ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಹಲ್ದ್ವಾನಿಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 30 DEC 2021 6:31PM by PIB Bengaluru

ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಉತ್ತರಾಖಂಡದ ರಾಜ್ಯಪಾಲರಾದ ಗುರ್ಮಿತ್ ಸಿಂಗ್ ಜಿ, ಯುವ, ಶಕ್ತಿಯುತ ಮತ್ತು ಜನಪ್ರಿಯ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಜಿ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಶ್ರೀ ಮದನ್ ಕೌಶಿಕ್ ಜಿ, ಕೇಂದ್ರ ಸಚಿವ ಶ್ರೀ ಅಜಯ್ ಭಟ್ ಜಿ, ನನ್ನ ಸ್ನೇಹಿತರಾದ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜಿ, ಶ್ರೀ ತ್ರಿವೇಂದ್ರ ಸಿಂಗ್ ರಾವತ್ ಜಿ , ತಿರತ್ ಸಿಂಗ್ ರಾವತ್ ಜಿ ಮತ್ತು ಶ್ರೀ ವಿಜಯ್ ಬಹುಗುಣ ಜಿ, ಉತ್ತರಾಖಂಡ ಸರ್ಕಾರದ ಮಂತ್ರಿಗಳಾದ ಶ್ರೀ ಸತ್ಪಾಲ್ ಮಹಾರಾಜ್ ಜಿ, ಶ್ರೀ ಹರಕ್ ಸಿಂಗ್ ರಾವತ್ ಜಿ, ಶ್ರೀ ಸುಬೋಧ್ ಉನಿಯಾಲ್ ಜಿ ಮತ್ತು ಶ್ರೀ ಬನ್ಶಿಧರ್ ಭಗತ್ ಜಿ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀಮತಿ. ಮಾಲಾ ರಾಜ್ಯ ಲಕ್ಷ್ಮಿ ಜಿ ಮತ್ತು ಶ್ರೀ ಅಜಯ್ ತಮ್ತಾ ಜಿ, ಇತರ ಸಂಸದರು ಮತ್ತು ಶಾಸಕರು, ಮತ್ತು ಕುಮಾವ್‌ನ  ನನ್ನ ಪ್ರೀತಿಯ ಸಹೋದರ ಸಹೋದರಿಯರೇ!

ಅಲ್ಲಿ ಮೇಲೆ ಇರುವ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತೇವೆ. ನಿಮಗೆ ನನ್ನ ಮಾತು ಕೇಳಿಸುತ್ತಿದೆ  ಎಂದು ಭಾವಿಸುತ್ತೇನೆ. ಕಟ್ಟಡಗಳ ಮೇಲೆ ಎಲ್ಲೆಲ್ಲೂ ಇಷ್ಟೊಂದು  ದೊಡ್ಡ ಪ್ರಮಾಣದಲ್ಲಿ ಜನರು! ದಯವಿಟ್ಟು ಮುಂದೆ ಬರಬೇಡಿ  ನನಗೆ ಭಯವಾಗುತ್ತದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ಪವಿತ್ರ ಕುಮಾವುನಿಂದ ಎಲ್ಲಾ ಸಹೋದರ ಸಹೋದರಿಯರಿಗೆ ಶುಭಾಶಯಗಳು ಮತ್ತು ಮೊಮ್ಮಕ್ಕಳಿಗೆ ಪ್ರೀತಿ ಹಾಗು ಆಶೀರ್ವಾದಗಳು! ಜಾಗೇಶ್ವರ, ಬಾಗೇಶ್ವರ, ಸೋಮೇಶ್ವರ ಮತ್ತು ರಾಮೇಶ್ವರ ದೇಗುಲಗಳಿಂದ ಕೂಡಿದ ಶಿವನ ನಾಡನ್ನು ನಾನು ಅಭಿನಂದಿಸುತ್ತೇನೆ. ಕುಮಾವೂ ಕೂಡ ದೇಶದ ಸ್ವಾತಂತ್ರ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಪಂಡಿತ್ ಬದರಿ ದತ್ತ ಪಾಂಡೆಯವರ ನೇತೃತ್ವದಲ್ಲಿ ಉತ್ತರಾಯಣಿ ಜಾತ್ರೆಯ ಸಂದರ್ಭದಲ್ಲಿಕೂಲಿ-ಬೇಗಾರ್ಪದ್ಧತಿ ಕೊನೆಗೊಂಡಿತು.

ಸ್ನೇಹಿತರೇ,

ಇಂದು ನನಗೆ ಕುಮಾವ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಆದ್ದರಿಂದ, ನಿಮ್ಮೊಂದಿಗಿನ ನನ್ನ ಆಳವಾದ ಸಂಬಂಧದ ಹಳೆಯ ನೆನಪುಗಳನ್ನು ರಿಫ್ರೆಶ್ ಮಾಡುವುದು ಸಹಜ. ಮತ್ತು ನೀವು ನನಗೆ ಉತ್ತರಾಖಂಡದ ಟೋಪಿಯನ್ನು ನೀಡಿ ಗೌರವಿಸಿದ್ದೀರಿ ಎಂಬುದಕ್ಕಿಂತ ನನಗೆ ದೊಡ್ಡ ಹೆಮ್ಮೆ ಇನ್ನೇನಿದೆ. ಇದು ನನಗೆ ಸಣ್ಣ ಗೌರವವಲ್ಲ. ನಾನು ಉತ್ತರಾಖಂಡದ ಹೆಮ್ಮೆಗೆ ಅಂಟಿಕೊಂಡಿದ್ದೇನೆ. ಇಂದು ಸುಮಾರು 17,000 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ಮಾಡಲಾಗಿದೆ. ಯೋಜನೆಗಳು ಕುಮಾವ್‌ನ ಎಲ್ಲಾ ಸಹೋದ್ಯೋಗಿಗಳಿಗೆ ಉತ್ತಮ ಸಂಪರ್ಕ ಮತ್ತು ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತವೆ. ನಾನು ನಿಮ್ಮೊಂದಿಗೆ ಇನ್ನೊಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಹಲ್ದ್ವಾನಿ ಜನರಿಗೆ ಹೊಸ ವರ್ಷದ ಉಡುಗೊರೆಯನ್ನು ತಂದಿದ್ದೇನೆ. ಹಲ್ದ್ವಾನಿ ನಗರದ ಒಟ್ಟಾರೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ನಾವು 2,000 ಕೋಟಿ ರೂಪಾಯಿಗಳ ಯೋಜನೆಯನ್ನು ರೂಪಿಸುತ್ತಿದ್ದೇವೆ. ಹಲ್ದ್ವಾನಿ ಶೀಘ್ರದಲ್ಲೇ ನೀರು, ಒಳಚರಂಡಿ, ರಸ್ತೆ, ಪಾರ್ಕಿಂಗ್, ಬೀದಿ ದೀಪಗಳು ಇತ್ಯಾದಿಗಳಲ್ಲಿ ಅಭೂತಪೂರ್ವ ಸುಧಾರಣೆಯನ್ನು ಕಾಣಲಿದೆ.

