ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರ ಪ್ರದೇಶದ ಬಲರಾಂಪುರದಲ್ಲಿ ಸರಯೂ ನಾಹರ್ ರಾಷ್ಟ್ರೀಯ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 11 DEC 2021 6:09PM by PIB Bengaluru

ನು  ಪವಿತ್ರ ಭೂಮಿಗೆ ಹಲವು ಬಾರಿ ನಮಿಸುತ್ತೇನೆಇಂದು ಆದಿ ಶಕ್ತಿ ಮಾ ಪತೇಶ್ವರಿ ಮತ್ತು ಮಿನಿ ಕಾಶಿ ಎಂದು ಕರೆಯಲ್ಪಡುತ್ತಿರುವ ಬಲರಾಂಪುರದ ಪವಿತ್ರ ಭೂಮಿಗೆ ಭೇಟಿ ನೀಡುವ ಸದವಕಾಶ ನನಗೆ ಲಭಿಸಿದೆನನಗೆ ನಿಮ್ಮಿಂದ ಬಹಳ ಆಶೀರ್ವಾದಗಳು ಲಭಿಸಿವೆ.

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಉತ್ತರ ಪ್ರದೇಶದ ಉತ್ಸಾಹಿ,ಕಠಿಣ ಪರಿಶ್ರಮಿ ಮತ್ತು  ಜನಪ್ರಿಯ ಮುಖ್ಯಮಂತ್ರಿ ಯೋಗೀ ಆದಿತ್ಯನಾಥ ಜೀಉಪ ಮುಖ್ಯಮಂತ್ರಿ ಶ್ರೀ ಕೇಶವ ಪ್ರಸಾದ್ ಮೌರ್ಯಾ ಜೀಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಜೀ ಮತ್ತು ಕೌಶಲ್ ಕಿಶೋರ್ ಜೀರಾಜ್ಯ ಸರಕಾರದಲ್ಲಿ ಸಚಿವರಾಗಿರುವ ಮಹೇಂದ್ರ ಸಿಂಗ್ ಜೀರಾಮಪತಿ ಶಾಸ್ತ್ರೀಜೀಮುಕುಟ್ ಬಿಹಾರಿ ವರ್ಮಾ ಜೀಬ್ರಜೇಶ್ ಪಾಠಕ್ ಜೀಅಶುತೋಷ್ ತಂಡನ್ ಜೀಬಲದೇವ ಒಲಾಖ್ ಜೀಮತ್ತು ಶ್ರೀ ಪಲ್ಟು ರಾಂ ಜೀವೇದಿಕೆಯಲ್ಲಿ ಹಾಜರಿರುವ ನನ್ನ ಎಲ್ಲಾ ಸಹೋದ್ಯೋಗಿ ಸಂಸತ್ ಸದಸ್ಯರೇಎಲ್ಲಾ ಗೌರವಾನ್ವಿತ ಶಾಸಕರೇಜಿಲ್ಲಾ ಪಂಚಾಯತ್ ಗಳ ಸದಸ್ಯರೇಮತ್ತು ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ!. ಕ್ರಾಂತಿಕಾರಿಗಳ  ಭೂಮಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದೆರಾಜಾ ದೇವಿ ಭಕ್ಷಾ ಸಿಂಗ್ರಾಜಾ ಕೃಷ್ಣ ದತ್ತ ರಾಂ ಮತ್ತು ಪ್ರಥ್ವೀಪಾಲ್ ಸಿಂಗ್ ಅವರು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟ ಮಾಡುವಲ್ಲಿ ಯಾವುದನ್ನೂ ಬಿಟ್ಟಿಲ್ಲಅಯೋಧ್ಯಾದಲ್ಲಿ ನಿರ್ಮಾಣವಾಗುತ್ತಿರುವ ಭಗವಾನ್ ಶ್ರೀರಾಮನ ಭವ್ಯ ಮಂದಿರದ ಪ್ರಸ್ತಾಪವಾಗುವಾಗೆಲ್ಲ ಬಲರಾಂಪುರ ಅರಸ ಮನೆತನದ ಮಹಾರಾಜಾ ಪತೇಶ್ವರಿ ಪ್ರಸಾದ್ ಸಿಂಗ್ ಅವರ ಕೊಡುಗೆಯನ್ನು ಖಂಡಿತವಾಗಿಯೂ ಉಲ್ಲೇಖಿಸಲಾಗುತ್ತದೆಬಲರಾಂಪುರದ ಜನತೆ ನಿಜವಾಗಿಯೂ ಮೇಧಾವಿಗಳುಅವರು ನಾನಾಜಿ ದೇಶಮುಖ್ ಮತ್ತು ಅಟಲ್ ಬಿಹಾರಿ ವಾಜಪೇಯಿ ರೂಪದಲ್ಲಿ ಎರಡು ಭಾರತ ರತ್ನಗಳನ್ನು ನೀಡಿದ್ದಾರೆ.

