ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ರಾಷ್ಟ್ರಕ್ಕೆ ಸರ್ಮಪಿಸಿದ ಪ್ರಧಾನಿ

“ಜಗದ್ಗುರು ಶ್ರೀ ರಾಮಾನುಜಾಚಾರ್ಯರ ಈ ಭವ್ಯ ಪ್ರತಿಮೆಯ ಮೂಲಕ ಭಾರತ ತನ್ನ ಮಾನವಶಕ್ತಿ ಮತ್ತು ಸ್ಫೂರ್ತಿಗೆ ಸಮಗ್ರ ರೂಪ ನೀಡಲಾಗುತ್ತಿದೆ”

“ನಾವು ಶ್ರೀ ರಾಮಾನುಜಾಚಾರ್ಯ ಜಿ ಅವರನ್ನು ನೋಡಿದರೆ ಪ್ರಗತಿಪರತೆ ಮತ್ತು ಪ್ರಾಚೀನತೆ ನಡುವಿನ ಯಾವುದೇ ಸಂಘರ್ಷವಿಲ್ಲ ಎಂಬುದು ಅರ್ಥವಾಗುತ್ತದೆ’’

"ಸುಧಾರಣೆಗಳಿಗಾಗಿ ನಿಮ್ಮ ಬೇರುಗಳಿಂದ ದೂರ ಹೋಗುವುದು ಅನಿವಾರ್ಯವಲ್ಲ; ಬದಲಿಗೆ ನಾವು ನಮ್ಮ ನಿಜವಾದ ಬೇರುಗಳೊಂದಿಗೆ ಸಂಪರ್ಕ ಹೊಂದುವುದು, ನಾವು ನಮ್ಮ ನಿಜವಾದ ಶಕ್ತಿಯ ಅರಿವು ಮೂಡಿಸುವುದು ಅವಶ್ಯಕ”

“ಶ್ರೀ ರಾಮಾನುಜಾಚಾರ್ಯರ ಸಂದೇಶದ ಜತೆಗೆ ಇಂದು ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ಹೊಸ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದೆ”

“ಭಾರತದ ಸ್ವಾತಂತ್ರ್ಯ ಹೋರಾಟವು ಸಂತರಿದ ಪಡೆದ ಸಮಾನತೆ, ಮಾನವೀಯತೆ ಮತ್ತು ಆಧ್ಯಾತ್ಮಿಕತೆಯ ಶಕ್ತಿಯಿಂದ ಆಶೀರ್ವದಿಸಲ್ಪಟ್ಟಿದೆ’’

“ಸರ್ದಾರ್ ಸಾಹೀಬ್’ ‘ಏಕತಾ ಪ್ರತಿಮೆ’ ದೇಶದಲ್ಲಿ ಒಗ್ಗಟ್ಟಿನ ಪ್ರತಿಜ್ಞೆಯನ್ನು ಪುನರುಚ್ಚರಿಸಿದರೆ, ಶ್ರೀ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’, ಸಮಾನತೆಯ ಸಂದೇಶ ನೀಡುತ್ತಿದೆ. ಇದು ಭಾರತ ರಾಷ್ಟ್ರದ ವಿಶೇಷತೆಯಾಗಿದೆ”

“ತೆಲುಗು ಸಂಸ್ಕೃತಿ ಭಾರತೀಯ ವೈವಿಧ್ಯವನ್ನು ಶ್ರೀಮಂತಗೊಳಿಸಿದೆ”

“ತೆಲುಗು ಚಿತ್ರೋದ್ಯಮ ವೈಭವದ ತೆಲುಗು ಸಂಸ್ಕೃತಿಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ”

