ್ಜೆಯ ಜ್ಞಾನ ಮತ್ತು ಸಾಧನಗಳನ್ನು ಹೊಂದಿವೆ. ಇವುಗಳನ್ನು ಬಳಸಿಕೊಂಡು ದೇಶದಲ್ಲಿ ಲಭ್ಯವಿರುವ ದತ್ತಾಂಶವನ್ನು ಉತ್ತಮವಾಗಿ ಬಳಸುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು.
ಸ್ನೇಹಿತರೇ
ಗತಿ ಶಕ್ತಿ ಯೋಜನೆಯಿಂದ ಅಭಿವೃದ‍್ಧಿ ಮತ್ತು ಬಳಕೆಯ ಹಂತದವರೆಗೆ ಮೂಲ ಸೌಕರ್ಯ ಸೃಷ್ಟಿಯಲ್ಲಿ ನೈಜ ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಪಾಲುದಾರಿಕೆಯನ್ನು ಖಚಿತಪಡಿಸುತ್ತದೆ. ಈ ವೆಬಿನಾರ್ ನಲ್ಲಿ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಖಾಸಗಿ ವಲಯ ಹೇಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎನ್ನುವ ಕುರಿತು ಬುದ್ದಿಮತ್ತೆ ಪರೀಕ್ಷೆ ಮಾಡಿಸಬೇಕಾಗಿದೆ. ನೀವು ವೆಬಿನಾರ್ ಸಂದರ್ಭದಲ್ಲಿ ಈ ಎಲ್ಲಾ ವಿಷಯಗಳ ಕುರಿತು ಚರ್ಚಿಸುತ್ತೀರಿ ಎಂಬುದು ಖಚಿತವಾಗಿ ತಮಗೆ ತಿಳಿದಿದೆ. ಮೂಲಸೌಕರ್ಯವಲ್ಲದೇ ನಿಯಮಗಳು ಮತ್ತು ನೀತಿಗಳಲ್ಲಿ ಬದಲಾವಣೆ ತರಲು ನಿಮ್ಮ ಸಲಹೆಗಳು ಸಹ ಅಗತ್ಯವಾಗಿದೆ. ಆಧುನಿಕ ಮೂಲಸೌಕರ್ಯಗಳ ಸೃಷ್ಟಿಯು ಭಾರತದ ಅಡಿಪಾಯವನ್ನು ಬಲಪಡಿಸುತ್ತದೆ ಮತ್ತು ಪ್ರಧಾನಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲಾನ್ ಈ ನಿಟ್ಟಿನಲ್ಲಿ ಪ್ರಮುಖ ಮಾಧ್ಯಮವಾಗಿದೆ. ನಾವು ಈ ವೆಬಿನಾರ್ ಯಶಸ್ವಿಯಾಗಲಿ ಮತ್ತು ನಿಮ್ಮ ಅನುಭವ ಲಾಭ ತರಲಿ ಎಂದು ಹಾರೈಸುತ್ತೇನೆ. ಇಂದಿನ ವೆಬಿನಾರ್ ನಮ್ಮ ಸರ್ಕಾರದಿಂದ ಭಾಷಣಗಳನ್ನು ಮಾಡುವ ಬಗ್ಗೆ ಅಲ್ಲ. ನಾವು ನಿಮ್ಮಿಂದ ಕೇಳಲು ಬಯಸುತ್ತೇವೆ ಎಂಬ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ.
ಬಜೆಟ್ ಪ್ರಸ್ತಾವನೆಗಳ ಕುರಿತು ನೀವು ಸಲಹೆಗಳನ್ನು ನೀಡಿದರೆ ಅದು ಉತ್ತಮವಾಗಿರುತ್ತದೆ. ನೀವು ಸಲಹೆಗಳನ್ನು ನೀಡಿದರೆ ಮುಂದಿನ ಬಜೆಟ್ ಸಿದ್ಧಪಡಿಸಲು ಸಹಕಾರಿಯಾಗಲಿದೆ. ನೀವು ಆಗ ನನಗೆ ಬರೆಯಿರಿ. ಈಗ ಸಂಸತ್ತು ಅಂಗೀಕರಿಸಿದ ಬಜೆಟ್ ಅನ್ನು ನಾವು ಎಷ್ಟು ಚೆನ್ನಾಗಿ ಅನುಷ್ಠಾನಗೊಳಿಸಬೇಕು ಎಂಬುದನ್ನು ಈಗಲೇ ಒತ್ತಿ ಹೇಳಬೇಕಾಗಿದೆ. ನಮಗೆ ಈ ವರ್ಷದಲ್ಲಿ ಮಾರ್ಚ್ ತಿಂಗಳು ಮಾತ್ರ ಉಳಿದಿದೆ. ಏಪ್ರಿಲ್ 1 ರಿಂದ ಹೊಸ ಬಜೆಟ್ ಅನುಷ್ಠಾನವಾಗಲಿದೆ. ಹೀಗಾಗಿ ಈ ತಿಂಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಹಾಗೂ ಏಪ್ರಿಲ್ 1 ರಿಂದಲೇ ಬಜೆಟ್ ಪ್ರಸ್ತಾವನೆಗಳ ಅನುಷ್ಠಾನ ಪ್ರಾರಂಭವಾಗಲಿದೆ. ನಾವು ಇದನ್ನು ಸಾಧಿಸುತ್ತೇವೆ?.