ಸ್ನೇಹಿತರೇ,

ಇಂದು ರಾಷ್ಟ್ರವನ್ನು ನಿರ್ಮಾಣ ಮಾಡಿದವರ ಮತ್ತು ದೇಶರಕ್ಷಕರ ನಾಡಾದ  ಭೂಮಿಯಿಂದ ನಾನು ದಶಂಬರ 8 ರಂದು ಹೆಲಿಕಾಪ್ಟರ್ ಪತನದಲ್ಲಿ ಮೃತರಾದ  ದೇಶದ ಎಲ್ಲಾ ವೀರ ಯೋಧರಿಗೆ ನನ್ನ ಗೌರವದ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತೇನೆಭಾರತದ ರಕ್ಷಣಾ ಪಡೆಗಳ ಸಿಬ್ಬಂದಿಗಳ ಮೊದಲ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಜೀ ಅವರ ನಿಧನ ಪ್ರತಿಯೊಬ್ಬ ಭಾರತೀಯನಿಗೂಪ್ರತಿಯೊಬ್ಬ ದೇಶಾಭಿಮಾನಿಗೂ ಬಹಳ ದೊಡ್ಡ ನಷ್ಟದೇಶದ ಸಶಸ್ತ್ರ ಪಡೆಗಳನ್ನು ಸ್ವಾವಲಂಬಿಯಾಗಿಸಲು ಜನರಲ್ ಬಿಪಿನ್ ರಾವತ್ ಜೀ ಅವರು ಮಾಡಿದ ಕಠಿಣ ದುಡಿಮೆಗೆ ಇಡೀ ದೇಶವೇ ಸಾಕ್ಷಿಯಾಗಿದೆಸೇನೆಯಲ್ಲಿರುವಾಗ ಸೈನಿಕರೊಬ್ಬರು ಬರೇ ಸೈನಿಕರು ಮಾತ್ರವಲ್ಲಅವರ ಇಡೀ ಬದುಕೇ ಹೋರಾಟದ ಬದುಕು ಮತ್ತು ಅವರು ಶಿಸ್ತಿಗೆ ಒಳಪಟ್ಟಿರುತ್ತಾರೆಗೌರವ ಮತ್ತು ದೇಶದ ಹಿರಿಮೆಗರಿಮೆಗಳಿಗೆ ಸದಾ ಕಾಲವೂ ಬಾಧ್ಯಸ್ಥರಾಗಿರುತ್ತಾರೆಗೀತೆಯಲ್ಲಿ ಹೀಗೆ ಹೇಳಿದೆनैनं छिन्दन्ति शस्त्राणि नैनं दहति पावकಅಂದರೆ ಶಸ್ತ್ರಾಸ್ತ್ರಗಳು ಆತ್ಮವನ್ನು ಚೂರು ಚೂರು ಮಾಡಲಾರವು ಅಥವಾ ಅಗ್ನಿ ಕೂಡಾ ಅದನ್ನು ಸುಡಲಾರದುಬರಲಿರುವ ದಿನಗಳಲ್ಲಿ ಭಾರತವು ಹೊಸ ದೃಢ ನಿರ್ಧಾರಗಳೊಂದಿಗೆ ಮುನ್ನಡೆಯುವುದನ್ನು ಜನರಲ್ ಬಿಪಿನ್ ರಾವತ್ ಅವರು ಕಾಣಲಿದ್ದಾರೆಗಡಿ ಭದ್ರತೆಯನ್ನು ಬಲಪಡಿಸುವ ಕಾರ್ಯ ಮತ್ತು ಗಡಿ ಮೂಲಸೌಕರ್ಯದೇಶದ ಸೇನಾ ಪಡೆಗಳನ್ನು ಸ್ವಾವಲಂಬಿಯಾಗಿಸುವ ಆಂದೋಲನ ಹಾಗು ಮೂರು ಸಶಸ್ತ್ರ ಪಡೆಗಳಲ್ಲಿ ಸಮನ್ವಯವನ್ನು ಇನ್ನಷ್ಟು ಬಲಪಡಿಸುವ ಕಾರ್ಯಗಳು ತ್ವರಿತಗತಿಯಿಂದ ನಡೆಯಲಿವೆಭಾರತ ಶೋಕತಪ್ತವಾಗಿದೆನೋವು ಅನುಭವಿಸುತ್ತಿದ್ದರೂ ನಮ್ಮ ಅಭಿವೃದ್ಧಿಯನ್ನು ನಾವು ಸ್ಥಗಿತ ಮಾಡುವುದಿಲ್ಲಭಾರತವು ಸ್ಥಗಿತಗೊಳ್ಳಲಾರದುಅದು ನಿಂತಲ್ಲಿಯೇ ನಿಲ್ಲಲಾರದುಭಾರತೀಯರಾದ ನಾವೆಲ್ಲರೂ ಒಗ್ಗೂಡಿ ಕಠಿಣ ಪರಿಶ್ರಮ ಹಾಕಬೇಕು ಮತ್ತು ದೇಶದ ಒಳಗಿನ ಹಾಗು ಹೊರಗಿನ ಸವಾಲುಗಳನ್ನು ಎದುರಿಸಬೇಕುನಾವು ಭಾರತವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮತ್ತು ಸಮೃದ್ಧವನ್ನಾಗಿ ಮಾಡುತ್ತೇವೆ.

ಸ್ನೇಹಿತರೇ,

ಉತ್ತರ ಪ್ರದೇಶದ ಪುತ್ರ ಮತ್ತು ದೇವೋರಿಯಾದ ನಿವಾಸಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಜೀವವನ್ನು ಉಳಿಸಲು ವೈದ್ಯರು ಶ್ರಮಪಡುತ್ತಿದ್ದಾರೆಮಾತೆ ಪತೇಶ್ವರಿಯಲ್ಲಿ ನಾನು ಅವರ ಜೀವ ಉಳಿಸುವಂತೆ ಪ್ರಾರ್ಥಿಸುತ್ತೇನೆದೇಶವು ವರುಣ್ ಸಿಂಗ್ ಜೀ ಮತ್ತು ಹುತಾತ್ಮರಾದ  ವೀರ ಯೋಧರ ಜೊತೆ ನಿಲ್ಲುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ದೇಶ ಮೊದಲು ಎಂಬ ಉತ್ಸಾಹಸ್ಪೂರ್ತಿಯನ್ನು ಇಟ್ಟುಕೊಂಡು 21 ನೇ ಶತಮಾನದಲ್ಲಿ ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲ ಪ್ರತಿಯೊಂದನ್ನೂ ದೇಶವು ಮಾಡುತ್ತಿದೆದೇಶದ ಬೆಳವಣಿಗೆಗೆ ನೀರಿನ ಕೊರತೆ ಎಂದೆಂದೂ ಒಂದು ಅಡ್ಡಿಯಾಗಬಾರದು ಎಂಬುದು ಬಹಳ ಮುಖ್ಯಆದುದರಿಂದ ನದಿ ನೀರನ್ನು ಸೂಕ್ತವಾಗಿ ಬಳಸಬೇಕು ಮತ್ತು ಸಾಕಷ್ಟು ನೀರು ರೈತರ ಕೃಷಿ ಕ್ಷೇತ್ರಗಳಿಗೆ ತಲುಪಬೇಕು ಎಂಬುದು ಸರಕಾರದ ಬಹಳ ಪ್ರಮುಖ ಆದ್ಯತೆಗಳಾಗಿವೆಸರಯೂ ಕಾಲುವೆ ರಾಷ್ಟ್ರೀಯ ಯೋಜನೆ ಪೂರ್ಣಗೊಂಡಿರುವುದು ಇದಕ್ಕೆ  ಒಂದು ಸಾಕ್ಷಿಉದ್ದೇಶದಲ್ಲಿ ಪ್ರಾಮಾಣಿಕತೆ ಇದ್ದಾಗ ಕೆಲಸ ಕೂಡಾ ಆಗುತ್ತದೆನೀವು ಇದು ಪೂರ್ಣಗೊಳ್ಳುವುದಕ್ಕೆ ದಶಕಗಳಿಂದ ಕಾಯುತ್ತಿದ್ದೀರಿಗಾಘ್ರಾ, ಸರಯೂರಾಪ್ಟಿಬಂಗಂಗಾ ಮತ್ತು ರೋಹಿಣಿಗಳ ನೀರು  ವಲಯದಲ್ಲಿ ಸಮೃದ್ಧಿಯ ಹೊಸ ಶಕೆಯನ್ನು ಬರೆಯಲಿದೆಬಲರಾಂಪುರದ ಜೊತೆ ಬಹಾರೈಚ್ಗೊಂಡಾಶ್ರಾವಸ್ತಿಸಿದ್ಧಾರ್ಥ ನಗರಬಸ್ತಿಗೋರಖ್ ಪುರಮಹಾರಾಜಗಂಜ್ಮತ್ತು ಕುಶಿನಗರ್ ಗಳ ಮಿಲಿಯಾಂತರ ನನ್ನ ರೈತ ಸಹೋದರರು ಮತ್ತು ಸಹೋದರಿಯರಿಗೆ ನನ್ನ ಅಭಿನಂದನೆಗಳುಇದು ಮಳೆಗಾಲದ ಅವಧಿಯ ಸಮಸ್ಯೆಗಳನ್ನು ನಿವಾರಿಸಲಿದೆನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇಯಾರಾದರೊಬ್ಬರು ಬಾಯಾರಿಕೆಯಿಂದ ಬಳಲುತ್ತಿರುವ ವ್ಯಕ್ತಿಗೆ  ಒಂದು ಕಪ್ ನೀರು ನೀಡಿದರೆಆತ  ಸಾಲವನ್ನು ಜೀವಮಾನ ಪೂರ್ತಿ ಮರೆಯುವುದಿಲ್ಲ ಎನ್ನುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆನನಗೆ ಖಚಿತವಿದೆನೀರಿಲ್ಲದೆ ಬರಗಾಲದಿಂದ ಬರಡಾಗಿದ್ದ,  ಮಿಲಿಯಾಂತರ ರೈತರ ಭೂಮಿ ನೀರು ಪಡೆಯುವಾಗ ನಿಮ್ಮ ಆಶೀರ್ವಾದಗಳು ನಮಗೆ ನಿಮಗಾಗಿ ಕೆಲಸ ಮಾಡಲು ಹೊಸ ಶಕ್ತಿಯನ್ನು ನೀಡುತ್ತವೆ.

