ಹಣಕಾಸು ಸಚಿವಾಲಯ
2022-23 ನೇ ಸಾಲಿನ ಕೇಂದ್ರ ಬಜೆಟ್ ಮುಖ್ಯಾಂಶಗಳು
Posted On:
01 FEB 2022 1:18PM by PIB Bengaluru
ಕೇಂದ್ರ ಬಜೆಟ್ ಸೂಕ್ಷ್ಮ-ಆರ್ಥಿಕ ಮಟ್ಟದ ಅಂತರ್ಗತ ಕಲ್ಯಾಣಕ್ಕೆ ಗಮನ ಕೇಂದ್ರೀಕರಿಸುವ ಮೂಲಕ ಸ್ಥೂಲ-ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2022-23 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು.
ಬಜೆಟ್ನ ಪ್ರಮುಖ ಅಂಶಗಳು ಹೀಗಿವೆ:
ಭಾಗ- ಎ
- ಭಾರತದ ಆರ್ಥಿಕ ಬೆಳವಣಿಗೆಯು ಶೇ.9.2 ಎಂದು ಅಂದಾಜಿಸಲಾಗಿದ್ದು, ಇದು ಎಲ್ಲಾ ದೊಡ್ಡ ಆರ್ಥಿಕತೆಗಳ ಪೈಕಿ ಅತ್ಯಧಿಕವಾಗಲಿದೆ.
- 14 ವಲಯಗಳಲ್ಲಿ ಉತ್ಪಾದಕತೆ ಆಧಾರಿತ ಪ್ರೋತ್ಸಾಹ ಯೋಜನೆಯಡಿಯಲ್ಲಿ 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.
- ಪಿಎಲ್ಐ ಯೋಜನೆಗಳು 30 ಲಕ್ಷ ಕೋಟಿ ರೂ. ಹೆಚ್ಚುವರಿ ಉತ್ಪಾದನೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ.
- ಭಾರತ @100 ಕ್ಕೆ 25 ವರ್ಷಗಳ ದೀರ್ಘಾವಧಿಯ ಅಮೃತ್ ಕಾಲವನ್ನು ಪ್ರವೇಶಿಸುತ್ತಿದ್ದು, ಬಜೆಟ್ ನಾಲ್ಕು ಆದ್ಯತೆಗಳ ಜೊತೆಗೆ ಬೆಳವಣಿಗೆಗೆ ಉತ್ತೇಜನವನ್ನು ನೀಡುತ್ತದೆ:
- ಪಿಎಂ ಗತಿಶಕ್ತಿ
- ಅಂತರ್ಗತ ಅಭಿವೃದ್ಧಿ
- ಉತ್ಪಾದಕತೆ ವರ್ಧನೆ ಮತ್ತು ಹೂಡಿಕೆ, ವಿನೂತನ ಉದ್ಯಮಗಳು, ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ.
- ಹೂಡಿಕೆಗಳ ಹಣಕಾಸು
ಪಿಎಂ ಗತಿಶಕ್ತಿ
- ಪಿಎಂ ಗತಿಶಕ್ತಿಗೆ ರಸ್ತೆಗಳು, ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳು ಏಳು ಚಾಲಕ ಎಂಜಿನ್‌ಗಳಾಗಿವೆ.
ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್
- ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನ ವ್ಯಾಪ್ತಿಯು ಆರ್ಥಿಕ ಪರಿವರ್ತನೆ, ತಡೆರಹಿತ ಬಹುಮಾದರಿ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ದಕ್ಷತೆಗಾಗಿ ಏಳು ಎಂಜಿನ್‌ಗಳನ್ನು ಒಳಗೊಂಡಿದೆ.
- ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್‌ನಲ್ಲಿ ಈ 7 ಎಂಜಿನ್‌ಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪಿಎಂ ಗತಿಶಕ್ತಿ ಚೌಕಟ್ಟಿನೊಂದಿಗೆ ರೂಪಿಸಲಾಗುತ್ತದೆ.
ರಸ್ತೆ ಸಾರಿಗೆ
- ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು 2022-23 ರಲ್ಲಿ 25,000 ಕಿಮೀ ವಿಸ್ತರಿಸಲಾಗುವುದು.
- ರಾಷ್ಟ್ರೀಯ ಹೆದ್ದಾರಿಗಳ ಜಾಲ ವಿಸ್ತರಣೆಗೆ 20000 ಕೋಟಿ ರೂ.
ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ಸ್
- 2022-23 ರಲ್ಲಿ ನಾಲ್ಕು ಸ್ಥಳಗಳಲ್ಲಿ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳ ಅನುಷ್ಠಾನಕ್ಕಾಗಿ ಪಿಪಿಪಿ ಮಾದರಿಯಲ್ಲಿ ಗುತ್ತಿಗೆ ನೀಡಲಾಗುವುದು.
ರೈಲ್ವೆ
- ಸ್ಥಳೀಯ ವ್ಯವಹಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು ಒಂದು ನಿಲ್ದಾಣ ಒಂದು ಉತ್ಪನ್ನದ ಪರಿಕಲ್ಪನೆ.
- 2022-23 ರಲ್ಲಿ ದೇಶೀಯ ವಿಶ್ವ ದರ್ಜೆಯ ತಂತ್ರಜ್ಞಾನ ಮತ್ತು ಸಾಮರ್ಥ್ಯ ವರ್ಧನೆಗಾಗಿ 2000 ಕಿಮೀ ರೈಲ್ವೆ ಜಾಲವನ್ನು ‘ಕವಚ್’ ಅಡಿಯಲ್ಲಿ ತರಲಾಗುವುದು.
- ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು.
- ಮಲ್ಟಿಮೋಡಲ್ ಲಾಜಿಸ್ಟಿಕ್ಸ್‌ಗಾಗಿ 100 ಪಿಎಂ ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.
ಪರ್ವತಮಾಲಾ
- ರಾಷ್ಟ್ರೀಯ ರೋಪ್‌ವೇಸ್ ಅಭಿವೃದ್ಧಿ ಕಾರ್ಯಕ್ರಮ, ಪರ್ವತಮಾಲಾವನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು.
- 2022-23 ರಲ್ಲಿ 60 ಕಿಮೀ ಉದ್ದದ 8 ರೋಪ್‌ವೇ ಯೋಜನೆಗಳಿಗೆ ಕಾಮಗಾರಿ ಗುತ್ತಿಗೆ ನೀಡಲಾಗುವುದು.
ಅಂತರ್ಗತ ಅಭಿವೃದ್ಧಿ
ಕೃಷಿ
- ಗೋಧಿ ಮತ್ತು ಭತ್ತದ ಖರೀದಿಗಾಗಿ 1.63 ಕೋಟಿ ರೈತರಿಗೆ 2.37 ಲಕ್ಷ ಕೋಟಿ ರೂ.ನೇರ ಪಾವತಿ.
- ದೇಶದಾದ್ಯಂತ ರಾಸಾಯನಿಕ ಮುಕ್ತ ಸಹಜ ಕೃಷಿಯನ್ನು ಉತ್ತೇಜಿಸಲಾಗುವುದು. ಆರಂಭಿಕವಾಗಿ ಗಂಗಾ ನದಿಯ ಉದ್ದಕ್ಕೂ 5 ಕಿಮೀ ಅಗಲದ ಕಾರಿಡಾರ್‌ಗಳಲ್ಲಿ ರೈತರ ಜಮೀನುಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುವುದು.
- ಕೃಷಿ ಮತ್ತು ಗ್ರಾಮೀಣ ಉದ್ಯಮಗಳ ಸ್ಟಾರ್ಟಪ್‌ಗಳಿಗೆ ಹಣಕಾಸು ಒದಗಿಸಲು ಸಂಯೋಜಿತ ಬಂಡವಾಳ ನಿಧಿಯನ್ನು ನಬಾರ್ಡ್.ಸುಗಮಗೊಳಿಸುತ್ತದೆ.
- ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ 'ಕಿಸಾನ್ ಡ್ರೋನ್ಸ್'.
ಕೆನ್ -ಬೆಟ್ವಾ ಯೋಜನೆ
- ಕೆನ್ - ಬೆಟ್ವಾ ಜೋಡಣೆ ಯೋಜನೆಯ ಅನುಷ್ಠಾನಕ್ಕೆ 1400 ಕೋಟಿ ರೂ.ವೆಚ್ಚ.
- ಕೆನ್-ಬೆಟ್ವಾ ಜೋಡಣೆ ಯೋಜನೆಯಿಂದ 9.08 ಲಕ್ಷ ಹೆಕ್ಟೇರ್ ರೈತರ ಜಮೀನುಗಳಿಗೆ ನೀರಾವರಿ.
ಎಂಎಸ್ಎಂಇ
- ಉದ್ಯಮ್, ಇ-ಶ್ರಮ್, ಎನ್ ಸಿ ಎಸ್ ಮತ್ತು ಅಸೀಮ್ ಪೋರ್ಟಲ್‌ಗಳನ್ನು ಪರಸ್ಪರ ಜೋಡಿಸಲಾಗಿದೆ.
- 130 ಲಕ್ಷ ಎಂಎಸ್ಎಂಇಗಳಿಗೆ ತುರ್ತು ಸಾಲ ಖಾತ್ರಿ ಯೋಜನೆ (ಇ ಸಿ ಎಲ್ ಜಿ ಎಸ್ ) ಅಡಿಯಲ್ಲಿ ಹೆಚ್ಚುವರಿ ಸಾಲವನ್ನು ಒದಗಿಸಲಾಗಿದೆ.
- ಇ ಸಿ ಎಲ್ ಜಿ ಎಸ್ ಅನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು.
- ಇ ಸಿ ಎಲ್ ಜಿ ಎಸ್ ಅಡಿಯಲ್ಲಿ ಖಾತರಿ ಕವರ್ ಅನ್ನು 50000 ಕೋಟಿ ರೂ.ಗಳಿಂದ ಒಟ್ಟು 5 ಲಕ್ಷ ಕೋಟಿ ರೂ.ಗಳಿಗೆ ವಿಸ್ತರಿಸಲಾಗುವುದು.
- ಮೈಕ್ರೋ ಮತ್ತು ಸ್ಮಾಲ್ ಎಂಟರ್‌ಪ್ರೈಸಸ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ (ಸಿಜಿಟಿಎಂಎಸ್ಇ) ಅಡಿಯಲ್ಲಿ ಕಿರು ಮತ್ತು ಸಣ್ಣ ಉದ್ಯಮಗಳಿಗೆ 2 ಲಕ್ಷ ಕೋಟಿ ಹೆಚ್ಚುವರಿ ಸಾಲ.
- 6000 ಕೋಟಿ ರೂ.ಗಳ ವೆಚ್ಚದಲ್ಲಿ ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ ಕಾರ್ಯಕ್ರಮವನ್ನು ಹೊರತರಲಾಗುವುದು.
ಕೌಶಲ್ಯ ಅಭಿವೃದ್ಧಿ
- ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆ (DESH-ಸ್ಟಾಕ್ ಇ-ಪೋರ್ಟಲ್) ಅನ್ನು ಆನ್‌ಲೈನ್ ತರಬೇತಿಯ ಮೂಲಕ ನಾಗರಿಕರಿಗೆ ಕೌಶಲ್ಯ, ಮರುಕೌಶಲ್ಯ ಅಥವಾ ಕೌಶಲ್ಯವನ್ನು ಹೆಚ್ಚಿಸಲು ಪ್ರಾರಂಭಿಸಲಾಗುವುದು.
- 'ಡ್ರೋನ್ ಶಕ್ತಿ' ಮತ್ತು ಡ್ರೋನ್-ಆಸ್-ಎ-ಸೇವೆಗೆ (DrAAS) ಅನುಕೂಲವಾಗುವಂತೆ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲಾಗುತ್ತದೆ.
ಶಿಕ್ಷಣ
- ಪಿಎಂ ಇ-ವಿದ್ಯಾದ ‘ಒಂದು ತರಗತಿ -ಒಂದು ಟಿವಿ ಚಾನೆಲ್’ ಕಾರ್ಯಕ್ರಮವನ್ನು 200 ಟಿವಿ ಚಾನೆಲ್‌ಗಳಿಗೆ ವಿಸ್ತರಿಸಲಾಗುವುದು.
- ವರ್ಚುವಲ್ ಲ್ಯಾಬ್‌ಗಳು ಮತ್ತು ಸ್ಕಿಲಿಂಗ್ ಇ-ಲ್ಯಾಬ್‌ಗಳನ್ನು ನಿರ್ಣಾಯಕ ಚಿಂತನಾ ಕೌಶಲ್ಯ ಮತ್ತು ಕಲಿಕೆಯ ವಾತಾವರಣವನ್ನು ಉತ್ತೇಜಿಸಲು ಸ್ಥಾಪಿಸಲಾಗುವುದು.
- ಡಿಜಿಟಲ್ ಶಿಕ್ಷಕರ ಮೂಲಕ ತಲುಪಿಸಲು ಉತ್ತಮ ಗುಣಮಟ್ಟದ ಇ-ಕಂಟೆಂಟ್ ಅಭಿವೃದ್ಧಿಪಡಿಸಲಾಗುವುದು.
- ವೈಯಕ್ತಿಕ ನೆಲೆಯ ಕಲಿಕಾ ಅನುಭವದೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣಕ್ಕಾಗಿ ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು.
ಆರೋಗ್ಯ
- ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಮುಕ್ತ ವೇದಿಕೆಯನ್ನು ಆರಂಭಿಸಲಾಗುವುದು.
- ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳಿಗಾಗಿ 'ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ’ ಪ್ರಾರಂಭಿಸಲಾಗುವುದು.
- 23 ಟೆಲಿ- ಮಾನಸಿಕ ಆರೋಗ್ಯ ಕೇಂದ್ರಗಳ ನೆಟ್‌ವರ್ಕ್ ಅನ್ನು ಸ್ಥಾಪಿಸಲಾಗುವುದು, ಇದಕ್ಕೆ ನಿಮ್ಹಾನ್ಸ್ ನೋಡಲ್ ಕೇಂದ್ರವಾಗಿರುತ್ತದೆ ಮತ್ತು ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ-ಬೆಂಗಳೂರು (ಐಐಐಟಿಬಿ) ತಂತ್ರಜ್ಞಾನ ಬೆಂಬಲವನ್ನು ಒದಗಿಸುತ್ತದೆ.
ಸಕ್ಷಮ್ ಅಂಗನವಾಡಿ
- ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್ ಅಂಗನವಾಡಿ ಮತ್ತು ಪೋಶಣ್ 2.0 ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸಮಗ್ರ ಪ್ರಯೋಜನಗಳು.
- ಎರಡು ಲಕ್ಷ ಅಂಗನವಾಡಿಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಲಾಗುವುದು.
ಹರ್ ಘರ್, ನಲ್ ಸೇ ಜಲ್
- ಹರ್ ಘರ್, ನಲ್ ಸೇ ಜಲ್ ಅಡಿಯಲ್ಲಿ 2022-23ರಲ್ಲಿ 3.8 ಕೋಟಿ ಮನೆಗಳಿಗೆ ನಲ್ಲಿ ನೀರು ಒದಗಿಸಲು 60,000 ಕೋಟಿ ರೂ. ಮೀಸಲಿಡಲಾಗಿದೆ.