Posted On: 05 FEB 2022 8:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೈದರಾಬಾದ್ ನಲ್ಲಿಂದು ‘ಸಮಾನತೆಯ ಪ್ರತಿಮೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’, ಜಾತಿ, ಧರ್ಮ ಮತ್ತು ವರ್ಗ ಸೇರಿದಂತೆ ಜೀವನದ ಎಲ್ಲ ಅಂಶಗಳಲ್ಲಿ ಸಮಾನತೆಯ ತತ್ವವನ್ನು ಪ್ರತಿಪಾದಿಸಿದ 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯ ಅವರ ಸ್ಮರಣಾರ್ಥವಾಗಿದೆ. ತೆಲಂಗಾಣ ರಾಜ್ಯಪಾಲರಾದ ಶ್ರೀಮತಿ ತಮಿಳ್ ಸೈ ಸೌಂದರರಾಜನ್, ಕೇಂದ್ರ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಬಸಂತ ಪಂಚಮಿಯ ಪವಿತ್ರ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಶುಭಾಶಯಗಳನ್ನು ಕೋರಿದರು. ಇಂತಹ ಪವಿತ್ರ ಸಂದರ್ಭದಲ್ಲಿ ಪ್ರತಿಮೆ ಸಮರ್ಪಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಜಗದ್ಗುರು ಶ್ರೀ ರಾಮಾನುಜಾಚಾರ್ಯ ಅವರ ಭವ್ಯ ಪ್ರತಿಮೆಯ ಮೂಲಕ ಭಾರತದ ಮಾನವಶಕ್ತಿ ಮತ್ತು ಸ್ಫೂರ್ತಿಗಳಿಗೆ ಸಮಗ್ರ ರೂಪ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಶ್ರೀ ರಾಮಾನುಜಾಚಾರ್ಯರ ಈ ಪ್ರತಿಮೆ ವಿವೇಕ, ನಿರ್ಲಿಪ್ತತೆ ಮತ್ತು ಆದರ್ಶದ ಸಂಕೇತವಾಗಿದೆ ಎಂದರು.

‘ವಿಶ್ವಕ್ ಸೇನ ಇಶ್ಟಿ ಯಜ್ಞ’ದ ‘ಪೂರ್ಣಾಹುತಿ’ಯಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಿದ್ದರು. ಗುರಿ ಮತ್ತು ಸಂಕಲ್ಪಗಳ ಈಡೇರಿಕೆ ಈ ಯಜ್ಞದ ಉದ್ದೇಶವಾಗಿತ್ತು. ಪ್ರಧಾನಮಂತ್ರಿ ಅವರು, ದೇಶದ ‘ಅಮೃತ’ ಸಂಕಲ್ಪಕ್ಕಾಗಿ ಯಜ್ಞದ ಸಂಕಲ್ಪ ನೆರವೇರಿಸಿದರು. ಯಜ್ಞವನ್ನು 130 ಕೋಟಿ ದೇಶವಾಸಿಗಳಿಗೆ ಸಮರ್ಪಿಸಿದರು.