ಸಹೋದರರೇ ಮತ್ತು ಸಹೋದರಿಯರೇ,

 ನೀರಾವರಿ ಸೌಲಭ್ಯವು ಎರಡು ಹೆಕ್ಟೇರಿಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಜೀವನವನ್ನು ಬದಲಾಯಿಸಲಿದೆ.ಇದು ರಕ್ತದ ಅವಶ್ಯಕತೆಯಿಂದ ಮರಣಶಯ್ಯೆಯಲ್ಲಿರುವ ವ್ಯಕ್ತಿಗೆ ವೈದ್ಯರು ರಕ್ತ ಕೊಟ್ಟು ಬದುಕಿಸಿದಂತೆ ಇಡೀ ವಲಯದ ಕೃಷಿ ಭೂಮಿ ಇಂತಹ ಹೊಸ ಬದುಕನ್ನು ಪಡೆದುಕೊಳ್ಳಲಿದೆ.

ಸ್ನೇಹಿತರೇ,

ಬಲರಾಂಪುರದ ಬೇಳೆ ಕಾಳುಗಳು ದೇಶದಲ್ಲಿ ಬಹಳ ಬೇಡಿಕೆಯಲ್ಲಿರುವಂತಹವುಸಾಂಪ್ರದಾಯಿಕ ಬೆಳೆಗಳ ಜೊತೆ  ಪ್ರದೇಶಗಳ ರೈತರು ಈಗ ಉತ್ತಮ ಅದಾಯ ತರುವ ಇತರ ಬೆಳೆಗಳನ್ನು ಬೆಳೆಯಲು ಸಮರ್ಥರಾಗಲಿದ್ದಾರೆ.

ಸ್ನೇಹಿತರೇ,

ನನಗೆ ಬಹಳ ದೀರ್ಘಾವಧಿಯಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿದೆನಾನು  ಹಿಂದಿನ ಹಲವು ಸರಕಾರಗಳನ್ನು ಮತ್ತು ಅವುಗಳ ಕಾರ್ಯ ವಿಧಾನಗಳನ್ನು ನೋಡಿದ್ದೇನೆನನಗೆ ಬಹಳ ನೋವು ಕೊಟ್ಟ ಸಂಗತಿ ಎಂದರೆ ಬಹಳ ದೀರ್ಘ ಕಾಲದವರೆಗೆ ದೇಶದ ಹಣಕಾಸುಸಮಯ ಮತ್ತು ಸಂಪನ್ಮೂಲಗಳ ದುರ್ಬಳಕೆಹಾಗು ಅವುಗಳಿಗೆ ಅವಮಾನಅದು ಸರಕಾರದ ಹಣ ನಾನೇಕೆ ಚಿಂತೆ ಮಾಡಬೇಕುಎಂಬ  ನಿಲುವುಧೋರಣೆ ದೇಶದ ಸಮತೋಲಿತ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಬಹಳ ದೊಡ್ಡ ಅಡ್ಡಿ ಧೋರಣೆಯಿಂದಾಗಿ ಸರಯೂ ಕಾಲುವೆ ಯೋಜನೆ ಇಷ್ಟು ದೀರ್ಘ ಕಾಲ ವಿಳಂಬಗೊಂಡಿತುಇದರ ಕೆಲಸ 50 ವರ್ಷಗಳ ಹಿಂದೆ ಆರಂಭವಾಗಿತ್ತುಮತ್ತು ಕಲ್ಪಿಸಿಕೊಳ್ಳಿಅದು 50 ವರ್ಷಗಳ ಬಳಿಕ ಪೂರ್ಣಗೊಂಡಿತು.  ತಮ್ಮ ಭವ್ಯ ಭವಿತವ್ಯದ ಆಶಯ ಹೊಂದಿದವರು ಇದನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.

ಸ್ನೇಹಿತರೇ,

 ಯೋಜನೆಯ ಅಂದಾಜು ವೆಚ್ಚ 100 ಕೋ.ರೂ.ಗಳಿಗಿಂತ ಕಡಿಮೆ ಇತ್ತು ಮತ್ತು ಅದನ್ನು ಈಗ 10,000 ಕೋ.ರೂ.ಗಳನ್ನು ಖರ್ಚು ಮಾಡಿ ಪೂರ್ಣಗೊಳಿಸಲಾಗಿದೆ. 100 ಕೋ.ರೂ.ಗಳಲ್ಲಿ ಮಾಡಬಹುದಾದುದಕ್ಕೆ 10,000 ಕೋ.ರೂ.ಗಳನ್ನು ಖರ್ಚು ಮಾಡಲಾಗಿದೆಇದು ನಿಮ್ಮ ಹಣವಲ್ಲವೇನನ್ನ ಸಹೋದರರೇ ?. ನಿಮ್ಮ ಕಠಿಣ ದುಡಿಮೆಯ ಪ್ರತೀ ರೂಪಾಯಿಯನ್ನು ಸರಿಯಾದ ಸಮಯದಲ್ಲಿ ಸರಿಯಾದ ಕೆಲಸಕ್ಕೆ ಬಳಸಬೇಕಿತ್ತಲ್ಲವೇ?.ಇದನ್ನು ಮಾಡದವರು ದುಷ್ಕರ್ಮಿಗಳು ಹೌದೋ ಅಲ್ಲವೋನೀವು ಇವರನ್ನು ಶಿಕ್ಷಿಸುತ್ತೀರೋ ಇಲ್ಲವೋನೀವು ಖಂಡಿತಾ ಶಿಕ್ಷಿಸುತ್ತೀರಿ!

ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ,

 ಮೊದಲಿನ ಸರಕಾರಗಳ ನಿರ್ಲಕ್ಷ್ಯಕ್ಕೆ  ದೇಶ ನೂರು ಪಟ್ಟು ಹೆಚ್ಚು ಪಾವತಿ ಮಾಡಿದೆ ನೀರಾವರಿ ಯೋಜನೆ 20-30 ವರ್ಷಗಳಿಗೆ ಮೊದಲು ರೈತರಿಗೆ ತಲುಪಿದ್ದರೆ  ವಲಯದ ರೈತರು ಚಿನ್ನದಂತಹ ಬೆಳೆ ತೆಗೆಯುತ್ತಿದ್ದರು ಹೌದೋ ಅಲ್ಲವೋ?. ಅವರು ದೇಶದ ಖಜಾನೆಯನ್ನು ತುಂಬಿಸುತ್ತಿದ್ದರು ಹೌದೋ ಅಲ್ಲವೋಅವರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಉತ್ತಮ ಕಾಳಜಿಯನ್ನು ವಹಿಸುವುದಕ್ಕೆ ಸಾಧ್ಯವಾಗುತ್ತಿತ್ತು ಅಲ್ಲವೇ?. ನನ್ನ ರೈತ ಸಹೋದರರು ಮತ್ತು ಸಹೋದರಿಯರು ದಶಕಗಳಷ್ಟು ವಿಳಂಬದಿಂದಾಗಿ ಟ್ರಿಲಿಯನ್ ಗಳಷ್ಟು ರೂಪಾಯಿಗಳ ನಷ್ಟ ಕೂಡಾ ಅನುಭವಿಸಿದ್ದಾರೆ.

ಒಳ್ಳೆಯದು ಸ್ನೇಹಿತರೇ,

ನಾನಿಂದು ದಿಲ್ಲಿ ಬಿಟ್ಟಾಗ ಯೋಜನೆಯನ್ನು ತಾನು ಆರಂಭ ಮಾಡಿದ್ದು ಎಂದು ಯಾರಾದರೊಬ್ಬರು ಹೇಳಬಹುದು ಎಂದುಕೊಂಡಿದ್ದೆಕೆಲವು ಜನರಿಗೆ  ಅಭ್ಯಾಸ ಇದೆಅಶ್ಚರ್ಯ ಏನೂ ಇಲ್ಲಅವರು  ಯೋಜನೆಯನ್ನು ಅವರ ಬಾಲ್ಯಾವಸ್ಥೆಯಲ್ಲಿ ರಿಬ್ಬನ್ ತುಂಡರಿಸುವ ಮೂಲಕ ಘೋಷಿಸಿರಬಹುದು !.

ಸ್ನೇಹಿತರೇ,

ಕೆಲವು ಜನರಿಗೆ ರಿಬ್ಬನ್ ತುಂಡರಿಸುವುದೇ ಆದ್ಯತೆಯಾದರೆನಮ್ಮ ಆದ್ಯತೆ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದರಲ್ಲಿದೆ. 2014ರಲ್ಲಿ ನಾನು ಸರಕಾರ ರಚಿಸಿದಾಗ ದೇಶಾದ್ಯಂತ ದಶಕಗಳಿಂದ ಪೂರ್ಣಗೊಳ್ಳದ 99 ಬೃಹತ್ ನೀರಾವರಿ ಯೋಜನೆಗಳಿದ್ದವುಸರಯೂ ಕಾಲುವೆ ಯೋಜನೆಯಲ್ಲಿ ಹಲವು ಕಡೆಗಳಲ್ಲಿ ಕಾಲುವೆಗಳನ್ನು ಪರಸ್ಪರ ಜೋಡಿಸಿರಲಿಲ್ಲದಿರುವುದನ್ನು ನಾವು ಕಂಡುಕೊಂಡೆವುಮತ್ತು ಕೊನೆಯವರೆಗೆ  ನೀರನ್ನು ಕೊಂಡೊಯ್ಯುವ ವ್ಯವಸ್ಥೆ ಅಲ್ಲಿರಲಿಲ್ಲಸರಯೂ ಕಾಲುವೆ ಯೋಜನೆಯಲ್ಲಿ  ಐದು ದಶಕಗಳಲ್ಲಿ ಏನು ಮಾಡಲಾಗಿತ್ತೋ ಅದಕ್ಕಿಂತ ಹೆಚ್ಚಿನ ಕಲಸವನ್ನು ನಾವು ಬರೇ ಐದು ವರ್ಷಗಳಲ್ಲಿ ಮಾಡಿದ್ದೇವೆಸ್ನೇಹಿತರೇಇದೆಲ್ಲ ಇಷ್ಟು ವೇಗದಿಂದ ಆಗಿರುವುದು ಎರಡು ಇಂಜಿನ್ ಗಳ ಸರಕಾರದಿಂದನೀವು ನೆನಪಿಸಿಕೊಳ್ಳಬಹುದುನಾವು ಯೋಗೀ ಜೀ ಸರಕಾರ ರಚನೆಯಾದ ನಂತರ ಬನಸಾಗರ ಯೋಜನೆಯನ್ನು ಉದ್ಘಾಟಿಸಿದೆವುಕೆಲವು ದಿನಗಳ ಹಿಂದೆ ಅರ್ಜುನ ಸಹಾಯಕ್ ಕಾಲುವೆ ಯೋಜನೆಯನ್ನು ಉದ್ಘಾಟಿಸಲಾಯಿತು. ವಾರ ಗೋರಖ್ ಪುರದಲ್ಲಿ ಉದ್ಘಾಟಿಸಲಾದ  ರಸಗೊಬ್ಬರ ಕಾರ್ಖಾನೆ ಮತ್ತು ...ಎಂ.ಎಸ್ಕೂಡಾ ವರ್ಷಗಳಿಂದ ಬಾಕಿಯುಳಿದಿದ್ದಂತಹ ಕಾರ್ಯಗಳುಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಲವು ವರ್ಷಗಳಿಂದ ಕಡತದಲ್ಲಿತ್ತುಎರಡು ಇಂಜಿನ್ ಗಳ ಸರಕಾರ  ವಿಮಾನನಿಲ್ದಾಣದ  ಕೆಲಸವನ್ನು ಆರಂಭ ಮಾಡಿತು.