ಎಲ್ಲರಿಗೂ ವಸತಿ
- ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2022-23ರಲ್ಲಿ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 48,000 ಕೋಟಿ ರೂ. ಮೀಸಲಿಡಲಾಗಿದೆ.
ಈಶಾನ್ಯ ಪ್ರದೇಶದ ಪ್ರಧಾನ ಮಂತ್ರಿಯವರ ಅಭಿವೃದ್ಧಿ ಉಪಕ್ರಮ (PM-DevINE)
- ಹೊಸ ಯೋಜನೆ PM-DevINE ಈಶಾನ್ಯದಲ್ಲಿ ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯ ಒದಗಿಸಲು ಪ್ರಾರಂಭಿಸಲಾಗಿದೆ.
- ಯೋಜನೆಯಡಿಯಲ್ಲಿ ಯುವಕರು ಮತ್ತು ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು 1,500 ಕೋಟಿ ರೂ.ಗಳ ಆರಂಭಿಕ ಹಂಚಿಕೆ ಮಾಡಲಾಗಿದೆ.
ರೋಮಾಂಚಕ ಗ್ರಾಮಗಳ ಕಾರ್ಯಕ್ರಮ
- ವಿರಳ ಜನಸಂಖ್ಯೆ, ಸೀಮಿತ ಸಂಪರ್ಕ ಮತ್ತು ಮೂಲಸೌಕರ್ಯ ಹೊಂದಿರುವ ಉತ್ತರದ ಗಡಿಯಲ್ಲಿ ಗಡಿ ಗ್ರಾಮಗಳ ಅಭಿವೃದ್ಧಿಗಾಗಿ ರೋಮಾಂಚಕ ಗ್ರಾಮಗಳ ಕಾರ್ಯಕ್ರಮ.
ಬ್ಯಾಂಕಿಂಗ್
- 1.5 ಲಕ್ಷ ಅಂಚೆ ಕಛೇರಿಗಳಲ್ಲಿ ಶೇಕಡಾ 100 ರಷ್ಟು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಬರಲಿದೆ.
- 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ (ಡಿಬಿಯು) ಗಳನ್ನುವಾಣಿಜ್ಯ ಬ್ಯಾಂಕ್‌ಗಳು ಸ್ಥಾಪಿಸಲಿವೆ.
ಇ- ಪಾಸ್‌ಪೋರ್ಟ್
- ಎಂಬೆಡೆಡ್ ಚಿಪ್ ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಾಗುವುದು.
ನಗರ ಯೋಜನೆ
- ಕಟ್ಟಡದ ಬೈಲಾಗಳ ಆಧುನೀಕರಣ, ಟೌನ್ ಪ್ಲಾನಿಂಗ್ ಸ್ಕೀಮ್‌ಗಳು (ಟಿಪಿಎಸ್), ಮತ್ತು ಟ್ರಾನ್ಸಿಟ್ ಓರಿಯೆಂಟೆಡ್ ಡೆವಲಪ್‌ಮೆಂಟ್ (ಟಿಒಡಿ) ಅನುಷ್ಠಾನಗೊಳಿಸಲಾಗುವುದು.
- ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬ್ಯಾಟರಿ ವಿನಿಮಯ ನೀತಿಯನ್ನು ಹೊರತರಲಾಗುವುದು.
ಭೂ ದಾಖಲೆಗಳ ನಿರ್ವಹಣೆ
- ಭೂ ದಾಖಲೆಗಳ ಐಟಿ-ಆಧಾರಿತ ನಿರ್ವಹಣೆಗಾಗಿ ವಿಶಿಷ್ಟ ಭೂಮಿ ಗುರುತಿನ ಸಂಖ್ಯೆ.
ವೇಗವರ್ಧಿತ ಕಾರ್ಪೊರೇಟ್ ನಿರ್ಗಮನ
- ಸೆಂಟರ್ ಫಾರ್ ಪ್ರೊಸೆಸಿಂಗ್ ಆಕ್ಸಿಲರೇಟೆಡ್ ಕಾರ್ಪೊರೇಟ್ ಎಕ್ಸಿಟ್ (ಸಿ-ಪಿಎಸಿಇ) ಅನ್ನು ಕಂಪನಿಗಳ ತ್ವರಿತ ಮುಚ್ಚುವಿಕೆಗಾಗಿ ಸ್ಥಾಪಿಸಲಾಗುವುದು.
ಎವಿಜಿಸಿ ಉತ್ತೇಜನಾ ಕಾರ್ಯಪಡೆ
- ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ (ಎವಿಜಿಸಿ) ವಲಯದ ಸಾಮರ್ಥ್ಯವನ್ನು ಅರಿತುಕೊಳ್ಳಲು ಉತ್ತೇಜನಾ ಕಾರ್ಯಪಡೆಯನ್ನು ರಚಿಸಲಾಗುವುದು.
ಟೆಲಿಕಾಂ ವಲಯ
- ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ ಭಾಗವಾಗಿ 5G ಗಾಗಿ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವಿನ್ಯಾಸ-ನೇತೃತ್ವದ ಉತ್ಪಾದನೆ ಯೋಜನೆಯನ್ನು ಪ್ರಾರಂಭಿಸಲಾಗುವುದು.
ರಫ್ತು ಉತ್ತೇಜನ
- 'ಉದ್ಯಮ ಮತ್ತು ಸೇವಾ ಕೇಂದ್ರಗಳ ಅಭಿವೃದ್ಧಿ'ಯಲ್ಲಿ ಪಾಲುದಾರರಾಗಲು ರಾಜ್ಯಗಳನ್ನು ಸಕ್ರಿಯಗೊಳಿಸಲು ವಿಶೇಷ ಆರ್ಥಿಕ ವಲಯಗಳ ಕಾಯಿದೆಯನ್ನು ಹೊಸ ಕಾಯ್ದೆಯ ಮೂಲಕ ಬದಲಾಯಿಸಲಾಗುವುದು.
ರಕ್ಷಣೆಯಲ್ಲಿ ಆತ್ಮನಿರ್ಭರತೆ
- 2022-23 ರಲ್ಲಿ ದೇಶೀಯ ಉದ್ಯಮಕ್ಕಾಗಿ ಶೇ.68 ಬಂಡವಾಳ ಖರೀದಿ ಬಜೆಟ್ ಅನ್ನು ಮೀಸಲಿಡಲಾಗಿದೆ. 2021-22ರಲ್ಲಿ ಇದು ಶೇ.58 ಇತ್ತು.
- ರಕ್ಷಣಾ ಆರ್ ಮತ್ತು ಡಿ ಅನ್ನು ಉದ್ಯಮಗಳಿಗೆ ಮುಕ್ತಗೊಳಿಸಲಾಗುವುದು, ಸ್ಟಾರ್ಟ್‌ಅಪ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ.25 ರಕ್ಷಣಾ ಆರ್ ಮತ್ತು ಡಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
- ಪರೀಕ್ಷೆ ಮತ್ತು ಪ್ರಮಾಣೀಕರಣದ ಅವಶ್ಯಕತೆಗಳನ್ನು ಪೂರೈಸಲು ಸ್ವತಂತ್ರ ನೋಡಲ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು.
ವಿನೂತನ ಅವಕಾಶಗಳು
- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಜಿಯೋಸ್ಪೇಷಿಯಲ್ ಸಿಸ್ಟಮ್ಸ್ ಮತ್ತು ಡ್ರೋನ್‌ಗಳು, ಸೆಮಿಕಂಡಕ್ಟರ್ ಮತ್ತು ಅದರ ಪರಿಸರ ವ್ಯವಸ್ಥೆ, ಬಾಹ್ಯಾಕಾಶ ಆರ್ಥಿಕತೆ, ಜಿನೋಮಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್, ಗ್ರೀನ್ ಎನರ್ಜಿ ಮತ್ತು ಕ್ಲೀನ್ ಮೊಬಿಲಿಟಿ ಸಿಸ್ಟಮ್‌ಗಳಂತಹ ವಿನೂತನ ಅವಕಾಶಗಳಲ್ಲಿ ಆರ್&ಡಿಗಾಗಿ ಸರ್ಕಾರದ ಬೆಂಬಲವನ್ನು ಒದಗಿಸಲಾಗುವುದು.
ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ
- 2030 ರ ವೇಳೆಗೆ 280 ಗಿಗಾವ್ಯಾಟ್ ಸ್ಥಾಪಿತ ಸೌರಶಕ್ತಿಯ ಗುರಿಯನ್ನು ಪೂರೈಸಲು ಹೆಚ್ಚಿನ ದಕ್ಷತೆಯ ಸೌರ ಮಾಡ್ಯೂಲ್‌ಗಳ ತಯಾರಿಕೆಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಗಾಗಿ 19,500 ಕೋಟಿ ರೂ. ಹೆಚ್ಚುವರಿ ಹಂಚಿಕೆ.
- ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಶೇ. ಐದರಿಂದ ಏಳರಷ್ಟು ಬಯೋಮಾಸ್ ಉಂಡೆಗಳನ್ನು ಉರಿಸಲಾಗುವುದು.
ವಾರ್ಷಿಕವಾಗಿ 38 ಎಂಎಂಟಿ CO2 ಉಳಿತಾಯ
- ರೈತರಿಗೆ ಹೆಚ್ಚುವರಿ ಆದಾಯ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶಗಳು,
- ಕೃಷಿ ಕ್ಷೇತ್ರಗಳಲ್ಲಿ ಹುಲ್ಲು ಸುಡುವುದನ್ನು ತಪ್ಪಿಸಲು ಸಹಾಯ.
- ಕಲ್ಲಿದ್ದಲು ಅನಿಲೀಕರಣ ಮತ್ತು ಕಲ್ಲಿದ್ದಲನ್ನು ಉದ್ಯಮಕ್ಕೆ ರಾಸಾಯನಿಕಗಳಾಗಿ ಪರಿವರ್ತಿಸಲು ನಾಲ್ಕು ಪ್ರಾಯೋಗಿಕ ಯೋಜನೆಗಳನ್ನು ಸ್ಥಾಪಿಸಲಾಗುವುದು
- ಕೃಷಿ-ಅರಣ್ಯವನ್ನು ಕೈಗೊಳ್ಳಲು ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ರೈತರಿಗೆ ಆರ್ಥಿಕ ಬೆಂಬಲ.
ಸಾರ್ವಜನಿಕ ಬಂಡವಾಳ ಹೂಡಿಕೆ
- 2022-23 ರಲ್ಲಿ ಖಾಸಗಿ ಹೂಡಿಕೆ ಮತ್ತು ಬೇಡಿಕೆಯನ್ನು ಹೆಚ್ಚಿಸಲು ಸಾರ್ವಜನಿಕ ಹೂಡಿಕೆಉ ಮುಂದುವರಿಕೆ.
- ಬಂಡವಾಳ ವೆಚ್ಚವು ಪ್ರಸಕ್ತ ವರ್ಷದಲ್ಲಿರುವ 5.54 ಲಕ್ಷ ಕೋಟಿ ರೂ.ಗಳಿಂದ 2022-23 ರಲ್ಲಿ 7.50 ಲಕ್ಷ ಕೋಟಿ ರೂ.ಗೆ ಶೇ.35.4 ರಷ್ಟು ತೀವ್ರವಾಗಿ ಏರಿದೆ.
- 2022-23 ರಲ್ಲಿ ಜಿಡಿಪಿಯ ಶೇ.2.9 ರಷ್ಟಿರಲಿದೆ.
- ಕೇಂದ್ರ ಸರ್ಕಾರದ 'ಪರಿಣಾಮಕಾರಿ ಬಂಡವಾಳ ವೆಚ್ಚ' 2022-23ರಲ್ಲಿ 10.68 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ಜಿಡಿಪಿಯ ಸುಮಾರು ಶೇ.4.1.
ಗಿಫ್ಟ್-ಐ ಎಫ್ ಎಸ್ ಸಿ
- ಗಿಫ್ಟ್ ನಗರದಲ್ಲಿ ವಿಶ್ವದರ್ಜೆಯ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳನ್ನು ಆರಂಭಿಸಲು ಅನುಮತಿಸಲಾಗಿದೆ.
- ಅಂತರಾಷ್ಟ್ರೀಯ ಮಧ್ಯಸ್ಥಿಕೆ ಮಂಡಳಿ ಅಡಿಯಲ್ಲಿ ವಿವಾದಗಳನ್ನು ಸಕಾಲಿಕವಾಗಿ ಇತ್ಯರ್ಥಪಡಿಸಲು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಸ್ಥಾಪಿಸಲಾಗುವುದು.
ಸಂಪನ್ಮೂಲಗಳ ಕ್ರೋಢೀಕರಣ
- ಡೇಟಾ ಸೆಂಟರ್‌ಗಳು ಮತ್ತು ಎನರ್ಜಿ ಸ್ಟೋರೇಜ್ ಸಿಸ್ಟಮ್‌ಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡಲಾಗುವುದು.
- ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೇಟ್ ಇಕ್ವಿಟಿ ಕಳೆದ ವರ್ಷ 5.5 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿದ್ದು, ಇದು ಅತಿ ದೊಡ್ಡ ಸ್ಟಾರ್ಟ್ ಅಪ್ ಮತ್ತು ಬೆಳವಣಿಗೆಯ ಪರಿಸರ ವ್ಯವಸ್ಥೆಗೆ ಅನುಕೂಲ ಮಾಡಿಕೊಟ್ಟಿದೆ. ಈ ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
- ಸಂಯೋಜಿತ ನಿಧಿಗಳ ಮೂಲಕ ವಿನೂತನ ವಲಯಗಳಿಗೆ ಉತ್ತೇಜನ.
- ಹಸಿರು ಮೂಲಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಾರ್ವಭೌಮ ಹಸಿರು ಬಾಂಡ್‌ಗಳನ್ನು ತರಲಾಗುವುದು.
ಡಿಜಿಟಲ್ ರೂಪಾಯಿ
- 2022-23 ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಡಿಜಿಟಲ್ ರೂಪಾಯಿಯ ಪರಿಚಯ.
ರಾಜ್ಯಗಳಿಗೆ ಹೆಚ್ಚಿನ ಹಣಕಾಸು ಅವಕಾಶ ಒದಗಿಸುವುದು
- ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಹಣಕಾಸು ನೆರವು ಯೋಜನೆಗಾಗಿ ವರ್ಧಿತ ವೆಚ್ಚ.
- ಬಜೆಟ್ ಅಂದಾಜುಗಳಲ್ಲಿ 10,000 ಕೋಟಿ ರೂ.ಗಳಿಂದ ಪ್ರಸಕ್ತ ವರ್ಷಕ್ಕೆ 15,000 ಕೋಟಿ ರೂ.ಪರಿಷ್ಕೃತ ಅಂದಾಜು.
- ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯಗಳಿಗೆ ಸಹಾಯ ಮಾಡಲು 2022-23 ರಲ್ಲಿ 1 ಲಕ್ಷ ಕೋಟಿ ರೂ.ಹಂಚಿಕೆ: ಐವತ್ತು ವರ್ಷಗಳ ಬಡ್ಡಿ ರಹಿತ ಸಾಲಗಳು.