ಸ್ನೇಹಿತರೇ,

ದಶಕವನ್ನು ಉತ್ತರಾಖಂಡದ ದಶಕವನ್ನಾಗಿ ಮಾಡಲು ಅಭಿವೃದ್ಧಿ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳುವ ಅಗತ್ಯವನ್ನು ನಾವು ಒತ್ತಿ ಹೇಳಿದ್ದೇವೆ. ಇದು ಉತ್ತರಾಖಂಡದ ದಶಕ ಎಂದು ನಾನು ಹೇಳಿದಾಗ ಅದು ಕಾರಣವಿಲ್ಲದೆ ಅಲ್ಲ. ಹಲವು ಕಾರಣಗಳಿವೆ. ಉತ್ತರಾಖಂಡದ ಜನರ ಸಾಮರ್ಥ್ಯವು ದಶಕವನ್ನು ಉತ್ತರಾಖಂಡದ ದಶಕವನ್ನಾಗಿ ಮಾಡುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ. ಮಣ್ಣಿನ ಸಾಮರ್ಥ್ಯ ನನಗೆ ಗೊತ್ತು ಗೆಳೆಯರೇ. ಬೆಳೆಯುತ್ತಿರುವ ಆಧುನಿಕ ಮೂಲಸೌಕರ್ಯ, ಚಾರ್ ಧಾಮ್ ಮೆಗಾ ಯೋಜನೆ ಮತ್ತು ಹೊಸ ರೈಲು ಮಾರ್ಗಗಳು ದಶಕವನ್ನು ಉತ್ತರಾಖಂಡದ ದಶಕವನ್ನಾಗಿ ಮಾಡಲಿದೆ. ಹೊಸ ಜಲವಿದ್ಯುತ್ ಯೋಜನೆಗಳು ಮತ್ತು ಬೆಳೆಯುತ್ತಿರುವ ಕೈಗಾರಿಕಾ ಸಾಮರ್ಥ್ಯವು ದಶಕವನ್ನು ಉತ್ತರಾಖಂಡದ ದಶಕವನ್ನಾಗಿ ಮಾಡುತ್ತದೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಮತ್ತು ಪ್ರಪಂಚದಾದ್ಯಂತ ಯೋಗಕ್ಕೆ ಹೆಚ್ಚುತ್ತಿರುವ ಆಕರ್ಷಣೆಯು ಪ್ರತಿಯೊಬ್ಬರನ್ನು ಉತ್ತರಾಖಂಡಕ್ಕೆ ಕರೆತರಲಿದೆ. ಹೋಮ್ ಸ್ಟೇಗಳಂತಹ ಪ್ರವಾಸಿಗರಿಗೆ ಬೆಳೆಯುತ್ತಿರುವ ಸೌಲಭ್ಯಗಳು ದಶಕವನ್ನು ಉತ್ತರಾಖಂಡದ ದಶಕವನ್ನಾಗಿ ಮಾಡುತ್ತದೆ. ದಶಕವು ನೈಸರ್ಗಿಕ ಕೃಷಿ ಮತ್ತು ಗಿಡಮೂಲಿಕೆ ಉತ್ಪನ್ನಗಳ ಹೆಚ್ಚಳದೊಂದಿಗೆ ಕೃಷಿ ವಲಯದಲ್ಲಿ ಉತ್ತರಾಖಂಡಕ್ಕೆ ಸೇರಿದೆ. ಉತ್ತರಕಾಂಡದ ದಶಕವು ವೈಭವಯುತವಾಗಿರುತ್ತದೆ. ಇಂದಿನ ಯೋಜನೆಗಳು ಎಲ್ಲಾ ಕ್ಷೇತ್ರಗಳೊಂದಿಗೆ ಸಂಪರ್ಕ ಹೊಂದಿವೆ. ನಾನು ಇಂದು ಹಲ್ದ್ವಾನಿಯ ನೆಲದಿಂದ ಉತ್ತರಾಖಂಡದ ಜನರನ್ನು ಬಹಳ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಹಿಮಾಲಯದ ಶಕ್ತಿಯ ಬಗ್ಗೆ ಮತ್ತು ಉತ್ತರಾಖಂಡದಿಂದ ಹರಿಯುವ ನದಿಗಳ ನಮಗೆಲ್ಲರಿಗೂ ತಿಳಿದಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿನ ಜನ ಎರಡು ರೀತಿಯ ಗುಂಪುಗಳನ್ನು ಕಂಡಿದ್ದಾರೆ. ಪರ್ವತಗಳನ್ನು ಅಭಿವೃದ್ಧಿಯಿಂದ ವಂಚಿತವಾಗಿಡಲು ಬಯಸುವ ಒಂದು ಗುಂಪು ಮತ್ತು ಪರ್ವತಗಳ ಅಭಿವೃದ್ಧಿಗಾಗಿ ಇಪ್ಪತ್ತನಾಲ್ಕು  ಗಂಟೆ  ಕೆಲಸ ಮಾಡಲು ಬಯಸುವ ಮತ್ತೊಂದು ಗುಂಪು . ನೀವು ಅಭಿವೃದ್ಧಿಯಿಂದ ವಂಚಿತರಾಗಬೇಕೆಂದು ಮೊದಲ ಗುಂಪಿನ   ಜನರು ಯಾವಾಗಲೂ ಬಯಸುತ್ತಾರೆ. ಪರ್ವತಗಳಿಗೆ ರಸ್ತೆ, ವಿದ್ಯುತ್ ಮತ್ತು ನೀರನ್ನು ತರಲು ಬೇಕಾದ ಕಠಿಣ ಕೆಲಸವನ್ನು ಅವರು ತಪ್ಪಿಸಿದರು. ನೂರಾರು ಹಳ್ಳಿಗಳ ಎಷ್ಟೋ ತಲೆಮಾರುಗಳು ಉತ್ತಮ ರಸ್ತೆಗಳು ಮತ್ತು ಸೌಕರ್ಯಗಳಿಲ್ಲದೆ ನಮ್ಮ ಪ್ರೀತಿಯ ಉತ್ತರಾಖಂಡವನ್ನು ತೊರೆದು ಬೇರೆಲ್ಲೋ ನೆಲೆಸಿದವು. ಮೊದಲ ಗುಂಪಿನ ಜನರ ಸತ್ಯವನ್ನು ಉತ್ತರಾಖಂಡ ಮತ್ತು ದೇಶದ ಜನರು ತಿಳಿದುಕೊಂಡಿದ್ದಾರೆ ಎಂದು ಇಂದು ನನಗೆ ತೃಪ್ತಿ ಇದೆ. ಇಂದು, ನಮ್ಮ ಸರ್ಕಾರವುಸಬ್ಕಾ ಸಾಥ್, ಸಬ್ಕಾ ವಿಕಾಸ್ಎಂಬ ಮಂತ್ರದೊಂದಿಗೆ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ನಿರತವಾಗಿದೆ. ಇಂದು ಉಧಮ್ ಸಿಂಗ್ ನಗರ್ ಜಿಲ್ಲೆಯ ಏಮ್ಸ್ ರಿಷಿಕೇಶದ ಉಪಗ್ರಹ ಕೇಂದ್ರ ಮತ್ತು ಪಿಥೋರಗಢ್‌ನಲ್ಲಿರುವ ಜಗಜೀವನ್ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಎರಡು ಆಸ್ಪತ್ರೆಗಳು ಕುಮಾವ್ ಮತ್ತು ತೇರಾಯ್ ಪ್ರದೇಶದ ಜನರಿಗೆ ಹೆಚ್ಚಿನ ಸಹಾಯ ಮಾಡುತ್ತವೆ. ಶೀಘ್ರದಲ್ಲೇ ಅಲ್ಮೋರಾ ಮೆಡಿಕಲ್ ಕಾಲೇಜನ್ನು ಆರಂಭಿಸುವ ಕೆಲಸ ಭರದಿಂದ ಸಾಗಿದೆ. ಉತ್ತರಾಖಂಡದಲ್ಲಿ ಸಂಪರ್ಕದ ದೊಡ್ಡ ಸವಾಲುಗಳನ್ನು ಜಯಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಇಂದು ಘೋಷಣೆಯಾಗಿರುವ ಸುಮಾರು 9,000 ಕೋಟಿ ರೂಪಾಯಿಗಳ ಯೋಜನೆಗಳು ರಸ್ತೆ ನಿರ್ಮಾಣಕ್ಕೆ ಮಾತ್ರ ಸಂಬಂಧಿಸಿವೆಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ 1200 ಕಿಮೀ ಗ್ರಾಮೀಣ ರಸ್ತೆ ನಿರ್ಮಾಣವೂ ಪ್ರಾರಂಭವಾಗಿದೆ. ರಸ್ತೆಗಳಲ್ಲದೆ 151 ಸೇತುವೆಗಳನ್ನೂ ನಿರ್ಮಿಸಲಾಗುವುದು.