ಸ್ನೇಹಿತರೇ,

ನಮ್ಮ ಸರಕಾರ ಹಳೆಯ ಕನಸುಗಳನ್ನು ಹೇಗೆ ಈಡೇರಿಸುತ್ತಿದೆ ಎನ್ನುವುದಕ್ಕೆ ಕೆನ್-ಬೆಟ್ವಾ ಲಿಂಕ್ ಯೋಜನೆ ಇನ್ನೊಂದು ಉದಾಹರಣೆ ಯೋಜನೆಗೆ ಹಲವಾರು ವರ್ಷಗಳಿಂದ ಬೇಡಿಕೆ ಇತ್ತುಬರೇ ಎರಡು-ಮೂರು ದಿನಗಳ ಹಿಂದೆ  ಯೋಜನೆಗೆ ಸಂಪುಟವು ಅನುಮೋದನೆ ನೀಡಿತು ಮತ್ತು 45,000 ಕೋ.ರೂ.ಗಳನ್ನು ಇದರ ಮೇಲೆ ಖರ್ಚು ಮಾಡಲಾಗುತ್ತಿದೆಉತ್ತರ ಪ್ರದೇಶಕ್ಕೆ ಇಂತಹ ದೊಡ್ಡ ಉಡುಗೊರೆ ಸಿಗುತ್ತಿದೆ ಯೋಜನೆಯು ಬುಂದೇಲ್ ಖಂಡದ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಸ್ವಾತಂತ್ರ್ಯಾನಂತರ ಇಂದು ದೇಶದಲ್ಲಿ ಇದೇ ಮೊದಲ ಬಾರಿಗೆ ಸಣ್ಣ ರೈತರ ಬಗ್ಗೆ ಕಾಳಜಿ ವಹಿಸುವ ಸರಕಾರವಿದೆಎರಡು ಹೆಕ್ಟೇರ್ ಗಿಂತ ಕಡಿಮೆ ಭೂಮಿ ಇರುವ ಸಣ್ಣ ರೈತರನ್ನು ಇದೇ ಮೊದಲ ಬಾರಿಗೆ ಸರಕಾರಿ ಸೌಲಭ್ಯಗಳು ಮತ್ತು ಪ್ರಯೋಜನಗಳ ಜೊತೆ ಜೋಡಿಸಲಾಗಿದೆಬೀಜಗಳ ಒದಗಣೆಯಿಂದ ಹಿಡಿದು ಅವರ ಉತ್ಪನ್ನಗಳ ಮಾರುಕಟ್ಟೆ ಮಾಡುವವರೆಗೆ ಎಲ್ಲ ರೀತಿಯಿಂದಲೂ ಅವರಿಗೆ ಸಹಾಯ ಮಾಡಲಾಗುತ್ತಿದೆಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗುತ್ತಿದೆಅವರ ಆದಾಯವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ಅವರನ್ನು ಇತರ ಕೃಷಿ ಆಯ್ಕೆಯತ್ತ ಉತ್ತೇಜಿಸಲಾಗುತ್ತಿದೆವಿಸ್ತಾರವಾದ ಭೂಮಿ ಅಗತ್ಯವಿಲ್ಲದ ಪರ್ಯಾಯಗಳನ್ನು ಅವರಿಗೆ ಒದಗಿಸಲಾಗುತ್ತಿದೆಇದನ್ನು ಮನಸ್ಸಿನಲ್ಲಿಟ್ಟುಕೊಂಡು ರಾಷ್ಟ್ರ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ಕಾರ್ಯಾರಂಭ ಮಾಡಲಾಗಿದೆಪಶು ಸಂಗೋಪನೆ ಇರಲಿಜೇನು ಸಾಕಣೆ ಅಥವಾ ಮೀನು ಕೃಷಿ ಇರಲಿ ಇವುಗಳೆಲ್ಲ ಇದರಲ್ಲಿ ಸೇರಿವೆಹಾಲು ಉತ್ಪಾದನೆಯಲ್ಲಿ ಭಾರತ ಇಂದು ವಿಶ್ವದಲ್ಲಿಯೇ ಅಗ್ರ ಸ್ಥಾನದಲ್ಲಿದೆಆದರೆ ಇನ್ನೊಂದು ಸಂಗತಿ ಎಂದರೆ ನಾವು ಜೇನು ರಫ್ತಿನಲ್ಲಿಯೂ ವಿಶ್ವದಲ್ಲಿ ನಮ್ಮದೇ ಸ್ಥಾನವನ್ನು ರೂಪಿಸಿಕೊಳ್ಳುವತ್ತ ಸಾಗಿದ್ದೇವೆ ಎಂಬುದು ತಿಳಿದರೆ ನಿಮಗೆ ಅದು ಹರ್ಷ ತರುವ ವಿಷಯವಾಗಿರುತ್ತದೆನಮ್ಮ ಸರಕಾರದ ಪ್ರಯತ್ನಗಳ ಫಲವಾಗಿ ಕಳೆದ ಏಳು ವರ್ಷಗಳಲ್ಲಿ ಜೇನಿನ ರಫ್ತು ದುಪ್ಪಟ್ಟಾಗಿದೆ ಮತ್ತು ರೈತರು 700 ಕೋ.ರೂ.ಗಳಿಗೂ ಅಧಿಕ ಹಣವನ್ನು ಗಳಿಸಿದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ,