ಹಿಂದೆ ಜನರು ನದಿಗಳ ಬಳಿ ವಾಸಿಸುತ್ತಿದ್ದರು. ದೊಡ್ಡ ನಗರಗಳು ನದಿಗಳು ಮತ್ತು ಸಮುದ್ರದ ಸನಿಹದಲ್ಲಿ ಅಭಿವೃದ್ಧಿಯಾಗುತ್ತಿದ್ದವು. ಬಳಿಕ ಆಧುನಿಕ ವ್ಯವಸ್ಥೆಗಳು ವಿಕಸನಗೊಂಡವು, ಕ್ರಮೇಣ ಅಲ್ಲಿಂದ ಸ್ಥಳಾಂತರಗೊಂಡು ಹೆದ್ದಾರಿಗಳಲ್ಲಿ ಚಲಿಸುವ ಮೂಲಕ ಜಗತ್ತು ಅಭಿವೃದ್ಧಿ ಹೊಂದಿತು ಮತ್ತು ಈಗ ಅದು ಆಪ್ಟಿಕಲ್ ಫೈಬರ್ ಇರುವಲ್ಲಿ ಜಗತ್ತು ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ತೋರಿಸುತ್ತಿದೆ. ಕಾಲ ಬದಲಾಗುತ್ತಿದೆ. ಇದರ ಅರ್ಥ ಪ್ರತ್ಯೇಕವಾದ ಮೂಲ ಸೌಕರ್ಯಕ್ಕೆ ಇಲ್ಲಿ ಅವಕಾಶವಿಲ್ಲ. ಇದರ ಸುತ್ತ ಹೊಸ ಪರಿಸರ ವ್ಯವಸ್ಥೆ ಅಭಿವೃದ್ಧಿಯಾಗಲಿದೆ. ಗತಿಶಕ್ತಿ ಮಾಸ್ಟರ್ ಪ್ಲಾನ್ ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಾಭ ತರುತ್ತಿದೆ. ಆದ್ದರಿಂದ ನೀವು ಬಜೆಟ್ ಅನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ನಾನು ಬಯಸುತ್ತೇನೆ. ಆರು ತಿಂಗಳ ಕಾಲ ಕಡತಗಳು ಚಲಿಸುತ್ತಲೇ ಇರುತ್ತವೆ ಮತ್ತು ಆ ವೇಳೆಗೆ ಹೊಸ ಬಜೆಟ್ ಮಂಡನೆಯಾಗಲು ಸಜ್ಜಾಗುತ್ತದೆ. ಕಾರಣ ಸರ್ಕಾರಿ ಯಂತ್ರದಲ್ಲಿ ಲೋಪಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಿಮ್ಮೊಂದಿಗೆ ಮುಂಚಿತವಾಗಿ ಮಾತನಾಡುವ ಪ್ರಯೋಜನವೆಂದರೆ ನೀವು ಯಾವುದೇ ನ್ಯೂನತೆಗಳ ಬಗ್ಗೆ ಗಮನ ಸೆಳೆದರೆ ಸರ್ಕಾರಿ ವ್ಯವಸ್ಥೆಗಳು ಸಕಾರಾತ್ಮಕವಾಗಿ ಮತ್ತು ತಕ್ಷಣವೇ ಸ್ಪಂದಿಸುತ್ತವೆ. ಆದ್ದರಿಂದ ನೀವು ವ್ಯಾಪಕವಾದ ಕೊಡುಗೆ ನೀಡಬೇಕು. ಇದು ನನ್ನ ನಿರೀಕ್ಷೆ. ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು! ತುಂಬಾ ಧನ್ಯವಾಗಳು!
ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಿದರು.
***
(Release ID: 1802258)
Visitor Counter : 187
Read this release in:
Urdu
,
Manipuri
,
Bengali
,
Odia
,
Telugu
,
English
,
Marathi
,
Hindi
,
Assamese
,
Punjabi
,
Gujarati
,
Tamil
,
Malayalam