ಸಹೋದರ ಸಹೋದರಿಯರೇ,

ನಿಮ್ಮ ಸೌಕರ್ಯಗಳನ್ನು ಕಸಿದುಕೊಳ್ಳುವುದನ್ನು  ನಂಬಿದವರಿಂದ  ಮಾನಸ ಸರೋವರದ ಹೆಬ್ಬಾಗಿಲಾಗಿರುವ ಮಾನಸ ಖಂಡವು ರಸ್ತೆಗಳಿಂದ ವಂಚಿತವಾಯಿತು. ನಾವು ತನಕ್‌ಪುರ-ಪಿಥೋರಗಢ್ ಆಲ್ ವೆದರ್ ರಸ್ತೆಯಲ್ಲಿ ಕೆಲಸ ಮಾಡಿದ್ದು ಮಾತ್ರವಲ್ಲದೆ, ಲಿಪುಲೇಖ್‌ವರೆಗೆ ರಸ್ತೆಯನ್ನು ನಿರ್ಮಿಸಿದ್ದೇವೆ ಮತ್ತು ಅದನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಈಗ ಜನರ ಸತ್ಯಾಸತ್ಯತೆ ಅರಿವಾದಾಗ ಹೊಸ ವದಂತಿ ಅಂಗಡಿ ತೆರೆದು ಹಬ್ಬಿಸಿದ್ದಾರೆ. ವದಂತಿಯನ್ನು ತಯಾರಿಸಿ, ಅದನ್ನು ಹರಡಿ ಮತ್ತು ಅದರ ಬಗ್ಗೆ ಹಗಲು ರಾತ್ರಿ ಕೂಗುತ್ತಿರಿ. ಉತ್ತರಾಖಂಡ ವಿರೋಧಿಗಳು ಇಲ್ಲಿನ ತನಕ್‌ಪುರ-ಬಾಗೇಶ್ವರ್ ರೈಲು ಮಾರ್ಗದ ಬಗ್ಗೆ ಗೊಂದಲವನ್ನು ಹರಡುತ್ತಿದ್ದಾರೆ ಎಂದು ನನಗೆ ತಿಳಿಸಲಾಗಿದೆ.