ರೈತರ ಆದಾಯ ಹೆಚ್ಚಳಕ್ಕೆ ಜೈವಿಕ ಇಂಧನ ಇನ್ನೊಂದು ಆಯ್ಕೆಕೊಲ್ಲಿಯ ತೈಲದಿಂದ ನಾವು ಈಗ ಬೆಳೆಗಳಿಂದ ತಯಾರಾಗುವ ಜೈವಿಕ ಇಂಧನಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇವೆಉತ್ತರ ಪ್ರದೇಶದಲ್ಲಿ ಹಲವಾರು ಜೈವಿಕ ಇಂಧನ ಕಾರ್ಖಾನೆಗಳು ಸ್ಥಾಪನೆಯಾಗುತ್ತಿವೆಬಡೌನ್ ಮತ್ತು ಗೋರಖ್ ಪುರಗಳಲ್ಲಿ ಬೃಹತ್ ಜೈವಿಕ ಇಂಧನ ಸಂಕೀರ್ಣಗಳು ತಲೆ ಎತ್ತುತ್ತಿವೆಗೊಂಡಾ ಬಳಿಯಲ್ಲಿ ಬೃಹತ್ ಎಥೆನಾಲ್ ಸ್ಥಾವರ ತಲೆ ಎತ್ತುತ್ತಿದೆಇದರಿಂದ  ವಲಯದಲ್ಲಿರುವ ಅನೇಕ ರೈತರಿಗೆ ಪ್ರಯೋಜನವಾಗಲಿದೆಕಬ್ಬಿನಿಂದ ಎಥೆನಾಲ್ ತಯಾರಿಸುವ ಆಂದೋಲನಕ್ಕೆ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆಕಳೆದ ನಾಲ್ಕೂವರೆ ವರ್ಷಗಳಲ್ಲಿ 12,000 ಕೋ.ರೂ.ಗಳ ಎಥೆನಾಲನ್ನು ಉತ್ತರಪ್ರದೇಶದಿಂದ ಖರೀದಿ ಮಾಡಲಾಗಿದೆಯೋಗೀ ಜೀ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕಬ್ಬಿನ ಹಣ ಪಾವತಿಯೂ ಹೆಚ್ಚಾಗಿದೆ. 2017 ಕ್ಕೆ ಮೊದಲು ಕಬ್ಬು ಬೆಳೆಗಾರರು ತಮ್ಮ ಹಣಕ್ಕಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತಿತ್ತುಹಿಂದಿನ ಸರಕಾರಗಳಲ್ಲಿ 20 ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳು ಮುಚ್ಚಲ್ಪಟ್ಟವುಮತ್ತು ಯೋಗೀ ಜೀ ಸರಕಾರ ಅಷ್ಟೇ ಸಂಖ್ಯೆಯ ಸಕ್ಕರೆ ಕಾರ್ಖಾನೆಗಳನ್ನು ಆಧುನೀಕರಣ ಮಾಡಿತು ಮತ್ತು ವಿಸ್ತರಣೆ ಮಾಡಿತುನಾನಿಂದು ಬಲರಾಂಪುರದಿಂದ ದೇಶದ ರೈತರಿಗೆ ವಿಶೇಷ ಆಹ್ವಾನವನ್ನು ನೀಡಲು ಇಚ್ಛಿಸುತ್ತೇನೆಉತ್ತರ ಪ್ರದೇಶದಿಂದ ಮಾತ್ರವಲ್ಲ ದೇಶಾದ್ಯಂತದಿಂದ ರೈತರು ನನ್ನ ಆಹ್ವಾನವನ್ನು ಮನ್ನಿಸಿ ನನ್ನೊಂದಿಗೆ ಸೇರಿಕೊಳ್ಳಬೇಕು ಎಂದು ನಾನು ಆಶಿಸುತ್ತೇನೆನನ್ನ ಆಹ್ವಾನ ಯಾವುದಕ್ಕಾಗಿ ಮತ್ತು ಏನು?. ಐದು ದಿನಗಳ ಬಳಿಕ,  ದಶಂಬರ 16ರಂದು ಸರಕಾರ ಸಹಜ ಕೃಷಿಯ ಬಗ್ಗೆ ಬೃಹತ್ ಕಾರ್ಯಕ್ರಮವನ್ನು ಆಯೋಜಿಸುತ್ತಿದೆನಮ್ಮ ಪದ್ಮ ಪ್ರಶಸ್ತಿ ಪುರಸ್ಕೃತ ಮಹಾರಾಷ್ಟ್ರದ ಸುಭಾಷ್ ಜೀ ಅವರು ಶೂನ್ಯ ಬಂಡವಾಳ ಕೃಷಿಯ ಚಿಂತನೆಯನ್ನು ಅಭಿವೃದ್ಧಿ ಮಾಡಿದ್ದಾರೆಇದು ಸಹಜ ಕೃಷಿಯ ಯೋಜನೆಇದರಿಂದಾಗಿ ನಮ್ಮ ಭೂಮಾತೆ ಮತ್ತು ನೀರಿನ ರಕ್ಷಣೆ ಆಗಲಿದೆಉಳಿತಾಯ ಆಗಲಿದೆ ಮತ್ತು ಬೆಳೆಯೂ ಉತ್ತಮವಾಗಲಿದೆ ಹಾಗು ಪ್ರಮಾಣದಲ್ಲಿ ಉತ್ಪಾದನೆಯೂ ಉತ್ತಮವಾಗಿರುತ್ತದೆಟಿ.ವಿಮೂಲಕ ಅಥವಾ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ದೇಶದ ಎಲ್ಲಾ ರೈತ ಸ್ನೇಹಿತರು  ಕಾರ್ಯಕ್ರಮದಲ್ಲಿ ಸೇರ್ಪಡೆಗೊಳ್ಳಬೇಕು ಎಂದು ಮನವಿ ಮಾಡುತ್ತೇನೆನನಗೆ ಖಚಿತವಿದೆಇದರಿಂದ ನೀವು ಬಹಳಷ್ಟು ವಿಷಯಗಳನ್ನುನಿಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಲು ಸಾಧ್ಯ ಇರುವಂತಹ ಸಂಗತಿಗಳನ್ನು ತಿಳಿದುಕೊಳ್ಳುತ್ತೀರಿ ಮತ್ತು ಅವು ನಿಮಗೆ ಪ್ರಯೋಜನಕಾರಿಯಾಗುತ್ತವೆ ಎಂದು.

ಸ್ನೇಹಿತರೇ,

ನಿಮ್ಮ ಪ್ರತೀ ಆವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ನಿಮ್ಮ ಜೀವನವನ್ನು ಸುಲಭ ಮಾಡಲು ನಾವು ಹಗಲು ರಾತ್ರಿ ಶ್ರಮಿಸುತ್ತಿದ್ದೇವೆಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಬಡವರಿಗಾಗಿ ನಿರ್ಮಾಣ ಮಾಡಲಾಗುತ್ತಿರುವ ಪಕ್ಕಾ ಮನೆಗಳಲ್ಲಿ ನಿಮಗೆ ಇದರ ಇಣುಕು ನೋಟ ಲಭ್ಯವಾಗುತ್ತದೆಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳು “ಇಜ್ಜತ್ ಘರ್” ಅಥವಾ ಶೌಚಾಲಯಗಳನ್ನು ಹೊಂದಿರುತ್ತವೆಉಜ್ವಲಾ ಯೋಜನೆ ಅಡಿಯಲ್ಲಿ ಅನಿಲಸೌಭಾಗ್ಯ ಯೋಜನಾ ಅಡಿಯಲ್ಲಿ ವಿದ್ಯುತ್ ಸಂಪರ್ಕಉಜಾಲಾ ಯೋಜನೆ ಅಡಿಯಲ್ಲಿ ಎಲ್..ಡಿಬಲ್ಬ್ ಗಳುಹರ್ ಘರ್ ಜಲ್ ಯೋಜನಾ ಅಡಿಯಲ್ಲಿ ನೀರಿನ ಸಂಪರ್ಕಗಳನ್ನು ಹೊಂದಿರುತ್ತವೆಇಲ್ಲಿಯ ತಾರೂ ಬುಡಕಟ್ಟಿನ ಸಹೋದರರು ಮತ್ತು ಸಹೋದರಿಯರು  ಯೋಜನೆಗಳ ಪ್ರಯೋಜನಗಳನ್ನು ಪಡೆದಾಗ ಅದರಿಂದ ನನಗೆ ಬಹಳ ಸಂತೋಷವಾಗುತ್ತದೆ ಮತ್ತು ನಮಗೆ ಅವರಿಂದ ಹೆಚ್ಚು ಹೆಚ್ಚು ಆಶೀರ್ವಾದಗಳು ಲಭಿಸುತ್ತವೆ.

