ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನವರಿ 28 ರಂದು ಕಾರಿಯಪ್ಪ ಮೈದಾನದಲ್ಲಿ ಎನ್‌.ಸಿ.ಸಿ. ಪಥಸಂಚಲವನ್ನು ಉದ್ದೇಶಿಸಿ ಪ್ರಧಾನಮಂತ್ರಿಯಿಂದ ಭಾಷಣ

प्रविष्टि तिथि: 27 JAN 2022 7:28PM by PIB Bengaluru

ಜನವರಿ 28, 2022 ರಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯ ಕಾರಿಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌.ಸಿ.ಸಿ. ) ಪಥಸಂಚಲನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ.

ಪ್ರತಿ ವರ್ಷ ಜನವರಿ 28 ರಂದು ,  ರಾಷ್ಟ್ರೀಯ ಕೆಡೆಟ್ ಕೋರ್ (ಎನ್‌.ಸಿ.ಸಿ.) ಗಣರಾಜ್ಯೋತ್ಸವ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯುತ್ತದೆ. ಸಮಾರಂಭದಲ್ಲಿ, ಪ್ರಧಾನಮಂತ್ರಿಯವರು ಗೌರವ ರಕ್ಷಣೆ (ಗಾರ್ಡ್ ಆಫ್ ಆನರ್) ಅನ್ನು ಪರಿಶೀಲಿದ್ದಾರೆ, ಎನ್‌.ಸಿ.ಸಿ. ತಂಡಗಳ ಪಥಸಂಚಲನ, ಎನ್‌.ಸಿ.ಸಿ, ವಿದ್ಯಾರ್ಥಿಗಳ ಸೇನಾ ಪದ್ದತಿಗಳು, ಸ್ಲಿಥರಿಂಗ್, ಕಿರುಹಗುರ ವಿಮಾನ ಹಾರಾಟ, ಪ್ಯಾರಾಸೈಲಿಂಗ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವ ಕೌಶಲ್ಯಗಳನ್ನು ಪ್ರಧಾನಮಂತ್ರಿ ಅವರು ವೀಕ್ಷಿಸಲಿದ್ದಾರೆ. ಈ ಸಂದರ್ಭದಲ್ಲಿ ಅತ್ಯುತ್ತಮ ಎನ್‌.ಸಿ.ಸಿ, ಕೆಡೆಟ್‌ ಗಳು ಪ್ರಧಾನಮಂತ್ರಿ ಅವರಿಂದ ಪದಕ ಮತ್ತು ಲಾಠಿ (ಬ್ಯಾಟನ್) ಸ್ವೀಕರಿಸಲಿದ್ದಾರೆ.

 

  ***


(रिलीज़ आईडी: 1793100) आगंतुक पटल : 293
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Manipuri , Bengali , Punjabi , Gujarati , Odia , Tamil , Telugu , Malayalam