ಹಣಕಾಸು ಸಚಿವಾಲಯ

2021-22ರ ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು


2021-22ರ ಸಾಲಿನಲ್ಲಿ ದೇಶದ ಅರ್ಥ ವ್ಯವಸ್ಥೆ ವಾಸ್ತವದಲ್ಲಿ 9.2% ಪ್ರಗತಿ ನಿರೀಕ್ಷೆ

2022-23ರ ಸಾಲಿನಲ್ಲಿ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಅಂದಾಜು ಬೆಳವಣಿಗೆ ದರ 8.0-8.5%

ಸಾಂಕ್ರಾಮಿಕ ಸೋಂಕು: ಸರ್ಕಾರದ ಪೂರೈಕೆ ವಲಯದ ಸುಧಾರಣೆಗಳು ಸುಸ್ಥಿರ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ ಮತ್ತು ವಿಸ್ತರಣೆಗೆ ಸಿದ್ಧತೆ ನಡೆಸಿವೆ.

2021 ಏಪ್ರಿಲ್-ನವೆಂಬರ್ ಅವಧಿಯಲ್ಲಿ ಬಂಡವಾಳ ವೆಚ್ಚ ವಿನಿಯೋಗ (ವಾರ್ಷಿಕ ಆಧಾರದಲ್ಲಿ)13.5% ಏರಿಕೆ

2021 ಡಿಸೆಂಬರ್ 31ಕ್ಕೆ ಅನ್ವಯವಾಗುವಂತೆ ವಿದೇಶಿ ವಿನಿಮಯ ಸಂಗ್ರಹ 633.6 ಶತಕೋಟಿ (ಬಿಲಿಯನ್) ಡಾಲರ್ ಗೆ ಹೆಚ್ಚಳ

2022-23ರಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಅರ್ಥ ವ್ಯವಸ್ಥೆ ಸದೃಢವಾಗಿದೆ: ಬೃಹತ್ ಆರ್ಥಿಕತೆ ಸ್ಥಿರತೆ ಸೂಚ್ಯಂಕಗಳಿಂದ ಹೊರಮೂಡಿದ ವರದಿ

ಕಂದಾಯ ಸ್ವೀಕೃತಿಯಲ್ಲಿ ಭರ್ಜರಿ ಪ್ರಗತಿ

ಸಾಮಾಜಿಕ ವಲಯ: 2021-22ರಲ್ಲಿ ಜಿಡಿಪಿ ಬೆಳವಣಿಗೆಗೆ ಅನುಗುಣವಾಗಿ ಸಾಮಾಜಿಕ ಸೇವೆಗಳ ಮೇಲಿನ ವೆಚ್ಚ ಹೆಚ್ಚಳ, 8.6%ಗೆ ಏರಿಕೆ; 2014-15ರ ಸಾಲಿನಲ್ಲಿ ಸಾಮಾಜಿಕ ಸೇವೆಗಳ ಮೇಲಿನ ವೆಚ್ಚ ಅಂದಾಜು 6.2%

ಆರ್ಥಿಕ ಪುನಶ್ಚೇತನದ ಪರಿಣಾಮವಾಗಿ 2020-21ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಪುಟಿದೆದ್ದ ಉದ್ಯೋಗ ಸೃಷ್ಟಿಯ ಸೂಚ್ಯಂಕ(ಸಾಂಕ್ರಾಮಿಕ ಸೋಂಕಿಗೆ ಮುನ್ನಾ ಸ್ಥಿತಿಗೆ ಮರಳಿದೆ)

ಕೋವಿಡ್ ಕಾಣಿಸಿಕೊಳ್ಳುವ ಮುನ್ನ ಇದ್ದ ಸ್ಥಿತಿಗೆ ಪ್ರಬಲವಾಗಿ ಪುಟಿದೆದ್ದ ದೇಶದ

Posted On: 31 JAN 2022 3:14PM by PIB Bengaluru

ಕೇಂದ್ರ ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು 2021-22ನೇ ಸಾಲಿನ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಆರ್ಥಿಕ ಸಮೀಕ್ಷೆಯ ಪ್ರಮುಖ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಅರ್ಥ ವ್ಯವಸ್ಥೆಯ ಸ್ಥಿತಿಗತಿ:

  • ಭಾರತದ ಅರ್ಥ ವ್ಯವಸ್ಥೆ 2021-22ನೇ ಸಾಲಿನಲ್ಲಿ ವಾಸ್ತವ ಪರಿಸ್ಥಿತಿಯಲ್ಲಿ 9.2% ಬೆಳವಣಿಗೆ ಕಾಣುತ್ತದೆ ಎಂದು ಅಂದಾಜು ಮಾಡಲಾಗಿದೆ(ಇದು ಮೊದಲ ಮುಂಗಡ ಅಂದಾಜು ಲೆಕ್ಕಾಚಾರ). ಅದು ತರುವಾಯ 7.3%ಗೆ ಕುಗ್ಗಬಹುದು.
  • 2022-23 ಅವಧಿಯಲ್ಲಿ ದೇಶದ ಆರ್ಥಿಕತೆ ಅಂದರೆ ಜಿಡಿಪಿ ವಾಸ್ತವವಾಗಿ 8.0-8.5% ದರದಲ್ಲಿ ಬೆಳವಣಿಗೆ ಎಂದು ಅಂದಾಜಿಸಲಾಗಿದೆ.
  • ಮುಂಬರುವ ವರ್ಷದಲ್ಲಿ ಖಾಸಗಿ ವಲಯದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವ ಜತೆ ಹೂಡಿಕೆ ಒಳಹರಿವು ಚೇತರಿಸಿಕೊಳ್ಳುವ ನಿರೀಕ್ಷೆ ಇರುವುದರಿಂದ, ಇದು ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಬೆಂಬಲ ನೀಡಲಿದೆ.
  • ದೇಶದ ಅರ್ಥ ವ್ಯವಸ್ಥೆ 2022-23ರಲ್ಲಿ 8.7% ನೈಜ ಬೆಳವಣಿಗೆ ಕಾಣಲಿದೆ ಎಂದು ವಿಶ್ವಬ್ಯಾಂಕ್ ಇತ್ತೀಚೆಗೆ ಅಂದಾಜು ಮುನ್ಸೂಚನೆ ನೀಡಿದೆ. ಹಾಗೆಯೇ, ಏಷ್ಯಾ ಅಭಿವೃದ್ಧಿ ಬ್ಯಾಂಕ್ 7.5% ಬೆಳವಣಿಗೆ ಅಂದಾಜು ಮಾಡಿದೆ. ಇವೆರಡು ಸಂಸ್ಥೆಗಳ ಮುನ್ಸೂಚನೆಯು ಕೇಂದ್ರ ಸರ್ಕಾರದ ಅಂದಾಜು ಬೆಳವಣಿಗೆ ದರವು ಹೋಲಿಕೆ ಮಾಡುವಂತಿದೆ.
  • ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಇತ್ತೀಚಿನ ವಿಶ್ವ ಆರ್ಥಿಕ ಮುನ್ನೋಟದ ಮುನ್ಸೂಚನೆ ವರದಿಪ್ರಕಾರ, ಭಾರತದ ನೈಜ ಜಿಡಿಪಿ ಪ್ರಗತಿ ದರ 2021-22 ಮತ್ತು 2022-23ರಲ್ಲಿ 9% ಮತ್ತು 2023-2024 ರಲ್ಲಿ 7.1% ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಇದರಿಂದ  ಭಾರತವು ಸತತ 3 ವರ್ಷಗಳ ಕಾಲ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವರದಿ ತಿಳಿಸಿದೆ.
  • 2021-22 ಸಾಲಿನಲ್ಲಿ ಕೃಷಿ ಮತ್ತು ಸಂಬಂಧಿತ ವಲಯವು 3.9%, ಕೈಗಾರಿಕಾ ವಲಯವು 11.8% ಮತ್ತು ಸೇವಾ ವಲಯವು 8.2% ಬೆಳವಣಿಗೆ ನಿರೀಕ್ಷೆ ಹೊಂದಲಾಗಿದೆ.
  • 2021-22ನೇ ಸಾಲಿನಲ್ಲಿ ಬೇಡಿಕೆ ವಲಯಕ್ಕೆ ಸಂಬಂಧಿಸಿದಂತೆ, ಬಳಕೆ ಪ್ರಮಾಣ ಅಂದಾಜು 7.0%, ಒಟ್ಟು ಸ್ಥಿರ ಬಂಡವಾಳ ಸಂಗ್ರಹ(ಜಿಎಫ್ ಸಿಎಫ್-ಹೂಡಿಕೆ) 15%, ರಫ್ತು 16.5% ಮತ್ತು ಆಮದು ವಹಿವಾಟು 29.4%ಗೆ ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.
  • 2022-23ರಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಅರ್ಥ ವ್ಯವಸ್ಥೆ ಸದೃಢವಾಗಿದೆ ಎಂದು ಬೃಹತ್ ಆರ್ಥಿಕತೆ ಸ್ಥಿರತೆ ಸೂಚ್ಯಂಕಗಳ ವರದಿ ಸೂಚಿಸುತ್ತಿದೆ.
  • ಅತ್ಯಧಿಕ ವಿದೇಶಿ ವಿನಿಮಯ ಸಂಗ್ರಹ, ವಿದೇಶಿ ನೇರ ಹೂಡಿಕೆಯ ಸುಸ್ಥಿರ ಒಳಹರಿವು ಮತ್ತು ಏರಿಕೆ ಕಾಣುತ್ತಿರುವ ದೇಶದ ರಫ್ತು ಆದಾಯ ಇವೆಲ್ಲಾ ಸೇರಿ 2022-23 ಸಂಭಾವ್ಯ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಾಧ್ಯತೆಗಳಿಗೆ ಸಾಕಷ್ಟು ರಕ್ಷಣೆ ನೀಡಲಿವೆ.
  • ಕೋವಿಡ್ ಸಾಂಕ್ರಾಮಿಕ ಸೋಂಕಿನ 2ನೇ ಅಲೆಯು ಆರೋಗ್ಯದ ಮೇಲೆ ಗಂಭೀರ ಸಮಸ್ಯೆ ತಂದೊಡ್ಡಿತು. ಆದರೆ 2020-21ರಲ್ಲಿ ಲಾಕ್ ಡೌನ್ ಘೋಷಿಸಿದಾಗ ಎದುರಾದ ಆರ್ಥಿಕ ಪರಿಣಾಮಗಳಿಗೆ ಹೋಲಿಸಿದರೆ, 2ನೇ ಅಲೆಯ ಪರಿಣಾಮ ಸಣ್ಣದು.
  • ಸಾಂಕ್ರಾಮಿಕ ಸೋಂಕಿನಿಂದ ಸಮಾಜದ ದುರ್ಬಲ ವರ್ಗಗಳು ಮತ್ತು ಉದ್ಯಮ ವಲಯದ ಮೇಲಾದ ಪರಿಣಾಮಗಳನ್ನು ತಗ್ಗಿಸಲು ಭಾರತ ಸರ್ಕಾರ ಸುರಕ್ಷತಾ ಜಾಲ ಒಳಗೊಂಡ ವಿಶಿಷ್ಟ ಸ್ಪಂದನೆ ನೀಡಿದೆ. ಬಂಡವಾಳ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿ, ಆರ್ಥಿಕ ಪ್ರಗತಿಗೆ ನಾಂದಿ ಹಾಡಿದೆ. ಸುಸ್ಥಿರ ದೀರ್ಘಕಾಲೀನ ವಿಸ್ತರಣೆಗಾಗಿ ಪೂರೈಕೆ ವಲಯದಲ್ಲಿ ಸುಧಾರಣೆಗಳನ್ನು ತಂದಿದೆ.

ಹಣಕಾಸು ಅಭಿವೃದ್ಧಿಗಳು:

  • ಕೇಂದ್ರ ಸರ್ಕಾರದ ಕಂದಾಯ(ಆದಾಯ) ಸ್ವೀಕೃತಿ(2021 ಏಪ್ರಿಲ್-ನವೆಂಬರ್) 67.2%ಗೆ ಏರಿಕೆಯಾಗಿದೆ. 2021-22ರಲ್ಲಿ ಬೆಳವಣಿಗೆಯ ಬಜೆಟ್ ಅಂದಾಜು ನಿರೀಕ್ಷೆ 9.6 % ಇತ್ತು.
  • 2021 ಏಪ್ರಿಲ್-ನವೆಂಬರ್ ನಲ್ಲಿ ಒಟ್ಟು ತೆರಿಗೆ ಆದಾಯದಲ್ಲಿ 50% ಪ್ರಗತಿಯಾಗಿದೆ. 2019-20 ಸಾಂಕ್ರಾಮಿಕ ಸೋಂಕಿನ ಮುನ್ನಾ ಅವಧಿಗೆ ಹೋಲಿಸಿದರೆ ಬಲಿಷ್ಠ ಪ್ರಗತಿ ಇದಾಗಿದೆ.
  • 2021 ಏಪ್ರಿಲ್-ನವೆಂಬರ್ ನಲ್ಲಿ ಬಂಡವಾಳ ವೆಚ್ಚ 13.5% ಹೆಚ್ಚಳ ಕಂಡಿದೆ. ಮೂಲಸೌಕರ್ಯ ಸಂಬಂಧಿತ ವಲಯಗಳ ಅಭಿವೃದ್ಧಿಗೆ ಗಮನ ನೀಡಿದ್ದೇ ಇದಕ್ಕೆ ಕಾರಣ.
  • ಸುಸ್ಥಿರ ಕಂದಾಯ (ತೆರಿಗೆ) ಸಂಗ್ರಹ ಮತ್ತು ಉದ್ದೇಶಿತ ವೆಚ್ಚ ನೀತಿಯಿಂದಾಗಿ 2021 ಏಪ್ರಿಲ್‌-ನವೆಂಬರ್‌ವರೆಗೆ ವಿತ್ತೀಯ ಕೊರತೆ  46.2%ಗೆ ತಗ್ಗಿದೆ.
  • ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಲ ಪ್ರಮಾಣ ಹೆಚ್ಚಾಗಿದೆ. 2020-21ನೇ ಸಾಲಿನಲ್ಲಿ ಸರ್ಕಾರದ ಸಾಲ ಮೊತ್ತವು ಜಿಡಿಪಿಯ 59.3%ಗೆ ಏರಿಕೆ ಆಗಿದೆ. ಅದು 2019-20ನೇ ಸಾಲಿನಲ್ಲಿ ಜಿಡಿಪಿಯ 49.1% ಇತ್ತು. ಆರ್ಥಿಕತೆಯ ಚೇತರಿಕೆಯೊಂದಿಗೆ ಅದು ಕಡಿಮೆ ಆಗುವ ನಿರೀಕ್ಷೆ ಹೊಂದಲಾಗಿದೆ.