ಸ್ನೇಹಿತರೇ,

ನನ್ನ ತಾಯಂದಿರು ಮತ್ತು ಸಹೋದರಿಯರು ನನ್ನ ಮಾತಿನ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕುಮತ್ತು ನನ್ನ ಸಹೋದರರಿಗೆ ನನ್ನ ಕೋರಿಕೆ ಏನೆಂದರೆ ಅವರು ಇದನ್ನು ಅವರ ಕುಟುಂಬದಲ್ಲಿ ತಿಳಿಯಪಡಿಸಬೇಕುನಮ್ಮಲ್ಲಿ ಹಳೆಯ ಸಂಪ್ರದಾಯವೊಂದಿದೆಅದು ಮನೆ ಇರಲಿಅಂಗಡಿಕಾರುಅಥವಾ ಕೃಷಿ ಭೂಮಿ ಇರಲಿ ಅದು ಪುರುಷ ಸದಸ್ಯನ ಹೆಸರಿನಲ್ಲಿ ಇರುತ್ತದೆಅಲ್ಲಿ ಮಹಿಳೆಯರಿಗೆ ಏನೂ ಇರುವುದಿಲ್ಲ ನೋವು ನನಗೆ ತಿಳಿದಿದೆ ಮತ್ತು ನಾವು ನಮ್ಮ ತಾಯಂದಿರಿಗೆ ಹಾಗು ಸಹೋದರಿಯರಿಗೆ ಏನು ಮಾಡಿದೆವು?  ಎಂದರೆಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಬಹುತೇಕ ಮನೆಗಳ ಮಾಲಕತ್ವದ ಹಕ್ಕುಗಳನ್ನು  ನಮ್ಮ ತಾಯಂದಿರಿಗೆಸಹೋದರಿಯರಿಗೆಹೆಣ್ಣು ಮಕ್ಕಳಿಗೆ ನೀಡಿದ್ದೇವೆಇದರಿಂದಾಗಿ ಕನಿಷ್ಟ ಒಂದು ಆಸ್ತಿಯನ್ನಾದರೂ ಹೊಂದಿರುವ ಇಂತಹ ಸಹೋದರಿಯರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆಉತ್ತರ ಪ್ರದೇಶದಲ್ಲಿ ಎರಡು ಇಂಜಿನ್ ಗಳ ಸರಕಾರದ ಪ್ರಯತ್ನಗಳಿಂದಾಗಿ 30 ಲಕ್ಷಕ್ಕೂ ಅಧಿಕ ಬಡ ಕುಟುಂಬಗಳು ಪಕ್ಕಾ ಮನೆಗಳನ್ನು ಪಡೆದಿವೆನಮ್ಮ ಸರಕಾರವು ಭವಿಷ್ಯದಲ್ಲಿ 2 ಲಕ್ಷ ಕೋಟಿಗೂ ಅಧಿಕ  ಮನೆಗಳನ್ನು ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಹೊಂದಿದೆಈಗ ಪಕ್ಕಾ ಮನೆ ಹೊಂದಿಲ್ಲದವರು ಅದನ್ನು ಶೀಘ್ರದಲ್ಲಿಯೇ ಪಡೆಯಲಿದ್ದಾರೆ.

ಸ್ನೇಹಿತರೇ,

ಸರಕಾರವು ಸೂಕ್ಷ್ಮತ್ವವನ್ನು ಅಳವಡಿಸಿಕೊಂಡಾಗಬಡವರಿಗೆ ಕಿವಿಯಾದಾಗ ಮತ್ತು ಅವರ ಸಮಸ್ಯೆಗಳನ್ನು ಅರ್ಥೈಸಿಕೊಂಡಾಗ ವ್ಯತ್ಯಾಸ ಕಾಣಲು ಸಿಗುತ್ತದೆಈಗ ದೇಶವು ನೂರು ವರ್ಷಗಳಲ್ಲೇ ಅತ್ಯಂತ ದೊಡ್ಡದಾದ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸುತ್ತಿದೆಪ್ರತಿಯೊಬ್ಬರೂ ಕೊರೊನಾ ದಾಳಿಯಾದಾಗ ಏನಾಗುತದೆಹೇಗಾಗುತ್ತದೆ  ಎಂದು  ಚಿಂತನೆಯಲ್ಲಿ ತೊಡಗಿದ್ದಾರೆಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಕೊರೊನಾದಿಂದ ಕಂಗೆಟ್ಟಿದ್ದಾರೆ.