ತಿರಸ್ಕಾರ ಮತ್ತು ಸ್ವೀಕಾರ- ತಿರಸ್ಕಾರಕ್ಕಿಂತ ಜ್ಞಾನವನ್ನು ನೋಡುವ ಅದರ ವಿದ್ವಾಂಸರ ಭಾರತೀಯ ಸಂಪ್ರದಾಯವನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು. “ನಮ್ಮಲ್ಲಿ ‘ಅದ್ವೈತ’ವಿದ್ದರೆ, ನಮ್ಮಲ್ಲಿ ‘ದ್ವೈತ’ವೂ ಇರುತ್ತದೆ ಮತ್ತು ದ್ವೈತ-ಅದ್ವೈತ” ಒಳಗೊಂಡ ಶ್ರೀ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತವೂ ನಮ್ಮಲ್ಲಿರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀ ರಾಮಾನುಜಾಚಾರ್ಯರು ಜ್ಞಾನದ ಪರಾಕಾಷ್ಠೆಯ ಜತೆಗೆ ಭಕ್ತಿ ಮಾರ್ಗದ ಸಂಸ್ಥಾಪಕರೂ ಕೂಡ ಆಗಿದ್ದರು. ಒಂದೆಡೆ ಅವರು ಶ್ರೀಮಂತ ‘ಸನ್ಯಾಸ’ ಪರಂಪರೆಯ ಸಂತರಾಗಿದ್ದರೆ, ಇನ್ನೊಂದೆಡೆ ‘ಗೀತಭಾಷ್ಯ’ದ ಮೂಲಕ ಕ್ರಿಯೆಯ ಪ್ರಾಮುಖ್ಯವನ್ನು ಪ್ರಸ್ತುತಪಡಿಸಿದರು. ‘ಇಂದಿನ ಜಗತ್ತಿನಲ್ಲಿ ಸಾಮಾಜಿಕ ಸುಧಾರಣೆಗಳು ಪ್ರಗತಿಪರ ಸುಧಾರಣೆಗಳ ಬೇರುಗಳ ಆಚೆಗೂ ನಡೆಯುತ್ತವೆ ಎಂದು ನಂಬಲಾಗಿದೆ. ಆದರೆ ನಾವು ಶ್ರೀ ರಾಮಾನುಜಾಚಾರ್ಯರನ್ನು ನೋಡಿದರೆ ನಮಗೆ ಪ್ರಗತಿ ಪರತೆ ಮತ್ತು ಪ್ರಾಚೀನತೆ ನಡುವೆ ಸಂಘರ್ಷವಿರಲಿಲ್ಲ ಎಂಬುದು ಅರ್ಥವಾಗುತ್ತದೆ. ಸುಧಾರಣೆಗಳಿಗಾಗಿ ನೀವು ಬೇರುಗಳಿಗೆ ದೂರಹೋಗುವ ಅನಿವಾರ್ಯವಿಲ್ಲ. ಬದಲಿಗೆ ನಾವು ನಮ್ಮ ನಿಜವಾದ ಬೇರುಗಳೊಂದಿಗೆ ಸಂಪರ್ಕ ಹೊಂದುವುದು ಮತ್ತು ನಮ್ಮ ನಿಜವಾದ ಶಕ್ತಿಯ ಬಗ್ಗೆ ಅರಿವು ಮೂಡಿಸುವುದು ಅವಶ್ಯಕ” ಎಂದರು.

ಸದ್ಯದ ಕ್ರಮಗಳು ಮತ್ತು ನಮ್ಮ ಸಂತರ ವಿವೇಕದ ಜತೆಗಿನ ಸಂಬಂಧವನ್ನು ಪ್ರಧಾನಮಂತ್ರಿ ವಿಸ್ತೃತವಾಗಿ ವಿವರಿಸಿದರು. ಶ್ರೀ ರಾಮಾನುಜಾಚಾರ್ಯರು ಸಾಮಾಜಿಕ ಸುಧಾರಣೆಯ ನೈಜ ಕಲ್ಪನೆಯ ಮೂಲಕ ದೇಶವನ್ನು ಜನಪ್ರಿಯಗೊಳಿಸಿದರು ಮತ್ತು ದಲಿತರು ಹಾಗೂ ಹಿಂದುಳಿದವರಿಗಾಗಿ ಶ್ರಮಿಸಿದರು. ಇಂದು ಶ್ರೀ ರಾಮಾನುಜಾಚಾರ್ಯರು ಸಮಾನತೆಯ ಭವ್ಯ ಮೂರ್ತಿಯ ರೂಪದಲ್ಲಿ ಸಮಾನತೆಯ ಸಂದೇಶವನ್ನು ನಮಗೆಲ್ಲರಿಗೂ ನೀಡುತ್ತಿದ್ದಾರೆ. ಈ ಸಂದೇಶದ ಜತೆಗೆ ಇಂದು ದೇಶ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ನವ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದೆ ಎಂದು ಹೇಳಿದರು. ಇಂದು ಯಾವುದೇ ತಾರತಮ್ಯವಿಲ್ಲದೆ ಎಲ್ಲರ ಅಭಿವೃದ್ಧಿಗಾಗಿ ಸಾಮೂಹಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ; ಶತಮಾನಗಳವರೆಗೆ ಶೋಷಣೆಗೊಳಗಾದವರು ಇಂದು ಪೂರ್ಣ ಘನತೆಯೊಂದಿಗೆ ಅಭಿವೃದ್ಧಿಯ ಪಾಲುದಾರರಾಗುತ್ತಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯ ದೊರಕುತ್ತಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಪಕ್ಕಾ ಮನೆಗಳು, ಉಜ್ವಲ ಸಂಪರ್ಕ, 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಅಥವಾ ಉಚಿತ ವಿದ್ಯುತ್ ಸಂಪರ್ಕ, ಜನ್-ಧನ್ ಖಾತೆಗಳು ಸ್ವಚ್ಛ ಭಾರತ ಅಭಿಯಾನ ಮತ್ತಿತರ ಯೋಜನೆಗಳು, ದಲಿತರು, ಹಿಂದುಳಿದವರು ಮತ್ತು ಶೋಷಿತರನ್ನು ಬಲವರ್ಧನೆಗೊಳಿಸಿವೆ ಎಂದು ಹೇಳಿದರು.