ಬಾಹ್ಯ ವಲಯಗಳು

  • ಭಾರತದ ವಾಣಿಜ್ಯ ರಫ್ತು ಮತ್ತು ಆಮದು ವಹಿವಾಟು ಬಲವಾಗಿ ಚೇತರಿಸಿಕೊಂಡಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೋವಿಡ್ ಪೂರ್ವದ ಮಟ್ಟವನ್ನು ಮೀರಿಸಿದೆ.
  • ದುರ್ಬಲ ಪ್ರವಾಸೋದ್ಯಮ ಆದಾಯದ ಹೊರತಾಗಿಯೂ, ಪ್ರವಾಸೋದ್ಯಮ ಸೇವೆಯಲ್ಲಿನ ಆದಾಯ ಸ್ವೀಕೃತಿ ಮತ್ತು ಪಾವತಿಯು ಸಾಂಕ್ರಾಮಿಕ ಪೂರ್ವದ ಹಂತಗಳನ್ನು ದಾಟಿ, ಗಮನಾರ್ಹ ಚೇತರಿಕೆ ಕಂಡಿದೆ.
  • ವಿದೇಶಿ ಹೂಡಿಕೆಯ ಒಳಹರಿವು ಹೆಚ್ಚಳ, ನಿವ್ವಳ ಬಾಹ್ಯ ವಾಣಿಜ್ಯ ಸಾಲಗಳಲ್ಲಿ ಪುನಶ್ಚೇತನ, ಹೆಚ್ಚಿನ ಬ್ಯಾಂಕಿಂಗ್ ಬಂಡವಾಳ ಮತ್ತು ಹೆಚ್ಚುವರಿ ವಿಶೇಷ ಹಣಕಾಸು ಸ್ವೀಕೃತಿ ಹಕ್ಕುಗಳ (ಎಸ್ ಡಿ ಆರ್) ಹಂಚಿಕೆಯಿಂದಾಗಿ 2021-22 ಮೊದಲಾರ್ಧದಲ್ಲಿ ನಿವ್ವಳ ಬಂಡವಾಳದ ಹರಿವು 65.6 ಶತಕೋಟಿ ಡಾಲರ್ ಗೆ ಹೆಚ್ಚಾಗಿದೆ.
  • 2021 ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಬಾಹ್ಯ ಸಾಲ 593.1 ಶತಕೋಟಿ ಡಾಲರ್ ಗೆ ಏರಿಕೆ ಕಂಡಿದೆ. ವರ್ಷದ ಹಿಂದೆ ಅದು 556.8 ಶತಕೋಟಿ ಡಾಲರ್ ಇತ್ತು.
  • 2021-22 ಮೊದಲ ಅರ್ಧ ವರ್ಷದಲ್ಲಿ ವಿದೇಶಿ ವಿನಿಮಯ ಸಂಗ್ರಹ 699 ಶತಕೋಟಿ ಡಾಲರ್ ಗೆ ಹೆಚ್ಚಳ ಕಂಡು, ಡಿಸೆಂಬರ್ 31 ವರೆಗೆ ಅನ್ವಯವಾಗುವಂತೆ ಅದು 633.6 ಬಿಲಿಯನ್ ಡಾಲರ್ ಗೆ ಏರಿದೆ.
  • 2021  ನವೆಂಬರ್ ಅಂತ್ಯದ ವೇಳೆಗೆ ಚೀನಾ, ಜಪಾನ್ ಮತ್ತು ಸ್ವಿಜರ್ ಲೆಂಡ್ ನಂತರ ಭಾರತವು ವಿಶ್ವದಲ್ಲೇ 4ನೇ ಅತಿ ದೊಡ್ಡ ವಿದೇಶಿ ವಿನಿಮಯ ಸಂಗ್ರಹ ಹೊಂದಿರುವ ದೇಶವಾಗಿದೆ.

ವಿತ್ತೀಯ ನಿರ್ವಹಣೆ ಮತ್ತು ಹಣಕಾಸು ಮಧ್ಯಸ್ಥಿಕೆ

ದೇಶದ ಅರ್ಥ ವ್ಯವಸ್ಥೆಯಲ್ಲಿ ಸಾಕಷ್ಟು ನಗದು ಲಭ್ಯತೆ ಕ್ರೋಡೀಕರಿಸಲಾಗಿದೆ.

  • 2021-22ನೇ ಸಾಲಿನಲ್ಲಿ ರೆಪೊ ದರವನ್ನು 4%ನಲ್ಲಿ ಕಾಪಾಡಲಾಗಿದೆ.
  • ನಗದು ಲಭ್ಯತೆ ಹೆಚ್ಚಿಸಲು ಆರ್ ಬಿಐ, ಜಿ-ಸೆಕ್ಷನ್ ಸ್ವಾಧೀನ ಕಾರ್ಯಕ್ರಮ ಮತ್ತು ವಿಶೇಷ ದೀರ್ಘಾವಧಿಯ ರೆಪೊ ಕಾರ್ಯಾಚರಣೆಯಂತಹ ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಸಾಂಕ್ರಾಮಿಕ ಸೋಂಕಿನಿಂದ ಆದ ಆಘಾತಗಳಿಂದ ಅರ್ಥ ವ್ಯವಸ್ಥೆಯನ್ನು ಸಂರಕ್ಷಿಸಲು ದೇಶದ ವಾಣಿಜ್ಯ ಬ್ಯಾಂಕ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ.

