ಹಣಕಾಸು ಸಚಿವಾಲಯ
azadi ka amrit mahotsav

5ಜಿಗಾಗಿ ಬಲಿಷ್ಠ ಪರಿಸರ ವ್ಯವಸ್ಥೆ ರೂಪಿಸಲು 2022-23 ರಲ್ಲಿ ವಿನ್ಯಾಸ ಆಧಾರಿತ ಉತ್ಪಾದನಾ ಯೋಜನೆ


2022- 23 ರ ಒಳಗಾಗಿ 5ಜಿ ಮೊಬೈಲ್ ಸೇವೆಗಳನ್ನು ಜಾರಿಮಾಡಲು 2022 ರಲ್ಲಿ ಅಗತ್ಯವಿರುವ ತರಂಗಾಂತರಗಳನ್ನು ಹರಾಜು ಹಾಕಲು ಕ್ರಮ 

ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಕೈಗೆಟುವ ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಸೇವೆಯನ್ನು ಸಕ್ರಿಯಗೊಳಿಸಲು ವಾರ್ಷಿಕ  ಸಂಗ್ರಹಣೆಯಲ್ಲಿ 5% ಮೊತ್ತ ಬಳಕೆ ವ್ಯಾಪ್ತಿಯಲ್ಲಿ ಹಂಚಿಕೆ 

2022-23 ರಲ್ಲಿ ಪಿಪಿಪಿ ಮೂಲಕ ಭಾರತ್ ನೆಟ್ ಯೋಜನೆಯಡಿ ಎಲ್ಲಾ ಗ್ರಾಮಗಳಲ್ಲಿ ಆಪ್ಟಿಕಲ್ ಫೈಬರ್ ಹಾಕುವ ಒಪ್ಪಂದ ಜಾರಿಗೊಳಿಸಲು ಕ್ರಮ

Posted On: 01 FEB 2022 1:10PM by PIB Bengaluru

2022-23 ಸಾಲಿನ ಕೇಂದ್ರ ಬಜೆಟ್ ಭಾರತ 75 – ಭಾರತ 100 ನೇ ವರ್ಷ, ಅಂದರೆ ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಆರ್ಥಿಕತೆಯನ್ನು ಮುನ್ನಡೆಸಲು ಅಡಿಪಾಯ ಹಾಕುವ ಮತ್ತು ನೀಲ ನಕ್ಷೆಯನ್ನು ಒದಗಿಸಲು ಪ್ರಯತ್ನಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದು 2021-22 ಬಜೆಟ್ ನಲ್ಲಿ ಘೋಷಿಸಲಾದ ದೃಷ್ಟಿಕೋನವನ್ನು ನಿರ್ಮಿಸುವ ಪ್ರಕ್ರಿಯೆ ಮುಂದುವರೆಸಿದೆ. ಹಣಕಾಸು ಕುರಿತ ಹೇಳಿಕೆಗಳು, ಹಣಕಾಸಿನ ಸ್ಥಿತಿಗತಿ, ಪಾರದರ್ಶಕತೆಯನ್ನು ಒಳಗೊಂಡಿರುವ ಅದರ ಮೂಲಭೂತ ತತ್ವಗಳು, ಸರ್ಕಾರದ ಉದ್ದೇಶ, ಸಾಮರ್ಥ್ಯ ಮತ್ತು ಸವಾಲುಗಳನ್ನು ಇವು ಪ್ರತಿಬಿಂಬಿಸುತ್ತವೆಎಂದು ಹೇಳಿದರು.