- 2022-23 ರಲ್ಲಿ, ರಾಜ್ಯಗಳಿಗೆ ಜಿ ಎಸ್ ಡಿ ಪಿಯ ಶೇ.4 ರಷ್ಟು ವಿತ್ತೀಯ ಕೊರತೆಯನ್ನು ಅನುಮತಿಸಲಾಗುವುದು, ಅದರಲ್ಲಿ ಶೇ.0.5 ವಿದ್ಯುತ್ ವಲಯದ ಸುಧಾರಣೆಗಳಿಗೆ ಸಂಬಂಧಿಸಿರುತ್ತದೆ.
ವಿತ್ತೀಯ ನಿರ್ವಹಣೆ
- 2021-22ರ ಬಜೆಟ್ ಅಂದಾಜುಗಳು: 34.83 ಲಕ್ಷ ಕೋಟಿ ರೂ.
- 2021-22ರ ಪರಿಷ್ಕೃತ ಅಂದಾಜುಗಳು: 37.70 ಲಕ್ಷ ಕೋಟಿ ರೂ.
- 2022-23 ರಲ್ಲಿ ಒಟ್ಟು ವೆಚ್ಚ 39.45 ಲಕ್ಷ ಕೋಟಿ ರೂ.ಎಂದು ಅಂದಾಜಿಸಲಾಗಿದೆ
- 2022-23 ರಲ್ಲಿ ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು 22.84 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
- ಪ್ರಸಕ್ತ ವರ್ಷದಲ್ಲಿ ವಿತ್ತೀಯ ಕೊರತೆ: ಜಿಡಿಪಿಯ ಶೇ.6.9 (ಬಜೆಟ್ ಅಂದಾಜುಗಳಲ್ಲಿ ಶೇ.6.8 ಇತ್ತು).
- 2022-23 ರಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ.6.4 ಎಂದು ಅಂದಾಜಿಸಲಾಗಿದೆ.
ಭಾಗ - ಬಿ
ನೇರ ತೆರಿಗೆಗಳು
ಸ್ಥಿರ ಮತ್ತು ಉತ್ತಮ ತೆರಿಗೆ ಪದ್ಧತಿಯ ನೀತಿಯನ್ನು ಮುಂದುವರೆಸಲು
- ನಂಬಲರ್ಹ ತೆರಿಗೆ ಪದ್ಧತಿಯನ್ನು ಸ್ಥಾಪಿಸುವ ದೃಷ್ಟಿಕೋನ.
- ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಮತ್ತು ದಾವೆಗಳನ್ನು ಕಡಿಮೆ ಮಾಡಲು.
ಹೊಸ 'ಅಪ್ ಡೇಟೆಡ್ ರಿಟರ್ನ್' ಅನ್ನು ಪರಿಚಯಿಸಲಾಗುತ್ತಿದೆ
- ಹೆಚ್ಚುವರಿ ತೆರಿಗೆ ಪಾವತಿಯ ಮೇಲೆ ಅಪ್ ಡೇಟೆಡ್ ರಿಟರ್ನ್ ಅನ್ನು ಸಲ್ಲಿಸಲು ಅವಕಾಶ.
- ಮೌಲ್ಯಮಾಪಕನಿಗೆ ಆದಾಯ ತಪ್ಪಿಹೋಗಿರುವ ಆದಾಯವನ್ನು ಘೋಷಿಸಲು ಅನುವು ಮಾಡಿಕೊಡುತ್ತದೆ.
- ಇದನ್ನು ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಎರಡು ವರ್ಷಗಳಲ್ಲಿ ಸಲ್ಲಿಸಬಹುದು.
ಸಹಕಾರ ಸಂಘಗಳು
- ಸಹಕಾರಿ ಸಂಘಗಳು ಪಾವತಿಸುವ ಪರ್ಯಾಯ ಕನಿಷ್ಠ ತೆರಿಗೆಯನ್ನು ಶೇಕಡಾ 18.5 ರಿಂದ ಶೇಕಡಾ 15 ಕ್ಕೆ ಇಳಿಸಲಾಗಿದೆ.
- ಸಹಕಾರ ಸಂಘಗಳು ಮತ್ತು ಕಂಪನಿಗಳಿಗೆ ಸಮಾನ ಅವಕಾಶ ನೀಡುತ್ತದೆ.
- 1 ಕೋಟಿ ರೂ.ಗಿಂತ ಹೆಚ್ಚು ಮತ್ತು 10 ಕೋಟಿ ರೂ.ವರೆಗಿನ ಒಟ್ಟು ಆದಾಯ ಹೊಂದಿರುವ ಸಹಕಾರಿ ಸಂಘಗಳ ಮೇಲಿನ ಸರ್ಚಾರ್ಜ್ ಅನ್ನು ಶೇಕಡಾ 12 ರಿಂದ ಶೇಕಡಾ 7 ಕ್ಕೆ ಇಳಿಸಲಾಗಿದೆ.
ವಿಕಲಾಂಗ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ
- ವಿಮಾ ಯೋಜನೆಯಿಂದ ಬರುವ ವರ್ಷಾಶನ ಮತ್ತು ಒಟ್ಟು ಮೊತ್ತದ ಪಾವತಿಯನ್ನು ಪೋಷಕರು/ಪಾಲಕರ ಜೀವಿತಾವಧಿಯಲ್ಲಿ ಅಂದರೆ, 60 ವರ್ಷ ವಯಸ್ಸಿನ ಪೋಷಕರು/ಪಾಲಕರ ಮೇಲೆ ಅಂಗವಿಕಲ ಅವಲಂಬಿತರಿಗೆ ಅನುಮತಿಸಲಾಗುವುದು.
ರಾಷ್ಟ್ರೀಯ ಪಿಂಚಣಿ ಯೋಜನೆ ಕೊಡುಗೆಯಲ್ಲಿ ಸಮಾನತೆ
- ರಾಜ್ಯ ಸರ್ಕಾರಿ ನೌಕರರ ಎನ್ ಪಿ ಎಸ್ ಖಾತೆಗೆ ಉದ್ಯೋಗದಾತರ ಕೊಡುಗೆಯ ಮೇಲೆ ತೆರಿಗೆ ಕಡಿತದ ಮಿತಿಯನ್ನು ಶೇ.10 ರಿಂದ ಶೇ.14 ಕ್ಕೆ ಹೆಚ್ಚಿಸಲಾಗಿದೆ.
- ಅವರನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸಮನಾಗಿ ತರುತ್ತದೆ.
- ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ಸ್ಟಾರ್ಟ್-ಅಪ್‌ಗಳಿಗೆ ಪ್ರೋತ್ಸಾಹ
- ಅರ್ಹ ಸ್ಟಾರ್ಟ್-ಅಪ್‌ಗಳು ತೆರಿಗೆ ಪ್ರಯೋಜನವನ್ನು ಪಡೆಯಲು ಒಂದು ವರ್ಷದವರೆಗೆ ಅಂದರೆ, 31.03.2023 ರವರೆಗೆ ಸ್ಥಾಪನೆಯ ಅವಧಿಯನ್ನು ವಿಸ್ತರಿಸಲಾಗಿದೆ.
- ಈ ಹಿಂದೆ ಇದು 31.03.2022 ವರೆಗೆ ಮಾತ್ರ ಇತ್ತು.
ರಿಯಾಯಿತಿ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಪ್ರೋತ್ಸಾಹ
- ಸೆಕ್ಷನ್ 115BAB ಅಡಿಯಲ್ಲಿ ಉತ್ಪಾದನೆ ಅಥವಾ ತಯಾರಿಕೆಯನ್ನು ಪ್ರಾರಂಭಿಸುವ ಕೊನೆಯ ದಿನಾಂಕವನ್ನು ಒಂದು ವರ್ಷದವರೆಗೆ ಅಂದರೆ 31ನೇ ಮಾರ್ಚ್, 2023 ರಿಂದ 31ನೇ ಮಾರ್ಚ್, 2024 ರವರೆಗೆ ವಿಸ್ತರಿಸಲಾಗಿದೆ.