  • ವಾರ್ಷಿಕ ಆಧಾರದಲ್ಲಿ ಬ್ಯಾಂಕ್ ಸಾಲ ಬೆಳವಣಿಗೆ 2021-22ರಲ್ಲಿ ಕ್ರಮೇಣವಾಗಿ ವೇಗ ಪಡೆದುಕೊಂಡಿದೆ. 2021 ಏಪ್ರಿಲ್ ನಲ್ಲಿ 5.3% ದರ  2021 ಡಿಸೆಂಬರ್ 31ಕ್ಕೆ ಅನ್ವಯವಾಗುವಂತೆ 9.2%ಗೆ ಏರಿಕೆ ಕಂಡಿದೆ.
  • ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳ ಒಟ್ಟಾರೆ ವಸೂಲಾಗದ ಸಾಲದ ಅನುಪಾತವು 2017-18 ಅಂತ್ಯದ ವೇಳೆಯಲ್ಲಿದ್ದ 11.2% ನಿಂದ 2021 ಸೆಪ್ಟೆಂಬರ್ ಅಂತ್ಯದ ವೇಳೆಗೆ 6.9%ಗೆ ಇಳಿದಿದೆ.
  • ಇದೇ ಅವಧಿಯಲ್ಲಿ ಅನುತ್ಪಾದಕ ಮುಂಗಡ(ಸಾಲ) ಅನುಪಾತವು 6%ನಿಂದ 2.2%ಗೆ ಕುಸಿದಿದೆ.
  • ಎಸ್ ಸಿಬಿಗಳ ಬಂಡವಾಳ ಮತ್ತು ಅಪಾಯ-ತೂಕದ ಆಸ್ತಿ ಅನುಪಾತವು 2013-14ರಲ್ಲಿ 13%ನಿಂದ 2021 ಸೆಪ್ಟೆಂಬರ್ ಅಂತ್ಯದ ವೇಳೆಗೆ 16.54%ಗೆ  ಏರಿಕೆಯಾಗುತ್ತಲೇ ಇತ್ತು.
  • ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸ್ವತ್ತುಗಳ ಮೇಲಿನ ಆದಾಯ ಮತ್ತು ಈಕ್ವಿಟಿ ಮೇಲಿನ ಆದಾಯವು 2021 ಸೆಪ್ಟೆಂಬರ್ ಅಂತ್ಯದ ಅವಧಿಗೆ ಸಕಾರಾತ್ಮಕವಾಗಿ ಮುಂದುವರಿದಿದೆ.

ಬಂಡವಾಳ ಮಾರುಕಟ್ಟೆಗಳಿಗೆ ಅಸಾಧಾರಣ ವರ್ಷ:

  • 2021 ಏಪ್ರಿಲ್-ನವೆಂಬರ್ ಅವಧಿಯಲ್ಲಿ 75 ಆರಂಭಿಕ ಷೇರು ಬಿಡುಗಡೆ (ಐಪಿಒ) ಮೂಲಕ 89,066 ಕೋಟಿ ರೂ. ಸಂಗ್ರಹಿಸಲಾಗಿದೆ. ಕಳೆದ ದಶಕದ ಯಾವುದೇ ವರ್ಷಕ್ಕೆ ಹೋಲಿಸಿದರೂ ಹೆಚ್ಚಿನ ಮೊತ್ತ ಇದಾಗಿದೆ.
  • ಸೆನ್ಸೆಕ್ಸ್ ಮತ್ತು ನಿಫ್ಟಿ 2021 ಅಕ್ಟೋಬರ್ 18 ರಂದು 61,766 ಮತ್ತು 18,477 ಕ್ಕೆ ಗರಿಷ್ಠ ಮಟ್ಟ ತಲುಪಿದ್ದವು.
  • ಪ್ರಮುಖ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಲ್ಲಿ, ಭಾರತೀಯ ಮಾರುಕಟ್ಟೆಗಳು 2021 ಏಪ್ರಿಲ್-ಡಿಸೆಂಬರ್ ನಲ್ಲಿ ಎಲ್ಲಾ ಮಾಕುಕಟ್ಟೆಗಳನ್ನು ಹಿಂದಿಕ್ಕಿವೆ.

ಬೆಲೆಗಳು ಮತ್ತು ಹಣದುಬ್ಬರ:

ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)-ಸಂಯೋಜಿತ ಹಣದುಬ್ಬರವು 2020-21 ಅವಧಿಯಲ್ಲಿದ್ದ 6.6 ಪ್ರತಿಶತದಿಂದ 2021-22 (ಏಪ್ರಿಲ್-ಡಿಸೆಂಬರ್) ರಲ್ಲಿ 5.2 ಪ್ರತಿಶತಕ್ಕೆ ಇಳಿಕೆಯಾಗಿದೆ.

  • ಚಿಲ್ಲರೆ ಹಣದುಬ್ಬರ ಕುಸಿತವು ಆಹಾರ ಹಣದುಬ್ಬರವು ತಗ್ಗಲು ಕಾರಣವಾಯಿತು.
  • ಆಹಾರ ಹಣದುಬ್ಬರವು 2021-22ರಲ್ಲಿ (ಏಪ್ರಿಲ್ನಿಂದ ಡಿಸೆಂಬರ್ವರೆಗೆ) ಸರಾಸರಿ ಶೇಕಡಾ 2.9 ರಷ್ಟಕ್ಕೆ ಕಡಿಮೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇಕಡಾ 9.1 ರಷ್ಟಿತ್ತು.
  • ಪರಿಣಾಮಕಾರಿ ಪೂರೈಕೆ ನಿರ್ವಹಣೆಯು ವರ್ಷದಲ್ಲಿ ಬಹುತೇಕ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಣಕ್ಕೆ ಕಾರಣವಾಗಿದೆ.
  • ಬೇಳೆಕಾಳುಗಳು ಮತ್ತು ಖಾದ್ಯ ತೈಲಗಳ ಬೆಲೆ ಏರಿಕೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
  • ಕೇಂದ್ರೀಯ ಅಬಕಾರಿ ತೆರಿಗೆಯಲ್ಲಿನ ಕಡಿತ ಮತ್ತು ಬಹುತೇಕ ರಾಜ್ಯಗಳಿಂದ ಮೌಲ್ಯವರ್ಧಿತ ತೆರಿಗೆಯಲ್ಲಿನ ಕಡಿತವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಿತು.

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಸಗಟು ಹಣದುಬ್ಬರವು 2021-22 (ಏಪ್ರಿಲ್ ನಿಂದ ಡಿಸೆಂಬರ್) ಅವಧಿಯಲ್ಲಿ 12.5 ಶೇಕಡಾಕ್ಕೆ ಏರಿಕೆಯಾಗಿದೆ.