ಸ್ನೇಹಿತರೇ,

ತನಕ್‌ಪುರ-ಬಾಗೇಶ್ವರ್ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಯು ಯೋಜನೆಯ ಬಲವಾದ ಆಧಾರವಾಗಿದೆ. ರೈಲು ಮಾರ್ಗದ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲು ಇದನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನಾನು ನಿಮಗೆ ಭರವಸೆ ನೀಡಲು ಇಲ್ಲಿಗೆ ಬಂದಿದ್ದೇನೆ. ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗ ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿ ತನಕ್‌ಪುರ-ಬಾಗೇಶ್ವರ್‌ ಮಾರ್ಗವೂ ನಿರ್ಮಾಣವಾಗಲಿದೆ. ಉತ್ತರಾಖಂಡದ ನನ್ನ ಸಹೋದರ ಸಹೋದರಿಯರೇ, ಇವು ಕೇವಲ ಅಡಿಪಾಯದ ಕಲ್ಲುಗಳಲ್ಲ, ಇವು ಕೇವಲ ಕಲ್ಲುಗಳಲ್ಲ; ಇವು ಡಬಲ್ ಇಂಜಿನ್ ಸರ್ಕಾರವು ಅರಿತುಕೊಳ್ಳುವ ನಿರ್ಣಯಗಳ ಸ್ಮಾರಕಗಳಾಗಿವೆ.

ಸ್ನೇಹಿತರೇ,

ಉತ್ತರಾಖಂಡ ರಚನೆಯಾಗಿ ಎರಡು ದಶಕಗಳು ಪೂರ್ಣಗೊಂಡಿವೆ. ವರ್ಷಗಳಲ್ಲಿ, ನೀವು ಉತ್ತರಾಖಂಡವನ್ನು ಲೂಟಿ ಮಾಡಿ, ಆದರೆ ನನ್ನ ಸರ್ಕಾರವನ್ನು ಉಳಿಸಿ ಎಂದು ಸರ್ಕಾರಗಳನ್ನು ನಡೆಸುತ್ತಿರುವವರನ್ನು ಸಹ ನೀವು ನೋಡಿದ್ದೀರಿ ಜನರು ಉತ್ತರಾಖಂಡವನ್ನು ಎರಡೂ ಕೈಗಳಿಂದ ಲೂಟಿ ಮಾಡಿದರು. ಉತ್ತರಾಖಂಡವನ್ನು ಪ್ರೀತಿಸುವವರು ಇದನ್ನು ಊಹಿಸಲೂ ಸಾಧ್ಯವಿಲ್ಲ. ಕುಮಾವ್‌ಅನ್ನು ಪ್ರೀತಿಸುವವರು ಕುಮಾವನ್ನು ಬಿಡುವುದಿಲ್ಲ. ಇದು ದೇವಭೂಮಿ. ಇಲ್ಲಿನ ಜನರ ಸೇವೆ ಮಾಡುವುದು, ಉತ್ತರಕಾಂಡದ ಸೇವೆ ಮಾಡುವುದು ದೇವ-ದೇವತೆಗಳ ಸೇವೆ ಮಾಡಿದಂತೆ. ಮತ್ತು ಮನೋಭಾವದಿಂದ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ನಿಟ್ಟಿನಲ್ಲಿ ನಾನೇ ಬದ್ಧನಾಗಿದ್ದೇನೆ. ಅನಾನುಕೂಲತೆ ಮತ್ತು ಅಭಾವವನ್ನು ಈಗ ಅನುಕೂಲತೆ ಮತ್ತು ಸಾಮರಸ್ಯವಾಗಿ ಪರಿವರ್ತಿಸಲಾಗುತ್ತಿದೆ. ಅವರು ನಿಮ್ಮನ್ನು ನಿಮ್ಮ ಮೂಲ ಸೌಕರ್ಯಗಳಿಂದ ವಂಚಿತರನ್ನಾಗಿ ಮಾಡಿದ್ದಾರೆ, ಆದರೆ ನಾವು ಪ್ರತಿ ವರ್ಗಕ್ಕೆ, ಪ್ರತಿ ಪ್ರದೇಶಕ್ಕೆ 100 ಪ್ರತಿಶತ ಮೂಲ ಸೌಕರ್ಯಗಳನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ.

ಸಹೋದರ ಸಹೋದರಿಯರೇ,

ಅಭಾವದ ರಾಜಕಾರಣದಿಂದ ಹೆಚ್ಚು ನೊಂದವರು ಯಾರಾದರೂ ಇದ್ದರೆ ಅದು ನಮ್ಮ ತಾಯಂದಿರು, ಸಹೋದರಿಯರು ಮತ್ತು ನಮ್ಮ ಹೆಣ್ಣುಮಕ್ಕಳು. ಅಡುಗೆಮನೆಯಲ್ಲಿ ಹೊಗೆಯಿಂದ ತಾಯಂದಿರು ಮತ್ತು ಸಹೋದರಿಯರು ಹೆಚ್ಚು ತೊಂದರೆ ಅನುಭವಿಸಿದರು. ಶೌಚಾಲಯ ಇಲ್ಲದ ಕಾರಣ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಕಚ್ಚಾ ಛಾವಣಿಯಿಂದ ನೀರು ಸೋರುವುದರಿಂದ ತಾಯಂದಿರು ಹೆಚ್ಚು ತೊಂದರೆ ಅನುಭವಿಸಿದರು. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಹಣವಿಲ್ಲದೇ, ಸೌಲಭ್ಯಗಳಿಲ್ಲದೆ ಹೆಚ್ಚು ನೋವು ಅನುಭವಿಸುವುದು ತಾಯಂದಿರ ಹೃದಯ. ನಮ್ಮ ತಾಯಂದಿರು ಮತ್ತು ಸಹೋದರಿಯರು ನೀರಿಗಾಗಿ ಸಾಕಷ್ಟು ಕಷ್ಟಗಳನ್ನು ಸಹಿಸಬೇಕಾಯಿತು. ಮತ್ತು ಸಮಯವನ್ನು ಕಳೆಯಬೇಕಾಯಿತು. ಕಳೆದ ಏಳು ವರ್ಷಗಳಲ್ಲಿ ಮಾತೃಶಕ್ತಿಯ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ನಾವು ಪ್ರಯತ್ನಿಸಿದ್ದೇವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ನಲ್ಲಿ ನೀರು ಅಂತಹ ಒಂದು ಪ್ರಯತ್ನವಾಗಿದೆ. ಮಿಷನ್ ಅಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ದೇಶದ ಐದು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಪೈಪ್‌ಲೈನ್ ನೀರು ನೀಡಲಾಗಿದೆ. 70ಕ್ಕೂ ಹೆಚ್ಚು ಯೋಜನೆಗಳ ಶಂಕುಸ್ಥಾಪನೆಯಿಂದ 13 ಜಿಲ್ಲೆಗಳ ಸಹೋದರಿಯರ ಬದುಕು ಸುಗಮವಾಗಲಿದೆ. ಹಲ್ದ್ವಾನಿ ಮತ್ತು ಜಗಜಿತ್‌ಪುರ ಸುತ್ತಮುತ್ತಲಿನ ಪ್ರದೇಶಗಳಿಗೂ ಸಾಕಷ್ಟು ಕುಡಿಯುವ ನೀರು ಸಿಗಲಿದೆ.