ಶ್ರೀ ರಾಮಾನುಜಾಚಾರ್ಯರು ಭಾರತದ ಏಕತೆ ಮತ್ತು ಸಮಗ್ರತೆಗೆ ಉಜ್ವಲ ಸ್ಫೂರ್ತಿಯಾಗಿದ್ದಾರೆ ಎಂದು ಪ್ರಧಾನಮಂತ್ರಿ ಪೂರ್ವದಿಂದ ಪಶ್ಚಿಮದವರೆಗೆ ಇಡೀ ಭಾರತದಾದ್ಯಂತ ಹೊಂದಿದ್ದರು ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯ ಹೋರಾಟ ಕೇವಲ ತನ್ನ ಶಕ್ತಿ ಮತ್ತು ಹಕ್ಕುಗಳಿಗಾಗಿ ನಡೆಸಿದ ಹೋರಾಟವಲ್ಲ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಈ ಹೋರಾಟದಲ್ಲಿ ಒಂದೆಡೆ ವಸಾಹತು ಮನಸ್ಥಿತಿ ಇತ್ತು. ಮತ್ತೊಂದೆಡೆ ಬದುಕಲು ಮತ್ತು ಇತರರನ್ನು ಬದುಕಲು ಬಿಡಿ ಎನ್ನುವ ಆದರ್ಶವಿತ್ತು. ಒಂದೆಡೆ ಜನಾಂಗೀಯ ಶ್ರೇಣೀಕೃತ ವ್ಯವಸ್ಥೆ ಇದ್ದರೆ ಮತ್ತೊಂದೆಡೆ ಭೌತಿಕತೆಯ ಉನ್ಮಾದವಿದ್ದರೆ, ಮತ್ತೊಂದೆಡೆ ಮಾನವವೀಯತೆ ಮತ್ತು ಆಧ್ಯಾತ್ಮಿಕತೆಯ ಮೇಲೆ ನಂಬಿಕೆ ಇತ್ತು. ಭಾರತದ ಈ ಹೋರಾಟ ಮತ್ತು ಆ ಪರಂಪರೆ ಗೆಲುವು ತಂದುಕೊಟ್ಟಿತು ಎಂದು ಹೇಳಿದರು. “ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಸಂತರಿಂದ ಸ್ವೀಕರಿಸಿದ ಸಮಾನತೆ, ಮಾನವೀಯತೆ ಮತ್ತು ಆಧ್ಯಾತ್ಮಿಕತೆಯ ಶಕ್ತಿ ಆಶೀರ್ವಾದವಿತ್ತು” ಎಂದು ಹೇಳಿದರು.