  • ಇದಕ್ಕೆ ಕಾರಣಗಳು:
  • ಹಿಂದಿನ ವರ್ಷದಲ್ಲಿದ್ದ ಕಡಿಮೆ ಹಣದುಬ್ಬರ
  • ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ
  • ಕಚ್ಚಾ ತೈಲ ಮತ್ತು ಇತರ ಆಮದು ಒಳಹರಿವಿನ ಅಂತರಾಷ್ಟ್ರೀಯ ಬೆಲೆಗಳಲ್ಲಿ ತೀವ್ರ ಏರಿಕೆ ಮತ್ತು
  • ಸರಕು ವೆಚ್ಚಗಳಲ್ಲಿ ಹೆಚ್ಚಳ

ಸಿಪಿಐ-ಸಿ ಮತ್ತು ಡಬ್ಲ್ಯುಪಿಐ ಹಣದುಬ್ಬರದ ನಡುವಿನ ವ್ಯತ್ಯಾಸ:

  • ಮೇ 2020 ರಲ್ಲಿ ಭಿನ್ನತೆಯು 9.6 ಶೇಕಡಾವಾರು ಪಾಯಿಂಟ್ಗಳಿಗೆ ತಲುಪಿತು.
  • ಆದಾಗ್ಯೂ, ವರ್ಷ ಚಿಲ್ಲರೆ ಹಣದುಬ್ಬರವು ಡಿಸೆಂಬರ್ 2021 ರಲ್ಲಿ ಸಗಟು ಹಣದುಬ್ಬರಕ್ಕಿಂತ 8.0 ಶೇಕಡಾವಾರು ಪಾಯಿಂಟ್ಗಳಷ್ಟು ಕೆಳಗೆ ಇಳಿಯುವುದರೊಂದಿಗೆ ಭಿನ್ನತೆಯು ಹಿಂದುಮುಂದಾಗಿದೆ.
  • ಭಿನ್ನತೆಯನ್ನು ಅಂಶಗಳಿಂದ ವಿವರಿಸಬಹುದು:
  • ಬೇಸ್ ಎಫೆಕ್ಟ್‌ (ಕಳೆದ ವರ್ಷದ ಕಡಿಮೆ ಹಣದುಬ್ಬರ) ನಿಂದಾಗಿ ವ್ಯತ್ಯಾಸಗಳು
  • ಎರಡು ಸೂಚ್ಯಂಕಗಳ ಪರಿಧಿ ಮತ್ತು ವ್ಯಾಪ್ತಿಯ ವ್ಯತ್ಯಾಸ
  • ಬೆಲೆ ಸಂಗ್ರಹಗಳು
  • ಒಳಗೊಂಡಿರುವ ವಸ್ತುಗಳು
  • ಸರಕು ತೂಕದಲ್ಲಿ ವ್ಯತ್ಯಾಸ, ಮತ್ತು
  • ಡಬ್ಲ್ಯುಪಿಐ ಆಮದು ಮಾಡಿಕೊಂಡ ವಸ್ತುಗಳ ವೆಚ್ಚ ಹೆಚ್ಚಳದಲ್ಲಿನ ಹಣದುಬ್ಬರಕ್ಕೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ.
  • ಡಬ್ಲ್ಯುಪಿಐನಲ್ಲಿ ಬೇಸ್ ಎಫೆಕ್ಟ್ ಕ್ರಮೇಣ ಕ್ಷೀಣಿಸುವುದರೊಂದಿಗೆ, ಸಿಪಿಐ-ಸಿ ಮತ್ತು ಡಬ್ಲ್ಯುಪಿಐನಲ್ಲಿನ ವ್ಯತ್ಯಾಸವು ಕಡಿಮೆಯಾಗುವ ನಿರೀಕ್ಷೆಯಿದೆ.

ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ:

  • ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ (ಎಸ್ ಡಿ ಜಿ) ಭಾರತ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್ನಲ್ಲಿ ಭಾರತದ ಒಟ್ಟಾರೆ ಸ್ಕೋರ್ 2019-20 ರಲ್ಲಿದ್ದ 60 ಮತ್ತು 2018-19 ರಲ್ಲಿದ್ದ 57 ರಿಂದ 2020-21 ರಲ್ಲಿ 66 ಕ್ಕೆ ಸುಧಾರಿಸಿದೆ.
  • 2019-20 ರಲ್ಲಿದ್ದ ಮುಂಚೂಣಿ ರಾಜ್ಯಗಳ ಸಂಖ್ಯೆ (ಸ್ಕೋರ್ 65-99) 10 ರಿಂದ 2020-21 ರಲ್ಲಿ 22 ಕ್ಕೆ ಹೆಚ್ಚಾಗಿದೆ.
  • ಈಶಾನ್ಯ ಭಾರತದಲ್ಲಿ, ನೀತಿ ಆಯೋಗ ಈಶಾನ್ಯ ಪ್ರದೇಶದ ಜಿಲ್ಲಾ ಎಸ್ ಡಿ ಜಿ ಸೂಚ್ಯಂಕದಲ್ಲಿ 2021-22 ರಲ್ಲಿ 64 ಜಿಲ್ಲೆಗಳು ಮುಂಚೂಣಿಯಲ್ಲಿವೆ ಮತ್ತು 39 ಜಿಲ್ಲೆಗಳು ಉತ್ತಮ ಪ್ರದರ್ಶನ ನೀಡಿವೆ.
  • ಭಾರತವು ವಿಶ್ವದಲ್ಲಿ ಹತ್ತನೇ ಅತಿ ದೊಡ್ಡ ಅರಣ್ಯ ಪ್ರದೇಶವನ್ನು ಹೊಂದಿದೆ.
  • 2020 ರಲ್ಲಿ, ಭಾರತವು 2010 ರಿಂದ 2020 ಅವಧಿಯಲ್ಲಿ ತನ್ನ ಅರಣ್ಯ ಪ್ರದೇಶವನ್ನು ಹೆಚ್ಚಿಸುವಲ್ಲಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ.
  • 2020 ರಲ್ಲಿ, ಕಾಡುಗಳು ಭಾರತದ ಒಟ್ಟು ಭೌಗೋಳಿಕ ಪ್ರದೇಶದ ಶೇ.24 ಅನ್ನು ಆವರಿಸಿವೆ, ಇದು ಪ್ರಪಂಚದ ಒಟ್ಟು ಅರಣ್ಯ ಪ್ರದೇಶದ ಶೇ.2 ರಷ್ಟಾಗಿದೆ.
  • 2022 ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಹಂತಹಂತವಾಗಿ ತೆಗೆದುಹಾಕುವ ಗುರಿಯನ್ನು ಹೊಂದಿರುವ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮಗಳು, 2021ನ್ನು ಆಗಸ್ಟ್ 2021 ರಲ್ಲಿ ಅಧಿಸೂಚನೆ ಹೊರಡಿಸಲಾಯಿತು.
  • ಪ್ಲಾಸ್ಟಿಕ್ ಪ್ಯಾಕೇಜಿಂಗ್ಗಾಗಿ ಉತ್ಪಾದಕರ ಜವಾಬ್ದಾರಿಯ ಕರಡು ನಿಯಂತ್ರಣವನ್ನು ಅಧಿಸೂಚಿಸಲಾಗಿದೆ.
  • ಗಂಗಾ ನದಿಯ ಮುಖ್ಯ ಪ್ರದೇಶದಲ್ಲಿ ಮತ್ತು ಅದರ ಉಪನದಿಗಳಲ್ಲಿ ನೆಲೆಗೊಂಡಿರುವ ಒಟ್ಟು ಮಾಲಿನ್ಯಕಾರಕ ಕೈಗಾರಿಕೆಗಳ (ಜಿಪಿಐ) ಅನುಸರಣೆ ಸ್ಥಿತಿಯು 2017 ರಲ್ಲಿದ್ದ ಶೇ. 39 ರಿಂದ 2020 ರಲ್ಲಿ ಶೇ.81 ಕ್ಕೆ ಸುಧಾರಿಸಿದೆ.
  • ತ್ಯಾಜ್ಯ ವಿಸರ್ಜನೆಯು 2017 ರಲ್ಲಿದ್ದ ದಿನಕ್ಕೆ 349.13 ಮಿಲಿಯನ್ ಲೀಟರ್ (ಎಂ ಎಲ್ ಡಿ) ನಿಂದ 2020 ರಲ್ಲಿ 280.20 ಎಂ ಎಲ್ ಡಿ ಗೆ ಇಳಿಕೆಯಾಗಿದೆ.
  • ನವೆಂಬರ್ 2021 ರಲ್ಲಿ ಗ್ಲಾಸ್ಗೋದಲ್ಲಿ ನಡೆದ 26 ನೇ ಪಾರ್ಟಿಸ್ ಆಫ್ ಕಾನ್ಫರೆನ್ಸ್ (ಸಿಒಪಿ 26) ನಲ್ಲಿ ನೀಡಿದ ರಾಷ್ಟ್ರೀಯ ಹೇಳಿಕೆಯ ಭಾಗವಾಗಿ, 2030 ವೇಳೆಗೆ ಇಂಗಾಲ ಹೊರಸೂಸುವಿಕೆಯಲ್ಲಿ ಮತ್ತಷ್ಟು ಕಡಿತವನ್ನು ಸಕ್ರಿಯಗೊಳಿಸಲು ಮಹತ್ವಾಕಾಂಕ್ಷೆಯ ಗುರಿಗಳನ್ನು ಪ್ರಧಾನಿ ಘೋಷಿಸಿದರು.
  • ಬುದ್ದಿಹೀನ ಮತ್ತು ವಿನಾಶಕಾರಿ ಬಳಕೆಯ ಬದಲಿಗೆ ಜಾಗರೂಕ ಮತ್ತು ಉದ್ದೇಶಪೂರ್ವಕ ಬಳಕೆಯನ್ನು ಉತ್ತೇಜಿಸುವ 'ಲೈಫ್' (ಪರಿಸರಕ್ಕಾಗಿ ಜೀವನಶೈಲಿ) ಆಂದೋಲನ ಪ್ರಾರಂಭಿಸುವ ಅಗತ್ಯವನ್ನು ಒತ್ತಿಹೇಳಲಾಯಿತು.