ಸ್ನೇಹಿತರೇ,

ನಾವು ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದಾಗ, ಸ್ಥಳವನ್ನು ಬಹಳ ವರ್ಷಗಳ ಹಿಂದೆ ನಿರ್ಮಿಸಲಾಗಿದೆ, ಇದು ತುಂಬಾ ಹಳೆಯದು ಎಂದು ಹೇಳಲಾಗುತ್ತದೆ. ಆದರೆ ದಶಕಗಳಿಂದ ದೇಶದ ಪರಿಸ್ಥಿತಿ ಹೇಗಿದೆ ಎಂದರೆ ದೊಡ್ಡ ದೊಡ್ಡ ಯೋಜನೆಗಳು ಬಂದಾಗ ಇಲ್ಲಿ ಹೇಳುವುದೇನೆಂದರೆ ಯೋಜನೆಯೇ ಇಷ್ಟು ವರ್ಷಗಳಿಂದ ನೆಗುದಿಗೆ ಬಿದ್ದಿದೆ ಎಂದು. ಇದು ಹಿಂದೆ ಸರ್ಕಾರದಲ್ಲಿದ್ದವರ ಶಾಶ್ವತ ಟ್ರೇಡ್‌ಮಾರ್ಕ್ ಆಗಿದೆ. ಇದು ಇಂದು ಉತ್ತರಾಖಂಡದಲ್ಲಿ ಕಾಮಗಾರಿ ಆರಂಭವಾದ ಲಖ್ವಾರ್ ಯೋಜನೆಯ ಇತಿಹಾಸ. ನೀವು ಯೋಚಿಸಿ, ನನ್ನ ಸ್ನೇಹಿತರು ಮತ್ತು ಇಲ್ಲಿ ಕುಳಿತಿರುವವರು ಯೋಜನೆಯ ಬಗ್ಗೆ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕೇಳುತ್ತಿದ್ದಾರೆ. ಇಷ್ಟೊತ್ತಿಗೆ ಸಮಸ್ಯೆ ಏನೆಂಬುದನ್ನು ನೀವು ಮರೆತಿರಬಹುದು. ಯೋಜನೆಯನ್ನು ಮೊದಲ ಬಾರಿಗೆ 1976 ರಲ್ಲಿ ರೂಪಿಸಲಾಯಿತು. ಇದು ಈಗ ಸುಮಾರು 50 ವರ್ಷಗಳು. ಇಂದು 46 ವರ್ಷಗಳ ನಂತರ ನಮ್ಮ ಸರ್ಕಾರ ಅದಕ್ಕೆ ಅಡಿಗಲ್ಲು ಹಾಕಿದೆ. 1974ರಲ್ಲಿ ರೂಪುಗೊಂಡ ಯೋಜನೆ 46 ವರ್ಷಗಳ ನಂತರ ಜಾರಿಯಾಗುತ್ತಿರುವುದು ಪಾಪವೋ ಅಲ್ಲವೋ ಎಂದು ಉತ್ತರಾಖಂಡದ ಸಹೋದರ ಸಹೋದರಿಯರನ್ನು ಕೇಳಲು ಬಯಸುತ್ತೇನೆ. ಇದು ಪಾಪ ಅಥವಾ ಇಲ್ಲವೇ? ಇಂತಹ ಪಾಪ ಮಾಡಿದವರಿಗೆ ಶಿಕ್ಷೆಯಾಗಬೇಕೋ ಬೇಡವೋ? ವಿಳಂಬವು ನಿಮಗೆ ನೋವುಂಟು ಮಾಡಿದೆಯೋ ಅಥವಾ ಇಲ್ಲವೋ? ಉತ್ತರಾಖಂಡ ಕಷ್ಟವನ್ನು ಅನುಭವಿಸಿದೆಯೋ ಇಲ್ಲವೋ? ಎರಡು ತಲೆಮಾರುಗಳು ನರಳಿದವು ಅಥವಾ ಇಲ್ಲವೋ? ಅಂತಹ ಪಾಪಗಳನ್ನು ಮಾಡುವವರನ್ನು ನೀವು ಮರೆಯುತ್ತೀರಾ ಅಥವಾ ಅವರ ಭರವಸೆಗಳನ್ನು ನೀವು ನಂಬುವಿರಾ ? ಸುಮಾರು ಐದು ದಶಕಗಳಿಂದ ಕಡತಗಳಲ್ಲಿ ಇರುವ ಇಂತಹ ಯೋಜನೆಯನ್ನು ಯಾವ ದೇಶವೂ ಊಹಿಸಲು ಸಾಧ್ಯವಿಲ್ಲ. ಪ್ರತಿ ಚುನಾವಣೆಯಲ್ಲೂ ಭರವಸೆಗಳನ್ನು ಮಾತ್ರ ನೀಡಲಾಗುತ್ತಿತ್ತು! ಸಹೋದರ ಸಹೋದರಿಯರೇ, ನನ್ನ ಏಳು ವರ್ಷಗಳ ದಾಖಲೆಯನ್ನು ಒಮ್ಮೆ ನೋಡಿ. ಅಂತಹ ಹಳೆಯ ಸಂಗತಿಗಳನ್ನು ಹುಡುಕಲು ಮತ್ತು ಸರಿಪಡಿಸಲು ನನ್ನ ಸಮಯ ಕಳೆಯುತ್ತಿದೆ. ಈಗ ನಾನು ಕೆಲಸವನ್ನು ಸರಿಯಾಗಿ ಮಾಡುತ್ತಿದ್ದೇನೆ, ನೀವು ಅಂತಹ ಜನರನ್ನು ಸರಿಪಡಿಸಬೇಕು. ಹಿಂದೆ ಸರ್ಕಾರದಲ್ಲಿದ್ದವರಿಗೆ ನಿಮ್ಮ ಬಗ್ಗೆ ಕಾಳಜಿ ಇದ್ದಿದ್ದರೆ ನಾಲ್ಕು ದಶಕಗಳಿಂದ ಯೋಜನೆಗೆ ಹಿನ್ನಡೆಯಾಗುತ್ತಿತ್ತೇ? ಅವರು ನಿಮ್ಮನ್ನು ಪ್ರೀತಿಸುತ್ತಿದ್ದರೆ, ಇದು ಯೋಜನೆಯ ದುರವಸ್ಥೆಯಾಗಬಹುದೇ? ಹಿಂದೆ ಸರ್ಕಾರದಲ್ಲಿದ್ದವರು ಉತ್ತರಾಖಂಡದ ಸಾಮರ್ಥ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದು ಸತ್ಯ. ಇದರ ಪರಿಣಾಮವಾಗಿ ನಮಗೆ ಸಾಕಷ್ಟು ವಿದ್ಯುತ್ ಸಿಗಲಿಲ್ಲ, ರೈತರ ಹೊಲಗಳಿಗೆ ನೀರಾವರಿ ಸಿಗಲಿಲ್ಲ, ಮತ್ತು ದೇಶದ ಹೆಚ್ಚಿನ ಗ್ರಾಮೀಣ ಜನರು ಪೈಪ್‌ಲೈನಿನ ಶುದ್ಧ ನೀರಿಲ್ಲದೆ ಬದುಕಬೇಕಾಯಿತು.