ಅಮೃತ ಕಾಲದಲ್ಲಿ ಕೆಲವು ಗುರಿಗಳನ್ನು ಸಾಧಿಸುವ ಮೂಲಕ ಡಿಜಿಟಲ್ ಆರ್ಥಿಕತೆ, ಫಿನ್ ಟೆಕ್, ತಂತ್ರಜ್ಞಾನವನ್ನು ಸಕ್ರಿಯಗೊಳಿಸಿ, ಅಭಿವೃದ್ದಿಯನ್ನು ಉತ್ತೇಜಿಸುವ, ಸರ್ಕಾರದ ದೃಷ್ಟಿಕೋನವನ್ನು ಸಾಕಾರಗೊಳಿಸಲಾಗುತ್ತಿದೆ ಎಂದರು

ದೂರ ಸಂಪರ್ಕ ಕ್ಷೇತ್ರ;

2022-23 ನೇ ಸಾಲಿನ ಬಜೆಟ್ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ [ಪಿ.ಎಲ್.] ಅಡಿ 5ಜಿ ಬಲಿಷ್ಠ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವಿನ್ಯಾಸ ಆಧಾರಿತ ಉತ್ಪಾದನೆ ಕಾರ್ಯಕ್ರಮ ಜಾರಿಗೊಳಿಸುವುದಾಗಿ ಪ್ರಸ್ತಾಪಿಸಿದ್ದಾರೆ. ಆತ್ಮ ನಿರ್ಭರ ಭಾರತ್ ನಡಿ ವಿವಿಧ 14 ವಲಯಗಳಲ್ಲಿ ಉತ್ಪಾದನೆ ಆಧಾರಿತ ಸಂಪರ್ಕಿತ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರ ಮೂಲಕ 60 ಲಕ್ಷ ಹೆಚ್ಚುವರಿ ಹುದ್ದೆಗಳು ಸೃಷ್ಟಿಯಾಗುವ ಸಂಭವವಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ 30 ಲಕ್ಷ ಕೋಟಿ ರೂಪಾಯಿ ಮೊತ್ತದ ಹೆಚ್ಚುವರಿ ಉತ್ಪಾದನೆಯಾಗುವ ನಿರೀಕ್ಷೆಯಿದೆ.

ದೂರ ಸಂಪರ್ಕ, ಅದರಲ್ಲೂ ನಿರ್ದಿಷ್ಟವಾಗಿ 5ಜಿ ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. 2022- 23 ಒಳಗಾಗಿ 5ಜಿ ಮೊಬೈಲ್ ಸೇವೆಗಳನ್ನು ಜಾರಿಮಾಡಲು 2022 ರಲ್ಲಿ ಅಗತ್ಯವಿರುವ ತರಂಗಾಂತರಗಳನ್ನು ಖಾಸಗಿ ದೂರಸಂಪರ್ಕ ಪೂರೈಕೆದಾರರಿಗೆ ಹರಾಜು ಹಾಕಲು ಕ್ರಮ ಕೈಗೊಳ್ಳಲಾಗುತ್ತದೆ.   

Quote Covers_M1.jpg

ಇದಲ್ಲದೇ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಕೈಗೆಟುವ ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಸೇವೆಯ ಪ್ರಸರಣವನ್ನು ಸಕ್ರಿಯಗೊಳಿಸಲು ಯುನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ಫಂಡ್ [ಯು.ಎಸ್..ಎಫ್] ಅಡಿಯಲ್ಲಿ ವಾರ್ಷಿಕ ಸಂಗ್ರಹಣೆಯಲ್ಲಿ ಶೇ 5%  ರಷ್ಟು ನಿಗದಿಪಡಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ

-ಸೇವೆಗಳು, ಸಂವಹನ ಸೌಲಭ್ಯಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ನಗರ ಪ್ರದೇಶಗಳಿಗೆ ಸಮಾನವಾಗಿ ಎಲ್ಲಾ ಗ್ರಾಮಗಳು, ದೂರದ ಪ್ರದೇಶಗಳು ಸೇರಿದಂತೆ ಎಲ್ಲಾ ಹಳ್ಳಿಗಳಲ್ಲಿ ಆಪ್ಟಿಕಲ್ ಪೈಬರ್ ಹಾಕುವ ಕುರಿತು ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. 2022-23 ನೇ ಸಾಲಿನಲ್ಲಿ ಪಿಪಿಪಿ ಮೂಲಕ ಭಾರತ್ ನೆಟ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

***


(Release ID: 1794431) Visitor Counter : 317