ಕೃಷಿ ಮತ್ತು ಆಹಾರ ನಿರ್ವಹಣೆ:

  • ಕೃಷಿ ವಲಯವು ಕಳೆದ ಎರಡು ವರ್ಷಗಳಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ. 2020-21 ರಲ್ಲಿ ಶೇ.3.6 ಮತ್ತು 2021-22 ರಲ್ಲಿ ಶೇ.3.9 ರಷ್ಟು ಬೆಳವಣಿಗೆಯನ್ನು ದಾಖಲಿಸುವ ಮೂಲಕ ದೇಶದ ಒಟ್ಟು ಮೌಲ್ಯವರ್ಧನೆ (ಜಿವಿಎ) ಯಲ್ಲಿ ಗಣನೀಯವಾದ  ಶೇ.18.8 ಕೊಡುಗೆ ನೀಡಿದೆ.
  • ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸಲು ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ) ನೀತಿಯನ್ನು ಬಳಸಲಾಗುತ್ತಿದೆ.
  • ಇತ್ತೀಚಿನ ಪರಿಸ್ಥಿತಿ ಮೌಲ್ಯಮಾಪನ ಸಮೀಕ್ಷೆ (ಎಸ್ ಎಸ್) ಯಲ್ಲಿ 2014 ಎಸ್ ಎಸ್ ವರದಿಗೆ ಹೋಲಿಸಿದರೆ ಬೆಳೆ ಉತ್ಪಾದನೆಯಿಂದ ನಿವ್ವಳ ಆದಾಯ ಶೇ.22.6 ರಷ್ಟು ಹೆಚ್ಚಾಗಿದೆ.
  • ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಸಂಬಂಧಿತ ವಲಯಗಳು ಹೆಚ್ಚಿನ ಬೆಳವಣಿಗೆಯ ವಲಯಗಳಾಗಿ ಮತ್ತು ಕೃಷಿ ವಲಯದ ಒಟ್ಟಾರೆ ಬೆಳವಣಿಗೆಯ ಪ್ರಮುಖ ಚಾಲಕರಾಗಿ ಸ್ಥಿರವಾಗಿ ಹೊರಹೊಮ್ಮುತ್ತಿವೆ.
  • 2019-20 ಕ್ಕೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಯಲ್ಲಿ  ಜಾನುವಾರು ವಲಯವು ಶೇ.8.15 ರಷ್ಟು CAGR ನಲ್ಲಿ ಬೆಳೆದಿದೆ. ಇದು ಕೃಷಿ ಕುಟುಂಬಗಳಿಗೆ  ಅವರ ಸರಾಸರಿ ಮಾಸಿಕ ಆದಾಯದ ಸುಮಾರು ಶೇ.15 ರಷ್ಟು ಸ್ಥಿರ ಆದಾಯದ ಮೂಲವಾಗಿದೆ.
  • ಮೂಲಸೌಕರ್ಯ ಅಭಿವೃದ್ಧಿ, ಸಬ್ಸಿಡಿ ಸಾರಿಗೆ ಮತ್ತು ಕಿರು ಆಹಾರ ಉದ್ಯಮಗಳ ಔಪಚಾರಿಕತೆಗೆ ಬೆಂಬಲದ ವಿವಿಧ ಕ್ರಮಗಳ ಮೂಲಕ ಆಹಾರ ಸಂಸ್ಕರಣೆಯನ್ನು ಸರ್ಕಾರವು ಸುಗಮಗೊಳಿಸುತ್ತಿದೆ.
  • ಭಾರತವು ವಿಶ್ವದ ಅತಿದೊಡ್ಡ ಆಹಾರ ನಿರ್ವಹಣೆ ಕಾರ್ಯಕ್ರಮವನ್ನು ನಿರ್ವಹಿಸುತ್ತಿದೆ.
  • ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ನಂತಹ ಯೋಜನೆಗಳ ಮೂಲಕ ಆಹಾರ ಭದ್ರತಾ ಜಾಲದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.