ಸ್ನೇಹಿತರೇ,

ಕಳೆದ ಏಳು ವರ್ಷಗಳಿಂದ ಭಾರತವು ತನ್ನ ಪರಿಸರವನ್ನು ರಕ್ಷಿಸುತ್ತಿದೆ ಮತ್ತು ಅದರ ನೈಸರ್ಗಿಕ ಸಾಮರ್ಥ್ಯವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದೆ. ಇಂದು ಆರಂಭಿಸಿರುವ ಯೋಜನೆಗಳು ಉತ್ತರಾಖಂಡವನ್ನು ವಿದ್ಯುತ್ ಹೆಚ್ಚುವರಿ ರಾಜ್ಯ ಎಂಬ ಗುರುತನ್ನು ಬಲಪಡಿಸುವುದಲ್ಲದೆ ರೈತರಿಗೆ ಸಾಕಷ್ಟು ನೀರಾವರಿ ಸೌಲಭ್ಯಗಳನ್ನು ಒದಗಿಸುತ್ತವೆ. ವಿದ್ಯುತ್ ನಮ್ಮ ಕೈಗಾರಿಕೆಗಳಿಗೆ, ಶಾಲಾ-ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ಮತ್ತು ಪ್ರತಿ ಕುಟುಂಬಕ್ಕೂ ಲಭ್ಯವಾಗುತ್ತದೆ.

ಸ್ನೇಹಿತರೇ,

ಉತ್ತರಾಖಂಡದ ಗಂಗಾ-ಯಮುನೆಯ ಆರೋಗ್ಯವು ಇಲ್ಲಿನ ಜನರ ಆರೋಗ್ಯ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಶದ ಬೃಹತ್ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಾವು ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ಶೌಚಾಲಯಗಳ ನಿರ್ಮಾಣ, ಸುಧಾರಿತ ಒಳಚರಂಡಿ ವ್ಯವಸ್ಥೆ ಮತ್ತು ನೀರಿನ ಸಂಸ್ಕರಣೆಗೆ ಆಧುನಿಕ ಸೌಲಭ್ಯಗಳೊಂದಿಗೆ, ಗಂಗಾ ಜಿಗೆ ಬೀಳುವ ಕೊಳಕು ಚರಂಡಿ ನೀರುಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ. ಇಂದು ಕೂಡ ನಮಾಮಿ ಗಂಗೆ ಯೋಜನೆಯಡಿ ಉಧಮ್ ಸಿಂಗ್ ನಗರ, ರಾಮನಗರ ಮತ್ತು ನೈನಿತಾಲ್‌ನಲ್ಲಿ ಒಳಚರಂಡಿ ಮಾರ್ಗ ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ. ಹಿಂದೆ ಯಾರೂ ಕಾಳಜಿ ವಹಿಸದ ನೈನಿತಾಲ್‌ನ ಸುಂದರ ಸರೋವರದ ರಕ್ಷಣೆಯನ್ನು ಈಗ ಕೈಗೆತ್ತಿಕೊಳ್ಳಲಾಗುವುದು.