ಸರ್ದಾರ್ ಪಟೇಲ್ ಮತ್ತು ಹೈದ್ರಾಬಾದ್ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ‘ಸರ್ದಾರ್ ಸಾಹೀಬ್ ಅವರ ಏಕತಾ ಪ್ರತಿಮೆ ದೇಶದಲ್ಲಿ ಏಕತೆಯ ಪ್ರತಿಜ್ಞೆಯನ್ನು ಪುನರುಚ್ಚ ರಿಸಿದರೆ ಶ್ರೀ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’ ಸಮಾನತೆಯ ಸಂದೇಶವನ್ನು ನೀಡುತ್ತಿದೆ. ಇದು ಭಾರತ ರಾಷ್ಟ್ರದ ವಿಶೇಷತೆಯಾಗಿದೆ’’ ಎಂದು ಹೇಳಿದರು.

ಪ್ರಧಾನಮಂತ್ರಿ ಅವರು ತೆಲುಗು ಸಂಸ್ಕೃತಿಯ ಶ್ರೀಮಂತಿಕೆಯನ್ನು ಮತ್ತು ಅದು ಹೇಗೆ ಭಾರತೀಯ ವೈವಿಧ್ಯವನ್ನು ಸಂಪದ್ಭರಿತಗೊಳಿಸಿದೆ ಎಂಬುದನ್ನು ವಿಸ್ತೃತವಾಗಿ ವಿವರಿಸಿದರು. ಇಂತಹ ಶ್ರೀಮಂತ ಪರಂಪರೆಯ ದಾರಿದೀಪವಾಗಿರುವ ರಾಜರು ಮತ್ತು ರಾಣಿಯರ ಸುದೀರ್ಘ ಪರಂಪರೆಯನ್ನು ಅವರು ಸ್ಮರಿಸಿದರು. ಭಾರತದ ನಂಬಿಕೆಯ ಸ್ಥಳಗಳನ್ನು ಗುರುತಿಸುವುದು ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಅವರು, 13ನೇ ಶತಮಾನದ ಕಾಕತೀಯ ರುದ್ರೇಶ್ವರ ರಾಮಪ್ಪ ದೇವಾಲಯವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಿದೆ. ಪೂಚಂಪಲ್ಲಿಯನ್ನು ಭಾರತದ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ವಿಶ್ವ ಪ್ರವಾಸೋದ್ಯಮ ಸಂಸ್ಥೆ ಗುರುತಿಸಿದೆ ಎಂದು ಹೇಳಿದರು.

ತೆಲುಗು ಚಿತ್ರೋದ್ಯಮದ ವೈಭವದ ಕೊಡುಗೆಯನ್ನು ಉಲ್ಲೇಖಿಸಿ ಪ್ರಧಾನಮಂತ್ರಿ ಅವರು, ಅದು ಜಾಗತಿಕವಾಗಿ ತನ್ನ ಇರುವಿಕೆಯನ್ನು ಗುರುತಿಸಿದೆ ಮತ್ತು ತೆಲುಗು ಭಾಷೆ ಮಾತನಾಡದ ಪ್ರದೇಶಗಳನ್ನೂ ಸಹ ತಲುಪಿದೆ ಎಂದರು. “ಈ ಸೃಜನಶೀಲತೆ ಬೆಳ್ಳಿ ಪರದೆ ಮತ್ತು ಒಟಿಟಿ ವೇದಿಕೆಗಳಲ್ಲಿ ಪುನರ್ ಸಾಬೀತಾಗುತ್ತಿದೆ. ಇದನ್ನು ಭಾರತದ ಹೊರಗೂ ಸಹ ಶ್ಲಾಘಿಸಲಾಗುತ್ತಿದೆ. ತಮ್ಮ ಕಲೆ ಮತ್ತು ಸಂಸ್ಕೃತಿಯ ಬಗೆಗೆ ತೆಲುಗು ಭಾಷೆ ಮಾತನಾಡುವ ಜನರ ಬದ್ಧತೆ ಎಲ್ಲರಿಗೂ ಸ್ಫೂರ್ತಿಯಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