ಕೈಗಾರಿಕೆ ಮತ್ತು ಮೂಲಸೌಕರ್ಯ:

  • ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು (ಐಐಪಿ) ಏಪ್ರಿಲ್-ನವೆಂಬರ್ 2020 ಅವಧಿಯಲ್ಲಿದ್ದ 15.3 ಶೇಕಡಾಕ್ಕೆ ಹೋಲಿಸಿದರೆ ಏಪ್ರಿಲ್-ನವೆಂಬರ್ 2021 ಅವಧಿಯಲ್ಲಿ 17.4 ಶೇಕಡಾ ದಷ್ಟು ಬೆಳೆದಿದೆ.
  • ಭಾರತೀಯ ರೈಲ್ವೇಯ ಬಂಡವಾಳ ವೆಚ್ಚವು 2009-14ರಲ್ಲಿದ್ದ ಸರಾಸರಿ ವಾರ್ಷಿಕ 45,980 ಕೋಟಿ ರೂ.ಗಳಿಂದ 2020-21ರಲ್ಲಿ 155,181 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಮತ್ತು ಅದನ್ನು 2021-22 ರಲ್ಲಿ 215,058 ಕೋಟಿ ರೂ. ಗಳಿಗೆ ಹೆಚ್ಚಿಸಲು - 2014 ಕ್ಕೆ ಹೋಲಿಸಿದರೆ ಐದು ಪಟ್ಟು ಹೆಚ್ಚಳ- ಬಜೆಟ್ ಅವಕಾಶ ಕಲ್ಪಿಸಲಾಗಿದೆ.
  •  ರಸ್ತೆ ನಿರ್ಮಾಣವು 2019-20 ರಲ್ಲಿದ್ದ  ದಿನಕ್ಕೆ 28 ಕಿಲೋಮೀಟರ್ಗಳಿಂದ 2020-21 ರಲ್ಲಿ ದಿನಕ್ಕೆ 36.5 ಕಿಮೀಗಳಿಗೆ ಗಣನೀಯವಾಗಿ ಹೆಚ್ಚಾಗಿದೆ. ಇದು ಶೇ.30.4 ರಷ್ಟು ಏರಿಕೆಯಾಗಿದೆ.
  • ಸಾಂಕ್ರಾಮಿಕ ರೋಗದ ಹೊರತಾಗಿಯೂ 2021-22 ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೊಡ್ಡ ಕಾರ್ಪೊರೇಟ್ಸಂಸ್ಥೆಗಳ ಮಾರಾಟ- ನಿವ್ವಳ ಲಾಭ ಅನುಪಾತವು ಸಾರ್ವಕಾಲಿಕ ಗರಿಷ್ಠ 10.6 ಶೇಕಡಾವನ್ನು ತಲುಪಿದೆ. (ಆರ್ ಬಿ ಅಧ್ಯಯನ)
  • ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯ ಮೂಲಕ ಭೌತಿಕ ಮತ್ತು ಡಿಜಿಟಲ್ ಎರಡೂ ಮೂಲಸೌಕರ್ಯಗಳಿಗೆ ಪ್ರಮುಖ ಉತ್ತೇಜನವನ್ನು ಒದಗಿಸಲಾಗಿದೆ, ಜೊತೆಗೆ ವಹಿವಾಟು ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ವ್ಯವಹಾರವನ್ನು ಸುಲಭಗೊಳಿಸುವ ಸುಧಾರಣಾ ಕ್ರಮಗಳು ಚೇತರಿಕೆಯ ವೇಗವನ್ನು ಬೆಂಬಲಿಸುತ್ತವೆ.

ಸೇವೆಗಳು:

  • 2021-22 ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸೇವೆಗಳ ಜಿವಿಎ ಸಾಂಕ್ರಾಮಿಕಕ್ಕೂ ಮೊದಲಿನ ಮಟ್ಟವನ್ನು ಮೀರಿಸಿದೆ; ಆದಾಗ್ಯೂ, ವ್ಯಾಪಾರ, ಸಾರಿಗೆ, ಇತ್ಯಾದಿಗಳಂತಹ ಸಂಪರ್ಕ ಆಧಾರಿತ ವಲಯಗಳ ಜಿವಿಎ ಇನ್ನೂ -ಸಾಂಕ್ರಾಮಿಕ ಪೂರ್ವ ಮಟ್ಟಕ್ಕಿಂತ ಕೆಳಗಿದೆ.
  • ಒಟ್ಟಾರೆ ಸೇವಾ ವಲಯದ ಜಿವಿಎ 2021-22 ರಲ್ಲಿ ಶೇ.8.2 ರಷ್ಟು ಬೆಳೆಯುವ ನಿರೀಕ್ಷೆಯಿದೆ.
  • ಏಪ್ರಿಲ್-ಡಿಸೆಂಬರ್ 2021 ಅವಧಿಯಲ್ಲಿ, ರೈಲು ಸರಕು ಸಾಗಣೆಯು ಸಾಂಕ್ರಾಮಿಕಕ್ಕೂ ಮೊದಲಿನ ಮಟ್ಟವನ್ನು ಮೀರಿದೆ, ಹಾಗೆಯೇ ವಿಮಾನ ಸರಕು ಮತ್ತು ಬಂದರು ಸರಕು ಸಾಗಣೆಯು ತಮ್ಮ ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ಬಹುತೇಕ ತಲುಪಿವೆ, ದೇಶೀಯ ವಾಯು ಮತ್ತು ರೈಲು ಪ್ರಯಾಣಿಕರ ದಟ್ಟಣೆಯು ಕ್ರಮೇಣ ಹೆಚ್ಚುತ್ತಿದೆ. ಇದು ಸಾಂಕ್ರಾಮಿಕದ ಎರಡನೇ ಅಲೆಯ ಪ್ರಭಾವವು ಮೊದಲ ಅಲೆಗಿಂತ ಹೆಚ್ಚು ಪರಿಣಾಮ ಬೀರಿರುವುದನ್ನು ತೋರಿಸುತ್ತದೆ.
  • 2021-22 ಮೊದಲಾರ್ಧದಲ್ಲಿ, ಸೇವಾ ವಲಯವು 16.7 ಶತಕೋಟಿ ಡಾಲರ್ ಎಫ್ಡಿಐ ಅನ್ನು ಪಡೆದುಕೊಂಡಿದೆ. ಇದು ಭಾರತದ ಒಟ್ಟು ಎಫ್ಡಿಐ ಒಳಹರಿವಿನ ಸುಮಾರು 54 ಪ್ರತಿಶತವಾಗಿದೆ.
  • ಐಟಿ-ಬಿಪಿಎಂ ಸೇವೆಗಳ ಆದಾಯವು 2020-21 ರಲ್ಲಿ 194 ಶತಕೋಟಿ ಡಾಲರ್ ತಲುಪಿದೆ, ವಲಯವು ಇದೇ ಅವಧಿಯಲ್ಲಿ 1.38 ಲಕ್ಷ ಉದ್ಯೋಗಿಗಳನ್ನು ಸೇರಿಸಿದೆ.
  • ಐಟಿ-ಬಿಪಿಒ ವಲಯದಲ್ಲಿನ ಟೆಲಿಕಾಂ ನಿಯಮಾವಳಿಗಳನ್ನು ತೆಗೆದುಹಾಕುವುದು ಮತ್ತು ಬಾಹ್ಯಾಕಾಶ ವಲಯವನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತಗೊಳಿಸುವಂತಹ ಸರ್ಕಾರದ ಪ್ರಮುಖ ಸುಧಾರಣಾ ಕ್ರಮಗಳು
  • ಸೇವೆಗಳ ರಫ್ತುಗಳು 2020-21 ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ಮೀರಿದೆ ಮತ್ತು 2021-22 ಮೊದಲಾರ್ಧದಲ್ಲಿ 21.6 ಪ್ರತಿಶತದಷ್ಟು ಬೆಳೆದಿದೆ. ಸಾಫ್ಟ್ವೇರ್ ಮತ್ತು ಐಟಿ ಸೇವೆಗಳ ರಫ್ತುಗಳಿಗೆ ಜಾಗತಿಕ ಬೇಡಿಕೆಯಿಂದ ಬಲಗೊಂಡಿದೆ.
  • ಅಮೆರಿಕಾ ಮತ್ತು ಚೀನಾದ ನಂತರ ಭಾರತವು ವಿಶ್ವದ 3 ನೇ ಅತಿದೊಡ್ಡ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯಾಗಿದೆ. ಹೊಸ ಮಾನ್ಯತೆ ಪಡೆದ ಸ್ಟಾರ್ಟ್-ಅಪ್ಗಳ ಸಂಖ್ಯೆ 2016-17 ರಲ್ಲಿದ್ದ 733 ರಿಂದ 2021-22 ರಲ್ಲಿ 14000 ಕ್ಕೆ ಏರಿಕೆಯಾಗಿದೆ.
  • 44 ಭಾರತೀಯ ಸ್ಟಾರ್ಟ್-ಅಪ್ಗಳು 2021 ರಲ್ಲಿ ಯುನಿಕಾರ್ನ್ ಸ್ಥಾನಮಾನವನ್ನು ಪಡೆದಿವೆ. ಒಟ್ಟಾರೆ ಯುನಿಕಾರ್ನ್ಗಳ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ. ಅವುಗಳಲ್ಲಿ ಹೆಚ್ಚಿನವು ಸೇವಾ ವಲಯದಲ್ಲಿವೆ.