ಸ್ನೇಹಿತರೇ,

ಪ್ರವಾಸಿಗರಿಗೆ ಸೌಕರ್ಯವಿಲ್ಲದಿದ್ದರೆ ಪ್ರವಾಸೋದ್ಯಮ ಎಲ್ಲಿಯೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹಿಂದೆ ಸರಕಾರಗಳನ್ನು ನಡೆಸುತ್ತಿದ್ದವರು ದಿಸೆಯಲ್ಲಿ ಯೋಚಿಸಲೇ ಇಲ್ಲ. ನಿರ್ಮಾಣವಾಗುತ್ತಿರುವ ಹೊಸ ರಸ್ತೆಗಳು, ಅಗಲೀಕರಣಗೊಳ್ಳುತ್ತಿರುವ ರಸ್ತೆಗಳು ಮತ್ತು ನಿರ್ಮಾಣವಾಗುತ್ತಿರುವ ಹೊಸ ರೈಲು ಮಾರ್ಗಗಳು ಉತ್ತರಾಖಂಡದಲ್ಲಿ ಹೊಸ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಉತ್ತರಾಖಂಡದ ಪ್ರಮುಖ ಸ್ಥಳಗಳಲ್ಲಿನ ರೋಪ್‌ವೇಗಳು ಹೊಸ ಪ್ರವಾಸಿಗರನ್ನು ಕರೆತರಲು ಸಹಾಯ ಮಾಡುತ್ತದೆ. ಹೆಚ್ಚುತ್ತಿರುವ ಮೊಬೈಲ್ ಸಂಪರ್ಕ ಮತ್ತು ಕೆಲವೆಡೆ ಅಳವಡಿಸಲಾಗುತ್ತಿರುವ ಹೊಸ ಟವರ್‌ಗಳೂ ಪ್ರವಾಸಿಗರನ್ನು ಆಕರ್ಷಿಸಲಿವೆ. ಉತ್ತರಾಖಂಡದಲ್ಲಿ ಅಭಿವೃದ್ಧಿಪಡಿಸುತ್ತಿರುವ ವೈದ್ಯಕೀಯ ಸೌಲಭ್ಯಗಳು ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಮತ್ತು ಯಾರು ಹೆಚ್ಚು ಪ್ರಯೋಜನ ಪಡೆಯುತ್ತಾರೆ? ಇದರ ಗರಿಷ್ಠ ಲಾಭ ಉತ್ತರಾಖಂಡದ ಯುವಕರಿಗೆ, ನಮ್ಮ ಮಲೆನಾಡಿನ ಯುವಕರಿಗೆ ಸಿಗಲಿದೆ. ಕೇದಾರನಾಥಜಿಗೆ ಹೊಸ ಸೌಲಭ್ಯಗಳನ್ನು ಆರಂಭಿಸಿದ ನಂತರ ಅಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಯಿತು ಎಂಬುದಕ್ಕೆ ಉತ್ತರಾಖಂಡದ ಜನತೆ ಸಾಕ್ಷಿಯಾಗಿದ್ದಾರೆ. ಎಲ್ಲಾ ದಾಖಲೆಗಳನ್ನು ಮುರಿದರು. ಅದೇ ರೀತಿ ಕಾಶಿ ವಿಶ್ವನಾಥ ಧಾಮದ ನಿರ್ಮಾಣದ ನಂತರ ದೇಶವು ಭಕ್ತರ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳವನ್ನು ಕಾಣುತ್ತಿದೆ. ಕುಮಾವೂನ್‌ನಲ್ಲಿರುವ ಜಾಗೇಶ್ವರ ಧಾಮ ಮತ್ತು ಬಾಗೇಶ್ವರದಂತಹ ಪವಿತ್ರ ಸ್ಥಳಗಳು ಇಲ್ಲಿವೆ. ಅವರ ಅಭಿವೃದ್ಧಿಯು ಪ್ರದೇಶದಲ್ಲಿ ಅಭಿವೃದ್ಧಿಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಕೇಂದ್ರ ಸರ್ಕಾರವು ನೈನಿತಾಲ್‌ನ ದೇವಸ್ಥಲ್‌ನಲ್ಲಿ ಭಾರತದ ಅತಿದೊಡ್ಡ ಆಪ್ಟಿಕಲ್ ಟೆಲಿಸ್ಕೋಪ್ ಅನ್ನು ಸ್ಥಾಪಿಸಿದೆ. ಇದು ದೇಶ-ವಿದೇಶದ ವಿಜ್ಞಾನಿಗಳಿಗೆ ಹೊಸ ಸೌಲಭ್ಯಗಳನ್ನು ಒದಗಿಸಿದ್ದು ಮಾತ್ರವಲ್ಲದೆ ಸ್ಥಳಕ್ಕೆ ಹೊಸ ಗುರುತನ್ನು ಸೃಷ್ಟಿಸಿದೆ.

ಸ್ನೇಹಿತರೇ,

ಡಬಲ್ ಇಂಜಿನ್ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಹಣದ ಮೊತ್ತವು ಅಭೂತಪೂರ್ವವಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹೊಸ ರಸ್ತೆಗಳು, ಕಟ್ಟಡಗಳು, ಮನೆಗಳು ಮತ್ತು ಹೊಸ ರೈಲು ಮಾರ್ಗಗಳ ನಿರ್ಮಾಣದೊಂದಿಗೆ, ಸ್ಥಳೀಯ ಕೈಗಾರಿಕೆಗಳಿಗೆ ಮತ್ತು ನಮ್ಮ ಉತ್ತರಾಖಂಡದ ಉದ್ಯಮಿಗಳಿಗೆ ಹೊಸ ಸಾಧ್ಯತೆಗಳು ಹೊರಹೊಮ್ಮುತ್ತವೆ. ಸಿಮೆಂಟ್ ಸರಬರಾಜು ಮಾಡುವ ಉತ್ತರಾಖಂಡದ ವ್ಯಾಪಾರಿ, ಕಬ್ಬಿಣ ಮತ್ತು ಬಲ್ಲಾಸ್ಟ್‌ ಗಳನ್ನು ಪೂರೈಸುವ ಉದ್ಯಮಿ ಅಥವಾ ಅವರ ವಿನ್ಯಾಸಕ್ಕೆ ಸಂಬಂಧಿಸಿದ ಕೆಲಸವನ್ನು ನಿರ್ವಹಿಸುವ ಎಂಜಿನಿಯರ್ ಇರುತ್ತಾರೆ. ಅಭಿವೃದ್ಧಿ ಯೋಜನೆಗಳು ಇಲ್ಲಿ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಸ್ವಂತವಾಗಿ ವ್ಯಾಪಾರ ಮಾಡಲು ಬಯಸುವ ಉತ್ತರಾಖಂಡದ ಯುವಕರ ಜೊತೆ ಡಬಲ್ ಇಂಜಿನ್ ಸರ್ಕಾರವು ಪೂರ್ಣ ಶಕ್ತಿಯೊಂದಿಗೆ ನಿಂತಿದೆ. ಮುದ್ರಾ ಯೋಜನೆಯಡಿ ಯುವಕರಿಗೆ ಬ್ಯಾಂಕ್ ಗ್ಯಾರಂಟಿ ಇಲ್ಲದೆ ಕೈಗೆಟುಕುವ ಸಾಲ ನೀಡಲಾಗುತ್ತಿದೆ. ಕೃಷಿಯಲ್ಲಿ ತೊಡಗಿರುವ ಯುವಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಸಣ್ಣ ಅಂಗಡಿಗಳನ್ನು ನಡೆಸುತ್ತಿರುವ ಸಹೋದರ ಸಹೋದರಿಯರು ಸ್ವನಿಧಿ ಯೋಜನೆಯಡಿ ಸಹಾಯ ಪಡೆಯುತ್ತಿದ್ದಾರೆ. ಉತ್ತರಾಖಂಡದ ಬಡ ಮತ್ತು ಮಧ್ಯಮ ವರ್ಗದ ಯುವಕರಿಗೆ ನಮ್ಮ ಸರ್ಕಾರ ಬ್ಯಾಂಕ್‌ಗಳ ಬಾಗಿಲು ತೆರೆದಿದೆ. ಯಾವುದೇ ಅಡೆತಡೆಗಳು ಬರದಂತೆ ಅವರು ತಮ್ಮ ಕನಸುಗಳನ್ನು ನನಸಾಗಿಸಲು ನಾವು ಶ್ರಮಿಸುತ್ತಿದ್ದೇವೆ. ಉತ್ತರಾಖಂಡದಲ್ಲಿ ಆಯುಷ್ ಮತ್ತು ಆರೊಮ್ಯಾಟಿಕ್ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳಿಗೆ ಹಲವು ಸಾಧ್ಯತೆಗಳಿವೆ. ದೇಶ ವಿದೇಶಗಳಲ್ಲಿ ಇದಕ್ಕೆ ದೊಡ್ಡ ಮಾರುಕಟ್ಟೆ ಇದೆ. ಕಾಶಿಪುರದ ಅರೋಮಾ ಪಾರ್ಕ್ ಉತ್ತರಾಖಂಡವನ್ನು ಬಲಪಡಿಸುತ್ತದೆ, ರೈತರಿಗೆ ಬೆಂಬಲ ನೀಡುತ್ತದೆ ಮತ್ತು ನೂರಾರು ಯುವಕರಿಗೆ ಉದ್ಯೋಗವನ್ನು ನೀಡುತ್ತದೆ. ಅದೇ ರೀತಿ ಪ್ಲಾಸ್ಟಿಕ್ ಇಂಡಸ್ಟ್ರಿಯಲ್ ಪಾರ್ಕ್ ಕೂಡ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ಸಹೋದರ ಸಹೋದರಿಯರೇ,