ಈ ‘ಪಂಚಲೋಹ’ ಅಂದರೆ ಐದು ಲೋಹಗಳು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವು ಇವುಗಳ ಸಮ್ಮಿಶ್ರಣವಾಗಿದೆ. ಕುಳಿತ ಭಂಗಿಯಲ್ಲಿರುವ ವಿಶ್ವದ ಅತಿದೊಡ್ಡ ಲೋಹದ ಪ್ರತಿಮೆಗಳಲ್ಲಿ ಇದು ಒಂದಾಗಿದೆ. ಈ ಪ್ರತಿಮೆಯನ್ನು ‘ಭದ್ರಾ ವೀದಿ’ ಹೆಸರಿನ 54 ಅಡಿಯ ತಳಪಾಯದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಇದರಲ್ಲಿ ವೇದದ ಡಿಜಿಟಲ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಪುರಾತನ ಭಾರತೀಯ ಪಠ್ಯ, ರಂಗಮಂದಿರ, ಶ್ರೀ ರಾಮಾನುಜಾಚಾರ್ಯರ ಕೃತಿಗಳಿಗೆ ಸಂಬಂಧಿಸಿದ ಶೈಕ್ಷಣಿಕ ಗ್ಯಾಲರಿಗೆ ಮೀಸಲಾದ ಮಹಡಿಗಳನ್ನು ಹೊಂದಿದೆ. ಈ ಪ್ರತಿಮೆಯನ್ನು ಶ್ರೀ ರಾಮಾನುಜಾಚಾರ್ಯರ ಆಶ್ರಮದ ಶ್ರೀ ಚಿನ್ನ ಜೀಯರ್ ಸ್ವಾಮಿ ಅವರ ಪರಿಕಲ್ಪನೆಯೊಂದಿಗೆ ರೂಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಶ್ರೀ ರಾಮಾನುಜಾಚಾರ್ಯರ ಜೀವನ ಪಯಣ ಮತ್ತು ಬೋಧನೆ ಕುರಿತು 3ಡಿ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಪ್ರಧಾನ ಮಂತ್ರಿ ಸಮಾನತೆಯ ಪ್ರತಿಮೆಯನ್ನು ಸುತ್ತುವರಿದಿರುವ ಒಂದೇ ರೀತಿಯ ಮನರಂಜನಾ ಕೋಣೆ 108 ದಿವ್ಯ ದೇಶಗಳ (ಅಲಂಕೃತವಾಗಿ ಕೆತ್ತಿದ ದೇವಾಲಯಗಳು) ಭೇಟಿ ನೀಡಿದರು.

ಶ್ರೀ ರಾಮಾನುಜಾಚಾರ್ಯರು ರಾಷ್ಟ್ರೀಯತೆ, ಲಿಂಗ, ಜನಾಂಗ, ಜಾತಿ ಅಥವಾ ಪಂಥವನ್ನು ಲೆಕ್ಕಿಸದೆ ಪ್ರತಿಯೊಬ್ಬ ಮಾನವ ಸಮಾನತೆಯ ಮನೋಭಾವದಿಂದ ಜನರ ಏಳಿಗೆಗಾಗಿ ಅಹರ್ನಿಶಿ ದುಡಿದರು. ಸಮಾನತೆಯ ಪ್ರತಿಮೆಯ ಉದ್ಘಾಟನೆಯು ಸದ್ಯ ನಡೆಯುತ್ತಿರುವ ಶ್ರೀ ರಾಮಾನುಜಾಚಾರ್ಯರ 1000ನೇ ಜಯಂತಿಯ 12 ದಿನಗಳ ಶ್ರೀ ರಾಮಾನುಜ ಸಹಸ್ರಾಬ್ದಿ ಸಮರೋಹ ಕಾರ್ಯಕ್ರಮದ ಒಂದು ಭಾಗವಾಗಿದೆ.

***


(Release ID: 1795961) Visitor Counter : 456