ಸಾಮಾಜಿಕ ಮೂಲಸೌಕರ್ಯ ಮತ್ತು ಉದ್ಯೋಗ:

  • 16ನೇ ಜನವರಿ 2022 ರವರೆಗೆ 157.94 ಕೋಟಿ ಡೋಸ್ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದೆ; ಇದರಲ್ಲಿ 91.39 ಕೋಟಿ ಮೊದಲ ಡೋಸ್ ಮತ್ತು 66.05 ಕೋಟಿ ಎರಡನೇ ಡೋಸ್.
  • ಆರ್ಥಿಕತೆಯ ಚೇತರಿಕೆಯೊಂದಿಗೆ, ಉದ್ಯೋಗ ಸೂಚಕಗಳು 2020-21 ಕೊನೆಯ ತ್ರೈಮಾಸಿಕದಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಮರಳಿದವು.
  • ಮಾರ್ಚ್ 2021 ರವರೆಗಿನ ತ್ರೈಮಾಸಿಕ ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ (ಪಿ ಎಫ್ ಎಲ್ ಎಸ್) ದತ್ತಾಂಶದ ಪ್ರಕಾರ, ಸಾಂಕ್ರಾಮಿಕ ರೋಗದಿಂದ ಬಾಧಿತವಾದ ನಗರ ವಲಯದಲ್ಲಿನ ಉದ್ಯೋಗವು ಬಹುತೇಕ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಚೇತರಿಸಿಕೊಂಡಿದೆ.
  • ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ( ಪಿ ಎಫ್ ) ದತ್ತಾಂಶದ ಪ್ರಕಾರ, ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಉದ್ಯೋಗಗಳ ಔಪಚಾರಿಕೀಕರಣ ಮುಂದುವರೆಯಿತು; ಉದ್ಯೋಗಗಳ ಔಪಚಾರಿಕತೆಯ ಮೇಲೆ ಮೊದಲ ಅಲೆಗಿಂತ ಇದು ಕಡಿಮೆ ಪ್ರತಿಕೂಲ ಪರಿಣಾಮ ಬೀರಿತು.
  • ಜಿಡಿಪಿಯ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಾಮಾಜಿಕ ಸೇವೆಗಳ (ಆರೋಗ್ಯ, ಶಿಕ್ಷಣ ಮತ್ತು ಇತರೆ) ವೆಚ್ಚವು 2014-15 ರಲ್ಲಿದ್ದ ಶೇ.6.2 ರಿಂದ 2021-22 ರಲ್ಲಿ ಶೇ.8.6 ಕ್ಕೆ ಹೆಚ್ಚಾಗಿದೆ
  • ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಪ್ರಕಾರ:
  • ಒಟ್ಟು ಫಲವತ್ತತೆ ದರ (ಟಿ ಎಫ್ ಆರ್) 2015-16 ರಲ್ಲಿದ್ದ 2.2 ರಿಂದ 2019-21 ರಲ್ಲಿ 2 ಕ್ಕೆ ಇಳಿದಿದೆ
  • ಶಿಶು ಮರಣ ಪ್ರಮಾಣ (ಐಎಂಆರ್), ಐದು ವರ್ಷದೊಳಗಿನ ಮರಣ ಪ್ರಮಾಣ ಮತ್ತು ಆಸ್ಪತ್ರೆ ಜನನಗಳು 2015-16 ವರ್ಷಕ್ಕಿಂತ 2019-21 ರಲ್ಲಿ ಸುಧಾರಿಸಿವೆ
  • ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ 83 ಜಿಲ್ಲೆಗಳು 'ಹರ್ ಘರ್ ಜಲ್' ಜಿಲ್ಲೆಗಳಾಗಿ ಮಾರ್ಪಟ್ಟಿವೆ.
  • ಸಾಂಕ್ರಾಮಿಕ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಅಸಂಘಟಿತ ಕಾರ್ಮಿಕರಿಗೆ ಬೆಂಬಲ ಒದಗಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (ಎಂ ಎನ್ ಆರ್ ಜಿ ಎಸ್) ಹೆಚ್ಚಿನ ಅನುದಾನ ಹಂಚಿಕೆ

***



(Release ID: 1794004) Visitor Counter : 2935