ವರ್ಚುವಲ್ ಡಿಜಿಟಲ್ ಸ್ವತ್ತುಗಳ ತೆರಿಗೆ ಯೋಜನೆ
- ವರ್ಚುವಲ್ ಡಿಜಿಟಲ್ ಸ್ವತ್ತುಗಳಿಗೆ ನಿರ್ದಿಷ್ಟ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗಿದೆ.
- ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಆದಾಯಕ್ಕೆ ಶೇಕಡಾ 30 ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.
- ಸ್ವಾಧೀನದ ವೆಚ್ಚವನ್ನು ಹೊರತುಪಡಿಸಿ ಅಂತಹ ಆದಾಯವನ್ನು ಲೆಕ್ಕಾಚಾರ ಮಾಡುವಾಗ ಯಾವುದೇ ಖರ್ಚು ಅಥವಾ ಭತ್ಯೆಗೆ ಸಂಬಂಧಿಸಿದಂತೆ ಯಾವುದೇ ಕಡಿತಕ್ಕೆ ಅನುಮತಿ ಇರುವುದಿಲ್ಲ.
- ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಆದ ನಷ್ಟವನ್ನು ಯಾವುದೇ ಇತರ ಆದಾಯಕ್ಕೆ ಹೊಂದಿಸಲಾಗುವುದಿಲ್ಲ.
- ವಹಿವಾಟಿನ ವಿವರಗಳನ್ನು ಪಡೆಯಲು, ವಿತ್ತೀಯ ಮಿತಿಗಿಂತ ಹೆಚ್ಚಿನ ಪರಿಗಣನೆಯ ಶೇಕಡಾ 1 ರ ದರದಲ್ಲಿ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಗೆ ಸಂಬಂಧಿಸಿದಂತೆ ಮಾಡಿದ ಪಾವತಿಯ ಮೇಲೆ ಟಿಡಿಎಸ್ ಅನ್ನು ನೀಡಲಾಗುತ್ತದೆ.
- ವರ್ಚುವಲ್ ಡಿಜಿಟಲ್ ಆಸ್ತಿಯ ಉಡುಗೊರೆಯನ್ನು ಸ್ವೀಕರಿಸುವವರಿಗೂ ತೆರಿಗೆ ವಿಧಿಸಲಾಗುತ್ತದೆ.
ದಾವೆ ನಿರ್ವಹಣೆ
- ಕಾನೂನಿನ ಸಮಸ್ಯೆಯು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳಿಗೆ ಸಮಾನವಾಗಿರುವ ಪ್ರಕರಣಗಳಲ್ಲಿ, ಅಂತಹ ಕಾನೂನಿನ ಪ್ರಶ್ನೆಯನ್ನು ನ್ಯಾಯಾಲಯವು ನಿರ್ಧರಿಸುವವರೆಗೆ ಇಲಾಖೆಯಿಂದ ಮೇಲ್ಮನವಿ ಸಲ್ಲಿಸುವಿಕೆಯನ್ನು ಮುಂದೂಡಲಾಗುತ್ತದೆ.
- ತೆರಿಗೆದಾರರು ಮತ್ತು ಇಲಾಖೆಯ ನಡುವಿನ ಪುನರಾವರ್ತಿತ ದಾವೆಗಳನ್ನು ಕಡಿಮೆ ಮಾಡಲು ಪ್ರಮುಖವಾಗಿ ಸಹಾಯ ಮಾಡುತ್ತದೆ.
ಐಎಫ್‌ಎಸ್‌ಸಿಗೆ ತೆರಿಗೆ ಪ್ರೋತ್ಸಾಹ
- ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಒಳಪಟ್ಟು, ಕೆಳಗಿನವುಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ
- ಸಾಗರೋತ್ತರ ನಿಷ್ಪನ್ನ ಸಾಧನಗಳಿಂದ ಅನಿವಾಸಿಯ ಆದಾಯ.
- ಕ ಸಾಗರೋತ್ತರ ಬ್ಯಾಂಕಿಂಗ್ ಘಟಕದಿಂದ ನೀಡಲಾದ ಕೌಂಟರ್ ಉತ್ಪನ್ನಗಳ ಮೂಲಕ ಆದಾಯ.
- ಹಡಗಿನ ಗುತ್ತಿಗೆಯ ಖಾತೆಯಲ್ಲಿ ಗೌರವಧನ ಮತ್ತು ಬಡ್ಡಿಯಿಂದ ಆದಾಯ.
- ಐಎಫ್‌ಎಸ್‌ಸಿಯಲ್ಲಿ ಪೋರ್ಟ್‌ಫೋಲಿಯೋ ನಿರ್ವಹಣಾ ಸೇವೆಗಳಿಂದ ಪಡೆದ ಆದಾಯ.
ಸರ್ಚಾರ್ಜ್ ತರ್ಕಬದ್ಧಗೊಳಿಸುವಿಕೆ
- ಎಒಪಿ (ಒಪ್ಪಂದವನ್ನು ಕಾರ್ಯಗತಗೊಳಿಸಲು ರಚಿಸಲಾದ ಒಕ್ಕೂಟ) ಗಳ ಮೇಲಿನ ಸರ್ಚಾರ್ಜ್ ಶೇಕಡಾ 15 ಕ್ಕೆ ಮಿತಿಗೊಳಿಸಲಾಗಿದೆ.
- ಪ್ರತ್ಯೇಕ ಕಂಪನಿಗಳು ಮತ್ತು ಎಒಪಿ ಗಳ ನಡುವಿನ ಸರ್ಚಾರ್ಜ್ ನಲ್ಲಿನ ಅಸಮಾನತೆಯನ್ನು ಕಡಿಮೆ ಮಾಡುತ್ತದೆ.
- 15 ಪ್ರತಿಶತಕ್ಕೆ ಮಿತಿಗೊಳಿಸಲಾದ ಯಾವುದೇ ರೀತಿಯ ಸ್ವತ್ತುಗಳ ವರ್ಗಾವಣೆಯ ಮೇಲೆ ಉಂಟಾಗುವ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ಸರ್ಚಾರ್ಜ್.
- ಸ್ಟಾರ್ಟ್ ಅಪ್ ಸಮುದಾಯಕ್ಕೆ ಉತ್ತೇಜನ ನೀಡುತ್ತದೆ.
ಆರೋಗ್ಯ ಮತ್ತು ಶಿಕ್ಷಣ ಸೆಸ್
- ಆದಾಯ ಮತ್ತು ಲಾಭದ ಮೇಲಿನ ಯಾವುದೇ ಸರ್ಚಾರ್ಜ್ ಅಥವಾ ಸೆಸ್ ಅನ್ನು ವ್ಯಾಪಾರ ವೆಚ್ಚವಾಗಿ ಅನುಮತಿಸಲಾಗುವುದಿಲ್ಲ.
ತೆರಿಗೆ ವಂಚನೆಯನ್ನುತಡೆಗಟ್ಟುವುದು
- ಶೋಧನೆ ಮತ್ತು ಸಮೀಕ್ಷೆ ಕಾರ್ಯಾಚರಣೆಗಳ ಸಮಯದಲ್ಲಿ ಪತ್ತೆಯಾದ ಬಹಿರಂಗಪಡಿಸದ ಆದಾಯದ ವಿರುದ್ಧ ಯಾವುದೇ ನಷ್ಟವನ್ನು ಅನುಮತಿಸಲಾಗುವುದಿಲ್ಲ.
ಟಿಡಿಎಸ್ ನಿಬಂಧನೆಗಳನ್ನು ತರ್ಕಬದ್ಧಗೊಳಿಸುವುದು
- ಏಜೆಂಟರ ಕೈಯಲ್ಲಿ ತೆರಿಗೆ ವಿಧಿಸಬಹುದಾದ ವ್ಯಾಪಾರ ಉತ್ತೇಜನ ತಂತ್ರವಾಗಿ ಏಜೆಂಟ್‌ಗಳಿಗೆ ಲಾಭಗಳು.
