ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತ(ಐಆರ್ ಇಡಿಎ)ಗೆ 1500 ಕೋಟಿ ರೂ. ಸೇರ್ಪಡೆಗೆ ಸಂಪುಟ ಅನುಮೋದನೆ


ಪ್ರತಿವರ್ಷ ಅಂದಾಜು 10,200 ಉದ್ಯೋಗವಕಾಶಗಳು ಸೃಷ್ಟಿ ಮತ್ತು ವರ್ಷಕ್ಕೆ ಸುಮಾರು 7.49 ಮಿಲಿಯನ್ ಟನ್ ಸಿಒ2 ಇಂಗಾಲ ಹೊರಹಾಕುವ ಪ್ರಮಾಣ ತಗ್ಗಲಿದೆ

Posted On: 19 JAN 2022 3:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಇಂದು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತ(ಐಆರ್ ಇಡಿಎ)ಗೆ 1500 ಕೋಟಿಗಳ ಈಕ್ವಿಟಿ ಸೇರ್ಪಡೆಗೆ ಅನುಮೋದನೆ ನೀಡಿತು.

ಈ ಇಕ್ವಿಟಿ ಸೇರ್ಪಡೆಯಿಂದಾಗಿ ವಾರ್ಷಿಕ ಸುಮಾರು 10200 ಉದ್ಯೋಗಾವಕಾಶಗಳ ಸೃಷ್ಟಿಗೆ ಸಹಾಯ ಮಾಡುತ್ತದೆ ಮತ್ತು ಅಂದಾಜು 7.49 ಮಿಲಿಯನ್ ಟನ್ ಗಳಷ್ಟು ಸಿಒ2ಗೆ ಸಮಾನವಾದ ಇಂಗಾಲದ ಹೊರಸೂಸುವಿಕೆಯನ್ನು ಕಡಿತ ಗೊಳಿಸಲಿದೆ.

ಭಾರತ ಸರ್ಕಾರದಿಂದ ರೂ.1500 ಕೋಟಿಗಳ ಹೆಚ್ಚುವರಿ ಇಕ್ವಿಟಿ ಸೇರ್ಪಡೆ ಐಆರ್ ಇಡಿಎ ಅನ್ನು ಬಲಿಷ್ಠಗೊಳಿಸಲಿದೆ.

  1. ನವೀಕರಿಸಬಹುದಾದ ಇಂಧನ ವಲಯಕ್ಕೆ ಸುಮಾರು ರೂ.12000 ಕೋಟಿ ಸಾಲ ನೀಡಲು, ಆ ಮೂಲಕ ಅಂದಾಜು 3500-4000 ಮೆಗಾವ್ಯಾಟ್‌ನ ಹೆಚ್ಚುವರಿ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ವಲಯದ  ಸಾಲದ ಅಗತ್ಯ ಪೂರೈಸಲು ನೆರವಾಗುತ್ತದೆ.
  2. ಒಟ್ಟಾರೆ ಅದರ ಮೌಲ್ಯವನ್ನು ವರ್ಧಿಸುತ್ತದೆ, ಇದು ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚುವರಿ ಹಣಕಾಸು ಸಹಾಯ ಮಾಡಲು ನೆರವಾಗುತ್ತದೆ. ಆ ಮೂಲಕ  ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಸರ್ಕಾರದ ಗುರಿ ಸಾಧನೆಗೆ ಉತ್ತಮ ಕೊಡುಗೆ ನೀಡಲಿದೆ.
  3. ಅಪಾಯದ ಮತ್ತು ತೂಕದ ಸ್ವತ್ತುಗಳು ಅನುಪಾತ(ಸಿಆರ್ ಎಆರ್)ಸುಧಾರಣೆ, ಇದರಿಂದ ಅದರ ಸಾಲ ಮತ್ತು ಎರವಲು ಕಾರ್ಯಾಚರಣೆಗೆ ಸಹಕಾರಿಯಾಗುತ್ತದೆ.

ಎಂಎನ್‌ಆರ್‌ಇಯ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಐಆರ್‌ಇಡಿಎ- ಮಿನಿ ರತ್ನ (ವರ್ಗ-1)ರಲ್ಲಿನ  ಕಂಪನಿಯಾಗಿದ್ದು, ಅದನ್ನು  ನವೀಕರಿಸಬಹುದಾದ ಇಂಧನ (ಆರ್‌ಇ) ವಲಯದಲ್ಲಿ ವಿಶೇಷ ಬ್ಯಾಂಕಿಂಗೇತರ  ಹಣಕಾಸು ಏಜೆನ್ಸಿಯಾಗಿ ಕೆಲಸ ಮಾಡಲು 1987ರಲ್ಲಿ ಸ್ಥಾಪಿಸಲಾಯಿತು. 34 ವರ್ಷಗಳಿಗಿಂತಲೂ ಅಧಿಕ ಕಾಲದ ತಾಂತ್ರಿಕ-ವಾಣಿಜ್ಯ  ಅನುಭವ ಹೊಂದಿರುವ ಐಆರ್‌ಇಡಿಎ, ಈ ವಲಯದಲ್ಲಿ ಸಾಲ ನೀಡಲು ಹಣಕಾಸು ಸಂಸ್ಥೆಗಳು/ಬ್ಯಾಂಕ್‌ಗಳಿಗೆ ವಿಶ್ವಾಸವನ್ನು ತುಂಬಿ ನವೀಕರಿಸಬಹುದಾದ ಯೋಜನೆಗಳಿಗೆ ಹಣಕಾಸು ಒದಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

***



(Release ID: 1791019) Visitor Counter : 298