ಆದರೆ ಸ್ನೇಹಿತರೇನಾವು  ಕೊರೊನಾ ಅವಧಿಯಲ್ಲಿ ಯಾರೊಬ್ಬ ಬಡವರೂ ಹಸಿವೆಯಿಂದ ಕಂಗೆಟ್ಟು ಮಲಗಬಾರದು ಎಂದು ಪ್ರಾಮಾಣಿಕವಾದ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಿದೆವುಅದರಿಂದಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ ಅಡಿಯಲ್ಲಿ ಉಚಿತ ಪಡಿತರ ಆಂದೋಲನವನ್ನು ಹೋಳಿ ಹಬ್ಬದವರೆಗೂ ವಿಸ್ತರಿಸಲಾಯಿತುಬಡವರಿಗೆ  ಉಚಿತ ಪಡಿತರಕ್ಕಾಗಿ ಸರಕಾರ 2.60 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ವ್ಯಯಿಸುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ನಿಮಗೆಲ್ಲಾ ತಿಳಿದಿದೆ ಮೊದಲಿನ ಸರಕಾರಗಳು ಮಾಫಿಯಾವನ್ನು ರಕ್ಷಣೆ ಮಾಡುತ್ತಿದ್ದವುಇದು ಯೋಗೀ ಜೀ ಸರಕಾರ ಮಾಫಿಯಾವನ್ನು ಸ್ವಚ್ಚ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆಆದುದರಿಂದ ಉತ್ತರ ಪ್ರದೇಶದ ಜನತೆ ಹೇಳುತ್ತಿದ್ದಾರೆ-ವ್ಯತ್ಯಾಸ ಸ್ಪಷ್ಟವಾಗಿದೆ ಎಂದು. ಮೊದಲಿನ ಸರಕಾರಗಳಲ್ಲಿ ಇದ್ದವರು “ಬಾಹುಬಲಿಗಳನ್ನು ಉತ್ತೇಜಿಸುತ್ತಿದ್ದರುಇಂದು ಯೋಗೀ ಜೀ ಅವರ ಸರಕಾರ ಬಡವರತಳವರ್ಗದವರಹಿಂದುಳಿದವರ ಮತ್ತು ಬುಡಕಟ್ಟು ಸಮುದಾಯದವರ ಸಶಕ್ತೀಕರಣದ ಕಾರ್ಯದಲ್ಲಿ ತೊಡಗಿದೆ.  ಅದರಿಂದಾಗಿ ಉತ್ತರ ಪ್ರದೇಶದ ಜನತೆ ಹೇಳುತ್ತಿದ್ದಾರೆ” ವ್ಯತ್ಯಾಸ ಸ್ಪಷ್ಟವಾಗಿದೆ”.  ಮೊದಲಿನ ಸರಕಾರಗಳಲ್ಲಿ ಇದ್ದವರು ಅಕ್ರಮವಾಗಿ ಭೂಕಬಳಿಕೆ ಮಾಡುತ್ತಿದ್ದರುಇಂದು  ಮಾಫಿಯಾ ಜನರಿಗೆ ದಂಡ ಹಾಕಲಾಗಿದೆ ಮತ್ತು ಅವರನ್ನು ನಿವಾರಿಸಲಾಗಿದೆ.ಅದರಿಂದಾಗಿ ಉತ್ತರ ಪ್ರದೇಶದ ಜನತೆ ಹೇಳುತ್ತಿದ್ದಾರೆ” ವ್ಯತ್ಯಾಸ ಸ್ಪಷ್ಟವಾಗಿದೆ” . ಮೊದಲು ಉತ್ತರ ಪ್ರದೇಶದ ಹೆಣ್ಣು ಮಕ್ಕಳು ಮನೆಯಿಂದ ಹೊರಬರುವ ಮೊದಲು ನೂರು ಬಾರಿ ಚಿಂತಿಸಬೇಕಾದಂತಹ ಪರಿಸ್ಥಿತಿ ಇತ್ತುಇಂದು ತಪ್ಪು ಮಾಡುವ ಮೊದಲು ಕ್ರಿಮಿನಲ್ ವ್ಯಕ್ತಿ ನೂರು ಬಾರಿ ಯೋಚಿಸಬೇಕಾದಂತಹ ಸ್ಥಿತಿ ಬಂದಿದೆಅದರಿಂದಾಗಿ ಉತ್ತರ ಪ್ರದೇಶದ ಜನತೆ ಹೇಳುತ್ತಿದ್ದಾರೆ “ವ್ಯತ್ಯಾಸ ಸ್ಪಷ್ಟವಾಗಿದೆ”.  ಮೊದಲು ಹೆಣ್ಣು ಮಕ್ಕಳು ಮನೆಯೊಳಗೇ ಇರಬೇಕಾದಂತಹ ಸ್ಥಿತಿ ಇದ್ದರೆ ಇಂದು ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳು ಜೈಲಿನಲ್ಲಿರಬೇಕಾಗಿದೆಅದರಿಂದಾಗಿ ಅವರು  ಹೇಳುತ್ತಿದ್ದಾರೆ” ವ್ಯತ್ಯಾಸ ಸ್ಪಷ್ಟವಾಗಿದೆ”.

ಸ್ನೇಹಿತರೇ,

ಇಂದು ನಾನು ಉತ್ತರ ಪ್ರದೇಶದ ಜನತೆಗೆ ಬಹಳಷ್ಟು ಪ್ರಯೋಜನಗಳನ್ನು ತರಲಿರುವ ಸ್ವಾಮಿತ್ವ ಯೋಜನಾ ಎಂಬ ಇನ್ನೊಂದು ಯೋಜನೆಯ ಬಗ್ಗೆಯೂ ಪ್ರಸ್ತಾಪಿಸುತ್ತೇನೆಸ್ವಾಮಿತ್ವ ಯೋಜನೆ ಅಡಿಯಲ್ಲಿ ಮನೆಗಳ ಮತ್ತು ಭೂಮಿಯ ಮಾಲಕತ್ವದ ಕಾಗದ ಪತ್ರಗಳನ್ನು ಗ್ರಾಮಗಳಲ್ಲಿಯ ಭೂಮಿಯ ನಕ್ಷೆಗಳನ್ನು ತಯಾರಿಸಿದ ಬಳಿಕ ನೀಡಲಾಗುತ್ತದೆ ಆಂದೋಲನ ಶೀಘ್ರದಲ್ಲಿಯೇ ಉತ್ತರ ಪ್ರದೇಶದ ಪ್ರತೀ ಗ್ರಾಮಗಳನ್ನು ಒಳಗೊಳ್ಳಲಿದೆಇದು ನಿಮ್ಮನ್ನು ಅಕ್ರಮ ವಾಸ್ತವ್ಯದ ಭಯದಿಂದ ಮುಕ್ತಗೊಳಿಸುತ್ತದೆ ಮತ್ತು ಬ್ಯಾಂಕ್ ಸಾಲವನ್ನು ಪಡೆಯಲು ಸುಲಭ ಮಾಡುತ್ತದೆಈಗ ಗ್ರಾಮಗಳ ಯುವ ಜನತೆಗೆ ತಮ್ಮ ಉದ್ಯಮಕ್ಕೆ ಬ್ಯಾಂಕ್ ಗಳಿಂದ ಹಣ ಪಡೆಯುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ.

ಸ್ನೇಹಿತರೇ,

ನಾವೆಲ್ಲರೂ ಒಗ್ಗೂಡಿ ಉತ್ತರ ಪ್ರದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು ಮತ್ತು ಅದಕ್ಕೆ ಹೊಸ ಗುರುತಿಸುವಿಕೆಯನ್ನು ಕೊಡಬೇಕುಉತ್ತರ ಪ್ರದೇಶವನ್ನು ಹಲವಾರು ದಶಕಗಳಷ್ಟು ಹಿಂದಕ್ಕೆ ತಳ್ಳಿದವರ ವಿರುದ್ಧ ನೀವು ಕಾವಲುಗಾರರಂತೆ ನಿಲ್ಲಬೇಕುಸಹೋದರರೇ ಮತ್ತು ಸಹೋದರಿಯರೇಮತ್ತೊಮ್ಮೆ ಸರಯು ಕಾಲುವೆ ಯೋಜನೆಗಾಗಿ ನಿಮ್ಮೆಲ್ಲರನ್ನೂ ನಾನು ಅಭಿನಂದಿಸುತ್ತೇನೆನಿಮ್ಮ ಕೈಗಳನ್ನು  ಮೇಲಕ್ಕೆ ಎತ್ತಿಪೂರ್ಣ ಶಕ್ತಿಯೊಂದಿಗೆ ನನ್ನೊಂದಿಗೆ ಹೇಳಿ : ಭಾರತ್ ಮಾತಾ ಕೀ ಜೈಭಾರತ್ ಮಾತಾ ಕೀ ಜೈಭಾರತ್ ಮಾತಾ ಕೀ ಜೈ-ಜೈ

ಬಹಳ ಬಹಳ ಧನ್ಯವಾದಗಳು!

ಘೋಷಣೆಇದು ಪ್ರಧಾನ ಮಂತ್ರಿ ಅವರ ಭಾಷಣದ ಭಾಷಾಂತರಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1781408) Visitor Counter : 190