- ಆರ್ಥಿಕ ವರ್ಷದಲ್ಲಿ ಅಂತಹ ಪ್ರಯೋಜನಗಳ ಒಟ್ಟು ಮೌಲ್ಯವು 20,000 ರೂ. ಮೀರಿದರೆ, ಪ್ರಯೋಜನಗಳನ್ನು ನೀಡುವ ವ್ಯಕ್ತಿಗೆ ತೆರಿಗೆ ಕಡಿತವನ್ನು ನೀಡಲಾಗುತ್ತದೆ.
ಪರೋಕ್ಷ ತೆರಿಗೆಗಳು
ಜಿಎಸ್‌ಟಿಯಲ್ಲಿ ಗಮನಾರ್ಹ ಪ್ರಗತಿ
- ಸಾಂಕ್ರಾಮಿಕ ರೋಗದ ಹೊರತಾಗಿಯೂ ಜಿಎಸ್‌ಟಿ ಆದಾಯಗಳು ಹೆಚ್ಚಾಗಿವೆ. ಈ ಬೆಳವಣಿಗೆಗೆ ತೆರಿಗೆದಾರರು ಶ್ಲಾಘನಾರ್ಹರಾಗಿದ್ದಾರೆ.
ವಿಶೇಷ ಆರ್ಥಿಕ ವಲಯಗಳು
- ಎಸ್ ಇ ಜಡ್ ಗಳ ಸಂಪೂರ್ಣ ಐಟಿ ಚಾಲಿತ ಕಸ್ಟಮ್ಸ್ ವ್ಯವಸ್ಥೆ ಮತ್ತು ಕಸ್ಟಮ್ಸ್ ರಾಷ್ಟ್ರೀಯ ಪೋರ್ಟಲ್ ಕಾರ್ಯನಿರ್ವಹಣೆಯನ್ನು 30ನೇ ಸೆಪ್ಟೆಂಬರ್ 2022 ರೊಳಗೆ ಕಾರ್ಯಗತಗೊಳಿಸಲಾಗುತ್ತದೆ.
ಕಸ್ಟಮ್ಸ್ ಸುಧಾರಣೆಗಳು ಮತ್ತು ತೆರಿಗೆ ದರ ಬದಲಾವಣೆಗಳು
- ಮುಖಾಮುಖಿ ರಹಿತ ಕಸ್ಟಮ್ಸ್ ಅನ್ನು ಸಂಪೂರ್ಣವಾಗಿ ಸ್ಥಾಪಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಕಸ್ಟಮ್ಸ್ ರಚನೆಗಳು ಅಸಾಧಾರಣವಾದ ಮುಂಚೂಣಿಯ ಕೆಲಸವನ್ನು ಮಾಡಿವೆ.
ಪ್ರಾಜೆಕ್ಟ್ ಆಮದು ಮತ್ತು ಬಂಡವಾಳ ಸರಕುಗಳು
- ಬಂಡವಾಳ ಸರಕುಗಳು ಮತ್ತು ಪ್ರಾಜೆಕ್ಟ್ ಆಮದುಗಳಲ್ಲಿನ ರಿಯಾಯಿತಿ ದರಗಳನ್ನು ಕ್ರಮೇಣವಾಗಿ ತೆಗೆದುಹಾಕುವುದು ಮತ್ತು 7.5 ಪ್ರತಿಶತದಷ್ಟು ಸಾಧಾರಣ ಸುಂಕವನ್ನು ಅನ್ವಯಿಸುವುದು - ದೇಶೀಯ ವಲಯದ ಬೆಳವಣಿಗೆಗೆ ಮತ್ತು 'ಮೇಕ್ ಇನ್ ಇಂಡಿಯಾ' ಕ್ಕೆ ಅನುಕೂಲಕರವಾಗಿದೆ.
- ದೇಶದೊಳಗೆ ಉತ್ಪಾದಿಸದ ಸುಧಾರಿತ ಯಂತ್ರೋಪಕರಣಗಳಿಗೆ ಕೆಲವು ವಿನಾಯಿತಿಗಳು ಮುಂದುವರೆಯುತ್ತವೆ.
- ಬಂಡವಾಳ ಸರಕುಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು - ವಿಶೇಷವಾಗಿ ಎರಕಹೊಯ್ದ, ಬಾಲ್ ಸ್ಕ್ರೂ ಮತ್ತು ಲೀನಿಯರ್ ಮೋಷನ್ ಗೈಡ್‌ನಂತಹ ಕಚ್ಚಾ ವಸ್ತುಗಳ ಮೇಲೆ ಕೆಲವು ವಿನಾಯಿತಿಗಳನ್ನು ಪರಿಚಯಿಸಲಾಗಿದೆ.
ಕಸ್ಟಮ್ಸ್ ವಿನಾಯಿತಿಗಳು ಮತ್ತು ಸುಂಕದ ಸರಳೀಕರಣದ ಪರಿಶೀಲನೆ
- ಕೆಲವು ಕೃಷಿ ಉತ್ಪನ್ನಗಳು, ರಾಸಾಯನಿಕಗಳು, ಬಟ್ಟೆಗಳು, ವೈದ್ಯಕೀಯ ಸಾಧನಗಳು ಮತ್ತು ಔಷಧಿಗಳಂತಹ 350 ಕ್ಕೂ ಹೆಚ್ಚು ವಿನಾಯಿತಿ ನಮೂದುಗಳನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ.
- ನಿರ್ದಿಷ್ಟವಾಗಿ ರಾಸಾಯನಿಕಗಳು, ಜವಳಿ ಮತ್ತು ಲೋಹಗಳಂತಹ ವಲಯಗಳಿಗೆ ಕಸ್ಟಮ್ಸ್ ದರ ಮತ್ತು ಸುಂಕದ ರಚನೆಯನ್ನು ಸರಳಗೊಳಿಸುವುದು ಮತ್ತು ವಿವಾದಗಳನ್ನು ಕಡಿಮೆ ಮಾಡುವುದು, 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ದೃಷ್ಟಿಕೋನಕ್ಕೆ ನುಗುಣವಾಗಿ - ಭಾರತದಲ್ಲಿ ತಯಾರಿಸಬಹುದಾದ ಅಥವಾ ತಯಾರಿಸುವ ವಸ್ತುಗಳ ಮೇಲಿನ ವಿನಾಯಿತಿಯನ್ನು ತೆಗೆದುಹಾಕುವುದು ಮತ್ತು ಮಧ್ಯಂತರ ಉತ್ಪನ್ನಗಳ ತಯಾರಿಕೆಯ ಕಚ್ಚಾ ವಸ್ತುಗಳ ಮೇಲೆ ರಿಯಾಯಿತಿ ಸುಂಕಗಳನ್ನು ಒದಗಿಸುವುದು.
ನಿರ್ದಿಷ್ಟ ವಲಯದ ಪ್ರಸ್ತಾಪಗಳು
ಎಲೆಕ್ಟ್ರಾನಿಕ್ಸ್
- ಧರಿಸಬಹುದಾದ ಸಾಧನಗಳು, ಶ್ರವಣ ಸಾಧನಗಳು ಮತ್ತು ಎಲೆಕ್ಟ್ರಾನಿಕ್ ಸ್ಮಾರ್ಟ್ ಮೀಟರ್‌ಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಸುಲಭಗೊಳಿಸಲು, ಶ್ರೇಣೀಕೃತ ದರ ರಚನೆಯನ್ನು ಒದಗಿಸಲು ಕಸ್ಟಮ್ಸ್ ಸುಂಕದ ದರಗಳನ್ನು ಸರಿಹೊಂದಿಸಲಾಗುವುದು.