ದೆಹಲಿ ಮತ್ತು ಡೆಹ್ರಾಡೂನ್ ಸರ್ಕಾರಗಳು ಅಧಿಕಾರದ ಹಿಂದೆ ಬಿದ್ದಿಲ್ಲ; ಆದರೆ ಸೇವೆಗೆ ಮೀಸಲಾಗಿವೆ. ದೇಶದ ಭದ್ರತೆಗಾಗಿ ತಮ್ಮ ಮಕ್ಕಳನ್ನು ಮುಡಿಪಾಗಿಟ್ಟ ಕುಮಾವ್‌ ವೀರ ತಾಯಂದಿರು, ಗಡಿನಾಡು ರಾಜ್ಯವಾಗಿದ್ದರೂ ಹಿಂದಿನ ಸರ್ಕಾರಗಳು ಪ್ರದೇಶವನ್ನು ನಿರ್ಲಕ್ಷಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಸಂಪರ್ಕದಿಂದ ರಾಷ್ಟ್ರೀಯ ಭದ್ರತೆಯವರೆಗಿನ ಪ್ರತಿಯೊಂದು ಅಂಶವನ್ನು ನಿರ್ಲಕ್ಷಿಸಲಾಗಿದೆ. ಅವರು ನಮ್ಮ ಸೈನ್ಯ ಮತ್ತು ಸೈನಿಕರನ್ನು ವರ್ಷಗಳ ಕಾಲ ಕಾಯುವಂತೆ ಮಾಡಿದರು. ಒನ್  ರ‍್ಯಾಂಕ್ ಒನ್ ಪೆನ್ಷನ್‌ಗಾಗಿ ಕಾಯಬೇಕು, ಆಧುನಿಕ ಶಸ್ತ್ರಾಸ್ತ್ರಗಳಿಗಾಗಿ ಕಾಯಬೇಕು, ಬುಲೆಟ್ ಪ್ರೂಫ್ ಜಾಕೆಟ್‌ಗಳಂತಹ ಅಗತ್ಯ ರಕ್ಷಣಾ ರಕ್ಷಾಕವಚಕ್ಕಾಗಿ ಕಾಯಬೇಕು ಮತ್ತು ಭಯೋತ್ಪಾದಕರಿಗೆ ಬಲವಾದ ಪ್ರತ್ಯುತ್ತರಕ್ಕಾಗಿ ಕಾಯಬೇಕು! ಜನರು ಸೇನೆಯನ್ನು ಮತ್ತು ನಮ್ಮ ವೀರ ಸೈನಿಕರನ್ನು ಅವಮಾನಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದರು. ಕುಮಾವ್‌  ರೆಜಿಮೆಂಟ್ ಅನ್ನು ಸೇನೆಗೆ ನೀಡಿದ ಉತ್ತರಾಖಂಡದ ವೀರ ಜನರು ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಸ್ನೇಹಿತರೇ,

ಉತ್ತರಾಖಂಡವು ತ್ವರಿತ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಬಯಸುತ್ತದೆ. ನಿಮ್ಮ ಕನಸುಗಳು ನಮ್ಮ ನಿರ್ಣಯಗಳು; ನಿಮ್ಮ ಇಚ್ಛೆಯೇ ನಮಗೆ ಪ್ರೇರಣೆ ಮತ್ತು ನಿಮ್ಮ ಪ್ರತಿಯೊಂದು ಅಗತ್ಯವನ್ನು ಪೂರೈಸುವುದು ನಮ್ಮ ಜವಾಬ್ದಾರಿಯಾಗಿದೆ. ಡಬಲ್ ಎಂಜಿನ್ ಸರ್ಕಾರದ ಮೇಲಿನ ನಿಮ್ಮ ಆಶೀರ್ವಾದವು ದಶಕವನ್ನು ಉತ್ತರಾಖಂಡದ ದಶಕವನ್ನಾಗಿ ಮಾಡುತ್ತದೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಮತ್ತು ಉತ್ತರಾಖಂಡದ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಅಭಿನಂದಿಸುತ್ತೇನೆ. ನನ್ನ ಹೃದಯದಾಳದ ಅಭಿನಂದನೆಗಳು. 2022 ವರ್ಷವು ಇನ್ನೇನು ಬರಲಿದೆ. ನಾನು ಉತ್ತರಾಖಂಡದ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ ಮತ್ತು ಘುಘುಟಿಯ ತ್ಯಾರ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ!

ತುಂಬಾ ಧನ್ಯವಾದಗಳು

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***



(Release ID: 1787580) Visitor Counter : 175