ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19: ಸತ್ಯ ಮತ್ತು ಸುಳ್ಳು


6ನೇ ಜನವರಿ 2022 ರಂದು ಭಾರತ ಚುನಾವಣಾ ಆಯೋಗದೊಂದಿಗೆ ನಡೆದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ ಎನ್ನಲಾದ ಹೇಳಿಕೆಗಳ ಬಗೆಗಿನ ಮಾಧ್ಯಮ ವರದಿಗಳು ಮಾಹಿತಿಯಿಲ್ಲದವು, ಆಧಾರರಹಿತವಾದವು ಮತ್ತು ದಾರಿ ತಪ್ಪಿಸುವಂತಿವೆ

ಕೇಂದ್ರ ಆರೋಗ್ಯ ಸಚಿವಾಲಯವು ಚುನಾವಣೆ ನಡೆಯಬೇಕಿರುವ 5 ರಾಜ್ಯಗಳಲ್ಲಿ ಕೋವಿಡ್ ಹರಡುವಿಕೆ ಮತ್ತು ಲಸಿಕೆ ನೀಡಿಕೆಯ ಸ್ಥಿತಿಯನ್ನು ಚುನಾವಣಾ ಯೋಗದ ಮುಂದೆ ಪ್ರಸ್ತುತಪಡಿಸಿತು

Posted On: 07 JAN 2022 10:41AM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿನ್ನೆ ಭಾರತ ಚುನಾವಣಾ ಆಯೋಗದ (ಇಸಿಐ) ಜೊತೆಗಿನ ಸಭೆಯಲ್ಲಿ "ದೇಶದಲ್ಲಿನ ಕೋವಿಡ್ ಪರಿಸ್ಥಿತಿಯ ಬಗ್ಗೆ ಚಿಂತಿಸಬೇಕಾಗಿಲ್ಲ" ಮತ್ತು " ಮತದಾನ ನಡೆಯಬೇಕಿರುವ ರಾಜ್ಯಗಳಲ್ಲಿ ಒಮಿಕ್ರಾನ್‌ನ ಕಡಿಮೆ ಪ್ರಕರಣಗಳಿರುವುದರಿಂದ ಯಾವುದೇ ಎಚ್ಚರಿಕೆ ಅಥವಾ ಕಾಳಜಿಗೆ ಕಾರಣವಿಲ್ಲ" ಎಂದು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ವರದಿಗಳು ಅಪೂರ್ಣ ಮಾಹಿತಿಯಿಂದ ಕೂಡಿವೆ, ತಪ್ಪುದಾರಿಗೆಳೆಯುತ್ತಿವೆ ಮತ್ತು ಸತ್ಯಕ್ಕೆ ದೂರವಾಗಿವೆ. ವರದಿಗಳು ಸಾಂಕ್ರಾಮಿಕ ರೋಗದ ಮಧ್ಯೆ ತಪ್ಪು ಮಾಹಿತಿ ಅಭಿಯಾನದ ಪ್ರವೃತ್ತಿಯನ್ನು ಹೊಂದಿವೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಇಸಿಐ ಜೊತೆಗಿನ ಸಭೆಯಲ್ಲಿ ಕೋವಿಡ್‌ ಹಾಗೂ ಒಮಿಕ್ರಾನ್ ಹರಡುವಿಕೆಯ ಒಟ್ಟಾರೆ ಜಾಗತಿಕ ಮತ್ತು ದೇಶೀಯ ಪರಿಸ್ಥಿತಿಯ ಬಗ್ಗೆ ಪ್ರಸ್ತುತಪಡಿಸಿದರು. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣ ಮತ್ತು ನಿರ್ವಹಣೆಗಾಗಿ ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಸನ್ನದ್ಧತೆಯ ವಿವರಗಳನ್ನು ಸಹ ಪ್ರಸ್ತುತಪಡಿಸಲಾಯಿತು. ಚುನಾವಣೆಗಳು ನಡೆಯಬೇಕಿರುವ 5 ರಾಜ್ಯಗಳು ಮತ್ತು ಅವುಗಳ ನೆರೆಯ ರಾಜ್ಯಗಳ ಮೇಲೆ ಪ್ರಸ್ತುತಿ ಕೇಂದ್ರೀಕೃತವಾಗಿತ್ತು.

***



(Release ID: 1788363) Visitor Counter : 216