- ಹೆಚ್ಚಿನ ಬೆಳವಣಿಗೆಯ ಎಲೆಕ್ಟ್ರಾನಿಕ್ ವಸ್ತುಗಳ ದೇಶೀಯ ಉತ್ಪಾದನೆಯನ್ನು ಸಕ್ರಿಯಗೊಳಿಸಲು, ಮೊಬೈಲ್ ಫೋನ್ ಚಾರ್ಜರ್‌ಗಳ ಟ್ರಾನ್ಸ್‌ಫಾರ್ಮರ್ ಭಾಗಗಳಿಗೆ ಮತ್ತು ಮೊಬೈಲ್ ಕ್ಯಾಮೆರಾ ಮಾಡ್ಯೂಲ್‌ನ ಕ್ಯಾಮೆರಾ ಲೆನ್ಸ್ ಮತ್ತು ಇತರ ಕೆಲವು ವಸ್ತುಗಳಿಗೆ ಸುಂಕ ರಿಯಾಯಿತಿಗಳು.
ರತ್ನಗಳು ಮತ್ತು ಆಭರಣಗಳು
- ರತ್ನಗಳು ಮತ್ತು ಆಭರಣ ವಲಯಕ್ಕೆ ಉತ್ತೇಜನ ನೀಡಲು, ಕಟ್ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಕಲ್ಲುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ; ಸರಳವಾದ ಸಾನ್ ವಜ್ರಕ್ಕೆ ಕಸ್ಟಮ್ಸ್ ಸುಂಕವಿಲ್ಲ.
- ಇ-ಕಾಮರ್ಸ್ ಮೂಲಕ ಆಭರಣಗಳ ರಫ್ತಿಗೆ ಅನುಕೂಲ ಕಲ್ಪಿಸಲು ಈ ವರ್ಷದ ಜೂನ್‌ನೊಳಗೆ ಸರಳೀಕೃತ ನಿಯಂತ್ರಣ ಚೌಕಟ್ಟನ್ನು ಜಾರಿಗೆ ತರಲಾಗುವುದು.
- ಕಡಿಮೆ ಮೌಲ್ಯದ ಅನುಕರಣೆ ಆಭರಣಗಳ ಆಮದನ್ನು ತಡೆಯಲು, ಅನುಕರಣೆ ಆಭರಣ ಆಮದು ಮೇಲೆ ಪ್ರತಿ ಕೆಜಿಗೆ ಕನಿಷ್ಠ 400 ರೂಪಾಯಿಗಳ ಕಸ್ಟಮ್ಸ್ ಸುಂಕ.
ರಾಸಾಯನಿಕಗಳು
- ಕೆಲವು ಪ್ರಮುಖ ರಾಸಾಯನಿಕಗಳಾದ ಮೆಥನಾಲ್, ಅಸಿಟಿಕ್ ಆಸಿಡ್ ಮತ್ತು ಪೆಟ್ರೋಲಿಯಂ ಸಂಸ್ಕರಣೆಗೆ ಹೆವಿ ಫೀಡ್ ಸ್ಟಾಕ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದೆ; ಸಾಕಷ್ಟು ದೇಶೀಯ ಸಾಮರ್ಥ್ಯವಿರುವ ಸೋಡಿಯಂ ಸೈನೈಡ್ ಮೇಲೆ ಸುಂಕವನ್ನು ಹೆಚ್ಚಿಸಲಾಗುತ್ತಿದೆ. ಇದು ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಎಂಎಸ್ಎಂಇ
- ಛತ್ರಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 20 ಕ್ಕೆ ಏರಿಸಲಾಗಿದೆ. ಛತ್ರಿಗಳ ಬಿಡಿ ಭಾಗಗಳಿಗೆ ವಿನಾಯಿತಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ.
- ಭಾರತದಲ್ಲಿ ತಯಾರಾಗುವ ಕೃಷಿ ವಲಯದ ಉಪಕರಣಗಳು ಮತ್ತು ಉಪಕರಣಗಳ ಮೇಲೆ ವಿನಾಯಿತಿಯನ್ನು ತರ್ಕಬದ್ಧಗೊಳಿಸಲಾಗುತ್ತದೆ
- ಎಂಎಸ್ಎಂಇ ಸೆಕೆಂಡರಿ ಸ್ಟೀಲ್ ಉತ್ಪಾದಕರಿಗೆ ಪರಿಹಾರ ನೀಡಲು ಕಳೆದ ವರ್ಷ ಉಕ್ಕಿನ ಸ್ಕ್ರ್ಯಾಪ್‌ಗೆ ನೀಡಲಾದ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದೆ
- ಪ್ರಸ್ತುತ ಚಾಲ್ತಿಯಲ್ಲಿರುವ ಲೋಹದ ಹೆಚ್ಚಿನ ಬೆಲೆಗಳನ್ನು ನಿಭಾಯಿಸಲು ಸಾರ್ವಜನಿಕ ಹಿತಾಸಕ್ತಿಯಿಂದ, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಲೇಪಿತ ಉಕ್ಕಿನ ಫ್ಲಾಟ್ ಉತ್ಪನ್ನಗಳು, ಮಿಶ್ರಲೋಹ ಸ್ಟೀಲ್ ಮತ್ತು ಹೈ-ಸ್ಪೀಡ್ ಸ್ಟೀಲ್ ಬಾರ್‌ಗಳ ಮೇಲೆ ಕೆಲವು ಆಂಟಿ-ಡಂಪಿಂಗ್ ಮತ್ತು ಸಿವಿಡಿ ಹಿಂತೆಗೆದುಕೊಳ್ಳಲಾಗುತ್ತಿದೆ.
ರಫ್ತುಗಳು
- ರಫ್ತುಗಳನ್ನು ಉತ್ತೇಜಿಸಲು, ಅಲಂಕಾರ, ಟ್ರಿಮ್ಮಿಂಗ್, ಫಾಸ್ಟೆನರ್‌ಗಳು, ಬಟನ್‌ಗಳು, ಝಿಪ್ಪರ್, ಲೈನಿಂಗ್ ಮೆಟೀರಿಯಲ್, ನಿರ್ದಿಷ್ಟ ಚರ್ಮ, ಪೀಠೋಪಕರಣ ಫಿಟ್ಟಿಂಗ್‌ಗಳು ಮತ್ತು ಪ್ಯಾಕೇಜಿಂಗ್ ಬಾಕ್ಸ್‌ಗಳಂತಹ ಐಟಂಗಳ ಮೇಲೆ ವಿನಾಯಿತಿಗಳನ್ನು ಒದಗಿಸಲಾಗಿದೆ.
- ಸೀಗಡಿ ರಫ್ತುಗಳನ್ನು ಉತ್ತೇಜಿಸಲು, ಸೀಗಡಿ ಕೃಷಿಗೆ ಅಗತ್ಯವಿರುವ ಕೆಲವು ವಸ್ತುಗಳ ಮೇಲಿನ ಸುಂಕವನ್ನು ಕಡಿಮೆಗೊಳಿಸಲಾಗಿದೆ.
ಇಂಧನ ಮಿಶ್ರಣವನ್ನು ಉತ್ತೇಜಿಸಲು ತೆರಿಗೆ ಕ್ರಮ
- ಇಂಧನ ಮಿಶ್ರಣವನ್ನು ಉತ್ತೇಜಿಸಲು, 1 ಅಕ್ಟೋಬರ್ 2022 ರಿಂದ ಮಿಶ್ರಣವಲ್ಲದ ಇಂಧನದ ಪ್ರತಿ ಲೀಟರ್ ಮೇಲೆ 2 ರೂ. ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುವುದು.
***
(Release ID: 1794401)
Visitor Counter : 22736
Read this release in:
Tamil
,
Telugu
,
Malayalam
,
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia